ಪಾಕವಿಧಾನಗಳು

ಕ್ಷಿಪಣಿ ದಾಳಿ, ಇಸ್ರೇಲ್‌ ತಿರುಗೇಟು

WhatsApp Group Join Now
Telegram Group Join Now

ಇಸ್ಫಹಾನ್, 19 ಏಪ್ರಿಲ್ :ಆ್ಯಂಕರ್:ಇಸ್ರೇಲ್ ಇರಾನ್ ಮೇಲೆ ಕ್ಷಿಪಣಿ ದಾಳಿ ನಡೆಸಿದೆ, ಇಸ್ರೇಲ್ ಮತ್ತು ಇರಾನ್ ನಡುವೆ ಸಂಘರ್ಷ ನಡೆಯುತ್ತಿದೆ. ಭಾನುವಾರ ಮುಂಜಾನೆ ಇರಾನ್ ಕ್ಷಿಪಣಿಗಳು ಮತ್ತು ಡ್ರೋನ್ಗಳ ಮೂಲಕ ಇಸ್ರೇಲ್ ಮೇಲೆ ದಾಳಿ ಮಾಡಿತ್ತು. ಅಂದಿನಿಂದ ಇಸ್ರೇಲ್ ನೇರವಾಗಿ ಇರಾನ್ ಮೇಲೆ ದಾಳಿ ಮಾಡಬಹುದು ಎನ್ನುವ ನಿರೀಕ್ಷೆ ಇತ್ತು ಅದು ಇಂದು ನಿಜವಾಗಿದೆ.

ಇಸ್ರೇಲ್ ಕೂಡ ಇರಾನ್ ಮೇಲೆ ದಾಳಿ ನಡೆಸಿ ಸೇಡು ತೀರಿಸಿಕೊಂಡಿದೆ. ಇದೇ ವೇಳೆ ಇರಾನ್, ಸಿರಿಯಾ ಮತ್ತು ಇರಾಕ್ ನಲ್ಲಿ ಸ್ಫೋಟದ ಸದ್ದು ಕೇಳಿ ಬಂದಿದೆ. , ಶುಕ್ರವಾರ ಬೆಳಿಗ್ಗೆ ಮಧ್ಯ ಇರಾನ್ನ ಇಸ್ಫಹಾನ್, ದಕ್ಷಿಣ ಸಿರಿಯಾದ ಅಸ್-ಸುವೈದಾ ಗವರ್ನರೇಟ್ ಮತ್ತು ಬಾಗ್ದಾದ್ ಪ್ರದೇಶದಲ್ಲಿ ಮತ್ತು ಇರಾಕ್ನ ಬಾಬಿಲ್ ಗವರ್ನರೇಟ್ನಲ್ಲಿ ಸ್ಫೋಟದ ಸದ್ದು ಕೇಳಿಸಿತು.

ಇರಾನ್ ದಾಳಿಯ ನಂತರ, ಅಮೆರಿಕ ಮತ್ತು ಬ್ರಿಟನ್ ಗುರುವಾರ ಇರಾನ್ ಮೇಲೆ ಕೆಲವು ನಿರ್ಬಂಧಗಳನ್ನು ವಿಧಿಸಿವೆ. ಸಿರಿಯಾದಲ್ಲಿರುವ ಇರಾನ್ ರಾಯಭಾರಿ ಕಚೇರಿ ಮೇಲೆ ಶಂಕಿತ ಇಸ್ರೇಲ್ ವೈಮಾನಿಕ ದಾಳಿ ನಡೆಸಿದ ನಂತರ ಪರಿಸ್ಥಿತಿ ಹದಗೆಟ್ಟಿದೆ. ಇರಾನ್ ಇತ್ತೀಚೆಗೆ ಇಸ್ರೇಲ್ ಮೇಲೆ ಡಜನ್ ಗಟ್ಟಲೆ ಡ್ರೋನ್ ಮತ್ತು ಕ್ಷಿಪಣಿಗಳಿಂದ ದಾಳಿ ನಡೆಸಿತ್ತು.

WhatsApp Group Join Now
Telegram Group Join Now

Related Posts

No Content Available