ವೈಶಿಷ್ಟ್ಯ ಲೇಖನ

ಕರ್ನಾಟಕ ರಾಜ್ಯ ಪೋಲಿಸ್‌ ಪಡೆಯ ಸದಾಚಾರ ಸಂಹಿತೆ ಮತ್ತು ತತ್ವಗಳು

WhatsApp Group Join Now
Telegram Group Join Now

ಕರ್ನಾಟಕ ರಾಜ್ಯ ಪೋಲಿಸ್‌ ಪಡೆಯ ಸದಾಚಾರ ಸಂಹಿತೆ ಮತ್ತು ತತ್ವಗಳು

೧(ಎ) ಪೋಲಿಸರ ಕರ್ತವ್ಯಗಳು ಮತ್ತು ಹೊಣೆಗಾರಿಕೆಗಳು

೧) ಸಾರ್ವಜನಿಕ ಸುವ್ಯವಸ್ಥೆಗಾಗಿ ಅವಶ್ಯಕ ಕ್ರಮಗಳನ್ನು ಜಾರಿಗೊಳಿಸುವುದು ಮತ್ತು ಅದನ್ನು ಕಾಪಾಡುವುದು.

೨) ಅಪರಾಧಗಳ ತನಿಖೆ ಮಾಡುವುದು ಮತ್ತು ಅಪರಾಧಿಗಳನ್ನು ಬಂಧಿಸುವುದು ಹಾಗೂ ಅವುಗಳಿಗೆ ಸಂಬಂಧಿಸಿದಂತೆ ಕಾನೂನಿನ ಮುಂದಿನ ವ್ಯವಹರಣೆಗಳಲ್ಲಿ ಭಾಗವಹಿಸುವುದು.

೩) ಅಪರಾಧದ ಘಟಿಸುವಿಕೆಗೆ ಕಾರಣವಾಗಬಹುದಾದ ಸಮಸ್ಯೆಗಳನ್ನು ಮತ್ತು ಸಂದರ್ಭಗಳನ್ನು ಕುರಿತು ಗುರುತಿಸುವುದು.

೪) ನಿರೋಧಾತ್ಮಕ ಪಹರೆ ಮತ್ತು ಇತರ ಯಥೋಚಿತ ಪೋಲಿಸ್‌ ಕ್ರಮಗಳ ಮುಖಾಂತರ ಅಪರಾಧದ ಘಟಿಸುವಿಕೆಗಾಗಿ ಇರುವಂತಹ ಅವಕಾಶಗಳನ್ನು ಕುಂಠಿತಗೊಳಿಸುವುದು.

೫) ಅಪರಾಧದ ನಿರೋಧಕ್ಕಾಗಿ ಇತರ ಸೂಕ್ತ ಕ್ರಮಗಳನ್ನು ಅನುಷ್ಠಾನಗೊಳಿಸುವುದಕ್ಕಾಗಿ ಇತರ ಸಂಬಂಧಿತ ಏಜೆನ್ಸಿಗಳೊಂದಿಗೆ ಸಹಕಾರ ಮತ್ತು ನೆರವು.

೬) ದೈಹಿಕ ಹಾನಿಯ ಅಪಾಯದಲ್ಲಿರುವ ವ್ಯಕ್ತಿಗಳಿಗೆ ನೆರವು ನೀಡುವುದು.

೭) ಜನ ಸಮುದಾಯದಲ್ಲಿ ಭದ್ರತೆಯ ಭಾವನೆಯನ್ನು ಉಂಟುಮಾಡುವುದು ಮತ್ತು ನಿರ್ವಹಿಸುವುದು.

೮) ಜನ ಮತ್ತು ವಾಹನಗಳ ಕ್ರಮಬದ್ಧ ಸಂಚಾರಕ್ಕಾಗಿ ಅನುಕೂಲ ಮಾಡಿಕೊಡುವುದು.

೯) ಸಂಘರ್ಷಗಳ ಸಂಬಂಧ ಸಲಹೆ ನೀಡುವುದು ಮತ್ತು ಬಗೆಹರಿಸುವುದು ಮತ್ತು ಮೈತ್ರಿಗಾಗಿ ಅವಶ್ಯ ಕ್ರಮಗಳನ್ನು ಜರುಗಿಸುವುದು.

೧೦) ಸಂಕಟದ ಪರಿಸ್ಥಿತಿಗಳಲ್ಲಿ ಜನರಿಗೆ ಇತರ ಸೂಕ್ತ ಸೇವೆಗಳನ್ನು ಒದಗಿಸುವುದು ಮತ್ತು ಪರಿಹಾರಗಳನ್ನು ಒದಗಿಸುವುದು.

೧೧) ಸಾಮಾಜಿಕ ಮತ್ತು ಆರ್ಥಿಕ ಅಪರಾಧ, ರಾಷ್ಟ್ರೀಯ ಭಾವೈಕ್ಯತೆ ಮತ್ತು ಭದ್ರತೆಗಳನ್ನೂ ಒಳಗೊಂಡು ಸಾಮಾನ್ಯವಾಗಿ ಅಪರಾಧದಲ್ಲಿ ಮತ್ತು ಸಾರ್ವಜನಿಕ ಶಾಂತಿಯ ಬಗ್ಗೆ ಪರಿಣಾಮ ಬೀರುವಂತಹ ಸಂಗತಿಗಳಿಗೆ ಸಂಬಂಧಿಸಿದಂತೆ ರಹಸ್ಯ ಮಾಹಿತಿಯನ್ನು ಸಂಗ್ರಹಿಸಲು; ಮತ್ತು

೧೨) ಕಾನೂನಿನ ಮೇರೆಗೆ ಅವರ ಮೇಲೆ ಆದೇಶಿಸಲಾದ ಅಂತಹ ಇತರ ಕರ್ತವ್ಯಗಳನ್ನು ನಿರ್ವಹಿಸುವುದು.

ಈ ಸಮಾಜಕ್ಕೆ ಪೋಲಿಸರ ಅಗತ್ಯ ತುಂಬಾ ಇದೆ. ಪ್ರಪಂಚ ಶೈಕ್ಷಣಿಕವಾಗಿ ಆದುನಿಕವಾಗುತ್ತಿದ್ದರೂ, ನಮ್ಮನ್ನು ನಾವು ನಾಗರಿಕರು ಎಂದು ಕರೆದುಕೊಳ್ಳುತ್ತಿದ್ದರೂ ನಮ್ಮಲ್ಲಿನ್ನೂ ಅನಾಗರಿಕ ಛಾಯೆಗಳು ಜೀವಂತ ಇವೆ. ವಾಸ್ತವಾಗಿ ಖಾಲಿ ಇರಬೇಕಿರುವ ಪೋಲಿಸ್‌ ಠಾಣೆಗಳು ಈಗ ಜನನಿಬಿಡವಾಗಿವೆ. ಅಪರಾಧಗಳ ಘಟಿಸುವಿಕೆಗೆ ಅಂತ್ಯ ಅಥವಾ ನಿಯಂತ್ರಣ ಎಂಬುದಿಲ್ಲ. ಪೋಲಿಸ್‌ ಈ ಮೇಲೆ ವಿವರಿಸಲಾಗಿರುವ ಅಂಶಗಳಂತಿಲ್ಲ. ಆತ ಬದುಕುವ ಬಗ್ಗೆ ಯೋಚಿಸುತ್ತಿದ್ದಾನೆ. ಹಣ ಮಾಡುವುದು ಸದ್ಯದ ಆತನ ಪ್ರಯಾರಿಟಿ. ಅಪರಾಧಗಳನ್ನು ಮೊದಲೇ ತಡೆಯಬೇಕಿರುವ ಆತ ಅಪರಾಧ ಸಂಭವಿಸಿದ ಎಷ್ಟೋ ಸಮಯಗಳ ಕಾಲ ಅಲಭ್ಯವಾಗುತ್ತಾನೆ. ಆದರ್ಶ ಮತ್ತು ಧ್ಯೇಯಗಳು ಇವತ್ತಿನ ಸಂದರ್ಭಕ್ಕೆ ಹಾಸ್ಯಾಸ್ಪದ ಪದಗಳು.

ನಾವು ಉತ್ತಮ ಬದುಕಿಗಾಗಿ ಹೋರಾಡಬೇಕಿದೆ.

WhatsApp Group Join Now
Telegram Group Join Now

Related Posts