ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವೈದ್ಯಕೀಯ ವಿಜ್ಞಾನ ಸಂಸ್ಥೆ, ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರಾಭಿವೃದ್ದಿ ಕೋಶ ಹಾಗೂ ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಸರಕಾರಿ ಪದವಿ ಕಾಲೇಜು ಸಭಾಂಗಣದಲ್ಲಿ ನಡೆದ ಡಾ.ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ವ್ಯಸನಮುಕ್ತ ದಿನವನ್ನಾಗಿ ಆಚರಿಸುವ ದಿನಾಚರಣೆಗೆ ಸಸಿಗೆ ನೀರೆರೆದು ಹಾಗೂ ಡಾ.ಮಹಾಂತ ಶಿವಯೋಗಿಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಅವರು ಮಾತನಾಡಿದರು.
ದುಶ್ಚಟಗಳನ್ನು ಬಿಡುವುದರಿಂದ ದೈಹಿಕ ಆರೋಗ್ಯ ಸುಧಾರಣೆಯಾಗುತ್ತದೆ ಜೊತೆಗೆ ಆರ್ಥಿಕವಾಗಿ ಸದೃಡರಾಗಲೂ ಸಾಧ್ಯವಿದೆ. ದುಶ್ಚಟಗಳಿಗೆ ದಾಸರಾಗಿ ನಿತ್ಯ ಕಣ್ಣೀರಿಡುವ ಕುಟುಂಬಗಳಿಗೆ ಶಾಶ್ವತ ನೆಮ್ಮದಿ ಕಲ್ಪಿಸಿದ ಶ್ರೇಯಸ್ಸು ಡಾ.ಮಹಾಂತ ಯೋಗಿಗಳಿಗೆ ಸಲ್ಲುತ್ತದೆ ಎಂದರು.
ವಿದ್ಯಾರ್ಥಿಗಳ ಜೀವನದಲ್ಲಿ ಮುಖ್ಯವಾದದ್ದು ಶಿಸ್ತು, ಈ ಶಿಸ್ತನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಸಾಧನೆ ಮಾಡಲು ಸಾಧ್ಯವಾಗಲಿದೆ.
ಬಹಳಷ್ಟು ಕುಟುಂಬ ವ್ಯಸನಗಳಿಂದ ತಾವಷ್ಟೇ ಹಾಳಾಗದೆ ಇಡೀ ಕುಟುಂಬವನ್ನೇ ನಾಶ ಮಾಡಲಿದೆ.
ಬೆಂಕಿ ದೇಹ ಮಾತ್ರ ಸುಟ್ಟರೆ ವ್ಯಸನ ದೇಹ ಹಾಗೂ ಆತ್ಮವನ್ನು ಸುಡಲಿದೆ ಯಾವುದೇ ಪರೀಕ್ಷೆ ಪಾಸು ಮಾಡಬೇಕಾದರೆ ನಿರ್ದಿಷ್ಟ ಪ್ರಯತ್ನ ಮಾಡಬೇಕು. ಆ ಪ್ರಯತ್ನ ಕೂಡ ಸರಿಯಾಗಿ ಇರಬೇಕು. ಮಹಾಂತ ಶ್ರೀ ವ್ಯಸನ ಮುಕ್ತ ಮಾಡಲು ಜೋಳಿಗೆ ಹಾಕಿದ್ದು ಮಾತ್ರವಲ್ಲ ಹೊರದೇಶದಲ್ಲೂ ವ್ಯಸನ ಮುಕ್ತ ಸಮಾಜಕ್ಕೆ ಕಾರ್ಯಕ್ರಮ ಮಾಡಿ ಸಮಾಜ ಸುಧಾರಣೆಗೆ ಶ್ರಮಿಸಿದ ಏಕೈಕ ಮಹಾಂತರು ಎಂದರು.
ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನೋವೈದ್ಯ ಡಾ.ಅಮೀತಕುಮಾರ ಎ.ಕೆ ಅವರು ವಿಶೇಷ ಉಪನ್ಯಾಸ ನೀಡಿ, ಇತ್ತೀಚಿನ ದಿನಗಳಲ್ಲಿ ಯುವ ಜನತೆಯೇ ಮಾದಕ ವಸ್ತುಗಳ ಬಳಕೆ ಹಾಗೂ ದುರ್ಬಳಕೆ ಮಾಡುತ್ತಿರುವುದು ಕಂಡು ಬರುತ್ತಿದೆ. ಮಾದಕ, ಮದ್ಯ ಸೇವನೆಯಿಂದ ದೈಹಿಕವಾಗಿ ದುಷ್ಪರಿಣಾಮ ಕಂಡು ಬರುವುದಲ್ಲದೇ ಮಾನಸಿಕ ಕಾಯಿಲೆಗಳಿಗೂ ಸಹ ದಾರಿ ಮಾಡಿಕೊಡುತ್ತದೆ. ಎಲ್ಲಾ ವ್ಯಸನಗಳಿಂದ ಮುಕ್ತರಾಗಲು ಚಿಕಿತ್ಸಾ ಆಪ್ತ ಸಮಾಲೋಚನೆ ಲಭ್ಯವಿದ್ದು, ಸಹಾಯವಾಣಿ 14416 ಸಂಖ್ಯೆಗೆ ಕರೆ ಮಾಡಬಹುದು ಎಂದು ತಿಳಿಸಿದರು.
ಡಿಹೆಚ್‌ಓ ಡಾ.ಪ್ರಭುಲಿಂಗ ಮಾನಕರ ಮಾತನಾಡಿ, ವ್ಯಸನ ಮುಕ್ತ ಕಾರ್ಯಕ್ರಮ ಯುವ ಸಮುದಾಯದವರಿಗೆ ಬಹಳ ಅಗತ್ಯ ಇದೆ. ಚಟಗಳಿಗೆ ದಾಸರಾಗದೆ ಜೀವನ ರೂಪಿಸಿಕೊಂಡರೆ ಏನಾದರೂ ಸಾಧನೆ ಮಾಡಲು ಸಾಧ್ಯವಾಗಲಿದೆ. ಚಟಗಳಿಗೆ ದಾಸರಾದರೆ ನಮ್ಮನ್ನೇ ಕಳೆದುಕೊಂಡAತೆ ಎಂದರು.
ಮನಸ್ಸಿನಲ್ಲಿ ಒಳ್ಳೆಯ ಹಾಗೂ ಕೆಟ್ಟ ವಿಚಾರಗಳು ಬರುತ್ತವೆ. ಆದರೆ ಮನಸ್ಸಿಗೆ ಯಾವುದು ಮಾಡಬೇಕು ಎಂಬುದು ಇರುವುದಿಲ್ಲ. ಮನಸ್ಸನ್ನು ನಿಯಂತ್ರಣ ಮಾಡಿಕೊಂಡು ಒಳ್ಳೆಯ ವಿಚಾರ ಅಳವಡಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಸುಭಾಶ್ಚಂದ್ರ ಕೌಲಗಿ ಮಾತನಾಡಿ, ಶಿವಯೋಗಿಯವರು ಸಮಾಜದಲ್ಲಿ ಸಂಚಾರ ಮಾಡಿ ಲೋಕದ ದುಶ್ಚಟಗಳನ್ನು ತಮ್ಮ ಜೋಳಿಗೆಗೆ ಹಾಕಿಕೊಂಡು ಮಾನಸಿಕ ನೆಮ್ಮದಿ ನೀಡುವ ಆರೋಗ್ಯಕರ ಚಿಂತನೆಗಳನ್ನು ಜನರ ಮನಸ್ಸಿನಲ್ಲಿ ಬಿತ್ತುವ ಮೂಲಕ ಉತ್ತಮ ಜೀವನ ನಡೆಸಲು ಅನೇಕರಿಗೆ ಪ್ರೇರಣೆಯಾಗಿದ್ದಾರೆ ಹಾಗಾಗಿ ಇವರ ಜನ್ಮದಿನದ ಪ್ರಯುಕ್ತ ಸರಕಾರವು ವ್ಯಸನಮುಕ್ತ ದಿನಾಚರಣೆ ಆಚರಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.ಯುವ ಪೀಳಿಗೆಯು ತಮ್ಮ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯಯುತ ಜೀವನಕ್ಕೆ ಒತ್ತು ನೀಡಬೇಕು. ನೆರೆಹೊರೆಯವರಿಗೂ ವ್ಯಸನದಿಂದ ಹೊರಬರಲು ಅರಿವು ಮೂಡಿಸಬೇಕು ಎಂದರು.
ಇದೇ ವೇಳೆ ವ್ಯಸನ ಮುಕ್ತ ದಿನಾಚರಣೆಯ ಪ್ರತಿಜ್ಞಾ ವಿಧಿಯನ್ನು ವಾರ್ತಾಧಿಕಾರಿಗಳು ಬೋಧಿಸಿದರು ಇದಕ್ಕೂ ಮೊದಲು ಪದವಿ ಕಾಲೇಜಿನ ವಿದ್ಯಾರ್ಥಿಗಳಿಂದ ವ್ಯಸನ ಮುಕ್ತ ದಿನಾಚರಣೆ ಪ್ರಯುಕ್ತ ಜಾಗೃತಿ ಜಾಥಾ ನಡೆಯಿತು. ಈ ಜಾಥಾಕ್ಕೆ ಪದವಿ ಕಾಲೇಜಿನ ಪ್ರಾಶಂಪಾಲರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಧರಣೇಶ ಎಸ್ ಪಿ, ವೈದ್ಯಕೀಯ ಮೆಡಿಕಲ್ ಕಾಲೇಜಿನ ಜೀವಶಾಸ್ತç ವಿಭಾಗದ ಪ್ರಾಧ್ಯಾಪಕ ಡಾ.ಪಂಪಾರೆಡ್ಡಿ ಕೊಲ್ಲೂರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ, ಆರೋಗ್ಯ ಇಲಾಖೆ ಡಾ.ಲಕ್ಷಿö್ಮÃಕಾಂತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಸುಲೈಮಾನ್ ಡಿ.ನದಾಫ್, ದತ್ತಾಂಶ ನಮೂದು ಸಹಾಯಕ (ಬೆರಳಚ್ಚುಗಾರ) ಭೀಮಣ್ಣ ನಾಯಕ, ಹಾಗೂ ವಾರ್ತಾ ಇಲಾಖೆ ಸಿಬ್ಬಂದಿ ಗುರುನಾಥ, ಛಾಯ ಗ್ರಾಹಕ ಬೀರಲಿಂಗಪ್ಪ ಕಿಲ್ಲನಕೇರಾ, ವಿಜಯಲಕ್ಷಿö್ಮÃ ಚವ್ಹಾಣ್, ಪೃಥ್ವಿರಾಜ್ ಸಾಗರ್, ಎಸ್.ಡಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಶಾಲೆ ಸಂಸ್ಥೆಯ ಅಧ್ಯಕ್ಷ ದುರ್ಗಪ್ಪ ಹೆಚ್ ಪೂಜಾರಿ, ಸೇರಿದಂತೆ ಪದವಿ ಕಾಲೇಜಿನ ಉಪನ್ಯಾಸಕ ವೃಂದದವರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.