ಅಪರಾಧ

ಅಕ್ರಮವಾಗಿ ಮದ್ಯ ಮಾರಟ ಮೇಲೆ ಅಬಕಾರಿ ದಾಳಿ

WhatsApp Group Join Now
Telegram Group Join Now

ಅಕ್ರಮವಾಗಿ ಮದ್ಯ ಮಾರಟ ಮೇಲೆ ಅಬಕಾರಿ ದಾಳಿ

ಯಾದಗಿರಿ : ಏಪ್ರಿಲ್ 05, : ಭಾರತ ಚುನಾವಣಾ ಆಯೋಗವು ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ಘೋಷಿಸಿ ದಿನಾಂಕ:16-03-2024 ರಿಂದ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಚುನಾವಣೆ ಶಾಂತಿಯುತವಾಗಿ ನಿಷ್ಪಕ್ಷಪಾತವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮವಹಿಸಲು ಜಿಲ್ಲೆಯ ವ್ಯಾಪ್ತಿಯಲ್ಲಿ ನಕಲಿ ಮದ್ಯ, ಅಕ್ರಮ ಮದ್ಯ, ಕಲಬೆರಕೆ ಸೇಂದಿ, ಕಳ್ಳಭಟ್ಟಿ ಸಾರಾಯಿ ಹಾಗೂ ಇತರೆ ಅಬಕಾರಿ ಅಕ್ರಮ ಪದಾರ್ಥಗಳ ತಯಾರಿಕೆ ಸಾಗಾಣಿಕೆ ಸಂಗ್ರಹಣೆ ಹಾಗೂ ಮಾರಾಟಗಳಂತಹ ಅಕ್ರಮ ಚಟುವಟಿಕೆಗಳು ನಡೆಯದಂತೆ ಚುನಾವಣಾ ಆಯೋಗದ ನಿರ್ದೇಶನದಂತೆ ಕ್ರಮ ಕೈಗೊಂಡಿರುವ ಮಾಹಿತಿ ಸಲ್ಲಿಸಲಾಗಿದೆ ಎಂದು ಯಾದಗಿರಿ ಅಬಕಾರಿ ಉಪ ಆಯುಕ್ತೆ ಶಾರದಾ ಸಿ.ಕೋಲಕಾರ ಅವರು ತಿಳಿಸಿದ್ದಾರೆ.

ಪ್ರಕರಣ ಸಂ.03, 2024ರ ಏಪ್ರಿಲ್ 04 ರಂದು ಪ್ರಕರಣ ಸಂ.01 ರನ್ವಯ ಮಾನ್ಯ ಅಬಕಾರಿ ಜಂಟಿ ಆಯುಕ್ತರು (ಜಾ ಮತ್ತು ತ) ಕಲಬುರಗಿ ವಿಭಾಗ ಕಲಬುರಗಿ ರವರ ಮತ್ತು ಮಾನ್ಯ ಅಬಕಾರಿ ಉಪ ಆಯುಕ್ತರು, ಯಾದಗಿರಿ ಜಿಲ್ಲೆ ಯಾದಗಿರಿ ಅವರು ಮಾರ್ಗದರ್ಶನದಲ್ಲಿ ಗುರುಮಿಠಕಲ್ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಯಾದಗಿರಿ ಪಟ್ಟಣದಲ್ಲಿ ಗಸ್ತು ಮಾಡುತ್ತೀರುವ ಸಮಯದಲ್ಲಿ ಅಕ್ರಮವಾಗಿ ಮಾರುತಿ ಸುಜುಕಿ ಎಸ್ಸ್ಪ್ರೇಸ್ಸೊ ನಾಲ್ಕು ಚಕ್ರದ ಕಾರ್ ವಾಹನ ನೊಂದಣಿ ಸಂ.ಏA-33-ಒ-9165 ನೇದ್ದರಲ್ಲಿ ಚಂದ್ರಕಾAತ ತಂದೆ ಬಸವರಾಜ ಕಲಾಲ ಎಂಬ ಆರೋಪಿತನು 90mಟx192ನ ಓರಿಜಿನಲ್ ಚಾಯ್ಸ ವಿಸ್ಕಿ ಟೆಟ್ರಾ ಪ್ಯಾಕೇಟಗಳನ್ನು ಹಾಗೂ 180mಟx28 ಬ್ಯಾಗ್ ಪೈಪರ್ ವಿಸ್ಕಿ ಟೆಟ್ರಾ ಪ್ಯಾಕೇಟಗಳನ್ನು ಹಾಗೂ 330ಒಐನ ಪಾವರ ಕೂಲ ಬೀಯರನ 48 ಟಿನ್ ಕ್ಯಾನಗಳು ಮತ್ತು 650ಒಐನ ಪಾವರ ಕೂಲ ಬೀಯರನ 24 ಬಾಟಲಿಗಳು ಹಿಗೇ ಒಟ್ಟು ನಾಲ್ಕು ಚಕ್ರದ ಕಾರಿನಲ್ಲಿ ಒಟ್ಟು 25.920 ಮದ್ಯ ಹಾಗೂ 31.440 ಲೀಟರನಷ್ಟು ಬೀಯರನ್ನು ಮಾರಾಟ ಮಾಡುವ ಉದ್ದೇಶದಿಂದ ತನ್ನ ನಾಲ್ಕು ಚಕ್ರ ವಾಹನದಲ್ಲಿ ಸಂಗ್ರಹಿಸಿಟ್ಟುಕೊAಡಾಗ ವಶಪಡಿಸಿಕೊಂಡಿದ್ದು ಆರೋಪಿತನನ್ನು ಬಂಧಿಸಿ ಘೋರ ಪ್ರಕರಣವನ್ನು ಶ್ರೀಶೈಲ್ ಒಡೆಯರ ಅಬಕಾರಿ ನಿರೀಕ್ಷಕರು ಅಬಕಾರಿ ಉಪ ಆಯುಕ್ತರ ಕಚೇರಿ ಯಾದಗಿರಿ ಜಿಲ್ಲೆ ಅವರು ಪ್ರಕರಣವನ್ನು ದಾಖಲಿಸಿ ಅವುಗಳ ಅಂದಾಜು ಮೌಲ್ಯ 7,71,792 ರೂ.ಗಳು ಆಗಿರುತ್ತದೆ.

2024ರ ಏಪ್ರಿಲ್ 04 ರಂದು ಪ್ರಕರಣ ಸಂ.01 ರನ್ವಯ ಯಾದಗಿರಿ ಮತಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ವಡಗೇರಾ ತಾಲ್ಲೂಕಿನ ನಾಯ್ಕಲ್ ಗ್ರಾಮದಲ್ಲಿ ಗಸ್ತು ಮಾಡುತ್ತೀರುವ ಸಮಯದಲ್ಲಿ ಅಕ್ರಮವಾಗಿ ದ್ವಿ ಚಕ್ರ ವಾಹನ ಹೊಂಡಾ ಯುನಿಕಾರ್ನ ವಾಹನ ನೊಂದಣಿ ಸಂ.ಏA-33-ಇA-6717 ನೇದ್ದರಲ್ಲಿ ಸಿದ್ದಪ್ಪ ತಂದೆ ಹೊನ್ನಪ್ಪ ಹಸನಾಪುರ ಎಂಬ ಆರೋಪಿತನು 90mಟ x192ನ ಓರಿಜಿನಲ್ ಚಾಯ್ಸ ವಿಸ್ಕಿ ಟೆಟ್ರಾ ಪ್ಯಾಕೇಟಗಳನ್ನು (ಒಟ್ಟು 17.280 ಲೀ ಮದ್ಯ) ಮತ್ತು 15.600 ಲೀಟರನಷ್ಟು ಬೀಯರನ್ನು ಮಾರಾಟ ಮಾಡುವ ಉದ್ದೇಶದಿಂದ ತನ್ನ ದ್ವಿ ಚಕ್ರ ವಾಹನದಲ್ಲಿ ಸಂಗ್ರಹಿಸಿಟ್ಟುಕೊAಡಾಗ ವಶಪಡಿಸಿಕೊಂಡಿದ್ದು ಆರೋಪಿತನನ್ನು ಬಂಧಿಸಿ ಪ್ರಕರಣವನ್ನು ಶ್ರೀ ಬಸವರಾಜ ಬಿ ರಾಜಣ್ಣ ಅಬಕಾರಿ ಉಪ ನಿರೀಕ್ಷಕರು ಅಬಕಾರಿ ಉಪ ಆಯುಕ್ತರ ಕಚೇರಿ ಯಾದಗಿರಿ ಜಿಲ್ಲೆ ಅವರು ಪ್ರಕರಣವನ್ನು ದಾಖಲಿಸಿ ಅವುಗಳ ಅಂದಾಜು ಮೌಲ್ಯ 1,25,800 ಆಗಿರುತ್ತದೆ.

ಈ ಮೇಲಿನಂತೆ ಕೈಗೊಂಡ 02 ಪ್ರಕರಣಗಳಲ್ಲಿ ಶ್ರೀ ಆನಂದ ಉಕ್ಕಲಿ, ಅಬಕಾರಿ ಉಪ ಅಧೀಕ್ಷಕರು ಉಪ ವಿಭಾಗ ಶಹಾಪುರ, ಶ್ರೀಶೈಲ್ ಒಡೆಯರ್ ಅಬಕಾರಿ ನಿರೀಕ್ಷಕರು ಹಾಗೂ ಶ್ರೀ ಬಸವರಾಜ ರಾಜಣ್ಣ ಅಬಕಾರಿ ಉಪ ನಿರೀಕ್ಷಕರು, ಜಿಲ್ಲಾ ವಿಚಕ್ಷಣದಳ ಯಾದಗಿರಿ, ಶ್ರೀಮತಿ ರೇಣುಕಮ್ಮ ಹಾಗೂ ಶ್ರೀ ಅಶೋಕ ರಾಠೋಡ ಅಬಕಾರಿ ಉಪ ನಿರೀಕ್ಷಕರು, ವಲಯ ಯಾದಗಿರಿ, ಅಬಕಾರಿ ಮುಖ್ಯ ಪೇದೆಯಾದ ಶ್ರೀ ಅನಿಲ್ ಕುಮಾರ, ಅಬಕಾರಿ ಪೇದೆಯಾದ ಶ್ರೀ ಪ್ರವೀಣಕುಮಾರ, ಶ್ರೀ ಶಿವಶರಣಪ್ಪ ಮತ್ತು ಶ್ರೀ ನೀಲಕಂಟಪ್ಪ, ವಾಹನ ಚಾಲಕರಾದ ಶ್ರೀ ಶಂಕರ ಮೇದಾ ಮತ್ತು ಶ್ರೀ ದೊಂಡಿಬಾ ಜಾಧವ ಹಾಗೂ ಗೃಹ ರಕ್ಷಕ ಸಿಬ್ಬಂದಿಯಾದ ಅರ್ಜುನ ಕುಮಾರ, ಶಿವುಕುಮಾರ ಮತ್ತು ಶ್ರೀ ಅನಿಲ್ ಕುಮಾರ ಭಾಗವಹಿಸಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now

Related Posts