ಸ್ಥಳೀಯ

ನಕಲಿ ವಾಟ್ಸಾಪ್, ಫೇಸ್‌ ಬುಕ್ ಸೃಷ್ಟಿಸಿ ಡಿಪಿಗೆ ಪೋಟೋ ಇಟ್ಟು ಮೆಸೆಜ್ ಮಾಡುವ ಆನ್ಲೈನ್ ವಂಚನೆ ಕಂಡು ಬಂದರೆ ತಕ್ಷಣ ದೂರು ನೀಡಿ : ಜಿಲ್ಲಾಧಿಕಾರಿ ಡಾ.ಸುಶೀಲ.ಬಿ

WhatsApp Group Join Now
Telegram Group Join Now

ನಕಲಿ ವಾಟ್ಸಾಪ್, ಫೇಸ್‌ ಬುಕ್ ಸೃಷ್ಟಿಸಿ ಡಿಪಿಗೆ ಪೋಟೋ ಇಟ್ಟು ಮೆಸೆಜ್ ಮಾಡುವ ಆನ್ಲೈನ್ ವಂಚನೆ ಕಂಡು ಬಂದರೆ ತಕ್ಷಣ ದೂರು ನೀಡಿ : ಜಿಲ್ಲಾಧಿಕಾರಿ ಡಾ.ಸುಶೀಲ.ಬಿ

ಯಾದಗಿರಿ: ಮೇ 24,:ಸಾಮಾಜಿಕ ಜಾಲತಾಣಗಳಾದ ವಾಟ್ಸಾಪ್, ಫೇಸ್‌ಬುಕ್‌ ನ ನಕಲಿ ಖಾತೆಗಳನ್ನು ಸೃಷ್ಟಿ ಮಾಡಿ ಡಿಪಿಗೆ ಜಿಲ್ಲಾಧಿಕಾರಿ ಹೆಸರು ಮತ್ತು ಫೋಟೋವನ್ನು ಬಳಕೆ ‌ಮಾಡಿ ಸಾರ್ವಜನಿಕರಿಗೆ, ಜಿಲ್ಲಾ ಮಟ್ಟದ ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳಿಗೆ ಮೆಸೇಜ್ ಮಾಡಿ ಹಣದ ಬೇಡಿಕೆಯಿಟ್ಟು ವಂಚನೆ ಮಾಡುವುದು ಕಂಡು ಬಂದರೆ ತಕ್ಷಣ ದೂರು ನೀಡಿ ಎಂದು ಜಿಲ್ಲಾಧಿಕಾರಿ ಡಾ.ಸುಶೀಲ ಬಿ. ಅವರು ತಿಳಿಸಿದ್ದಾರೆ.

https://www.facebook.com/laxmikantnayakkollur

ನಕಲಿ ಸಾಮಾಜಿಕ ಜಾಲತಾಣ ಖಾತೆಗಳನ್ನು ಸೃಷ್ಟಿ ಮಾಡಿ ಜಿಲ್ಲಾಧಿಕಾರಿಗಳ ಹೆಸರು ಮತ್ತು ಡಿಪಿ ಯಲ್ಲಿ ಪೋಟೋ ಬಳಸಿಕೊಂಡು ವಂಚನೆ ಮಾಡಲು ಯತ್ನಿಸುವ ಪ್ರಕರಣಗಳು ಕಂಡು ಬಂದಿದ್ದು ಸೈಬರ್ ಕ್ರೈಮ್ ನಲ್ಲಿ ದೂರು ದಾಖಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಅಧಿಕಾರಿಗಳು ಹಾಗೂ ಸಾರ್ವಜನಿಕರು ಎಚ್ಚರಿಕೆಯಿಂದ ಮೊಬೈಲ್ ಬಳಕೆ ಮಾಡುವುದರ ಜೊತೆಗೆ ಆನ್ಲೈನ್ ವಂಚಕರ ಫೋನ್ ಮತ್ತು ಮೆಸೆಜ್ ಗಳು ಬಂದಾಗ ಎಚ್ಚರಿಕೆಯಿಂದ ಮೊಬೈಲ್ ಬಳಕೆ ಮಾಡಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ನಿಮ್ಮ ಸಹಾಯವಿಲ್ಲದೆ ಏನನ್ನೂ ಮಾಡಲು ಆಗದು, ನಿಮಗನ್ನಿಸಿದಷ್ಟು ಸಹಾಯ ಮಾಡಿ.
WhatsApp Group Join Now
Telegram Group Join Now

Related Posts