ಸ್ಥಳೀಯ

ಪೋಸ್ಟಲ್ ಬ್ಯಾಲೇಟ ಮತದಾರರಿಗೆ ಸೂಕ್ತ ಮಾರ್ಗದರ್ಶನ ನೀಡಿ ಜಿಲ್ಲಾಧಿಕಾರಿ ಡಾ.ಸುಶೀಲ.ಬಿ

WhatsApp Group Join Now
Telegram Group Join Now

ಯಾದಗಿರಿ : ಮಾರ್ಚ್ 26, : ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮತದಾನದಿಂದ ವಂಚಿತ ರಾಗಬಾರದೆಂಬ ಉದ್ದೇಶದಿಂದ ಚುನಾವಣಾ ಆಯೋಗವು ಚುನಾವಣೆ ಕರ್ತವ್ಯದಲ್ಲಿ ಇರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗಾಗಿ ಪೋಸ್ಟಲ್ ಬ್ಯಾಲೇಟ ಮೂಲಕ ಮತದಾನದ ಸೌಲಭ್ಯ ಕಲ್ಪಿಸಿದ್ದು, ಇದರ ಸದುಪಯೋಗ ಪಡೆಯುವಂತೆ ಜಿಲ್ಲಾಧಿಕಾರಿ ಡಾ.ಸುಶೀಲ.ಬಿ ಅವರು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಇಂದು ಪೋಸ್ಟಲ್ ಬ್ಯಾಲೇಟ ನೋಡಲ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು ಚುನಾವಣೆ ಕರ್ತವ್ಯದಲ್ಲಿ ಇರುವ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ನಿಗದಿತ ನಮೂನೆಗಳಲ್ಲಿ ಅರ್ಜಿಸಲ್ಲಿಸಿ ಪೋಸ್ಟಲ್ ಬ್ಯಾಲೇಟ ಮತ್ತು ಇಡಿಸಿ ಪಡೆದು ಮತದಾನ ಮಾಡಲು ಅವಕಾಶ ಕಲ್ಪಿಸಿದೆ ಎಂದು ಹೇಳಿದರು.

ಜಿಲ್ಲಾ ಕಛೇರಿ ಹಾಗೂ ಅಧಿನ ಕಛೇರಿಗಳ ಚುನಾವಣೆ ಕರ್ತವ್ಯದಲ್ಲಿ ಇರುವ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಇಡಿಸಿ ಕುರಿತು ನೋಡಲ್ ಅಧಿಕಾರಿಗಳು ಮಾಹಿತಿ ನೀಡಬೇಕು. ಅದರಂತೆ ನೋಡಲ್ ಅಧಿಕಾರಿಗಳ ಮೂಲಕ ನಡೆಯುವ ಪ್ರಕ್ರಿಯೆಗಳ ಬಗ್ಗೆ ಅವಶ್ಯಕ ಕ್ರಮ ಕೈಗೊಳ್ಳಲು ಅವರು ಸೂಚನೆ ನೀಡಿದರು.ಚುನಾವಣೆಗೆ ಸಂಬAಧಪಟ್ಟAತೆ ಪ್ರತಿನಿತ್ಯ ಮಾರ್ಗಸೂಚಿಗಳ ಬಗ್ಗೆ ನಿಗಾ ಇಡಬೇಕು. ಎಲ್ಲಾ ಅಧಿಕಾರಿ, ಸಿಬ್ಬಂದಿಗಳು ತಪ್ಪದೇ ವೋಟರ್ ಹೆಲ್ಪ ಲೈನ್ ಆ್ಯಪ್ ಮತ್ತು ಸಿ-ವಿಜಿಲ್ ಆ್ಯಪ್ ಡೌನ್‌ಲೋಡ ಮಾಡಿಕೊಳ್ಳಬೇಕು ಎಂದು ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಪೋಸ್ಟಲ್ ಬ್ಯಾಲೇಟ ಕುರಿತು ರಾಜ್ಯ ಮಟ್ಟದ ಮಾಸ್ಟರ್ ಟ್ರೇನರ್ ಹಣಮಂತ ಗೋಗಲೆ ಹಾಗೂ ಅಪರ ಜಿಲ್ಲಾಧಿಕಾರಿ ಶ್ರೀ ಶರಣಬಸಪ್ಪ ಕೋಟೆಪ್ಪಗೊಳ ಅವರು ಅವಶ್ಯಕ ಮಾಹಿತಿ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ ಅವರು ಉಪಸ್ಥಿತರಿದ್ದರು. ಪೋಸ್ಟಲ್ ಬ್ಯಾಲೇಟ ನೋಡಲ್ ಅಧಿಕಾರಿ ಕೃಷಿ ಜಂಟಿ ನಿರ್ದೇಶಕಿ ಶ್ರೀಮತಿ ಮಂಜುಳ ಅವರು ಸ್ವಾಗತಿಸಿದರು.

WhatsApp Group Join Now
Telegram Group Join Now

Related Posts