ಸ್ಥಳೀಯ

AITUC ನಗರ ಸಮಿತಿ ರಚನೆ

WhatsApp Group Join Now
Telegram Group Join Now

ಕಟ್ಟಡ ಕಟ್ಟುವ ಮತ್ತು ಇತರೆ ನಿರ್ಮಾಣ ಕಾರ್ಮಿಕರ (AITUC) ನಗರ ಸಮಿತಿಯನ್ನು ರಂಗಂಪೇಟೆ ಸುರಪುರದಲ್ಲಿ ದಿನಾಂಕ 19-03-2024 ರಂದು ಉದ್ಘಾಟನೆ ಮಾಡಲಾಯಿತು.

ಕಾರ್ಯಕ್ರಮದ ಮೊದಲು ಧ್ವಜಾರೋಹಣವನ್ನು ಕಾಂ. ಕಲ್ಪನಾ ಗುರುಸಣಗಿ ಹಾಗೂ ಪದ್ಮಾವತಿ ಪಾಟೀಲ್ ಅವರು ನೆರವೇರಿಸಿದರು. ಕಾಮ್ರೇಡ್ ಪ್ರಭುದೇವ್ ಯಳಸಂಗಿ, ಕಾಮ್ರೇಡ್ ಕಲ್ಪನಾ ಗುರುಸಣಗಿ, ದೇವಿಂದ್ರಪ್ಪ ನಗರಗುಂಡ, ಗಫಾರ್ ಸಾಬ್ ನಗನೂರ, ಶರಣಪ್ಪ ಪೂಜಾರಿ, ಕಾಮ್ರೇಡ್ ಪದ್ಮಾವತಿ ಪಾಟೀಲ್, ಕಾಮ್ರೇಡ್ ಶ್ರೀದೇವಿ ಕೂಡ್ಲಿಗಿ, ಕಾಮ್ರೇಡ್ ಶಿವಲೀಲಾ ನಟೇಕರ್, ತಿಮ್ಮಯ್ಯ ದೊರಿ ಡೊಣ್ಣಿಗೇರಿ, ಮಹಿಬೂಬ ಗೌಂಡಿ ರುಕ್ಮಾಪುರ, ಮರೆಪ್ಪ ದೇಸಾಯಿ,ನಾಶಿರ್ ಸಾಬ್ ಕುಂಡಾಲೆ, ನಾಗಪ್ಪ ಕಟ್ಟೀಮನಿ, ಡೈಮಂಡ್ ಸಾಬ್ ರಂಗಂಪೇಟೆ ಇವರೆಲ್ಲರೂ ಮುಖ್ಯ ಅತಿಥಿಗಳಾಗಿ ವೇದಿಕೆಯ ಮೇಲೆ ಫಗೌರವಪೂರ್ವಕವಾಗಿ ಬರಮಾಡಿಕೊಳ್ಳಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಕಾಮ್ರೇಡ್ ದೇವೇಂದ್ರಪ್ಪ ಎಂ ಪತ್ತಾರ ವಹಿಸಿದ್ದರು. ಕಾಮ್ರೇಡ್ ಪ್ರಭುದೇವ್ ಯಳಸಂಗಿ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಕಟ್ಟಡ ಕಾರ್ಮಿಕರ ನೂತನ ಪದಾಧಿಕಾರಿಗಳಿಂದ ಮುಖ್ಯ ಅತಿಥಿಗಳಿಗೆ ಸನ್ಮಾನಿಸಲಾಯಿತು. ಸನ್ಮಾನ ಕಾರ್ಯಕ್ರಮದ ನಂತರ ಮುಖ್ಯ ಅತಿಥಿಗಳಿಂದ ಕಟ್ಟಡ ಕಾರ್ಮಿಕರಿಗೆ ಗುರುತಿನ ಚೀಟಿ ವಿತರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಪ್ರಭುದೇವ್ ಯಳಸಂಗಿ, ಸಭೆಯ ದೇವೇಂದ್ರಪ್ಪ ಎಂ ಪತ್ತಾರ, ಪದ್ಮಾವತಿ ಪಾಟೀಲ್,ಕಲ್ಪನಾ ಗುರುಸಣಗಿ, ನಾಶಿರ್ ಸಾಬ್ ಕುಂಡಾಲೆ, ಗಫಾರ್ ಸಾಬ್ ನಗನೂರ, ತಿಮ್ಮಯ್ಯ ತಳವಾರ್, ಶ್ರೀದೇವಿ ಕೂಡ್ಲಿಗಿ, ಶಿವಲೀಲಾ ನಟೇಕರ್ ಇವರು ಸಭೆಯನ್ನುದ್ದೇಶಿಸಿ ಮಾತನಾಡಿದರು.

ಕಟ್ಟಡ ಕಾರ್ಮಿಕರ ನೂತನ ಪದಾಧಿಕಾರಿಗಳನ್ನು ಈ ಸಂದರ್ಭದಲ್ಲಿ ಆಯ್ಕೆ ಮಾಡುವುದರ ಮೂಲಕ ಹೊಸ ಸಮಿತಿಯನ್ನು ರಚಿಸಲಾಯಿತು.

WhatsApp Group Join Now
Telegram Group Join Now

Related Posts