ಯಾದಗಿರಿ : ಜೂನ್ 29, ಶಹಾಪುರ ತಾಲೂಕು ಪಂಚಾಯತ ಕಚೇರಿಯ ಆವರಣದಲ್ಲಿ ಜಿಲ್ಲಾಧಿಕಾರಿ ಡಾ.ಸುಶೀಲ ಬಿ. ಅವರು ಜನಸ್ಪಂದನ ಕಾರ್ಯಕ್ರಮ ನಡೆಸಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು
https://www.facebook.com/help/203805466323736/?helpref=uf_share
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗರಿಮಾ ಪನ್ವಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ ಸಂಗೀತ, ಜಿಲ್ಲಾ ಪಂಚಾಯತ ಉಪ ಕಾರ್ಯದರ್ಶಿ ವಿಜಯಕುಮಾರ ಮಡ್ಡಿ, ಶಹಾಪುರ ಇಓ ಸೋಮಶೇಖರ್ ಬಿರಾದರ್, ಶಹಾಪುರ ತಾಲೂಕು ತಹಶೀಲ್ದಾರ ಉಮಾಕಾಂತ ಹಳ್ಳೆ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
(ನಿವಿನ್ನೂ ಅರ್ಜಿಯನ್ನು ಸರ್ಕಾರಿ ಕಚೇರಿಯ ಆವಕ ಜಾವಕ ಕೋಣೆಯ ಹತ್ತಿರ ಬಂದು ಕೈಯಲ್ಲಿ ಹಿಡಿದುಕೊಂಡಿರುತ್ತೀರಿ, ತಕ್ಷಣ ಜಾಗೃತನಾಗುವಾಲ್ಲಿನ ಸರ್ಕಾರಿ ನೌಕರ ನಿಮ್ಮ ಅರ್ಜಿಯನ್ನು ಅಮೂಲ್ಯವಾದ ಅನರ್ಘ್ಯ ರತ್ನವೆಂದು, ಬೆಲೆ ಕಟ್ಟಲಾಗದ ವಸ್ತುವೆಂದೂ, ನಿಮ್ಮ ಅರ್ಜಿ ತನ್ನ ಜೀವನ ಪಾವನಗೊಳಿಸುವ ದೈವೀ ಶಕ್ತಿಯ ಕೊಡುಗೆ ಎಂದು ಭಾವಿಸಿ ನಿಮ್ಮ ಕೈಯೊಳಗಿನ ಅರ್ಜಿಯನ್ನು ಪಡೆದುಕೊಂಡು ಸ್ವೀಕೃತಿ ಹಾಕಿಕೊಟ್ಟು ನಿಮ್ಮನ್ನು ತನ್ನ ತುಟಿಗಳೆಂಬ ಸುಕೋಮಲ ಕುಸುಮ ದಳಗಳಿಂದ ಮುಗುಳು ನಕ್ಕು ಕಳುಹಿಸಿ ಕೊಡುತ್ತಾರೆ! ನಿಮ್ಮ ಅರ್ಜಿಗಾಗಿ ಕಾದು ಕುಳಿತ ಸಂಬಂಧಿಸಿದ ಅಧಿಕಾರಿ ವರ್ಗ ಅದನ್ನು ತಕ್ಷಣ ಕಸದ ಬುಟ್ಟಿಗೆ ವಿಲೇವಾರಿ ಮಾಡುವ ಮೂಲಕ ನಿಮ್ಮ ಅರ್ಜಿಗೆ ತತಕ್ಷಣ ಒಂದು ಪರಿಹಾರವನ್ನು ನೀಡುತ್ತದೆ. ಜನ ಸ್ಪಂದನ ನಿಮ್ಮ ಅರ್ಜಿಗಳಿಗೆ ಶೀಘ್ರವಾಗಿ ಮುಕ್ತಿ ಒದಗಿಸುವ ಕಾರ್ಯಕ್ರಮ!-ಲಕ್ಷ್ಮೀಕಾಂತ ನಾಯಕ)