ರಾಜ್ಯ

ನಾಮಫಲಕಗಳಲ್ಲಿ ಶೇ. 60 ಕನ್ನಡ ಬಳಕೆಗಾಗಿ ರಸ್ತೆಗಿಳಿಯಲು ಬದ್ಧ, ಸೆರೆಮನೆಗೆ ಹೋಗಲು ಸಿದ್ದ

WhatsApp Group Join Now
Telegram Group Join Now

ಕರವೇ ಟಿ.ಎನ್. ಭೀಮುನಾಯಕ ಘೋಷಣೆ

ನಾಮಫಲಕಗಳಲ್ಲಿ ಶೇ. 60 ಕನ್ನಡ ಬಳಕೆಗಾಗಿ ರಸ್ತೆಗಿಳಿಯಲು ಬದ್ಧ, ಸೆರೆಮನೆಗೆ ಹೋಗಲು ಸಿದ್ದ

ಯಾದಗಿರಿ: ನಾಮಫಲಕಗಳಲ್ಲಿ ಶೇ. 60 ರ‍್ಟು ಕನ್ನಡ ತರಬೇಕೆಂಬ ರಾಜ್ಯ ಸರ್ಕಾರದ ಆದೇಶ ಹಾಗೂ ಸುಗ್ರಿವಾಜ್ಞೆಗೆ ಜಿಲ್ಲೆಯಲ್ಲಿ ಯಾವುದೇ ಕವಡೆ ಕಿಮ್ಮತ್ತು ನೀಡದೇ ಇರುವುದಕ್ಕೆ ಕರ್ನಾಟಕ ರಕ್ಷಣಾ ವೇದಿಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಒಂದು ವಾರದೊಳಗೆ ಸರ್ಕಾರದ “ಕನ್ನಡ ಕಡ್ಡಾಯ” ಆದೇಶ ಜಾರಿಗೆ ಮುಂದಾಗದಿದ್ದಲ್ಲಿ ಕರವೇ ಕಾರ್ಯಕರ್ತರು ಕಾರ್ಯಾಚರಣೆಗೆ ರಸ್ತೆಗಿಳಿಯಲಿದ್ದಾರೆ ಎಂದು ಕರವೇ ಜಿಲ್ಲಾಧ್ಯಕ್ಷ ಟಿಎನ್. ಭೀಮುನಾಯಕ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕರವೇ ರಾಜ್ಯವ್ಯಾಪಿ ಹೋರಾಟಕ್ಕೆ ಸ್ಪಂದಿಸಿದ ರಾಜ್ಯ ಸರ್ಕಾರ ಅಂಗಡಿ ಮುಂಗಟ್ಟು, ಶಿಕ್ಷಣ ಸಂಸ್ಥೆಗಳು, ವ್ಯಾಪಾರಿ ಸಂಸ್ಥೆಗಳ ನಾಮಫಲಕಗಳಲ್ಲಿ ಶೇ. 60 ರಷ್ಟು ಕಡ್ಡಾಯ ಕನ್ನಡದಲ್ಲಿರಬೇಕೆಂದು ಸ್ಪಷ್ಟವಾಗಿ ಆದೇಶ ಮಾಡಿದ್ದು, ಆದೇಶ ಜಾರಿಗೆ ತರಲು ಕರ್ನಟಕ ರಾಜ್ಯಪತ್ರ (ಗೆಜೆಟ್) ದಲ್ಲಿ ಫೆ. 28 ರ ಗಡುವನ್ನು ಸಹ ನೀಡಿತ್ತು.

ಆದರೆ ಇಂದು ಸರ್ಕಾರದ ಗಡುವು ಕೊನೆಗೊಳ್ಳುತ್ತಿದ್ದು ಇದುವರೆಗೆ ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಯಾವುದೇ ಅಗತ್ಯ ಕ್ರಮಗಳನ್ನು ಕೈಗೊಳ್ಳದೇ ದಿವ್ಯ ನಿರ್ಲಕ್ಷö್ಯ ವಹಿಸಿದೆ. ಕರವೇ ಈಗಾಗಲೇ ಕಳೆದ 30-10-2023 ರಂದು ತಹಸೀಲ್ದಾರರು, ನಗರ ಸ್ಥಳಿಯ ಸಂಸ್ಥೆಗಳು, ಪೊಲೀಸ್ ಇಲಾಖೆಗಳಿಗೆ ಮನವಿ ಸಲ್ಲಿಸಿ ಮೌಖಿಕವಾಗಿಯೂ ಎಚ್ಚರಿಕೆ ನೀಡಿ ಗಡುವಿನ ದಿನಾಂಕದ ಮುಂಚಿತವಾಗಿ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿತ್ತು.

ಆದರೆ ನಮ್ಮ ಮನವಿಗೆ ತೀವ್ರ ನಿರ್ಲಕ್ಷö್ಯ ತೋರಿದ ಜಿಲ್ಲಾಡಳಿತ ಹಾಗೂ ಇತರ ಆಡಳಿತಗಳು ಯಾವುದೇ ಅಗತ್ಯ ಕ್ರಮ ಕೈಗೊಳ್ಳದೇ ಜಾಗೃತಿಯನ್ನು ಮೂಡಿಸದೇ ನೋಟೀಸು ನೀಡದೇ ನಿರ್ಲಕ್ಷಿಸಿವೆ.

ಕರವೇ ಕಳೆದ 3 ತಿಂಗಳ ಹಿಂದೆಯೇ ಲಿಖಿತ ಹಾಗೂ ಮೌಖಿಕ ಎಚ್ಚರಿಕೆ ನೀಡಿದರೂ ಸಹ ದಿವ್ಯ ನಿರ್ಲಕ್ಷö್ಯ ತೋರಿರುವುದರಿಂದ ಈದೀಗ ಒಂದು ವಾರದೊಳಗಡೆ ಕ್ರಮ ಕೈಗೊಂಡು ಕನ್ನಡೆತರ ನಾಮಫಲಕಗಳಿಗೆ ಶಾಲಾ ಕಾಲೇಜುಗಳ ಜಾಹೀರಾತುಗಳಿಗೆ, ಗೋಡೆ ಬೆರಹ, ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಶೇ. 60 ರಷ್ಟು ಕನ್ನಡ ಭಾಷೆಯನ್ನು ಪ್ರದರ್ಶಿಸದಿದ್ದಲ್ಲಿ ಕರವೇ ಸೈನಿಕರು ನೇರವಾಗಿ ಕಾರ್ಯಾಚರಣೆಗೆ ಇಳಿಯುಲಿದ್ದಾರೆ ಎಂದು ಅವರು ಘೋಷಿಸಿದ್ದಾರೆ.

ಕನ್ನಡ ಭಾಷೆ ಉಳಿವಿಗೆ ಮತ್ತು ಬೆಳವಣಿಗೆಗೆ ಕರವೇ ಕಾರ್ಯಕರ್ತರು ಎಲ್ಲರೂ ಸೆರೆಮನೆಗೆ ಹೋಗಲು ಸಿದ್ದ ಮತ್ತು ಸರ್ಕಾರ ಜಿಲ್ಲಾಡಳಿತ ಕುಂಭಕರ್ಣ ನಿದ್ದೆಗೆ ಜಾರಿದರೆ ನಾವುಗಳು ಬೆಂಗಳೂರಿನಲ್ಲಿ ನಾರಾಯಣಗೌಡರು ಹಾಗೂ ಕರವೇ ಸೇನಾನಿಗಳ ರಸ್ತೆಗಿಳಿದು ಕನ್ನಡೇತರ ನಾಮಫಲಕಗಳನ್ನು ತೆರವು ಮಾಡಿದ ಮಾದರಿಯಲ್ಲಿ ರಸ್ತೆಗಿಳಿದು ಕನ್ನಡೇತರ ನಾಮಫಲಕಗಳಿಗೆ ಮುಕ್ತಿ ಕಾಣಿಸಲು ಕಾರ್ಯಾಚರಣೆಗಿಳಿಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಈಗಾಗಲೇ ಸರ್ಕಾರ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಆಂಗ್ಲ ಮಾಧ್ಯಮದ ಜಾಹೀರಾತು ಫಲಕಗಳಲ್ಲಿಯೂ ಶೇ. 60% ಕನ್ನಡ ಇರಬೇಕೆಂದು ಸೂಚನೆ ನೀಡಿದ್ದರೂ ಇದುವರೆಗೆ ಶಿಕ್ಷಣ ಇಲಾಖೆ ಅಧಿಕಾರಿಗಳು ಸಹ ಮೀನಾ ಮೇಷ ಎಣಿಸುತ್ತಾ ಕುಳಿತಿರುವುದು ನಾಚಿಕೆಗೇಡು ಸಂಗತಿಯಾಗಿದೆ. ನಗರದ ಎಲ್ಲಿ ನೋಡಿದರಲ್ಲಿ ಬರಿ ಆಂಗ್ಲ ಮಾಧ್ಯಮದ್ಲಿಯೇ ಭಿತ್ತಿಪತ್ರಗಳು ರಾರಾಜಿಸುತ್ತಿದ್ದು, ಇವುಗಳಲ್ಲಿ ಶೇ. 60 ಕನ್ನಡ ಬಳಕೆಗೆ ತಕ್ಷಣ ಸೂಚನೆ ನೀಡಲು ಕ್ರಮ ಕೈಗೊಳ್ಳಬೇಕು.

ತಕ್ಷಣ ಒಂದು ವಾರದಲ್ಲಿ ಕ್ರಮ ಜರುಗಿಸದೇ ದಿವ್ಯ ನಿರ್ಲಕ್ಷö್ಯ ತಾಳಿದರೆ ಜಿಲ್ಲೆಯಾದ್ಯಂತ ಕರವೇ ಕಾರ್ಯಕರ್ತರು ರಸ್ತೆಗಿಳಿಯಲಿದ್ದಾರೆ. ಕನ್ನಡೇತರ ನಾಮಫಲಕಗಳಿಗೆ ಗತಿ ಕಾಣಿಸಲಿದ್ದಾರೆ ಎಂದು ಅವರು ತಿಳಿಸಿದ್ದು ಯಾವುದೇ ಬೆಳವಣಿಗೆಗೆ, ಎಂಥದ್ದೇ ಘಟನೆಗಳಿಗೆ ಜಿಲ್ಲಾಡಳಿತ ಹಾಗೂ ಸಂಬAಧಪಟ್ಟ ಇಲಾಖೆ ಅಧಿಕಾರಿಗಳೇ ಹೊಣೆಯಾಗಲಿದ್ದಾರೆ ಎಂದು ಅವರು ಗುಡುಗಿದ್ದಾರೆ.

ತಕ್ಷಣ ಕ್ರಮ ಜರುಗಿಸದಿದ್ದರೆ ಬೀದಿಗಿಳಿಯುವುದು ಶತಸಿದ್ದ ಕನ್ನಡ ಉಳಿಸಲು ಸೆರೆಮನೆಗೆ ಹೋಗಲು ಸಿದ್ದ ಎಂದು ಮಲ್ಲು ಮಾಳಿಕೇರಿ, ಸಿದ್ದು ನಾಯಕ ಹತ್ತಿಕುಣಿ, ವಿಶ್ವಾರಾಧ್ಯ ದಿಮ್ಮೆ, ಅಂಬ್ರೇಷ್ ಹತ್ತಿಮನಿ, ವಿಶ್ವರಾಜ ಹೊನಿಗೇರಾ, ಅಬ್ದುಲ್ ಚಿಗಾನೂರ, ಶರಣಬಸಪ್ಪ ಯಲ್ಹೇರಿ, ಕಾಶಿನಾಥ ನಾನೇಕ, ಸುರೇಶ ಬೆಳಗುಂದಿ ಸೇರಿದಂತೆ ಇನ್ನಿತರರು ಪ್ರಕಟಿಸಿದ್ದಾರೆ.

 

WhatsApp Group Join Now
Telegram Group Join Now

Related Posts