ರಾಜ್ಯ

ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಬ್ಯಾನರ್ ಅಳವಡಿಸಿರುವ ಕೆ ಎಚ್ ಮುನಿಯಪ್ಪ ಸಚೀವರ ಬ್ಯಾನರ್

WhatsApp Group Join Now
Telegram Group Join Now

ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಬ್ಯಾನರ್ ಅಳವಡಿಸಿರುವ ಕೆ ಎಚ್ ಮುನಿಯಪ್ಪ ಸಚೀವರ ಬ್ಯಾನರ್
ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತ ಬ್ಯಾನರ್ ಅಳವಡಿಸಿರುವ ಕೆ ಎಚ್ ಮುನಿಯಪ್ಪ ಸಚೀವರ ಬ್ಯಾನರ್

ನಗರದ ಪೂರ್ವ ವಲಯ ವಸಂತನಗರ ವ್ಯಾಪ್ತಿಗೆ ಬರುವ ಸ್ಯಾಂಕಿ ರಸ್ತೆಯ, ರೇನ್ ಟ್ರಿ ಬೊಲೆವಾರ್ಡ್ ಕಟ್ಟಡ ಹತ್ತಿರ ಅಳವಡಿಸಿಸ್ದ ಬ್ಯಾನರ್ ಅನ್ನು ತೆರವುಗೊಳಿಸಿ, ಬ್ಯಾನರ್ ಅಳವಡಿಸಿದ್ದವರಿಗೆ 50000 ರೂ. ದಂಡ ವಿಧಿಸಲಾಗಿದೆ.

ವಸಂತನಗರ ವ್ಯಾಪ್ತಿಗೆ ಬರುವ ಸ್ಯಾಂಕಿ ರಸ್ತೆಯ, ರೇನ್ ಟ್ರಿ ಬೊಲೆ ವಾರ್ಡ್ ಕಟ್ಟಡ ಹತ್ತಿರ ಶಿಡ್ಲಘಟ್ಟ ವಿಧಾನಸಭಾ ಕ್ಷೇತ್ರದ 2023ರ ಕಾಂಗ್ರೇಸ್ ಅಭ್ಯರ್ಥಿ, ಕೆ.ಪಿ.ಸಿ.ಸಿ ಕೋ-ಅರ್ಡಿನೇಟರ್ ಹಾಗೂ ಎ.ಬಿ.ಡಿ.ಗ್ರೂಪ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ರಾಜೀವ್ ಗೌಡ ರವರು ಆಹಾರ ಮತ್ತು ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಸಚಿವರಾದ ಶ್ರೀ ಕೆ.ಹೆಚ್.ಮುನಿಯಪ್ಪ ರವರ ಜನ್ಮ ದಿನಾಚರಣೆಯ ಅಂಗವಾಗಿ ಅನಧಿಕೃತವಾಗಿ ಬ್ಯಾನರ್ ಅನ್ನು ಅಳವಡಿಸಿರುವುದು ಕಂಡುಬಂದಿರುತ್ತದೆ.

ಸದರಿ ಸ್ವತ್ತಿನಲ್ಲಿ ಅನಧಿಕೃತವಾಗಿ ಬ್ಯಾನರ್ ಅಳವಡಿಸಿರುವ ಬಗ್ಗೆ ಪಾಲಿಕೆವತಿಯಿಂದ ಅಧಿಕೃತವಾಗಿ ಪರವಾನಿಗೆ/ಅನುಮತಿಯನ್ನು ಪಡೆದಿರುವುದಿಲ್ಲ. ಮೇಲ್ಕಂಡ ಉಲ್ಲೇಖಗಳ ಆಧಾರ 50000 ರೂ. ದಂಡ ವಿಧಿಸಿ ಪಾಲಿಕೆ ಮಾನ್ಯ ಮುಖ್ಯ ಆಯುಕ್ತರು ರವರ ಖಾತೆಗೆ ಪಾವತಿಸುವಂತೆ ವಸಂತನಗರದ ಸಹಾಯಕ ಕಂದಾಯ ಅಧಿಕಾರಿ ರವರು ಪತ್ರದ ಮೂಲಕ ಸೂಚಿಸಲಾಗಿದೆ ಎಂದು ತಿಳಿಸಿದರು
‍‍
ವರದಿ ಹುಲಗಪ್ಪ ಎಮ್ ಹವಾಲ್ದಾರ

WhatsApp Group Join Now
Telegram Group Join Now

Related Posts