ಸ್ಥಳೀಯ

ಬಸವಾದಿ ಶರಣರು ಸಮಾನತೆಯ ಹರಿಕಾರರು: ಡಾ. ಸಿದ್ದರಾಮ ಹೊನ್ಕಲ್

WhatsApp Group Join Now
Telegram Group Join Now

ಯಾದಗಿರಿ – ಬಸವಾದಿ ಶರಣರು ತಮ್ಮ ವಚನಗಳ ಮೂಲಕ ಸಮಾನತೆಯ ಸಮಾಜ ನಿರ್ಮಾಣದ ಕನಸು ಕಂಡಿದ್ದರು ಎಂದು ಲೇಖಕ ಡಾ.ಸಿದ್ಧರಾಮ ಹೊನ್ಕಲ್ ಅವರು ನಾಲವಾರದ ಶ್ರೀ ಕೋರಿ ಸಿದ್ದೇಶ್ವರ ಸಂಸ್ಥಾನ ಮಠದ ಶಿವಾನುಭವ ಗೋಷ್ಠಿಯಲ್ಲಿ ಇತ್ತೀಚೆಗೆ ಮಾತನಾಡಿದರು.ಶರಣರು ಹಾಕಿಕೊಟ್ಟ ಜಾತಿರಹಿತ ಸಮಾಜ ನಿರ್ಮಾಣದ ಕನಸು ಅವರ ಅಭಿಮಾನಿಗಳದು ಆಗಬೇಕಿದೆ… ಎಂದು ಅವರು ಕರೆ ನೀಡಿದರು.

ಯಳ್ಳಮಾಸೆಯು ರೈತರ ಬದುಕಿನ ಸಂತಸದ ದಿನ.ನಮಗೆಲ್ಲ ಅನ್ನ ನೀಡುವ ರೈತರು ಸದಾ ಸಂತೋಷದಿಂದ ಇರುವಂತಹ ದಿನಗಳು ಬರಬೇಕಿದೆ ಎಂದು ಸಾನಿಧ್ಯ ವಹಿಸಿದ್ದ ಪೂಜ್ಯ ಶ್ರೀ ಡಾ.ಸಿದ್ಧ ತೋಟೇಂದ್ರ ಶ್ರೀಗಳು ರೈತರ ಮಹತ್ವವನ್ನು ಮನನ ಮಾಡಿಕೊಟ್ಟರು.ಇದೇ ವೇದಿಕೆಯಲ್ಲಿ ಮುದನೂರಿನ ಶ್ರೀಗಳು, ಚಟ್ನಳ್ಳಿಯ ಶ್ರೀಗಳು,ಸಹ ಭಾಗವಹಿಸಿ ತಮ್ಮ ಶಿವಾನುಭವದ ಮಾತುಗಳು ಹಂಚಿಕೊಂಡರು.ಇದೇ ಸಂದರ್ಭದಲ್ಲಿ ಡಾ.ಸಿದ್ಧರಾಮ ಹೊನ್ಕಲ್ ಅವರು, ಯುವಕವಿ ಬಸವರಾಜ ಶಿಣ್ಣೂರ ಅವರು ತಮ್ಮ ಹೊಸ ಕೃತಿಯನ್ನು ಪೂಜ್ಯ ಶ್ರೀ ಗಳಿಗೆ ಗೌರವಿಸಿ ನೀಡಿದರು.

ಇತ್ತೀಚೆಗೆ ಕರ್ನಾಟಕದ ಜಾನಪದ ವಿಶ್ವವಿದ್ಯಾನಿಲಯವು ಲೇಖಕ ಸಿದ್ಧರಾಮ ಹೊನ್ಕಲ್ ಅವರ ಒಟ್ಟು ಸಾಹಿತ್ಯ ಸೇವೆಯನ್ನು ಗುರುತಿಸಿ ಘಟಿಕೋತ್ಸವದಲ್ಲಿ ಅವರಿಗೆ ಗೌರವ ಡಾಕ್ಟರೇಟ್ ನೀಡಿದ ಹಿನ್ನೆಲೆಯಲ್ಲಿ ನಾಲವಾರದ ಶ್ರೀಮಠದ ಮೂಲಕ ಅವರಿಗೆ ಹೃದಯಸ್ಪರ್ಶಿಯಾಗಿ ಸನ್ಮಾನಿಸಿ ಆಶೀರ್ವಾದ ಮಾಡಿದರು.ಇದು ನಮ್ಮ ಭಾಗಕ್ಕೆ ಸಂದ ಗೌರವ ಎಂದು ಶ್ರೀಗಳು ತಮ್ಮ ಶುಭಾಶಯಗಳ ಮಾತಿನಲ್ಲಿ ಹೇಳಿ ಇವರ ಸಾಹಿತ್ಯ ಸಾಧನೆಗೆ ಇನ್ನಷ್ಟು ಶಕ್ತಿ ಸಂಚಯ, ಆರೋಗ್ಯ ದೊರೆಯಲಿ ಎಂದು ಸ್ವತಹ ಲೇಖಕ ಕವಿಗಳು ಆದ ಡಾ.ಸಿದ್ಧ ತೋಟೇಂದ್ರ ಶ್ರೀಗಳು ಶುಭ ಹಾರೈಸಿದರು.ಅಪಾರ ಭಕ್ತ ಜನಸಾಗರ ಈ ಶಿವಾನುಭವ ಗೋಷ್ಠಿಯಲ್ಲಿ ಭಾಗವಹಿಸಿದ್ದರು.

WhatsApp Group Join Now
Telegram Group Join Now

Related Posts