ಸ್ಥಳೀಯ

ಪರೀಕ್ಷೆಗೆ  ಸಕಲ ಸಿದ್ದತೆ ಮಾಡಿಕೊಂಡು ಸುವ್ಯವಸ್ಥಿತವಾಗಿ ಶಾಂತಿಯುತವಾಗಿ ಜರುಗುವಂತೆ ಕ್ರಮ ವಹಿಸಿ;  ಜಿಲ್ಲಾಧಿಕಾರಿ ಡಾ.ಸುಶೀಲ ಬಿ

WhatsApp Group Join Now
Telegram Group Join Now

ಮಾರ್ಚ್ 01  ರಿಂದ  22 ರ ವರೆಗೆ  ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ

ಪರೀಕ್ಷೆಗೆ  ಸಕಲ ಸಿದ್ದತೆ ಮಾಡಿಕೊಂಡು ಸುವ್ಯವಸ್ಥಿತವಾಗಿ ಶಾಂತಿಯುತವಾಗಿ ಜರುಗುವಂತೆ ಕ್ರಮ ವಹಿಸಿ;  ಜಿಲ್ಲಾಧಿಕಾರಿ ಡಾ.ಸುಶೀಲ ಬಿ.

ಯಾದಗಿರಿ: ಫೆಬ್ರವರಿ, 23  ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ  ಮಾರ್ಚ್ 01  ರಿಂದ 22 ರ ವರೆಗೆ  ನಡೆಯಲಿದ್ದು ,  19 ಪರೀಕ್ಷಾ ಕೇಂದ್ರಗಳಲ್ಲಿ   ಒಟ್ಟು 11712   ವಿದ್ಯಾರ್ಥಿಗಳು  ಹಾಜರಾಗಲಿದ್ದು ಅಧಿಕಾರಿಗಳು  ಪರೀಕ್ಷೆಗೆ ಎಲ್ಲಾ ಸಿದ್ದತೆ  ಮಾಡಿಕೊಂಡು ಪರೀಕ್ಷೆಗಳು ಸುವ್ಯವಸ್ಥಿತವಾಗಿ, ಶಾಂತಿಯುತವಾಗಿ ಜರುಗುವಂತೆ ಕ್ರಮ ವಹಿಸಬೇಕೆಂದು    ಎಂದು ಜಿಲ್ಲಾಧಿಕಾರಿ ಡಾ. ಸುಶೀಲ ಬಿ. ಅವರು ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ  ನಡೆದ  ದ್ವಿತೀಯ ಪಿಯುಸಿ  ವಾರ್ಷಿಕ ಪರೀಕ್ಷೆಯ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಈ ಪರೀಕ್ಷಾ ಕೇಂದ್ರಗಳಿಗೆ  ಒಟ್ಟು 94 ಪದವಿ ಪೂರ್ವ ಕಾಲೇಜುಗಳ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಜೋಡಿಸಲಾಗಿದೆ.

ಯಾದಗಿರಿ ನಗರದ  ಸರ್ಕಾರಿ ಪಿಯು ಕಾಲೇಜು,  ನ್ಯೂಕನ್ನಡ ಪಿಯು ಕಾಲೇಜು, ಜವಾಹರ ಪಿ.ಯು ಕಾಲೇಜು,  ಸರಕಾರಿ ಪಿ.ಯು ಮಹಿಳಾ ಕಾಲೇಜು, ಸಭಾ ಪಿ.ಯು ಕಾಲೇಜು, ಮಹಾತ್ಮಗಾಂಧಿ ಪಿ.ಯು ಕಾಲೇಜು, ಶಹಾಪುರದ ಸರ್ಕಾರಿ ಪಿ.ಯು ಬಾಯ್ಸ್ ಕಾಲೇಜು, ಸರ್ಕಾರಿ ಪಿ.ಯು ಭೀಮರಾಯನಗುಡಿ, ಸರ್ಕಾರಿ ಪಿ.ಯು ಮಹಿಳಾ ಕಾಲೇಜು, ಸಿ.ಬಿ ಪಿಯು ಕಾಲೇಜು, ಎಸ್.ಬಿ ದರ್ಶನಾಪೂರ ಪಿ.ಯು ಕಾಲೇಜು, ಸುರಪುರದ ಸರ್ಕಾರಿ ಪಿ.ಯು ಬಾಯ್ಸ್ ಕಾಲೇಜು, ಪ್ರಭು ಪಿಯು ಕಾಲೇಜು, ಡಾ. ಬಾಬಾ ಸಾಹೇಬ ಅಂಬೇಡ್ಕರ ಪಿಯು ಕಾಲೇಜು ರಂಗಂಪೇಟ, ಸರ್ಕಾರಿ ಪಿಯು ಕಾಲೇಜು ರಂಗಂಪೇಟ, ಸರ್ಕಾರಿ ಪಿಯು ಬಾಯ್ಸ್ ಕಾಲೇಜು ಗುರುಮಿಠಕಲ್, ಮಹಿಳಾ ಪಿಯು ಕಾಲೇಜು ಗುರುಮಿಠಕಲ್, ಸರ್ಕಾರಿ ಪಿಯು ಕಾಲೇಜು ಕೆಂಭಾವಿ, ಸರ್ಕಾರಿ ಪಿಯು ಕಾಲೇಜು ಹುಣಸಗಿ
ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಪರೀಕ್ಷಾ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು ಪರೀಕ್ಷೆಯ  ನಿಯಮಾವಳಿಗಳಂತೆ ಕಾರ್ಯನಿರ್ವಹಿಸಬೇಕು.
ಪರೀಕ್ಷಾ ಕೇಂದ್ರಗಳಲ್ಲಿಯ ಮಾಹಿತಿಗಳನ್ನು ಚಿತ್ರೀಕರಿಸುವುದು, ಚಿತ್ರೀಕರಿಸಲು ಪ್ರಯತ್ನಿಸುವುದು  ಮತ್ತು ಸಮೂಹ ಮಾಧ್ಯಮಗಳಲ್ಲಿ / ಜಾಲತಾಣಗಳಲ್ಲಿ ಹರಿದಾಡುವಂತೆ ಮಾಡುವುದು ಅಪರಾಧವಾಗಿರುತ್ತದೆ. ಒಂದು ವೇಳೆ ಕಂಡುಬಂದಲ್ಲಿ ಇಲಾಖಾ ಕ್ರಮದಂತೆ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದರು.  ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ಪ್ರದೇಶದಲ್ಲಿ ನಿಷೇಧಿ ಪ್ರದೇಶ ಎಂದು ಜಿಲ್ಲಾಧಿಕಾರಿಗಳು ಘೋಷಿಸಿ ಮತ್ತು ಸುತ್ತಲಿನ ಝಿರಾಕ್ಸ್, ಕಂಪ್ಯೂಟರ್ ಮಳಿಗೆಗಳನ್ನು ಮುಚ್ಚುವಂತೆ ಆದೇಶಿಸಿದರು.

ಪರೀಕ್ಷಾ ಕೇಂದ್ರಗಳಿಗೆ  ಸುರಕ್ಷತೆಗೆ ಪೊಲೀಸರು ಬಂದೋಬಸ್ತ್ ಗಾಗಿ ಸಮಯಕ್ಕಿಂತ ಮುಂಚಿತವಾಗಿಯೇ ತೆರಳಬೇಕು ಎಂದು ಸೂಚಿಸಿದ್ದಾರೆ.

ಪರೀಕ್ಷಾ ಕೇಂದ್ರಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಕೊಠಡಿಗಳ ಅಂತರದಲ್ಲಿ ಕೊಠಡಿಯ ಹೊರಗೆ ವ್ಯವಸ್ಥೆ ಮಾಡಬೇಕು ಎಂದರು.

ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಮೊಬೈಲ್ ಪೋನ್ ಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ  ಅಪರ ಜಿಲ್ಲಾಧಿಕಾರಿ ಶರಣಬಸಪ್ಪ ಕೋಟೆಪ್ಪಗೊಳ, ಡಿಡಿಪಿಯು ಚನ್ನಬಸಪ್ಪ ಕುಳಗೇರಿ, ಜಿಲ್ಲಾ ಖಜಾನೆ ಅಧಿಕಾರಿ ಮಾಳಿಂಗರಾಯ ಬಿ,   ಯಾದಗಿರಿ ತಹಶೀಲ್ದಾರ ನಾಗಮ್ಮ ಕಟ್ಟಿಮನಿ ಸೇರಿದಂತೆ  ಪರೀಕ್ಷೆಗೆ ಜವಾಬ್ದಾರಿ ವಹಿಸಿದ ಇತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

WhatsApp Group Join Now
Telegram Group Join Now

Related Posts