ವೈಶಿಷ್ಟ್ಯ ಲೇಖನ

ಗ್ರಾಮ ಪಂಚಾಯತಿಯ ಸದ್ಯರನ್ನು ಯಾವ ಕಾರಣಗಳಿಗೆ ತೊಲಗಿಸಬಹುದು?

WhatsApp Group Join Now
Telegram Group Join Now

ಗ್ರಾಮ ಪಂಚಾಯತಿಯ ಸದ್ಯರನ್ನು ಯಾವ ಕಾರಣಗಳಿಗೆ ತೊಲಗಿಸಬಹುದು?

 

ಇಲ್ಲಿ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿ ಎನ್ನುವವರು ಸರ್ಕಾರಕ್ಕೆ ತಮ್ಮ ಕರ್ತವ್ಯಗಳಿಗೆ ನಿಷ್ಠರಾಗಿದ್ದರೆ ಅಥವಾ ಬದ್ಧರಾಗಿದ್ದರೆ ಈ ದೇಶ ಹಲವು ಸಮಸ್ಯೆಗಳಿಂದ ಮುಕ್ತವಾಗಿ ಸಂಗ್ರಹವಾಗಿರುವ ತೆರಿಗೆ ಹಣ ಏನು ಮಾಡುವುದು ಎನ್ನುವ ಚಿಂತೆಗೆ ಈಡಾಗುತ್ತಿದ್ದೇವು. ಹಣವನ್ನು ಇತರ ದೇಶಗಳಿಗೆ ಸಾಲ ಕೊಡುತ್ತಾ ನಾವೇ ಜಗತ್ತಿನ ದೊಡ್ಡಣ್ಣ ದೊಡವ್ವ ದೊಕ್ಕಗಳಾಗುತ್ತಿದ್ದೇವು. ಏಕೆಂದರೆ ಭಾರತ ಸಂಪದ್ಬರಿತ ರಾಷ್ಟ್ರ. ವಿಫುಲವಾದ ಕೃಷಿ ಭೂಮಿ ಸೇರಿದಂತೆ ಇಲ್ಲಿ ಖನಿಜಗಳು, ನೀರು ಯಾವುದಕ್ಕೂ ಸಮಸ್ಯೆ ಇಲ್ಲ. ಈ ನೆಲದಲ್ಲಿ ಚಿನ್ನ ಸೇರಿದಂತೆ ಎಲ್ಲಾ ಲೋಹಗಳೂ ಸಿಗುತ್ತವೆ. ಆದರೂ ಈ ದೇಶಕ್ಕೆ ಇನ್ನೂ ಅಭಿವೃದ್ಧಿಯ ಕೊರತೆ ಉಂಟಾಗಿದೆ. ಪ್ರತಿ ವರ್ಷದ ನಮ್ಮ ಬಜೆಟ್‌ ಅಭಿವೃದ್ಧಿಗಾಗಿಯೇ ಮಂಡಿಸಲ್ಪಡುತ್ತದೆ. ಆದರೂ ಇಲ್ಲಿನ ಯಾವ ಮೂಲಭೂತ ಸಮಸ್ಯೆಗಳೂ ಬಗೆ ಹರಿಯುತ್ತಿಲ್ಲ. ಕಾರಣ ಭ್ರಷ್ಟಾಚಾರ. ಇಲ್ಲಿ ಎಲ್ಲರೂ ತಿನ್ನುವ ಕನಸನ್ನು ಹೊಂದಿದ್ದಾರೆ. ದೇವರಿಗೆ ಹರಕೆ ಕಟ್ಟಿ ಪಾತಕಗಳನ್ನು ಮಾಡುವ ದೇಶ ಭಾರತ. ಸ್ವಾತಂತ್ರ್ಯ ಬಂದ ದಿನದಿಂದ ಹಿಡಿದು ಇಲ್ಲಿಯವರೆಗೆ ಅಭಿವೃದ್ಧಿ ಮಾಡಿಕೊಳ್ಳುತ್ತಲೇ ಇದ್ದೇವೆ. ಇನ್ನೂ ಆಗುತ್ತಿಲ್ಲ. ಶೈಕ್ಷಣಿಕವಾಗಿ ಹಿಂದುಳಿದಿದ್ದೇವೆ, ಆರ್ಥಿಕವಾಗಿ ಹಿಂದುಳಿದ್ದಿದ್ದೇವೆ, ಸಾಮಾಜಿಕವಾಗ ನಮ್ಮ ಬದುಕಂತೂ ಅತ್ಯಂತ ಘೋರ. ಚೆನ್ನಾಗಿ ಓದಿ ಉತ್ತಮ ಬದುಕು ಕಟ್ಟಿಕೊಳ್ಳಬೇಕು ಎನ್ನುವುದಕ್ಕಿಂತ ಯಾರನ್ನಾದರೂ ಏಮಾರಿಸಿ ಬೇಗ ಶ್ರೀಮಂತನಾಗಬೇಕು ಎನ್ನುವ ಕನಸನ್ನು ಕಾಣುವವರೇ ಜಾಸ್ತಿ. ಇಲ್ಲದಿದ್ದರೆ ಅದೃಷ್ಟದ ಮೊರೆ ಹೋಗುತ್ತಾರೆ, ದೇವರು ಕೊಡುತ್ತಾನೆ ಎಂದು ದೇವರಿಗೆ ಖರ್ಚು ಮಾಡುತ್ತಾ ನಾಶವಾಗುತ್ತಾ ಹೋಗುತ್ತಾರೆ. ನಕ್ಷತ್ರ, ತಿಥಿ, ಮಿತಿಗಳ ಬೆನ್ನು ಹತ್ತುತ್ತಾರೆ. ನಿಮಗೆ ಗೊತ್ತಿರಲಿ: ಸಾವಿರ ರೂಪಾಯಿ ದಕ್ಷಿಣ ಇಡಿ, ನಿಮ್ಮನ್ನು ಕೋಟ್ಯಾಧೀಶನನ್ನಾಗಿ ಮಾಡುತ್ತೇನೆ ಂದು ಹೇಳುವವರನ್ನು ಇಲ್ಲಿ ನಂಬಲಾಗುತ್ತದೆ. ಅತ್ಯಂತ ಕಡು ಮೂರ್ಖರಿರುವ ದೇಶವಿದು. ಪರೀಕ್ಷೆಗೆ ದೇವರಿಗೆ ಕೈಮುಗಿದು ಹೋಗುವ ಈ ದೇಶ ಹಿಂದುಳಿಯಲು ಕಾರಣ ಭ್ರಷ್ಟಾಚಾರ ಮತ್ತು ಅದನ್ನು ಎಲ್ಲರೂ ನಿರ್ಲಕ್ಷಿಸಲ್ಪಡುವುದು ಮತ್ತು ಎಲ್ಲರೂ ಅದನ್ನು ಮಾಡಲು ತುದಿಗಾಲಲ್ಲಿ ನಿಂತಿರುವುದು.

ಈಗ ವಿಷಯಕ್ಕೆ ಬರುವುದಾದರೆ ಗ್ರಾಮೀಣಾಭಿವೃದ್ಧಿ ಎನ್ನುವುದು ಏಕೆ ಸಾಧ್ಯವಾಗುತ್ತಿಲ್ಲ ಎಂದರೆ ಈ ಭ್ರಷ್ಟ ಪಂಚಾಯತಿ ಅಭಿವೃದ್ಧಿ ಅಧಿಕಾರಿಯಿಂದ. ಈ ಮಾತು ಸತ್ಯ. ಅವನು ತನ್ನ ಯಾವುದೋ ಸ್ವಾರ್ಥಕ್ಕಾಗಿ ಭ್ರಷ್ಟ ಜನಪ್ರತಿನಿಧಿಯೊಂದಿಗೆ ಹೊಂದಾಣಿಕೆಯ ಆಡಳಿತ ನಡೆಸಲು ಆರಂಭಿಸುತ್ತಾನೆ. ಸರಾಕರದ ನಿಯಮಗಳನ್ನು ತನ್ನ ತುಪ್ಳ ಎಂದು ಭಾವಿಸುತ್ತಾನೆ. ಪಂಚಾಯತಿಯನ್ನು ಚುನಾಯಿತ ಪ್ರತಿನಿಧಿಗಳಿಗೆ ಗುತ್ತಿಗೆ ನೀಡಿ ತಾನೆಲ್ಲೋ ಇರುತ್ತಾನೆ. ವಾಸ್ತವವಾಗಿ ಪಂಚಾಯತಿಯ ಆಡಳಿತ ಮಾಡಬೇಕಿರುವವನು ಇವನು. ಪಂಚಾಯತಿಯ ಮುಖ್ಯಸ್ಥ. ಹಣಕಾಸು ಮತ್ತು ಕರ್ತವ್ಯ ಲೋಪಕ್ಕೆ ಇವನೇ ಹೊಣೆಗಾರ. ಸರ್ಕಾರಕ್ಕೆ ಉತ್ತರ ಹೇಳಬೇಕಿರುವ ಆಸಾಮಿ! ಇವನು ಏನು ಮಾಡುತ್ತಾನೆ ಎಂದರೆ ಗ್ರಾಮ ಪಂಚಾಯತಿಯ ಪ್ರಭಾವಿಗಳ ಸ್ನೇಹ ಸಂಪಾದಿಸುತ್ತಾನೆ. ಮೂರ್ಖ ಸದಸ್ಯರಿಗೆ ಹಣದ ಆಮಿಷ ತೋರಿಸುತ್ತಾನೆ. ನಂತರ ನಿಮಗೊಂದಿಷ್ಟು ನನಗೊಂದಿಷ್ಟು ಎನ್ನುವ ಆಡಳಿತ ಆರಂಭಿಸುತ್ತಾನೆ. ಅಲ್ಲಿಗೆ ಅಭಿವೃದ್ಧಿ ಎನ್ನುವುದು ಗೋವಿಂದಾ ಗೋವಿಂದ!

ನೀವು ಯಾವುದೇ ಗ್ರಾಮ ಪಂಚಾಯತಿಗೆ ಹೋಗಿ ಆ ಪಂಚಾಯತಿಯೂ ತಯಾರಿಸಿದ ಅಭಿವೃದ್ಧಿಗೆ ಸಂಬಂಧಿಸಿದ ಕ್ರಿಯಾ ಯೋಜನೆಗಳನ್ನು ಸರಳವಾಗಿ ಕೇಳಿ ನೋಡಿ, ಅದು ವಾಸ್ತವವಾಗಿ ಸಾರ್ವಜನಿಕರಿಗೆ ಉಚಿತವಾಗಿ ಕೊಡುವಂತಿರಬೇಕು. ನೀವು ಕ್ರಿಯಾ ಯೋಜನೆಯ ಪ್ರತಿಗಳನ್ನು ಕೇಳುತ್ತಿರುವಂತೆ ಉರಿಯಲು ಆರಂಭಿಸುತ್ತದೆ. ಒಂದರ್ಥದಲ್ಲಿ ಬಾಲಕ್ಕೆ ಬೆಂಕಿ ಹೊತ್ತಿದ ಕೋತಿಯಂತೆ. ನಿಮ್ಮನ್ನು ಜನ್ಮ ಜನ್ಮಾಂತರ ಶತೃ ಎನ್ನುವಂತೆ ನೋಡಲಾಗುತ್ತದೆ. ಏಕೆ ಇದೆಲ್ಲಾ? ತಪ್ಪಿಲ್ಲದಿದ್ದರೆ ಏಕೆ ಭಯಪಡಬೇಕು? ಆ ಪಂಚಾಯತಿಯ ಸಾರ್ವಜನಿಕನಿಗೆ ತನ್ನ ಗ್ರಾಮದ ಅಭಿವೃದ್ಧಿಯ ಕುರಿತು ಕಾಳಜಿ ಇರುವುದಿಲ್ಲವೇ? ಏನೇನು ಅಭಿವೃದ್ಧಿ ಕಾರ್ಯಗಳಾಗುತ್ತಿವೆ ಎಂದು ತಿಳಿದುಕೊಳ್ಳುವ ಹೊಣೆಗಾರಿಕೆ ಇರುವುದಿಲ್ಲವೇ? ಅಸಲು ಪಂಚಾಯತಿ ಇರುವುದು ಯಾರಿಗಾಗಿ? ಪಂಚಾಯತಿಯನ್ನು ಯಾರಿಗಾಗಿ ಸ್ಥಾಪಿಸಲಾಗಿದೆ ಎನ್ನುವ ಸತ್ಯವನ್ನು ಹಲವು ಮೂರ್ಖರು ಒಪ್ಪಿಕೊಳ್ಳುವುದಿಲ್ಲ.

ಇಲ್ಲಿ ನಿಮಗೊಂದು ಮುಖ್ಯ ಸಂಗತಿಯನ್ನು ಹೇಳಬೇಕು; ಇಲ್ಲಿ ಯಾರೂ ಸರ್ವಾಧಿಕಾರಿಗಳಲ್ಲ. ಎಲ್ಲರಿಗೂ ನಿಯಮಗಳಿವೆ. ಎಲ್ಲರಿಗೂ ತಮ್ಮದೇ ಆದ ಜವಬ್ದಾರಿ ಮತ್ತು ಹೊಣೆಗಾರಿಕೆಗಲಿವೆ. ಈ ಕರ್ತವ್ಯಗಳಿಗೆ ಲೋಪ ಉಂಟಾದಾಗ ಶಿಕ್ಷೆಗೆ ಒಳಪಡುವುದು ತಪ್ಪಿದ್ದಲ್ಲ. ರಾಯಚೂರಿನ ಆ ಮೂವತ್ತೆರಡು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕಥೆಯನ್ನು ಸ್ಮರಿಸಿಕೊಳ್ಳಿ. ಅಲ್ಲೊಬ್ಬ ಭ್ರಷ್ಟ ಶಾಸಕನಿದ್ದ. ಆತ ತಮ್ಮನ್ನು ರಕ್ಷಿಸುತ್ತಾನೆ ಎಂದು ಮನಸೋ ಇಚ್ಚೆ ಹಣದ ದುರ್ಬಳಕೆ ಮಾಡಿಕೊಂಡರು. ಶಾಸಕ ಸೋತು ಮನೆಗೆ ಓದ. ಸರ್ಕಾರ ಭ್ರಷ್ಟಾಚಾರದ ತನಿಖೆಗೆ ಇಳಿಯಿತು. ಸಿಕ್ಕಿ ಹಾಕಿಕೊಂಡರು! ಈಗ ಕಾಪಾಡಲಿಕ್ಕೆ ಯಾರು ಬರುತ್ತಾರೆ? ಜನಪ್ರತಿನಿಧಿಯ ಅವಧಿ ಕೇವಲ ಐದು ವರ್ಷ, ಸರ್ಕಾರಿ ನೌಕರ? ಅರವತ್ತು ವರ್ಷಗಳವರೆಗೆ ಇರಬೇಕು ಅಲ್ಲವೇ?

ಅದ್ಸರಿ, ಈ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌ ಅಧಿನಿಯಮ, 1993ರ ಪ್ರಕರಣ 43-ಎ ಎನನ್ನು ಹೇಳುತ್ತದೆ ಗೊತ್ತೇ? ಸದಸ್ಯರನ್ನು ತೆಗೆದು ಹಾಕುವುದರ ಕುರಿತು ಹೇಳುತ್ತದೆ. ಇದರಂತೆ ಆತನು ತನ್ನ ಕರ್ತವ್ಯಗಳನ್ನು ನಿರ್ವಹಿಸುವಾಗ ದುರ್ನಡತೆಯ ಅಥವಾ ತಲೆ ತಗ್ಗಿಸುವಂಥ ನಡತೆಯ ತಪ್ಪಿತಸ್ಥನಾಗಿದ್ದಾನೆಂದು ಕಂಡು ಬಂದಾಗ ಆ ಸದಸ್ಯನನ್ನು ಮುಲಾಜಿಲ್ಲದೆ ಕಿತದ್ತಾಕುವ ಅವಕಾಶ ಸದರಿ ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗೆ ಇರುತ್ತದೆ. ಜಿಲ್ಲಾ ವೈದ್ಯಾಧಿಕಾರಿಯು ಪ್ರಮಾಣಿಕರಿಸಬಹದಾದಂತೆ ಆ ಹುದ್ದೆಯನ್ನು ಹೊಂದಲು ವೈದ್ಯಕೀಯವಾಗಿ ಅಸರ್ಥನಾದ ಸಂದರ್ಭದಲ್ಲಿ, ಅಂದರೆ ಜಡ್ಡು ಹತ್ತಿದಾಗ. ಜಡ್ಡು ಎಂದರೆ ದೊಡ್ಡ ರೋಗ. ಈ ಸಂದರ್ಭದಲ್ಲಿ ಸದಸ್ಯನನ್ನು ಕಿತ್ತು ಹಾಕಬೇಕು.

ದಿವಾಳಿ ಅಥವಾ ಅಸ್ವಸ್ಥಚಿತ್ತನಾದ ಸಂದರ್ಭದಲ್ಲಿ. ಅಂದರೆ ಹುಚ್ಚು ಹಿಡಿದಾಗ. ಸದಸ್ಯರಾಗಿ ತಮ್ಮ ಕರ್ತವ್ಯ ನಿರ್ವಹಿಸಲು ಅಸಮರ್ಥರಾಗಿರವರೆಂದು ಅಥವಾ ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಅಸಡ್ಡೆ ಉಳ್ಳವರಾಗಿದ್ದಾರೆಂದು ಕಂಡು ಬಂದಾಗ. ಎಷ್ಟೋ ಕಡೆ ಅನರ್ಹರೇ ಚುನಾಯಿತರಾಗಿರುವುದನ್ನು ನಾವು ಕಾಣಬಹುದು. ಓದಲೂ ಬರೆಯಲು ಬಾರದ ನಿರಕ್ಷರಿಗಳನ್ನು ಗೆಲ್ಲಿಸಲಾಗಿರುತ್ತದೆ. ಅವರಿಗೆ ಸಭೆ ಎಂದರೆ ಏನು ಅಲ್ಲಿ ಆಡುವ ಮಾತುಗಳು ಏನೂ ಎನ್ನುವುದು ಅರ್ಥವಾಗುವುದಿಲ್ಲ. ಮನೆಯ ಹೊಸಿಲು ದಾಟದ ಸ್ತ್ರೀಯರನ್ನು ಗೆಲ್ಲಿಸಿಕೊಳ್ಳಲಾಗಿರುತ್ತದೆ, ಅವರು ಸಭೆಗಳಿಗೆ ಬರುವುದು ಅಪರೂಪ. ಇನ್ನುಳಿದಂತೆ ಕೂಲಿ ನಾಲಿ ಮಾಡುತ್ತಾ ಮೂರನೆಯ ಪ್ರಪಂಚ ನೋಡದ ತೀರಾ ಅನಕ್ಷರಸ್ತ ಸ್ತ್ರೀಯರನ್ನು ಗೆಲ್ಲಿಕೊಳ್ಳಲಾಗಿರುತ್ತದೆ, ಅವರು ಎಲ್ಲಿ ಹೆಬ್ಬಟ್ಟು ಒತ್ತಬೇಕು ಎಂದು ಕೇಳಿ ಹೆಬ್ಬಟ್ಟು ಒತ್ತುವವರು.

ಯಾವನೇ ಒಬ್ಬ ಸದಸ್ಯ ಪಂಚಾಯತಿಯ ನಾಲ್ಕು ಒಂದಾದ ಮೇಲೆ ಒಂದರಂತೆ ಸಭೆಗೆ ಗೈರು ಹಾಜರಾದಾಗ, ಅತವಾ ಹಾಜರಾಗದಿದ್ದಾಗ ಮತ್ತು ಅಧ್ಯಕ್ಷನಾಗಲಿ ಉಪಾಧ್ಯಕ್ಷನಾಗಲಿ ಸಭೆಯನ್ನು ಕರೆಯಬೇಕಾಗಿದ್ದಾಗ ಅಥವಾ ಅಗತ್ಯವಾಗಿದ್ದಾಗ ಒಂದಾದ ಮೇಲೊಂದರಂತೆ ನಡೆಯಬೇಕಿದ್ದ ಎರಡು ಸಭೆಗಳನ್ನು ಕಿರೆಯಲು ತಪ್ಪಿದ್ದಾನೆಂದು ತಿಳಿದಾಗ ಸದಸ್ಯನ್ನು ಕಿತ್ತು ಹಾಕಬಹುದು.

ಪಂಚಾಯತ್‌ ರಾಜ್‌ ವ್ಯವಸ್ಥೆ ಭ್ರಷ್ಟಾಚಾರ, ನರಕವಾದ ಗ್ರಾಮೀಣ ಬದುಕು

ಇಲ್ಲಿ ಅತಿಮುಖ್ಯವಾದ ಒಂದು ಅಂಶವಿದೆ ಗಮನಿಸಿ: ಚುನಾವಣೆ ಸಂದರ್ಭದಲ್ಲಿ ಪರಿಗಣನೆಗಾಗಿ ಗ್ರಾಮ ಪಂಚಾಯತಿ ಅಥವಾ ತಾಲ್ಲೂಕು ಪಂಚಾಯತಿ ಅಥವಾ ಸಂದರ್ಭಾನುಸಾರವಾಗಿ ಜಿಲ್ಲಾ ಪಂಚಾಯತಿಯ ಯಾವುದೇ ಮತದಾರ ಅಥವಾ ಸದಸ್ಯನ್ನು ಸೆಳೆಯುವುದು ಅಥವಾ ದಬ್ಬಾಲಿಕೆ ಅಥವಾ ವಂಚನೆ ಮಾಡಿದ್ದಾನೆಂದು ತಿಳಿದು ಬಂದಾಗ ಆತನನ್ನು ಸದಸ್ಯತ್ವದಿಂದ ತೆಗೆದು ಹಾಕಬಹುದು. ರಾಜಕಾರಣದಿಂದ ಹೊರಗಿರುವ, ಪಕ್ಷಾತೀತವಾಗಿರುವ ಮತ್ತು ಒಂದು ಸ್ಥಳೀಯ ಸಂಸ್ಥೆಯಾದ ಗ್ರಾಮ ಪಂಚಾಯತಿಯಲ್ಲಿ ಕೆಲ ಮೂರ್ಖರು ರಾಜಕಾರಣ ಮಾಡುವುದೇ ಹೆಚ್ಚು. ಇದು ಮುಂಬರುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿಯಲ್ಲಿ ನಿಮಗೆ ಸ್ಪಷ್ಟವಾಗಿ ಕಾಣಿಸುತ್ತದೆ.

ಪಂಚಾಯತ್‌ನ ಯಾವುದೇ ಬೇರೆ ರೀತಿಯ ಕಾಮಗಾರಿಯನ್ನು ಕಾರ್ಯಗತಗೊಳಿಸುವಾಗ, ಕರಾರು ಸಂಬಂಧದ ಅಥವಾ ಕಾಮಗಾರಿಗೆ ಸಂಬಂಧಿಸಿದ ಯಾವುದೇ ವ್ಯವಹಾರದಲ್ಲಿ ಕುಟುಂಬದ ಹತ್ತಿರದ ಸಂಬಂಧಿಯಾಗಿರುವ ಯಾವೊಬ್ಬ ವ್ಯಕ್ತಿಯೊಂದಿಗೆ ಪ್ರತ್ಯಕ್ಷವಾಗಿ ತೊಡಗಿರುವು ಕಂಡುಬಂದರೆ ಅಥವಾ ಪಾಲುದಾರನಂತೆ, ನೌಕರನಂತೆ ಅಥವಾ ಅಂಥ ಅನ್ಯಥಾ ಸಂಘಸಂಸ್ಥೆ ಮಂಡಳಿಯಲ್ಲಿ ಸದಸ್ಯನಂತೆ ಸಹಭಾಗಿಯಾಗಿರುವನೆಂದು ಕಂಡು ಬಂದಾಗ ಮಲಾಜಿಲ್ಲದೆ ಆತ ಸದಸ್ಯತ್ವಕ್ಕೆ ಅನರ್ಹನಾಗುತ್ತಾನೆ.

ಒಬ್ಬ ವ್ಯಕ್ತಿ ಮಾಜಿ ಅಧ್ಯಕ್ಷ ಅಥವಾ ಮಾಜಿ ಉಪಾಧ್ಯಕ್ಷ ಅಥವಾ ಮಾಜಿ ಸದ್ಯನಾಗಿ ದುರ್ನಡತೆ, ಅನುದಾನ ದುರುಪಯೋಗ ಮತ್ತು ಇನ್ನಿತರೆ ಯಾವುದೇ ಪ್ರಕರಣದಲ್ಲಿ ಆರೋಪಿಯಾಗಿದ್ದು, ತನಿಖೆಯಲ್ಲಿ ಆರೋಪ ಸಾಬೀತಾದರೆ ಅವನನ್ನು ಸದಸ್ಯತ್ವದಿಂದ ತೊಲಗಿಸಬಹುದು ಮತ್ತು ತೆಗೆದು ಹಾಕಬಹುದು.

ಇಲ್ಲಿ ನಿಮಗೊಂದು ಸ್ಪಷ್ಟೀಕರಣದ ಅಗತ್ಯವಿದೆ: ಈ ಪ್ರಕರಣದ ಉದ್ದೇಶಕ್ಕಾಗಿ, ಕುಟುಂಬದ ಬಂಧುಗಳು ಎಂದರೆ-

೧) ಆಕೆಯ ಅಥವಾ ಆತನೊಂಇಗೆ ವಾಸವಾಗಿರುವ ವ್ಯಕ್ತಿಯ ಪತ್ನಿ ಅಥವಾ ಪತಿ

೨) ಮಗ ಅಥವಾ ಮಗಳು ಅಥವಾ ಮಲಮಗ ಅಥವಾ ಮಲಮಗಳು

೩)ಅಂಥ ವ್ಯಕ್ತಿಯ ಮೇಲೆ ಸಂಪೂರ್ಣವಾಗಿ ಅವಲಂಬಿತನಾಗಿರುವ, ರಕ್ತಸಂಬಂಧವಾಗಿರಲಿ ಅಥವಾ ವಿವಾಹದಿಂದಾಗಲಿ, ಸಂಬಂಧಿಸಿದ ಯಾವೊಬ್ಬ ಇತರ ವ್ಯಕ್ತಿ.

ಅಂತಿಮವಾಗಿ ಈ ದುರ್ನಡತೆಯ ಕಾರಣಕ್ಕೆ ತೆಗೆದು ಹಾಕಲಾಗಿರುವ ಸದಸ್ಯರು ಇದೇ ಕಾಯ್ದೆಯ ಕಲಂ 12 ರಂತೆ ಆರು ವರ್ಷಗಳ ಕಾಲ ಯಾವುದೇ ಚುನಾವಣೆಗೆ ಸ್ಪರ್ಧಿಸುವಂತಿಲ್ಲ.

ಈಗ ಹೇಳಿ, ಸದಸ್ಯರು ಸರ್ವಾಧಿಕಾರಿಗಳೇ? ಈ ಮೇಲಿನ ತಪ್ಪುಗಳು ದಿನವೂ ನಡೆಯುತ್ತಿವೆ. ಇವು ಏಕೆ ಬಯಲಿಗೆ ಬೀಳುತ್ತಿಲ್ಲ ಎಂದರೆ ನಾವೆಲ್ಲರೂ ಸ್ವಾರ್ಥಪರರಾಗಿದ್ದೇವೆ. ನಾವೂ ಭ್ರಷ್ಟಚಾರವನ್ನು ಹಂಬಲಿಸುವವರು. ನಮಗೊಂದಿಷ್ಟು ಪಾಲು ಸಿಗಲಿ ಎಂದು ಕಾಯ್ದುಕೊಂಡು ಕೂತವರು. ಒಂದು ವೇಳೆ ನಾವು ಪ್ರಜ್ಞಾವಂತ ನಾಗರಿಕರಾಗಿದ್ದರೆ ಈವತ್ತು ಪಂಚಾಯತಿಗಳ ಸ್ಥಿತಿ ಹೀಗಿರುತ್ತಿರಲಿಲ್ಲ. ಕೋಟಿ ಕೋಟಿ ಹಣ ಚರಂಡಿ ಪಾಲಾಗುತ್ತಿರಲಿಲ್ಲ. ನಿನ್ನೆ ಮೊನ್ನೆ ನೌಕರಿಗೆ ಸೇರಿದ ಒಬ್ಬ ಪಿಡಿಓ ಕೋಟಿಗಟ್ಟಲೆ ತೂಗುವುದು ಹೇಗೆ? ಇಂಥವರನ್ನು ಬಹಳ ಮಂದಿಯನ್ನು ನಾವು ಕಾಣಬಹುದು. ಕೇವಲ ಉದ್ಯೋಗ ಖಾತರಿ ಯೋಜನೆಯನ್ನು ಅವಲಂಬಿಸಿ ಕೋಟಿ ಕೋಟಿ ಮಾಡಿಕೊಂಡ ಅನೇಕ ಭ್ರಷ್ಟರನ್ನು ನಾನು ಕಂಡಿದ್ದೇನೆ.

ಇನ್ನಾದರೂ ಉತ್ತಮ ಬದುಕಿನ ಬಗ್ಗೆ ಯೋಚಿಸೋಣ ಎನ್ನುವುದು ಈ ಬರಹದ ಉದ್ದೇಶ. ಬದಲಾಗಿ, ಭ್ರಷ್ಟರ ಪೀಡಕರಾಗಿ ನಾವಿದ್ದೇವೆ!

ಲಕ್ಷ್ಮೀಕಾಂತ ನಾಯಕ

WhatsApp Group Join Now
Telegram Group Join Now

Related Posts