ಸ್ಥಳೀಯ

ಲೇಖಕ, ಪತ್ರಕರ್ತ ಲಕ್ಷ್ಮೀಕಾಂತ ನಾಯಕರ ಹುಟ್ಟು ಹಬ್ಬ ಆಚರಣೆ

WhatsApp Group Join Now
Telegram Group Join Now

ಶಹಾಪುರ: ಯಾದಗಿರಿ ಭಾಗದ ಜನ ಆಕ್ರೋಶ ಪತ್ರಿಕೆಯ ಸ್ಥಾಪಕ ಮತ್ತು ಸಂಪಾದಕ ಲೇಖಕ ಲಕ್ಷ್ಮೀಕಾಂತ ನಾಯಕರ ನಲವತ್ತು ನಾಲ್ಕನೇಯ ಜನ ದಿನಾಚರಣೆಯ ಕಾರ್ಯಕ್ರಮ ಅವರ ಅಭಿಮಾನಿ ಬಳಗ ಮತ್ತು ಗೆಳೆಯರಿಂದ‌ 15/03/2024 ರಂದು ಕೊಳ್ಳೂರು ಎಂ ಗ್ರಾಮದ ದೀಕ್ಷಾ ಕೂಲ್ ಡ್ರಿಂಕ್ಸ್ ಪಂಕ್ಷನ್ ಹಾಲ್‌ನಲ್ಲಿ ನಡೆಯಿತು.

ಲೇಖಕ ಕವಿ ಕಥೆಗಾರ ಎಂದು ಗುರುತಿಸಲ್ಪಟ್ಟ ಲಕ್ಷ್ಮೀಕಾಂತ ನಾಯಕರನ್ನು ವೀರೇಶ್ ಚಲುವಾದಿ, ಆನಂದ್ ಚೆಲುವಾದಿ ಶಾಲು ಮತ್ತು ಹಾರ ಹಾಕಿ ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ವೀರೇಶ್ ಚಲುವಾದಿ ಮಾತನಾಡಿ “ಲಕ್ಷ್ಮೀಕಾಂತ ನಾಯಕರು ಈ ಭಾಗದ ಗುರುತರ ಚಿಂತಕ ಮತ್ತು ಲೇಖಕರು. ಉತ್ತಮ ಸಮಾಜಕ್ಕಾಗಿ ಅವರು ಬರೆಯುವ ಲೇಖನಗಳು ಯುವಕರಿಗೆ ಮಾರ್ಗದರ್ಶಿ. ಎಲೆ ಮರೆಯ ಕಾಯಿಯಂತೆ ತನ್ನ ಕೆಲಸವನ್ನು ತಾನು ಮಾಡುತ್ತಾ ಹೋಗುವ ನಾಯಕರು ಒಬ್ಬ ಅಪರೂಪದ ವ್ಯಕ್ತಿ. ಸಮಾಜ ಅವರನ್ನು ಗುರುತಿಸದಿರುವುದು ನೋವಿನಬ ಸಂಗತಿ. ಜಾತಿ ಮತ ಧರ್ಮಗಳನ್ನು ಮೀರಿ‌ ಸುಂದರವಾದ ಸಮಾಜ ನಿರ್ಮಿಸಬೇಕು ಎನ್ನುವ ಅವರ ತುಡಿತ ಅಪರೂಪವಾದದ್ದು. ನನಗಿಂತಹ ಗೆಳೆಯನಿರುವುದು ಖುಷಿಯ ಸಂಗತಿ” ಎಂದು ಹೇಳಿದರು.

ಕಾರ್ಯಕ್ರಮವನ್ನು ಆನಂದ ಚಲುವಾದಿ ಮತ್ತು ಸ್ನೇಹಿತರು ಏರ್ಪಡಿಸಿದ್ದರು.ಅನೇಕ ಸ್ನೇಹ ಬಳಗ ಈ ಸಂದರ್ಬದಲ್ಲಿ ಉಪಸ್ಥಿತರಿದ್ದರು.

WhatsApp Group Join Now
Telegram Group Join Now

Related Posts