ಭಾರತ

ಕಾಂಗ್ರೇಸಿನ ಪ್ರಣಾಳಿಕೆಯನ್ನು ಮುಸ್ಲೀಂ ಲೀಗ್‌ ತಯಾರಿಸಿದೆಯೇ: ಮೋದಿ

WhatsApp Group Join Now
Telegram Group Join Now

ನವಾಡಾ, 7 ಏಪ್ರಿಲ್ ಬಿಜೆಪಿ ಹಿರಿಯ ನಾಯಕ ಮತ್ತು ಪ್ರಧಾನಿ ನರೇಂದ್ರ ಮೋದಿ ಬಿಹಾರದ ನವಾಡಾದಲ್ಲಿ ಇಂದು ಚುನಾವಣಾ ರ್ಯಾಲಿ ನಡೆಸಿದರು.

ಎನ್ಡಿಎ ಅಭ್ಯರ್ಥಿಯನ್ನು ಬೆಂಬಲಿಸಿ ಪ್ರಧಾನಿ ಅವರು, ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ. ಬಿಜೆಪಿ ನಾಯಕರೊಂದಿಗೆ, ಎನ್ಡಿಎ ದ ಇತರ ಘಟಕ ಪಕ್ಷಗಳ ಸದಸ್ಯರೂ ಸಹ ರ್ಯಾಲಿಯಲ್ಲಿ ಭಾಗವಹಿಸಿದ್ದಾರೆ.

ನವಾಡಾ ಸಂಸದೀಯ ಕ್ಷೇತ್ರದಿಂದ ಬಿಜೆಪಿ ಹಿರಿಯ ಮುಖಂಡ ಮತ್ತು ಮಾಜಿ ಕೇಂದ್ರ ಸಚಿವ ಡಾ.ಸಿ.ಪಿ.ಠಾಕೂರ್ ಅವರ ಪುತ್ರ ವಿವೇಕ್ ಠಾಕೂರ್ ಅವರನ್ನು ಪಕ್ಷ ಕಣಕ್ಕಿಳಿಸಿದೆ.

ಮೊದಲ ಹಂತದ ಲೋಕಸಭಾ ಚುನಾವಣೆಯಲ್ಲಿ ಗಯಾ, ಔರಂಗಾಬಾದ್ ಮತ್ತು ಜಮುಯಿ ಜೊತೆಗೆ ನವಾಡಾ ಕ್ಷೇತ್ರದಲ್ಲಿ ಏಪ್ರಿಲ್ ೧೯ ರಂದು ಮತದಾನ ನಡೆಯಲಿದೆ.

ಬಿಜೆಪಿ ಹಿರಿಯ ನಾಯಕ ಮತ್ತು ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರದೇಶದ ಜಬಲ್ಪುರದಲ್ಲಿ ಇಂದು ಪಕ್ಷದ ಪರ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ.

ಸಂಜೆ ೬ ಗಂಟೆಗೆ ಭಗತ್ ಸಿಂಗ್ ಚೌಕ್ ನಿಂದ ಜಬಲ್ ಪುರದ ಶಂಕರಾಚಾರ್ಯ ಚೌಕ್ ವರೆಗೆ ಸುಮಾರು ಒಂದು ಗಂಟೆಯ ಕಾಲ ರೋಡ್ ಶೋ ನಡೆಸಲಿದ್ದಾರೆ.

WhatsApp Group Join Now
Telegram Group Join Now

Related Posts