ರಾಜ್ಯ

ಜಿಲ್ಲೆಯಲ್ಲಿ ರಕ್ತನಿಧಿಕೇಂದ್ರ ಪುನಾರಂಭಿಸದೇ ಇದ್ದರೆ ಉಗ್ರ ಹೋರಾಟ; ಕರವೇ ಜಿಲ್ಲಾದ್ಯಕ್ಷ ಟಿ.ಎನ್. ಭೀಮುನಾಯಕ

WhatsApp Group Join Now
Telegram Group Join Now

ವರ್ಷಗಳಿಂದ ಬಂದಾದ ರಕ್ತ ಕೇಂದ್ರ :ಕರವೇ ಜಿಲ್ಲಾ ಸಮಿತಿ ಸಭೆಯಲ್ಲಿ ಆಕ್ರೋಶ

ಜಿಲ್ಲೆಯಲ್ಲಿ ರಕ್ತನಿಧಿಕೇಂದ್ರ ಪುನಾರಂಭಿಸದೇ ಇದ್ದರೆ ಉಗ್ರ ಹೋರಾಟ; ಕರವೇ ಜಿಲ್ಲಾದ್ಯಕ್ಷ ಟಿ.ಎನ್. ಭೀಮುನಾಯಕ

ಯಾದಗಿರಿ: ಜಿಲ್ಲಾ ಕೇಂದ್ರದಲ್ಲಿ ರಕ್ತನಿಧಿ ಇಲ್ಲದೇ ಇರುವುದರಿಂದ ಜಿಲ್ಲೆಯ ಜನತೆ ವಿಶೇಷವಾಗಿ ಗರ್ಭಿಣಿಯರು ಅಪಘಾತಕ್ಕೀಡಾದವರ ಸಾವುನೋವುಗಳು ಹೆಚ್ಚುತ್ತಿವೆ ಇದಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು ಅಧಿಕಾರಿಗಳೇ ನೇರ ಹೊಣೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಕರವೇ ಜಿಲ್ಲಾ ಕಾರ್ಯಾಲಯದಲ್ಲಿ ಜರುಗಿದ ಸಭೆಯಲ್ಲಿ ಮಾತನಾಡಿದ ಅವರು ಕರವೇಯಿಂದ ನಾರಾಯಣಗೌಡರ ಜನ್ಮದಿನ ಪ್ರಯುಕ್ತ ರಕ್ತದಾನ ಮಾಡಬೇಕೆಂದರೆ ಜಿಲ್ಲೆಯಲ್ಲಿ ರಕ್ತನಿಧಿ ಕೇಂದ್ರವೇ ಮುಚ್ಚಿ ಹೋಗಿರುವುದು ಗಮನಕ್ಕೆ ಬಂದಿದ್ದು, ಇದು ಅತ್ಯಂತ ದುರ್ದೈವದ ಸಂಗತಿಯಾಗಿದೆ ಎಂದು ಅವರು ಖೇದ ವ್ಯಕ್ತಪಡಿಸಿದರು.

ಇದೇ ತಿಂಗಳ ಜೂ.28 ರಂದು ರಕ್ತದಾನ ಮಾಡಲು ಜಿಲ್ಲೆಯ ಕರವೇ ಸೇನಾನಿಗಳು ಸಿದ್ದರಾಗಿದ್ದರು ಆದರೆ ರಕ್ತ ನಿಧಿಕೇಂದ್ರವೇ ಇಲ್ಲದ್ದರಿಂದ ರಕ್ತದಾನ ಕಾರ್ಯಕ್ರಮ ರದ್ದುಮಾಡಬೇಕಾಗಿ ಬಂತು ಎಂದು ಅವರು ಸಭೆಗೆ ತಿಳಿಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಿಂದುಳಿದ ಜಿಲ್ಲೆ ಎಂದು ಘೋಷಿಸಿವೆ ಶಿಕ್ಷಣ ಮತ್ತು ಆರೋಗ್ಯ ಕ್ರಮಾಂಕದಲ್ಲಿ ತೀರ ಹಿಂದುಳಿದಿರುವುದಕ್ಕೆ ರಕ್ತನಿಧಿ ಕೇಂದ್ರ ಇಲ್ಲದೇ ಇರುವುದೇ ಪ್ರತ್ಯಕ್ಷ ಸಾಕ್ಷಿಯಾಗಿದೆ ಇದಲ್ಲದೇ ಕಳೆದ ಹಲವು ವರ್ಷಗಳಿಂದ ಬಂದ್ ಆಗಿರುವ ರಕ್ತ ನಿಧಿ ಕೇಂದ್ರದಿAದಾಗಿ ಸಮಸ್ಯೆಗಳು ಉಲ್ಬಣಿಸಿವೆ. ರೋಗಿಗಳು ಪರದಾಡುತ್ತಿದ್ದರೂ ಯಾರೋಬ್ಬರೂ ಈ ಕುರಿತು ಕಳಕಳಿ ಇಲ್ಲದೇ ಇರುವುದು ನಾಚಿಕೆಗೇಡು ಎಂದ ಅವರು, ಕೂಡಲೇ ಒಂದು ವಾರದಲ್ಲಿ ರಕ್ತನಿಧಿ ಕೇಂದ್ರ ಪ್ರಾರಂಭಿಸಲು ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಕರವೇ ಜಿಲ್ಲೆಯ ಉಸ್ತುವಾರಿ ಸಚಿವ, ಶಾಸಕರುಗಳು ಹಾಗೂ ಜಿಲ್ಲಾಡಳಿತಕ್ಕೆ ಘೇರಾವ್ ಮಾಡುವ ಕಾರ್ಯಕ್ರಮ ರೂಪಿಸಲಿದೆ ಎಂದು ಎಚ್ಚರಿಕೆ ನೀಡಿದರು.

ಕೂಡಲೇ ಸಂಬAಧಿಸಿದವರು ಜಿಲ್ಲಾ ಕೇಂದ್ರದಲ್ಲಿರುವ ಏಕೈಕ ಸರ್ಕಾರಿ ರಕ್ತನಿಧಿ ಕೇಂದ್ರ ಆರಂಭಕ್ಕೆ ಇನ್ನಾದರೂ ಎಚ್ಚೆತ್ತು ಕೆಲಸ ಮಾಡಬೇಕು ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಆಗುವ ಅನಾಹುತಗಳಿಗೆ ಈ ಮೇಲೆ ತೋರಿಸಿದ ಎಲ್ಲರನ್ನು ಹೊಣೆ ಮಾಡಿ ನ್ಯಾಯಾಲಯದಲ್ಲಿ ದಾವೆ ಹೂಡಲು ಜಿಲ್ಲಾ ಸಮಿತಿ ಸಭೆಯಲ್ಲಿ ಮುಖಂಡರು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತಿಕುಣಿ, ಅಂಬ್ರೇಷ್ ಹತ್ತಿಮನಿ, ವಿಶ್ವಾರಾಧ್ಯ ದಿಮ್ಮೆ, ಸಂತೋಷ ನಿರ್ಮಲಕರ್, ಚೌಡಯ್ಯ ಬಾವೂರ, ಶರಣಪ್ಪ ದಳಪತಿ, ಸಿದ್ರಾಮರಡ್ಡಿ ಚಿನ್ನಾಕಾರ, ಸಾಹೇಬಗೌಡ ನಾಯಕ, ವಿಶ್ವರಾಜ ಹೊನಿಗೇರಾ, ಸಿದ್ದಪ್ಪ ಕೊಯಿಲೂರ, ಯಮುನಯ್ಯ ಗುತ್ತೇದಾರ, ಶರಣು ಸಾಹುಕಾರ, ಸಿದ್ದಪ್ಪ ಕ್ಯಾಸಪನಳ್ಳಿ, ಭೀಮರಾಯ ರಾಮಸಮುದ್ರ, ವೆಂಕಟೇಶ ಮಿಲ್ಟಿç ಇನ್ನಿತರರು ಸಭೆಯಲ್ಲಿದ್ದರು.

WhatsApp Group Join Now
Telegram Group Join Now

Related Posts