ಜನ ಆಕ್ರೋಶ ಸುದ್ದಿವಾಹಿನಿಯನ್ನು ವೀಕ್ಷಿಸಲು ಇಲ್ಲಿ ಮುಟ್ಟಿhttps://www.youtube.com/@janaaakroshanews
ಬಾಯಿ ಉತ್ತಮ ಆರೋಗ್ಯಕ್ಕಾಗಿ ಹಲ್ಲುಜ್ಜುವುದು ಹಾಗೂ ನಾಲಿಗೆಯನ್ನು ಸ್ವಚ್ಛಗೋಳಿಸುವುದು, ಬಾಯಿ ಮುಕ್ಕಳಿಸುವುದು, ಸ್ವಯಂಪ್ರೇರಿತವಾಗಿ ಬಾಯಿಯನ್ನು ಪರೀಕ್ಷಿಸಿಕೊಳ್ಳುವುದು, ಧೂಮಪಾನ ಮಡದಿರುವುದು, ತುಂಬಾಕುಯುಕ್ತ ಪದಾರ್ಥಗಳ ಸೇವನೆಯಿಂದ ದೂರವಿರುವುದು, ಸಮತೊಲನವಾದ ಆರೋಗ್ಯಕರ ಸಕ್ಕರೆ ಮುಕ್ತ ಆಹಾರ ಸೇವನೆ ಮಾಡುವುದು, ಕನಿಷ್ಟ 6 ತಿಂಗಳಿಗೊಮ್ಮೆ ದಂತ ತಪಾಸಣೆಯನ್ನು ಮಾಡಿಕೊಳ್ಳುವುದು, ಬಾಯ ಆರೋಗ್ಯದ ಕಡೆ ಸಾರ್ವಜನಿಕರು ಗಮನ ಹರಿಸಬೇಕು ಎಂದು ಹೇಳಿದರು.
ಜಿಲ್ಲಾ ಕ್ಷಯ ರೋಗ ನಿಯಂತ್ರಣ ಅಧಿಕಾರಿಗಳಾದ ಡಾ.ಸಂಜೀವಕುಮಾರ ರಾಯಚೂರಕರ್ ಅವರು ಮಾತನಾಡಿ ಬಾಯಿ ಆರೋಗ್ಯ ಅತೀ ಮುಖ್ಯವಾಗಿದ್ದು ಬಾಯಿ ಆರೋಗ್ಯ ಕಡೆಗೆ ಗಮನ ಹರಿಸದೇ ಇದ್ದರೆ ಕ್ಯಾನ್ಸರ್ ಹಾಗೂ ಇತರೆ ಮಾರಕ ರೋಗಗಳು ಬರುವ ಸಾದ್ಯತೆ ಇದ್ದು, ದಂತ ರಕ್ಷಣೆ ಮಾಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಎಂದು ತಿಳಿಸಿದರು.
ಆಲ್ ಬದರ್ ಡೆಂಟಲ್ ಕಾಲೇಜ್ ಕಲಬುರ್ಗಿ ಪ್ರಾಧ್ಯಾಪಕರಾದ ಡಾ.ಸುಮಿತ್ ದೇಶಪಾಂಡೆ ಅವರು ಮಾತನಾಡಿ ಯಾದಗಿರಿ ಜಿಲ್ಲಾ ಆಸ್ಪತ್ರೆಯಲ್ಲಿ ಉಚಿತ ಕೃತಕ ದಂತ ಪಂಕ್ತಿ sಶಿಬಿರ ಹಾಗೂ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ, ಮುಂದಿನ ದಿನಮಾನಗಳಲ್ಲಿ ಹೆಚ್ಚು ಹೆಚ್ಚು ಶಿಬಿರಗಳನ್ನು ಹಮ್ಮಿಕೊಂಡು, ರೋಗಗಳು ಬಾರದಂತೆ ಮುಂಜಾಗೃತೆ ವಹಿಸಬೇಕು ಎಂದು ತಿಳಿಸಿದರು.
NOHP ಕಾರ್ಯಕ್ರಮ ಅಧಿಕಾರಿಗಳಾದ ಡಾ.ಮಹೇಶ್ ಸಜ್ಜನ್ ಅವರು ಮಾತನಾಡಿ ಉಚಿತ ಕೃತಕ ದಂತ ಪಂಕ್ತಿ sಶಿಬಿರ ಹಾಗೂ ಜಾಗೃತಿ ಕಾರ್ಯಕ್ರಮ 2024ರ ಅಕ್ಟೋಬರ್ 1, ಹಾಗೂ 2024ರ ಅಕ್ಟೋಬರ್ 2 ರಂದು ಹೊಸ ಜಿಲ್ಲಾ ಆಸ್ಪತ್ರೆ ಯಾದಗಿರಿ ಇಲ್ಲಿ ಹಮ್ಮಿಕೊಂಡಿದ್ದು, ಸಾರ್ವಜನಿಕರು ಬಾಯಿ ಆರೋಗ್ಯದ ಕುರಿತು ಪರೀಕ್ಷಿಸಿಕೊಳ್ಳಬೇಕು. ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ಹಲ್ಲುಗಳ ಸುರಕ್ಷತೆ ಕಡೆಗೆ ಗಮನ ನೀಡಬೇಕು. ಪ್ರತಿ ವರ್ಷಕ್ಕೊಮ್ಮೆ ಹಲ್ಲುಗಳ ತಪಾಸಣೆ ಮಾಡಿಕೊಳ್ಳಬೇಕು 45 ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರಿಗೆ ಕೃತಕ ದಂತ ಪಂಕ್ತಿ ನೀಡಲಾಗುವುದು, ಬಿ.ಪಿ.ಎಲ್ ವರ್ಗಕ್ಕೆ ಸೇರಿದ ಹಿರಿಯ ನಾಗರಿಕರು ಈ ಕಾರ್ಯಕ್ರಮದ ಉಪಯೊಗ ಪಡೆದುಕೊಳ್ಳಬಹುದು. ಫಲಾನುಭವಿಗಳು ಬಿ.ಪಿ.ಎಲ್ ಕಾರ್ಡ್ ಆಧಾರ್ ಕಾರ್ಡ್ ಮತ್ತು 2 ಫೋಟೊ ತೆಗೆದುಕೊಂಡು ಬಂದು ಸದರಿ ಯೋಜನೆಯ ಸೌಲಭ್ಯವನ್ನು ಪಡೆzಯಬೇಕೆಂದು ತಿಳಿಸಿದರು.
ಯಾದಗಿರಿ ತಾಲ್ಲೂಕ ಆರೋಗ್ಯ ಅಧಿಕಾರಿಗಳಾದ ಡಾ.ಹನುಮಂತ ರೆಡ್ಡಿ ಮದನಿ, ದಂತ ವೈದ್ಯ ಡಾ.ಶಿಲ್ಪಾ, ವೈದ್ಯರು, ಸಿಭ್ಬಂದಿಗಳು, ಇನ್ನಿತರರು ಉಪಸ್ಥಿತರಿದ್ದರು. ಯಾದಗಿರಿ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿಗಳಾದ ಶ್ರೀ ತುಳಸಿರಾಮ ಚವ್ಹಾಣ ಅವರು ಕಾರ್ಯಕ್ರಮ ನಿರೂಪಣೆ ಹಾಗೂ ಸ್ವಾಗತಿಸಿದರು. ದಂತವೈದ್ಯರಾದ ಡಾ.ಭಾಗ್ಯಶ್ರೀ ಪಾಟೀಲ್ ವಂದನಾರ್ಪಣೆ ನೇರವೆರಿಸಿದರು.