ಸ್ಥಳೀಯ

ಕಾಯಕ ಯೋಗಿಗಳು: ಕೃತಿ ಲೋಕಾರ್ಪಣೆ

WhatsApp Group Join Now
Telegram Group Join Now

ಬೀದರ/ಭಾಲ್ಕಿ : ಹನ್ನೆರಡನೇ ಶತಮಾನದ ಬಸವಾದಿ ಶರಣರು ಕಂಡ ನವ ಸಮಾಜ ನಿರ್ಮಾಣದ ಕನಸನ್ನು ಈಡೇರಿಸುವ ನಿಟ್ಟಿನಲ್ಲಿ ಶರಣ ಸಂಗಮೇಶ ಎನ್ ಜವಾದಿ ರವರು ಪ್ರಮಾಣಿಕ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅನುಭವ ಮಂಟಪದ ಅಧ್ಯಕ್ಷರು, ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧ್ಯಕ್ಷರಾದ ಪರಮ ಪೂಜ್ಯ ಡಾ. ಬಸವಲಿಂಗ ಪಟ್ಟದ್ದೇವರು ನುಡಿದರು.

ಭಾಲ್ಕಿ ಚನ್ನಬಸವಾಶ್ರಮದಲ್ಲಿ ಪರಮ ಪೂಜ್ಯ ಲಿಂಗೈಕ್ಯ ಡಾ. ಚನ್ನಬಸವ ಪಟ್ಟದ್ದೇವರ ೧೩೫ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ದಿವ್ಯ ಸನ್ನಿಧಾನ ವಹಿಸಿ, ಕಾಯಕ ಯೋಗಿಗಳು ಕೃತಿ ಲೋಕಾರ್ಪಣೆ ಗೊಳಿಸಿ, ಮಾತನಾಡಿದ ಶ್ರೀಗಳು ಕಾಯಕ ಯೋಗಿಗಳು ಕೃತಿ ಬಿಡುಗಡೆ ಮಾಡಿರುವುದು ನಮಗೆ ಹೆಮ್ಮೆ ಎನಿಸುತ್ತದೆ. ಈ ಕೃತಿಯಲ್ಲಿ ೨೩ ಕಾಯಕ ಯೋಗಿಗಳ ಲೇಖನಗಳು ಮೂಡಿಬಂದಿವೆ.
ಕಾಯಕ ವರ್ಗದ ಶರಣರ ಸದಾಶಯ, ಅವರುಗಳು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಕ್ರಾಂತಿಕಾರಿ ಸೇವೆಗಳನ್ನು ತಿಳಿಸುವ ಮಹೋನ್ನತ ಕಾರ್ಯ ಈ ಕೃತಿಯಲ್ಲಿ ಮಾಡಿದ್ದಾರೆ. ಬಸವಾದಿ ಶರಣರಿಂದ ಹಿಡಿದು ಈಗಿನ ಮಠಾಧೀಶರ ಬಗೆಯೂ ಲೇಖನಗಳು ಬರೆದು ಅವರ ನಿಸ್ವಾರ್ಥ ಸೇವೆ ಜನಮಾನಸಕ್ಕೆ ತಿಳಿಸುವಂತ ಕೆಲಸ ಮಾಡಿರೋದು ಬಹಳ ಸಂತೋಷಕರ ವಿಷಯವಾಗಿದೆ. ಇದೇ ರೀತಿ ಶರಣ ಸಂಗಮೇಶ ಎನ್ ಜವಾದಿ ರವರ ಕೃತಿಗಳು ಇನ್ನು ಹೆಚ್ಚು ಹೆಚ್ಚು ಹೊರಬರಲಿ. ನಾಡಿಗೆ ಮತ್ತು ದೇಶಕ್ಕೆ ಕೀರ್ತಿ ತರುವಂತ ಕೆಲಸ ಮಾಡಲಿ ಎಂದು ಶುಭ ಹಾರೈಸಿದರು.

WhatsApp Group Join Now
Telegram Group Join Now

Related Posts