ಕಾಸರಗೋಡು: ವಿದ್ಯುತ್ ಶಾರ್ಟ್ ಸರ್ಕಿಟ್ ಸಂಭವಿಸಿ ಬೆಂಕಿ ಹೊತ್ತಿಕೊಂಡು ಎರಡು ಮಳಿಗೆಗಳು ಸುಟ್ಟು ಕರಕಲಾದ ಘಟನೆ ಕಾಸರಗೋಡಿನ ಹಳೆಯ ಬಸ್ಸು ನಿಲ್ದಾಣದ ಸಮೀಪ ಗುರುವಾರ ಮುಂಜಾನೆ ಸಂಭವಿಸಿದೆ.
ಹಳೆಯ ಬಸ್ಸು ನಿಲ್ದಾಣದ ಸಮೀಪವಿರುವ ವಾಣಿಜ್ಯ ಮಳಗೆಯ ಪೈಕಿ ಸರಕು ಸಾಮಗ್ರಿಯ ಅಂಗಡಿ ಮತ್ತು ಮೊಬೈಲ್ ಹಾಗೂ ವಾಚ್ ಮಾರಾಟದ ಮಳಿಗೆಗಳು ಬೆಂಕಿ ದುರಂತಕ್ಕೆ ಬಲಿಯಾಗಿವೆ. ಮೊಬೈಲ್ ಅಂಗಡಿಯಲ್ಲಿ ಸುಮಾರು ಮೂರು ಲಕ್ಷ ರೂ. ನಷ್ಟ ಸಂಭವಿಸಿದ್ದು ಸರಕು ಸಾಮಗ್ರಿ ಅಂಗಡಿಯಲ್ಲಿ ಸುಮಾರು ಹನ್ನೆರಡು ಲಕ್ಷ ರೂ. ನಷ್ಟ ಉಂಟಾಗಿರಬಹುದು ಎಂದು ಅಂದಾಜಿಸಲಾಗಿದೆ.
ತಕ್ಷಣ ಸ್ಥಳಕ್ಕೆ ಅಗ್ನಿ ಶಾಮಕದಳದ ಸಿಬ್ಬಂದಿ ಬಂದಿರುವುದರಿಂದ ಹೆಚ್ಚಿನ ದುರಂತ ತಪ್ಪಿದೆ ಎಂದು ಹೇಳಲಾಗುತ್ತಿದೆ.