ಕೋಲಾರ, ೬ ಏಪ್ರಿಲ್ : ಕಾಮಸಮುದ್ರಂ ಪೊಲೀಸರು ಬಲಮಂದೆ ಗ್ರಾಮದ ಎರಡು ಮನೆಗಳಿಗೆ ಕನ್ನ ಹಾಕಿ ಕಳವು ಮಾಡಿದ್ದ ಆರೋಪಿಯನ್ನು ಬಂಧಿಸಿ, ಆತನಿಂದ ರೂ: ೨,೭೪,೦೦೦/- ಗಳ ಮೌಲ್ಯದ ಕಳವು ಮಾಲು, ನಗದನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಫೆ.೯ ರಂದು ಕಾಮಸಮುದ್ರಂ ಸರಹದ್ದು ಬಲಮಂದೆ ಗ್ರಾಮದ ಸೈಯದ್ ನವಾಜ್ ಎಂಬುವರ ಮನೆಯಲ್ಲಿ ಚಿನ್ನ, ಬೆಳ್ಳಿ ಆಭರಣಗಳು, ನಗದು ಹಣ ಕಳ್ಳತನವಾಗಿದ್ದು, ಈ ಸಂಬ0ಧ ಕಾಮಸಮುದ್ರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಅದೇ ರೀತಿ ಮಾ.೨೦ ರಂದು ಬಲಮಂದೆ ಗ್ರಾಮದ ಸಾಕಮ್ಮ ಎಂಬುವರ ಮನೆಯಲ್ಲಿ ಚಿನ್ನ, ಬೆಳ್ಳಿ ಆಭರಣಗಳು ಮತ್ತು ನಗದು ಹಣ ಕಳ್ಳತನವಾಗಿದ್ದು, ಈ ಬಗ್ಗೆಯೂ ಕಾಮಸಮುದ್ರಂ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಈ ಎರಡೂ ಪ್ರಕರಣಗಳಲ್ಲಿ ಆರೋಪಿಗಳನ್ನು ಮತ್ತು ಮಾಲನ್ನು ಪತ್ತೆ ಮಾಡಲು ಕಾಮಸಮುದ್ರಂ ಸರ್ಕಲ್ ಇನ್ಸ್ಪೆಕ್ಟರ್ ಟಿ.ಟಿ.ಕೃಷ್ಣ ಅವರ ನೇತೃತ್ವದಲ್ಲಿ ವಿಶೇಷ ಅಪರಾಧ ಪತ್ತೆ ದಳವನ್ನು ರಚಿಸಲಾಗಿದ್ದು, ಪೊಲೀಸರು ಆರೋಪಿ ಹೇಮಂತ್ಕುಮಾರ್ ಅವರನ್ನು ಬಂಧಿಸಿ ಆತನಿಂದ ರೂ: ೨,೭೪,೦೦೦/- (ಎರಡು ಲಕ್ಷದ ಎಪ್ಪತ್ನಾಲ್ಕು ಸಾವಿರ ರೂಪಾಯಿಗಳು ಮಾತ್ರ) ಗಳ ಮೌಲ್ಯದ ಒಂದು ಎಂ.ಐ. ಟಿವಿ, ಒಂದು ಲ್ಯಾಪ್ಟಾಪ್, ಒಂದು ಗ್ಯಾಸ್ ಸಿಲೆಂಡರ್, ಚಿನ್ನ ಮತ್ತು ಬೆಳ್ಳಿ ಆಭರಣಗಳು, ನಗದು ಹಣ ರೂ: ೧,೫೫,೦೦೦/- ಗಳನ್ನು (ಎಲ್ಲಾ ಒಟ್ಟು ರೂ: ೨,೭೪,೦೦೦/-) ವಶಪಡಿಸಿಕೊಂಡಿರುತ್ತಾರೆ.
ಆರೋಪಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವಲ್ಲಿ ಕಾಮಸಮುದ್ರಂ ಸಿಪಿಐ ಟಿ.ಟಿ.ಕೃಷ್ಣ, ಪಿಎಸ್ಐಗಳಾದ ಪಾಲಾಕ್ಷಪ್ರಭು, ಕೆ.ಮಂಜುನಾಥ, ಸಿಬ್ಬಂದಿಗಳಾದ ಕೃಷ್ಣಾ, ಜಯಸುಧ, ಲಕ್ಷö್ಮಣತೇಲಿ, ಮಂಜುನಾಥ, ಮಾರ್ಕೋಂಡ, ಶಿವಾನಂದ, ಮಣಿಕಂಠ ಅವರುಗಳು ಯಶಸ್ವಿಯಾಗಿದ್ದು, ಕಾಮಸಮುದ್ರಂ ಅಧಿಕಾರಿ, ಸಿಬ್ಬಂದಿಗಳ ಕಾರ್ಯವೈಖರಿಯನ್ನು ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿದ್ದಾರೆ.
ಚಿತ್ರ: ಕೆಜಿಎಫ್ ಪೊಲೀಸ್ ಜಿಲ್ಲೆ ಕಾಮಸಂದ್ರ ಪೊಲೀಸರು ಆರೋಪಿಯನ್ನು ಬಂಧಿಸಿದ ಕಳವು ಮಾಲು ವಶಪಡಿಸಿಕೊಂಡಿದ್ದಾರೆ.