ಭಾರತ

ಆನೆಗಳ ಸಂಖ್ಯೆ ಹೆಚ್ಚಳ

WhatsApp Group Join Now
Telegram Group Join Now

ಬೋಟ್ಸ್ ವಾನಾ, 5 ಏಪ್ರಿಲ್ ಆನೆಗಳು ಅಂದ್ರೆ ನಮ್ಮ ದೇಶದಲ್ಲಿ ಬಹಳ ದೊಡ್ಡ ಗೌರವ ಇದೆ. ವಿನಾಯಕನ ಪ್ರತಿರೂಪದ ಗಜರಾಜನನ್ನ ನೂರಾರು ವರ್ಷಗಳಿಂದ ಪೋಷಿಸಿ, ಪೂಜಿಸುವ ಸಂಪ್ರದಾಯವಿದೆ. ಭಾರತದಲ್ಲಿ ಹಬ್ಬ, ಹರಿದಿನ, ಉತ್ಸವಗಳಲ್ಲಿ ಆನೆಗಳಿಗೆ ನೀಡುವ ಪ್ರಾಮುಖ್ಯತೆಯೇ ಬೇರೆ. ಆನೆಗಳು ಮನುಷ್ಯರನ್ನ ತುಳಿದು ಸಾಯಿಸಿದರೂ ಅದರ ರಕ್ಷಣೆಗೆ ನಮ್ಮ ದೇಶದಲ್ಲಿ ಕಾನೂನುಗಳಿವೆ. ಆದರೆ ಆನೆಗಳನ್ನು ಕಂಡರೆ ಹೊಂಚು ಹಾಕಿ ಕೊಲ್ಲುವ, ಆನೆಗಳ ಸಂತತಿಯನ್ನೇ ನಾಶ ಮಾಡಲು ಯತ್ನಿಸುವ ದೇಶವೂ ಒಂದಿದೆ. ಅದು ಯಾವ ದೇಶ, ಆನೆಗಳಿಂದ ತಪ್ಪಿಸಿಕೊಳ್ಳಲು ಅದು ಮಾಡುತ್ತಿರೋ ಸಾಹಸದ ವಿಶೇಷ ವರದಿ ಇಲ್ಲಿದೆ ನೋಡಿ.

ಬೋಟ್ಸ್ ವಾನಾ.. ಇದು ದಕ್ಷಿಣ ಆಫ್ರಿಕಾದ ಪುಟ್ಟ ದೇಶ. ಈ ದೇಶಕ್ಕೆ ಪ್ರವಾಸೋದ್ಯಮವೇ ಮುಖ್ಯ. ಇಲ್ಲಿಗೆ ಬರುವ ಪ್ರವಾಸಿಗರು ಆನೆಗಳನ್ನ ನೋಡಿ ಆನಂದ ಪಡುತ್ತಾರೆ. ಆದರೆ ಅದೇ ಆನೆಗಳು ಬೋಟ್ಸ್ವಾನಾಕ್ಕೆ ತಲೆನೋವಾಗಿದೆ. ಆನೆಗಳನ್ನ ನಿಯಂತ್ರಣ ಮಾಡೋಕೆ ಆಗದೇ ಬೋಟ್ಸ್ವಾನಾ ಸರ್ಕಾರ ಸುಸ್ತಾಗಿ ಹೋಗಿದೆ.

ಇತ್ತೀಚೆಗೆ ಬೋಟ್ಸ್ವಾನಾದಲ್ಲಿ ಆನೆಗಳ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ಸದ್ಯ ಬೋಟ್ಸ್ವಾನಾದಲ್ಲಿರುವ ಆನೆಗಳ ಸಂಖ್ಯೆ ಎಷ್ಟು ಅಂದ್ರೆ 1 ಲಕ್ಷ 30 ಸಾವಿರ. ಇದು ವಿಶ್ವದ ಮೂರನೇ ಒಂದರಷ್ಟು ಅನ್ನೋದು ಅಚ್ಚರಿಯ ಸಂಗತಿ. ವರ್ಷದಿಂದ ವರ್ಷಕ್ಕೆ ಈ ಆನೆಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಆನೆಗಳಿಂದ ಇಲ್ಲಿನ ಜನ ಬದುಕುವುದೇ ಕಷ್ಟವಾಗಿದೆ.

ಬೋಟ್ಸ್ವಾನಾ ಕಾಡಿನಲ್ಲಿರುವ ಆನೆಗಳು ಸೀದಾ ನಾಡಿಗೆ ನುಗ್ಗುತ್ತವೆ. ಅಲ್ಲದೆ ಮನೆ, ಹೊಲಗಳ ಮೇಲೆ ದಾಳಿ ಸಿಕ್ಕ, ಸಿಕ್ಕವನ್ನೆಲ್ಲಾ ನಾಶ ಮಾಡಿ ಹೋಗುತ್ತವೆ. ಹೀಗಾಗಿ ಈ ಆನೆಗಳನ್ನ ದಾಳಿಯಿಂದ ತಪ್ಪಿಸಿಕೊಳ್ಳುವುದು ಬೋಟ್ಸ್ವಾನಾಗೆ ಕಷ್ಟಕರವಾಗಿದೆ.ಕಾಡು ಪ್ರಾಣಿಗಳನ್ನು ಬೇಟೆಯಾಡಬಾರದು. ಪ್ರಾಣಿಗಳೊಂದಿಗೆ ಮನುಷ್ಯರು ಒಟ್ಟಿಗೆ ಬದುಕಬೇಕು ಅನ್ನೋದು ಜರ್ಮನ್ ಸರ್ಕಾರದ ನೀತಿ. ಹೀಗಾಗಿ ಜರ್ಮನ್ ದೇಶದ ಬೇಟೆಯಾಡುವ ನಿರ್ಬಂಧಗಳಿಂದ ಬೋಟ್ಸ್ವಾನಾದಲ್ಲಿ ಆನೆಗಳ ಸಂಖ್ಯೆ ಹೆಚ್ಚಾಗುವಂತೆ ಮಾಡಿದೆ. ಆನೆಗಳ ಸಂಖ್ಯೆ ಹೆಚ್ಚಾಗಿ ಬೋಟ್ಸ್ವಾನಾದ ಜನರು ಬಡವರಾಗುತ್ತಿದ್ದಾರೆ.

ಬೋಟ್ಸ್ವಾನಾದಲ್ಲಿ ಆನೆಗಳ ಬೇಟೆಯ ಮೇಲಿದ್ದ ನಿಷೇಧವನ್ನು 2019ರಲ್ಲೇ ತೆಗೆದು ಹಾಕಿದೆ. ಬೋಟ್ಸ್ವಾನಾಕ್ಕೆ ಬರುವ ಪ್ರವಾಸಿರು ಆನೆಗಳನ್ನ ಬೇಟೆಯಾಡಿ ಸಾಯಿಸಲು ಅನುಮತಿ ಇದೆ. ಇದರ ಜೊತೆಗೆ ಆನೆಗಳ ಬೇಟೆಗೆ ವಿರೋಧಿಸುವ ದೇಶಗಳಿಗೆಲ್ಲಾ ಬೋಟ್ಸ್ವಾನಾ ಬೆದರಿಕೆ ಹಾಕಲು ಆರಂಭಿಸಿದೆ.

WhatsApp Group Join Now
Telegram Group Join Now

Related Posts