ಸ್ಥಳೀಯ

ಯಾದಗಿರಿ ಜಿಲ್ಲೆಯನ್ನು ಕಸದ ತೊಟ್ಟಿಯಾಗಿಸಿಕೊಂಡ ಕಾರ್ಯಾಂಗ!

WhatsApp Group Join Now
Telegram Group Join Now

 

ಯಾದಗಿರಿ: ಅತ್ಯ0ತ ಚಿಕ್ಕ ಜಿಲ್ಲೆಯಾದ್ದ ಕಾರಣ, ರಾಜ್ಯದ ಚಿಕ್ಕ ಜಿಲ್ಲೆ ಎನ್ನುವ ಕಾರಣಕ್ಕೆ ಕರ್ನಾಟಕ ಸರ್ಕಾರ ಯಾದಗಿರಿ ಜಿಲ್ಲೆಯ ಮೇಲೆ ವಿಶೇಷ ನಿಗಾ ಇಟ್ಟಿರುವಂತೆ ಕಂಡು ಬರುತ್ತದೆ. ಆದ್ದಕಾರಣ ಈ ಜಿಲ್ಲೆಗೆ ವಿಶೇಷ ಪರಿಣತರನ್ನು, ಆಡಳಿತ ತಜ್ಞರನ್ನು, ಅಪೂರ್ವ ಜ್ಞಾನಿಗಳನ್ನು ಸರ್ಕಾರಿ ಇಲಾಖೆಗಳ ನೌಕರರನ್ನಾಗಿ ನೇಮಿಸಿದಂತೆ ಆ ಮೂಲಕ ಈ ಜಿಲ್ಲೆಯನ್ನು ಸರ್ವಾಂಗೀಣವಾಗಿ ಅಭಿವೃದ್ಧಿ ಪಡಿಸುವ ಶಪಥವನ್ನು ಗೈದಿರುವಂತೆ ನಮಗೆಲ್ಲಾ ಅನ್ನಿಸುತ್ತದೆ. ಈ ಕಾರಣಕ್ಕೆ ಕರ್ನಾಟಕ ಸರ್ಕಾರಕ್ಕೆ ನಾವು ಧನ್ಯವಾದಗಳನ್ನು ತಿಳಿಸಬೇಕು, ಧನ್ಯೋಸ್ಮಿ ರಾಜ್ಯ ಸರ್ಕಾರವೇ!! ನಾವು ಕೃತಾರ್ಥರಾಗಿತ್ತಿದ್ದೇವೆ, ಕೃತಾರ್ಥರಾಗಿದ್ದೇವೆ, ಕೃತಾರ್ಥರಾಗುತ್ತೇವೆ!!! ಜನರನ್ನು ಏಮಾರಿಸಲು ಸರ್ಕಾರಿ ಸೌಲಭ್ಯಗಳನ್ನು ಕೊಳ್ಳೆ ಹೊಡೆಯಲು, ಸರ್ಕಾರಿ ಯೋಜನೆಗಳನ್ನು ಹಳ್ಳ ಹಿಡಿಸಲು, ಸರ್ಕಾರದ ನೀತಿ ನಿಯಮಗಳನ್ನು ಉಲ್ಲಂಘಿಸಿಲು, ಅಂತಿಮವಾಗಿ ಸಂವಿಧಾನವನ್ನು ಕಗ್ಗೊಲೆ ಮಾಡುವಲ್ಲಿ ವಿಶೇಷ ತರಬೇತಿ ಪಡೆದ ಸರ್ಕಾರಿ ನೌಕರರನ್ನು ಈ ಜಿಲ್ಲೆಗೆ ಒದಗಿಸಿದ್ದು ನಮ್ಮ ಪೂರ್ವ ಜನ್ಮದ ಪುಣ್ಯ ಈ ಕಾರಣಕ್ಕೆ ಕರ್ನಾಟಕ ರಾಜ್ಯ ಸರ್ಕಾರಕ್ಕೂ ಮತ್ತು ಭಾರತ ಸರ್ಕಾರಕ್ಕೂ ನಾವು ಸದಾಕಾಲ ಕೃತಜ್ಞರಾಗಿರುತ್ತೇವೆ ಎನ್ನುವ ಮನೋ ಇಂಗಿತ ಯಾದಗಿರಿ ಜಿಲ್ಲೆಯ ಜನರಿಂದ ವ್ಯಕ್ತವಾಗುತ್ತಿದೆ. ಈ ಮೇಲಿನ ಅಂಶಗಳೊ0ದಿಗೆ ಮಾಹಿತಿ ಹಕ್ಕು ಕಾಯ್ದೆಯನ್ನು ದಾರುಣವಾಗಿ ಉಲ್ಲಂಘಿಸುತ್ತಿರುವ, ಮೇಲ್ಮನವಿ ಬರೆದರೂ ನಿರ್ಲಕ್ಷö್ಯವಹಿಸುವ ಮೇಲ್ಮನವಿ ಪ್ರಾಧಿಕಾರಗಳಿರುವುದು, ಅತಿ ಭ್ರಷ್ಟ ಆಡಳಿತ ಮುಖ್ಯಸ್ಥರಿರುವುದು ಜಿಲ್ಲೆಯಲ್ಲಿ ಕಂಡು ಬರುತ್ತಿದ್ದು ನಮ್ಮ ಬದುಕುವ ಹಕ್ಕುಗಳ ಬಗ್ಗೆ ಸಂದೇಹ ಮೂಡುತ್ತಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದು ಇದೊಂದು ಕೆಟ್ಟ ಆಡಳಿತ ವ್ಯವಸ್ಥೆಗೆ ಉದಾಹರಣೆಯಾಗಿ ನಿಲ್ಲುವ ರಾಜ್ಯ ಏಕೈಕ ಜಿಲ್ಲೆ ಎಂದು ಹೋರಾಟಗಾರರೊಬ್ಬರು ಮಾಹಿತಿ ಹಂಚಿಕೊ0ಡಿದ್ದಾರೆ.

ಯಾವುದೇ ಇಲಾಖೆಗೆ ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿದರೆ ಅರ್ಜಿಗಳು ನಿರ್ಲಕ್ಷಿಸಲ್ಪಡುತ್ತಿವೆ. ಅರ್ಜಿಯನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಕಾಯ್ದೆಯ ಅಡಿಯಲ್ಲಿ ನೇಪಿಸಲ್ಪಡಬೇಕಿರುವ ಸಾರ್ವಜನಿಕ ಮಾಹಿತಿ ಅಧಿಕಾರಿ, ಮೇಲ್ಮನವಿ ಪ್ರಾಧಿಕಾರಿ ಈ ಜಿಲ್ಲೆಯಲ್ಲಿ ನೇಮಿಸಲ್ಪಟ್ಟಿದ್ದಾರೋ ಇಲ್ಲವೋ ಎನ್ನುವ ಅನುಮಾನಗಳು ಮೂಡುತ್ತಿವೆ. ಅಸಲು ಭಾರತ ಸರ್ಕಾರ ೨೦೦೫ರಲ್ಲಿ ರೂಪಿಸಿ ಅನುಷ್ಠಾನಕ್ಕೆ ತಂದ ಮಾಹಿತಿ ಹಕ್ಕು ಕಾಯ್ದೆ ಯಾದಗಿರಿ ಜಿಲ್ಲೆಯಲ್ಲಿ ಅಳವಡಿಸಿಕೊಳ್ಳಲಾಗಿದೆಯೋ ಇಲ್ಲವೋ ಅಥವಾ ಕೆಲವೊಂದು ಕಾಯ್ದೆಗಳಿಂದ ಯಾದಗಿರಿ ಜಿಲ್ಲೆಯನ್ನು ವಿಶೇಷವಾದ ಜಿಲ್ಲೆ ಎಂದು ಪರಿಗಣಿಸಿ ವಿನಾಯಿತಿ ನೀಡಲಾಗಿದೆಯೋ ಎನ್ನುವ ಪ್ರಶ್ನೆಗಳು ಕಾಡುತ್ತಿವೆ ಎಂದು ಜಿಲ್ಲೆಯ ಮಾಹಿತಿ ಹಕ್ಕು ಅರ್ಜಿದಾರರೊಬ್ಬರು ಜನ ಆಕ್ರೋಶದೊಂದಿಗೆ ಅಳಲನ್ನು ತೋಡಿಕೊಂಡಿದ್ದಾರೆ. ಸುರಪುರದ ಸಮಾಜ ಕಲ್ಯಾಣ ಸಹಾಯಕ ನಿರ್ದೇಶಕರು ೪(೧)ಬಿ ನೋಟಿಫಿಕೇಷನ್ ನೀಡಲು ಬಿಪಿಎಲ್ ಕಾರ್ಡ ಲಗತ್ತಿಸಿದಲ್ಲಿ ನೀಡಲು ಬರುವುದಿಲ್ಲ ಎನ್ನುವ ಹಿಂಬರಹ ನೀಡುತ್ತಾರೆ, ೪(೧)ಬಿ ನೋಟಿಫಿಕೇಷನ್ ಪ್ರತಿವರ್ಷ ಇಲಾಖೆಯು ಪರಿಷ್ಕರಿಸಿ ಪ್ರಕಟಿಸುವ ನೋಟಿಫಿಕೇಷನ್ ಆಗಿದ್ದು ಅದು ಉಚಿತ ದಾಖಲೆ ಎನ್ನುವುದನ್ನೂ ಅರಿಯದ ಮಾಹಿತಿ ಹಕ್ಕು ಕಾಯ್ದೆಯ ಅಡಿಯಲ್ಲಿ ನೇಮಕವಾದ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ತಿಳಿಯದ ಸಂಗತಿಯಾಗಿದೆ ಎನ್ನುವುದು ನಮ್ಮ ದುರ್ದೈವ ಎಂದು ಅರ್ಜಿದಾರೊಬ್ಬರು ಹೇಳಿಕೊಂಡಿದ್ದಾರೆ. ಶಹಾಪೂರಿನ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳು ಬಿಪಿಎಲ್ ಕಾರ್ಡು ಬಡತನ ರೇಖೆಯನ್ನು ಸೂಚಿಸುವ ಮಾನದಂಡವಲ್ಲ ಎಂದು ನಿರ್ಧರಿಸಿ ಹಣ ಭರಿಸಲು ನಿಗದಿತ ಸಮಯ ಮೀರಿ ಹಿಂಬರಹ ನೀಡುತ್ತಾರೆ. ಮಾಹಿತಿ ಹಕ್ಕು ಕಾಯ್ದೆಯಲ್ಲಿ ಅರ್ಜಿ ತಲುಪಿದ ಐದನೇ ದಿನಕ್ಕೆ ಅರ್ಜಿದಾರರಿಗೆ ಅರ್ಜಿ ಸ್ವೀಕೃತಿಯ ಬಗ್ಗೆ ಹಿಂಬರಹ ನೀಡಬೇಕು ಎಂದಿದೆ. ಹಾಗೆ ನೀಡುವ ಹಿಂಬರಹದಲ್ಲಿ ಮಾಹಿತಿ ದಾಖಲೆಯ ಪುಟಗಳು, ಆ ಪುಟಗಳಿಗೆ ತಗಲುವ ವೆಚ್ಚವನ್ನು ಸೂಚಿಸಬೇಕಿರುತ್ತದೆ. ಪಂಡೀತ ಸಾರ್ವಜನಿಕ ಮಾಹಿತಿ ಅಧಿಕಾರಿ ನಿಗದಿತ ಸಮಯ ಮೀರಿ ಬಿಪಿಎಲ್ ಕಾರ್ಡು ಬಡತನ ರೇಖೆ ಸೂಚಿಸುವ ದಾಖಲೆ ಅಲ್ಲ ಎಂದು ನಿರ್ಧರಿಸಿ ಹಣ ಭರಿಸಲು ಸೂಚಿಸಿ ಅರ್ಜಿದಾರರನ್ನು ದಾರಿ ತಪ್ಪಿಸುವ ಕೆಲಸ ಅಥವಾ ಮಾಹಿತಿ ಒದಗಿಸದ ಷಡ್ಯಂತ್ರ ಮಾಡುತ್ತಾರೆ. ಇದನ್ನು ಮಾಹಿತಿ ಹಕ್ಕು ಕಾಯ್ದೆಯ ಕುರಿತು ಇರುವ ತಿಳುವಳಿಕೆಯ ಕೊರತೆಯೋ ಅಥವಾ ಅರ್ಜಿದಾರರನ್ನು ದಾರಿ ತಪ್ಪಿಸುವ ಉದ್ದೇಶಿತ ಕೃತ್ಯವೋ ತಿಳಿಯದಾಗಿದೆ ಎಂದು ಶಹಾಪೂರು ತಾಲ್ಲೂಕು ಪಂಚಾಯತಿಗೆ ಮಾಹಿತಿ ಹಕ್ಕು ಅರ್ಜಿ ಸಲ್ಲಿಸಿದ ಅರ್ಜಿದಾರರೊಬ್ಬರು ಜನಾಕ್ರೋಶ ಪತ್ರಿಕೆಯೊಂದಿಗೆ ಮಾಹಿತಿ ಹಂಚಿಕೊAಡಿದ್ದಾರೆ. ಇದೆಲ್ಲಾ ಇಂದು ತೂಕವಾದರೆ ಈ ಇಲಾಖೆಗಳ ದೊಡ್ಡಣ್ಣನಮತಿರುವ ಅಥವಾ ಇಲಾಖೆಗಳ ತಾಯಿ ಇಲಾಖೆಯಾದ ಯಾದಗಿರಿ ಜಿಲ್ಲಾ ಪಂಚಾಯತಿಯಲ್ಲೂ ಮಾಹಿತಿ ಹಕ್ಕು ಅರ್ಜಿದಾರರನ್ನು ದಾರಿ ತಪ್ಪಿಸುವ ರೀತಿಯ ಕೃತ್ಯ ಎಸಗಿರುವುದು ಸಾರ್ವಜನಿಕರಿಂದ ತಿಳಿದು ಬಂದಿದೆ. ಜಿಲ್ಲೆಯ ಪ್ರಮುಖ ಇಲಾಖೆಯಾದ ಜಿಲ್ಲಾ ಪಂಚಾಯತಿ ಕಾರ್ಯಾಲಯವೇ ಭ್ರಷ್ಟ ಕಾರ್ಯಾಲಯವಾದರೆ ನಾವು ನ್ಯಾಯಕ್ಕಾಗಿ ಯಾರ ಮೊರೆ ಹೋಗಬೇಕು ಎಂದು ಹಲವರು ತಮ್ಮ ನೋವನ್ನು ತೋಡೊಕೊಂಡಿದ್ದಾರೆ. ಅನಿರ್ಭಂದಿತ ಅನುದಾನದ ಕ್ರಿಯಾಯೋಜನೆಯ ಪ್ರತಿಗಳನ್ನು ಕೇಳಿದರೆ ಜಿಲ್ಲಾ ಪಂಚಾಯತಿ ಸಾರ್ವಜನಿಕ ಮಾಹಿತಿ ಅಧಿಕಾರಿಯೂ ಅರ್ಜಿಯನ್ನು ಪಂಚಾಯತ್ ರಾಜ್ ಇಂಜಿನಿಯರಿAಗ್ ಇಲಾಖೆಗೆ ವರ್ಗಾಯಿಸುತ್ತಾರೆ, ಕ್ರಿಯಾಯೋಜನೆ ರೂಪಿಸಬೇಕಾದ ಇಲಾಖೆ ಯಾವುದು ಅನುಷ್ಠಾನ ಇಲಾಖೆ ಯಾವುದು ಎಂದು ತಿಳಿಯದ ಸಾರ್ವಜನಿಕ ಮಾಹಿತಿ ಅಧಿಕಾರಿಯೋ ಅಥವಾ ಅರ್ಜಿದಾರರನ್ನು ದಾರಿ ತಪ್ಪಿಸಲು ಈ ರೀತಿಯ ಹಿಂಬರಹ ಬರೆಯುತ್ತಾರೋ ತಿಳಿಯದಂತಾಗಿದೆ ಎಂದು ಅನೇಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಐಎಎಸ್ ಐಪಿಎಸ್ ಅಧಿಕಾರಿಗಳು ಆಡಳಿತದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸದ ಕಾರಣಕ್ಕೆ, ಜನರ ಕುರಿತು ಕಾಳಜಿ ಇಲ್ಲದ ಕಾರಣಕ್ಕೆ, ಬೇಜವಬ್ದಾರಿ ಕರ್ತವ್ಯದ ಕಾರಣಕ್ಕೆ ಮತ್ತು ಭ್ರಷ್ಟ ಜನಪ್ರತಿನಿಧಿಗಳ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಇಂತಹ ಕೆಟ್ಟ ಆಡಳಿತ ವ್ಯವಸ್ಥೆಯನ್ನು ಉದ್ದೇಶಪೂರ್ವಕವಾಗಿ ಜಾರಿಯಲ್ಲಿಟ್ಟಿದ್ದಾರೆ. ಇಲ್ಲಿ ಜನರ ಹಿತಾಸಕ್ತಿಗಳು ಯಾರಿಗೂ ಬೇಕಿಲ್ಲ. ಜನರು ನೀಡುವ ದೂರುಗಳು, ಅರ್ಜಿಗಳಿಗೆ ಯಾವುದೇ ಗೌರವ ನೀಡುತ್ತಿಲ್ಲ. ಇದು ಉದ್ದೇಶಿತ ಷಡ್ಯಂತ್ರ ಎಂದು ಹೆಸರು ಹೇಳಲು ಇಚ್ಚಿಸದ ಸಾಮಾಜಿಕ ಕಾರ್ಯಕರ್ತರೊಬ್ಬರು ಪತ್ರಿಕೆಯೊಂದಿಗೆ ತಮ್ಮ ಭಾವನೆಯನ್ನು ಹಂಚಿಕೊ0ಡಿದ್ದಾರೆ. ಮಾಹಿತಿ ಹಕ್ಕು ಕಾಯ್ದೆಯನ್ನು ನಿರ್ಲಕ್ಷಿಸುವುದರ ಹಿಂದೆ ಭ್ರಷ್ಟಾಚಾರದ ಉದ್ದೇಶವಿದೆ, ಈ ಭ್ರಷ್ಟಾಚಾರದಲ್ಲಿ ಜಿಲ್ಲೆಯ ಎಲ್ಲಾ ಅಧಿಕಾರಿಗಳು, ಜನಪ್ರತಿನಿಧಿಗಳು ಭಾಗಿಯಾಗಿರುತ್ತಾರೆ, ಈ ಕಾರಣಕ್ಕೆ ಜನರ ಅರ್ಜಿ ಮತ್ತು ದೂರುಗಳನ್ನು ಕಸದ ಬುಟ್ಟಿಗೆ ಹಾಕುತ್ತಾರೆ. ಹಣ, ಜಾತಿ, ಭಾವನಾತ್ಮಕ ಸಂಗತಿಗಳಿ0ದ ಜನರನ್ನು ಏಮಾರಿಸಿ ಚುನಾವಣೆ ಗೆದ್ದು ಬರುವ ಇಲ್ಲಿನ ರಾಜಕಾರಣಿಗಳು ಈ ಯಾವ ಸಮಸ್ಯೆಗಳ ಕುರಿತು ಗಮನಹರಿಸುವುದಿಲ್ಲ. ಇದು ಜನರು ಪ್ರಜ್ಞಾವಂತರಾಗಿ ವ್ಯಾಪಕವಾದ ಹೋರಾಟಗಳಿಗೆ ಇಳಿದಾಗ ಮಾತ್ರ ನಾವು ನಿಜವಾದ ಆಡಳಿತ ಕಾಣಬಹುದು ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಜಿಲ್ಲೆಯಲ್ಲಿ ಇದು ಸಾಧ್ಯವೇ ಎನ್ನುವುದು ಜನ ಆಕ್ರೋಶ ಪತ್ರಿಕೆಯ ಪ್ರಶ್ನೆ!

ಅನಿರ್ಬಂಧಿತ ಅನುದಾನದ ಮಾಹಿತಿ ಅಂದರೆ ರಾಜ್ಯ ಹಣಕಾಸು ಅನುದಾನದ ಮಾಹಿತಿ, ಯಾವ ಯಾವ ಜಿಲ್ಲೆಗೆ ಎಷ್ಟು ಅನುದಾನ ನಿಗದಿಯಾಗಿತ್ತು ಮತ್ತು ಎಷ್ಟು ಬಿಡುಗಡೆಗೊಳಿಸಲಾಗಿದೆ, ಆ ಅನುದಾನದ ವಿನಿಯೋಗಕ್ಕಾಗಿ ಸರ್ಕಾರ ಹೊರಡಿಸಿದ ಮಾರ್ಗಸೂಚಿ, ಷರತ್ತುಗಳು ಇತ್ಯಾದಿ ವಿವರಗಳು ಈ ಲಿಂಕಿನಲ್ಲಿವೆ, ಹಣದ ದುರ್ಬಳಕೆ ತಡೆಗೆ ಪ್ರಬಲವಾದ ಹೋರಾಟದ ಅವಶ್ಯಕತೆ ಇದೆ.https://rzp.io/l/uj2sOh7nO5

WhatsApp Group Join Now
Telegram Group Join Now

Related Posts