ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಯಾದಗಿರಿ, ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿ ಯಾದಗಿರಿ ವತಿಯಿಂದ ಯಾದಗಿರಿ ಜಿಲ್ಲೆಯ ಗುರುಮಠಕಲ್ ತಾಲ್ಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಎಲ್ಹೇರಿ ಯಲ್ಲಿ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿ ನಿಷೇದ ಮತ್ತು ನಿಯಂತ್ರಣ ಕಾಯ್ದೆ 1986 ತಿದ್ದುಪಡಿ ಕಾಯ್ದೆ 2016ರ ಕುರಿತು ಆಯೋಜಿಸಿದ ಕಾನೂನು ಅರಿವು-ನೆರವು ಮತ್ತು ಜಾಗೃತಿ ಕಾರ್ಯಕ್ರಮವನ್ನು ಸರಕಾರಿ ಪ್ರೌಡ ಶಾಲೆಯ ಮುಖ್ಯ ಗುರುಗಳಾದ ಶ್ರೀಮತಿ ಮಂಜುಳಾ ಜೆನ್ನೂರು ರವರು ಉದ್ಘಾಟಿಸಿ, ಮಾತನಾಡಿದ ಅವರು “ಮಕ್ಕಳನ್ನು ಶಾಲೆ ಬಿಡಿಸಿ ಕೆಲಸಕ್ಕೆ ಕಳುಹಿಸುವುದು ಅಪರಾದವಾಗಿದ್ದು, ಯಾವುದೇ ಪಾಲಕರು ಮಕ್ಕಳನ್ನು ದುಡಿಮೆಗೆ ಕಳುಹಿಸದೇ ಶಾಲೆಗೆ ಕಳುಹಿಸಬೇಕು ಎಂದರು. ನಿರಂತರವಾಗಿ ನಮ್ಮ ಶಾಲೆಯ ಮಕ್ಕಳಿಗೆ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿಯ ಬಗ್ಗೆ ಕಾನೂನು ಅರಿವು-ನೆರವು ಮತ್ತು ಜಾಗೃತಿ ಮೂಡಿಸುತ್ತಿರುವ ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಬಾಲಕಾರ್ಮಿಕ ನಿರ್ಮೂಲನಾ ಸೊಸೈಟಿಯವರಿಗೆ ಧನ್ಯವಾದಗಳನ್ನು ಸಹ ತಿಳಿಸಿದರು. ನಂತರ ಜಿಲ್ಲಾ ಬಾಲಕಾರ್ಮಿಕ ಯೋಜನಾ ನಿರ್ದೇಶಕರಾದ ಶ್ರೀ ರಿಯಾಜ್ ಪಟೇಲ್ ವರ್ಕನಳ್ಳಿ ಮಾತನಾಡಿ ಬಾಲಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗಿದ್ದು, ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಳ್ಳುವವರ ವಿರುದ್ಧ 6 ತಿಂಗಳಿAದ 2 ವರ್ಷ ಅಥವಾ ರೂ.20,000/- ರಿಂದ ರೂ.50,000/- ಗಳವರೆಗೆ ದಂಡ ಅಥವಾ ಎರಡನ್ನು ಸಹ ದಾಖಲಿಸಲಾಗುವುದು ಎಂದು ತಿಳಿಸಿದರು. ಈ ಸಂಧರ್ಭದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರುಗಳಾದ ಶ್ರೀ ಪರಸಪ್ಪ ಸೈದಪ್ಪಗೋಳ್ ಅಧ್ಯಕ್ಷತೆ ವಹಿಸಿದರು. ಮತ್ತು ಗುರುಮಠಕಲ್ ತಾಲ್ಲೂಕಿನ ಕಾರ್ಮಿಕ ನಿರೀಕ್ಷಕರಾದ ಶ್ರೀಮತಿ ಸಂಗೀತಾ ಹೊನ್ನೂರು ರವರು ಹಾಗೂ ಕಾರ್ಮಿಕ ಇಲಾಖೆಯ ಡಿ.ಇ.ಓ ಅಂಬರೀಶ್ ಹಾಗೂ ಶಾಲಾ ಸಿಬ್ಬಂದಿಗಳು ಹಾಜರಿದ್ದರು.
ಅಪ್ರಾಪ್ತರನ್ನು ಕೆಲಸಕ್ಕಿಟ್ಟುಕೊಂಡರೆ ದಂಡದ ಜೊತೆಗೆ ಜೈಲು ಶಿಕ್ಷೆ ಅನುಭವಿಸಬೇಕಾದೀತು ಜೋಕೆ
Related Posts
State News
India
ಬಂದಳ್ಳಿ ಗ್ರಾಪಂ ಉಪ ಚುನಾವಣೆ ಕರಣಮ್ಮ ಭರ್ಜರಿ ಗೆಲುವು
ಯಾದಗಿರಿ: ತೀವ್ರ ಜಿದ್ದಜಿದ್ದಿನಿಂದ ಕೂಡಿದ್ದ ತಾಲೂಕಿನ ಬಂದಳ್ಳಿ ಗ್ರಾಪಂ ಉಪ ಚುನಾವಣೆ ಯಲ್ಲಿ…
World
ದೇಶ ಕಂಡ ಅಪ್ರತಿಮ ನಾಯಕ ಅಟಲ್ ಜಿ
ಸುಮಾರು ನಾಲ್ಕು ದಶಕದ ಕಾಲ ರಾಜಕಾರಣದಲ್ಲಿ ಅಜಾತ ಶತ್ರುವೆಂದೇ ಖ್ಯಾತಿ ಪಡೆದ ಅಭಿವೃದ್ಧಿಯ…
Health & Fitness
ಪ್ರೀತಿಯ ಸಾರವನ್ನು ಬಹಿರಂಗಪಡಿಸುವುದು: ವೈಯಕ್ತಿಕ ಪರಿಶೋಧನೆ
ಪ್ರೀತಿಯನ್ನು ಅರ್ಥಮಾಡಿಕೊಳ್ಳಲು ನಾನು ಈ ಪ್ರಯಾಣವನ್ನು ಪ್ರಾರಂಭಿಸಿದಾಗ, ಅದು ಎಷ್ಟು…
ಸ್ತನ್ಯಪಾನದಿಂದ ಮಕ್ಕಳ ಆರೋಗ್ಯ ಉತ್ತಮ
ಯಾದಗಿರಿ : ಆಗಸ್ಟ್ 02, : ತಾಯಿಯ ಸ್ತನ್ಯಪಾನ ಮಕ್ಕಳ ಮಾನಸಿಕ ಆರೋಗ್ಯವನ್ನು…
ಸಕ್ಕರೆ ಕಾಯಿಲೆಯ ಒಳ ಮರ್ಮಗಳು-1
ಈಗ ನಾನು ಬರೆಯುತ್ತಿರುವ ಲೇಖನವು ಇದುವರೆಗೂ ನಾನು ಬರೆದಿರುವ ಎಲ್ಲಾ ಲೇಖನಗಳಿಗಿಂತ ಅತ್ಯಂತ…
ಗರ್ಭನಿರೋಧಕ ಚುಚ್ಚುಮದ್ದು ನೀಡುವ ಪ್ರಾಯೋಗಿಕ ಯೋಜನೆಗೆ ಸಚಿವ ಶ್ರೀ ದಿನೇಶ ಗುಂಡುರಾವ್ ಚಾಲನೆ
ಯಾದಗಿರಿ : ಮಾರ್ಚ್ 07, : ಜನಸಂಖ್ಯೆ ನಿಯಂತ್ರಣ, ತಾಯಿ ಮಗುವಿನ ಮರಣ ಪ್ರಮಾಣ ತಗ್ಗಿಸಲು ಹಾಗೂ…
ಮುನ್ನಾಬಾಯ್ಗಳೆಂಬ ಯಮದೂತರು
ರಾಜ್ಯದಾದ್ಯಂತ ಈ ನಕಲಿಗಳ ಹಾವಳಿ ಮೇರೆ ಮೀರಿದೆ. ಐಎಂಎ, ಕೆಎಂಸಿ ಕಣ್ಗಾವಲಿದ್ದರೂ ವ್ಯವಸ್ಥೆಯ…
ವಾಜಪೇಯಿ ಆರೋಗ್ಯಶ್ರೀ ಯೋಜನೆ, ಬಡವರಿಗೆ ತಲುಪದ ಯೋಜನೆ. ಬನ್ನಿ ಈ ಕುರಿತು ಮಾಹಿತಿ ನೋಡೋಣ
ವಾಜಪೇಯಿ ಆರೋಗ್ಯಶ್ರೀ ಯೋಜನೆ ಕರ್ನಾಟಕ ಸರ್ಕಾರದ ಪ್ರಮುಖ ಆರೋಗ್ಯ ವಿಮಾ ಯೋಜನೆಯಾಗಿದ್ದು, ಇದು…