ಸ್ಥಳೀಯ

ಶಾಸಕ ಚೆನ್ನಾರಡ್ಡಿಗೌಡ ತುನ್ನೂರು ಅವರಿಗೆ ಸಚಿವ ಸ್ಥಾನ ನೀಡಿ: ಖಾಜಾ ಮೈನುದ್ದಿನ್ ಮಿರ್ಚಿ ಒತ್ತಾಯ

WhatsApp Group Join Now
Telegram Group Join Now

ಶಾಸಕ ಚೆನ್ನಾರಡ್ಡಿಗೌಡ ತುನ್ನೂರು ಅವರಿಗೆ ಸಚಿವ ಸ್ಥಾನ ನೀಡಿ: ಖಾಜಾ ಮೈನುದ್ದಿನ್ ಮಿರ್ಚಿ ಒತ್ತಾಯ

ಯಾದಗಿರಿ: ಹಿರಿಯ ಅನುಭವಿ, ಮುತ್ಸದ್ದಿ ನಾಯಕರೂ ಆದ ಯಾದಗಿರಿ ಶಾಸಕರಾದ ಚೆನ್ನಾರೆಡ್ಡಿಗೌಡ ಪಾಟೀಲ್ ತುನ್ನೂರು ಅವರಿಗೆ ಸಚಿವ ಸ್ಥಾನ ನೀಡುವಂತೆ ಗ್ಯಾರೆಂಟಿ ಅನುಷ್ಠಾನ ಪ್ರಾಧಿಕಾರದ ವಡಗೇರಿ ತಾಲ್ಲೂಕು ಅಧ್ಯಕ್ಷ ಖಾಜಾ ಮೈನುದ್ದಿನ್ ಮಿರ್ಚಿ ನಾಯ್ಕಲ್ ಒತ್ತಾಯಿಸಿದ್ದಾರೆ.

ಈ ಕುರಿತು ಮಾದ್ಯಮ ಹೇಳಿಕೆ ನೀಡಿರುವ ಅವರು, ಚೆನ್ನಾರಡ್ಡಿಗೌಡರು ತಾಲ್ಲೂಕಿನ ನಾಯ್ಕಲ್ ಜಿಲ್ಲಾ ಪರಿಷತ್ ಕ್ಷೇತ್ರದ ಸದಸ್ಯರಾಗಿ, ವಿಧಾನ ಪರಿಷತ್ ಸದಸ್ಯರಾಗಿ ಅಪಾರ ಸೇವೆ ಮಾಡಿದ್ದು ಅಪಾರ ಅನುಭವ ಹೊಂದಿರುತ್ತಾರೆ.

ಸಮಾಜದ ವಿವಿಧ ಸ್ಥರಗಳಲ್ಲಿ ಸೇವೆ ಸಲ್ಲಿಸಿ ಸುದೀರ್ಘ ನಾಲ್ಕು ದಶಕಗಳಿಂದ ವಿವಿಧ ರಂಗಗಳಲ್ಲಿ ನಿರಂತರ ಸಮಾಜಕ್ಕೆ ಸೇವೆ ಸಲ್ಲಿಸುತ್ತಾ ಬಂದ ಜನಪರ ರಾಜಕಾರಣಿಯಾಗಿದ್ದಾರೆ.

ಶಾಸಕರಾಗಿ ಭಾರಿ ಲೀಡ್ ನಲ್ಲಿ ಗೆದ್ದು ಬಂದಿದ್ದು ಅಲ್ಲದೇ ಲೋಕಸಭಾ ಚುನಾವಣೆಯಲ್ಲಿ ಯಾದಗಿರಿ ಮತ್ತು ಚಿತ್ತಾಪೂರ ಗಳಲ್ಲಿ ಲೀಡ್ ಬರಲು ಚೆನ್ನಾರಡ್ಡಿ ಗೌಡರ ಕೊಡುಗೆ ಇದೆ. ಸುರಪುರ ಉಪಚುನಾವಣೆಯಲ್ಲಿಯೂ ಅಭ್ಯರ್ಥಿ ಗೆಲ್ಲಲು ಶ್ರಮಿಸಿದ್ದಾರೆ. ಅಲ್ಲದೇ ವಿಧಾನ ಪರಿಷತ್ ಚುನಾವಣೆಯಲ್ಲಿಯೂ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಲು ಕೊಡುಗೆ ಅಪಾರವಾಗಿದೆ.

ಇಂತಹ ಹಿನ್ನೆಲೆ ಇರುವ ಶಾಸಕರಿಗೆ ಮುಂಬರುವ ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ನೀಡುವ ಮೂಲಕ ಅವರ ಅನುಭವವನ್ನು ಜಿಲ್ಲೆಯ ಅಭಿವೃದ್ಧಿಗೆ ಹಾಗೂ ಪಕ್ಷ ಸಂಘಟನೆಗೆ ಬಳಸಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

WhatsApp Group Join Now
Telegram Group Join Now

Related Posts