ಕೊಪ್ಪಳ

ಕ್ರಿಸ ಮಸ ರಕ್ಷಣಾ ಶುಭ ವಾರ್ತೆ ಸೌಹಾರ್ದ ಯಾತ್ರೆಗೆ ಗವಿಸಿದ್ಧೇಶ್ವರ ಸ್ವಾಮಿಗಳಿಂದ ಚಾಲನೆ

WhatsApp Group Join Now
Telegram Group Join Now

ಕೊಪ್ಪಳ : ನಗರದ ಬಸವೇಶ್ವರ ವೃತ್ತದಲ್ಲಿ ಕ್ರಿಸ ಮಸ ರಕ್ಷಣಾ ಶುಭ ವಾರ್ತೆ ಸೌಹಾರ್ದ ಯಾತ್ರೆಗೆ ಗವಿ ಮಠದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ರಿಬ್ಬನ್ ಕತ್ತರಿಸುವ ಮೂಲಕ ಚಾಲನೆ ನೀಡಿ ಶುಭ ಹಾರೈಸಿದರು,

ಸೌಹಾರ್ದ ಯಾತ್ರೆ ಪ್ರರಂಭದ ಪೂರ್ವದಲ್ಲಿ ಮೌಲಾನಾ ಅಬುಲ್ ಹಸನ್ ಖಾಝಿ ಮಾತನಾಡಿ ಯಾವುದೇ ಧರ್ಮವನ್ನು ಸ್ವೀಕರಿಸುವುದು ಅವರವರ ಇಚ್ಛೆ,ಯಾರಿಂದ ಯಾರಿಗೂ ಒತ್ತಾಯ ಇರುವುದಿಲ್ಲ, ಸ್ವಾ ಇಚ್ಛೆಯಿಂದ ಯಾವುದೇ ಧರ್ಮವನ್ನು ಸ್ವೀಕರಿಸಬಹುದು, ಮಾನವ ಮಣ್ಣಿನಿಂದ ಹುಟ್ಟಿದ್ದಾನೆ, ನಾವು ಮನುಷ್ಯರಾಗಿದ್ದೇವೆ, ಮಾನವೀಯತೆ ಬರಲು ತಮ್ಮ ತಮ್ಮ ಧರ್ಮವನ್ನು ಅರಿತು ಪಾಲನೆ ಮಾಡಬೇಕು, ಎಲ್ಲಿಯವರೆಗೆ ತಮ್ಮ ಧರ್ಮವನ್ನು ಅಧ್ಯಯನ ಮಾಡುವುದಿಲ್ಲವೂ. ಅಲ್ಲಿಯವರೆಗೆ ಮಾನವೀಯತೆ ಬರುವುದಿಲ್ಲ,ಮಾನವೀಯತೆ ಏನು ಅನ್ನೋದು ತಮ್ಮಲ್ಲೇ ಸಂಶೋಧಿಸಿಕೊಳ್ಳಬೇಕು,ಧರ್ಮದ ಬೋಧನೆಗಳನ್ನು ಪಡೆದು ಪಾಲನೆ ಮಾಡಬೇಕು, ಖುರ್ ಆನ್ ನಲ್ಲಿ ಬರುತ್ತದೆ ಪಿತೂರಿ ಮಾಡುವುದು ಕೊಲೆಗಿಂತ ಹೆಚ್ಚು, ಕೊಲೆ ಮಾಡಿದರೆ ಒಂದೇ ಜೀವ ಹೋಗುತ್ತದೆ, ಆದರೆ ಪಿತೂರಿ ಮಾಡಿದರೆ ಸಾವಿರಾರು ಜೀವಗಳು ಹೋಗುತ್ತವೆ, ಅದಕ್ಕಾಗಿ ಎಲ್ಲರೂ ಆಯಾ ಧರ್ಮದ ಬೋಧನೆ ಪಡೆಯುವ ಮೂಲಕ ಕೊಪ್ಪಳ ಮತ್ತು ದೇಶದಲ್ಲಿ ಪ್ರೀತಿ ಸೌಹಾರ್ದತೆಯೆ ನಮ್ಮ ನಿಯಮಗಳನ್ನಾಗಿ ಮಾಡಿಕೊಂಡು ಪಾಲನೆ ಮಾಡೋಣ ಎಂದು ಶಾಂತಿಯ ಸಂದೇಶ ನೀಡಿದರು.
ಪ್ರಕ್ರಿಯೆ ಸಂಸ್ಥೆಯ ಮುಖ್ಯಸ್ಥ ಕರ್ನಾಟಕ ಹೈಕೋರ್ಟ್ ನ್ಯಾಯವಾದಿ ಮಂಜುನಾಥ್ ಬಾಗೇಪಲ್ಲಿ ಮಾತನಾಡಿ ನಮ್ಮ ರಾಜ್ಯ ಶರಣರ ಸೂಫಿ ಸಂತರ ನಾಡು ಅಗಿದೆ, ದಯೆ ಇಲ್ಲದ ಧರ್ಮ ಯಾವುದಯ್ಯ ಎಂದು ಈ ಶರಣರ ವಚನಗಳನ್ನು ಸ್ಮರಿಸುತ್ತಾ, ಕೆಲವು ಹಿತಾಸಕ್ತಿಗಳು ಬಹುಜನರ ಸಾಮಾಜಿಕ ಸ್ವಾಸ್ಥ್ಯ ಹಾಳುಮಾಡುತ್ತಿದ್ದು,ಜನರು ಎಚ್ಚರ ವಹಿಸಬೇಕು,ಕ್ರಿಸಮಸ ಶಾಂತಿ ಸೌಹಾರ್ದ ಯಾತ್ರೆಗೆ ಶುಭ ಕೋರಿದರು.
ನಗರ ಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಮಾತನಾಡಿ ಕ್ರಿಸಮಸ ಹಬ್ಬದ ಶುಭ ಸಂದರ್ಭದಲ್ಲಿ ಸಂವಿಧಾನದ ಅಡಿಯಲ್ಲಿ ಎಲ್ಲಾ. ಧರ್ಮಗಳು ಕೂಡಿ ಆಚರಣೆಗೆ ಮಹತ್ವ ಬಂದಿದೆ, ಕಲಬುರ್ಗಿಯಲ್ಲಿ ಶರಣಬಸವೇಶ್ವರ ಹಾಗೂ ಹಝ್ರತ್ ಖಾಜಾ ಬಂದಾ ನವಾಝ್ ಇದ್ದರೆ, ನಮ್ಮ ಕೊಪ್ಪಳದಲ್ಲಿ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಹಾಗೂ ಹಝ್ರತ್ ಮರ್ದಾನ್ – ಗೈಬ್ ಸೂಫಿ ಸಂತರು ಜನರು ಸಾಮರಸ್ಯದಿಂದ ಬಾಳಲು ಕಲಿಸಿದ್ದಾರೆ, ಹೀಗಾಗಿ ನಮ್ಮಲ್ಲಿ ಯಾವುದೇ ಕಲಹಗಳಿಲ್ಲ, ನಾವು ಬಾಲ್ಯದಿಂದ ಕ್ರಿಶ್ಚಿಯನ್ ಹಿಂದೂ ಮುಸ್ಲಿಮರೆಲ್ಲರೂ ಕೂಡಿ ಎಲ್ಲಾ ಹಬ್ಬಗಳನ್ನು ಸಂಭ್ರಮದಿಂದ ಆಚರಿಸುತ್ತಾ ಬಂದಿದ್ದೇವೆ,ಸೌಹಾರ್ದತೆಯ ಸಂಪ್ರದಾಯಗಳನ್ನು ನಾವೆಲ್ಲರೂ ಮುಂದುವರಿಸೋಣ ಎಂದು ಹೇಳಿದರು.
ಭ್ರಾತೃತ್ವ ಸಮಿತಿಯ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್ ಮಾತನಾಡಿ ಹೈ ಕೋರ್ಟ್ ನ್ಯಾಯವಾದಿ ಮಂಜುನಾಥ್ ಬಾಗೇಪಲ್ಲಿ ಸ್ಥಾಪಿಸಿದ ಭ್ರಾತೃತ್ವ ಸಮಿತಿಯ ಅಡಿಯಲ್ಲಿ ಆಯಾ ಧರ್ಮಗಳ ಹಬ್ಬಗಳನ್ನು ಎಲ್ಲಾ ಜನಾಂಗದವರು ಸೇರಿ ಆಚರಿಸುವ ಸೌಹಾರ್ದತೆ ಪರಿಕಲ್ಪನೆಯಿಂದ ಪ್ರಾರಂಭವಾಗಿದ್ದು, ಕಳೆದ ವರ್ಷ ಕ್ರಿಸ್ ಮಸ್ ಹಬ್ಬ, ರಂಝಾನ್ ಇಫ್ತಾರ್ ಕೂಟದಲ್ಲಿ ಎಲ್ಲಾ ಜನಾಂಗದವರು ಸೇರಿ ಆಚರಣೆ ಮಾಡಿದೆವು,ಎರಡು ಮೂರು ದಶಕಗಳಿಂದ ಯಾವುದೇ ಧರ್ಮದ ಹಬ್ಬಗಳ ಸಂದರ್ಭದಲ್ಲಿ ಆತಂಕ ಕೊಳಗಾಗುತ್ತಿದ್ದಾರೆ, ಯಾವುದೇ ಜನಾಂಗದ ಹಬ್ಬಗಳು ಇರಲಿ ಎಲ್ಲರೂ ಕೂಡಿ ಸಂಭ್ರಮದಿಂದ ಆಚರಿಸಲು ಸಂವಿಧಾನ ಹಕ್ಕನ್ನು ನೀಡಿದೆ,ಸಂವಿಧಾನದ ಆಶಯದಂತೆ ಹಿಂದೂ ಮುಸ್ಲಿಮ್ ಕ್ರಿಶ್ಚಿಯನ್ ಎಲ್ಲರೂ ಒಂದಾಗಿ, ಎಲ್ಲರ ಹಬ್ಬಗಳಲ್ಲಿ ಪರಸ್ಪರ ಪಾಲ್ಗೊಳ್ಳುವ ಮೂಲಕ ಸಂಭ್ರಮದಿಂದ ಆಚರಸಿ ರಾಜ್ಯ, ರಾಷ್ಟ್ರಕ್ಕೆ ಮಾದರಿಯಾಗೋಣ ಎಂದು ಕರೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪಾಸ್ಟರ್ಸ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಅಪ್ಪಣ್ಣವರ್ ಮಾತನಾಡಿ ಯೇಸು ಕ್ರಿಸ್ತ ಈ ಪದದ ಅರ್ಥ ಯೇಸು ಅಂದರೆ ತನ್ನ ಜನರನ್ನು ಅವರ ಪಾಪದಿಂದ ಬಿಡಿಸಿ ರಕ್ಷಿಸುವ ದೇವರು, ಕ್ರಿಸ್ತನೆಂದರೆ ದೇವರಿಂದ ಅಭಿಷೇಕಿಸಲ್ಪಟ್ಟವರು ಎಂಬುದಾಗಿ ಈ ಹೆಸರಿನ ಅರ್ಥ, ಯೇಸು ಸ್ವಾಮಿಯವರು ಈ ಭೂಮಿಗೆ ಮಾನವ ರೂಪವನ್ನು ತಾಳಿ ಜನಿಸಿ ಬಂದರು, ಅವರು ಬೆಟ್ಟದ ಪ್ರಸಂಗಗಳಲ್ಲಿ ಮಾತಾಡುತ್ತಾ ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸು ಎಂಬುದಾಗಿ ಹೇಳಿದರು, ಮತ್ತೊಂದು ಪ್ರವಚನದಲ್ಲಿ ಸಮಾಧಾನ ಪಡಿಸುವವರು ಧನ್ಯರು, ಅವರು ದೇವರ ಮಕ್ಕಳು ಅನಿಸಿಕೊಳ್ಳುವರು, ಸ್ವಾಮಿಯವರು ಪ್ರೀತಿ ಮತ್ತು ಸಮಾಧಾನವನ್ನು ಸಾರುವುದಕ್ಕಾಗಿ ಈ ಭೂಮಿಗೆ ಬಂದವರು, ಹಾಗಾಗಿ ಇವತ್ತು ಕೊಪ್ಪಳದಲ್ಲಿ ಇರುವಂತ ನಾವುಗಳು ಕೂಡ ಒಬ್ಬರನ್ನೊಬ್ಬರು ಪ್ರೀತಿಸುವವರಾಗಿ, ಒಬ್ಬರೊಂದಿಗೆ ಇನ್ನೊಬ್ಬರನ್ನು ಸಮಾಧಾನದಿಂದ ನಡೆದುಕೊಂಡು ಹೋಗುವುದಕ್ಕಾಗಿ ಈ ಒಂದು ರಕ್ಷಣಾ ಶುಭ ವಾರ್ತೆ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬಂಡಾಯ ಸಾಹಿತಿ ಅಲ್ಲಮ ಪ್ರಭು ಬೆಟ್ಟದೂರು ಮಾತನಾಡಿ ಸಂವಿಧಾನದ ಅಡಿಯಲ್ಲಿ ಎಲ್ಲಾ ಧರ್ಮಗಳ ಪ್ರಚಾರ ಮಾಡುವುದು, ಪ್ರತಿಯೊಬ್ಬರಿಗೂ ಕೊಡಲ್ಪಟ್ಟಂತಹ ಹಕ್ಕಾಗಿದೆ, ನಾನು ಕೂಡ ಸತ್ಯವೇದವನ್ನು ಓದುವುದಕ್ಕೆ ಪ್ರಾರಂಭಿಸಿದ್ದೇನೆ, ಪ್ರಾರಂಭದಲ್ಲಿ ದೇವರ ಸೃಷ್ಟಿಯನ್ನು ಮತ್ತು ಸೃಷ್ಟಿಯ ಕಾರ್ಯಗಳು ನಾವು ನೋಡುತ್ತೇವೆ, ಹಾಗೆ ಹೊಸ ಒಡಂಬಡಿಕೆ ಎಂಬ ಭಾಗದಲ್ಲಿ ಯೇಸು ಸ್ವಾಮಿಯವರು ಜನಿಸಿರುವಂತ ಚರಿತ್ರೆಯನ್ನು ನೋಡುತ್ತೇವೆ, ಹಾಗೆ ಈ ಒಂದು ರಕ್ಷಣಾ ಶುಭ ವಾರ್ತಾ ಯಾತ್ರೆಯು ಎಲ್ಲಾ ಸಮುದಾಯದ ಆನೇಕ ಜನಗಳಲ್ಲಿ ಧರ್ಮ ಧರ್ಮಗಳಲ್ಲಿ ಭ್ರಾತೃತ್ವದ ಭಾವನೆಯನ್ನು ಮೂಡಿಸುವಂತಹ ಯಾತ್ರೆಯಾಗಿದೆ ಎಂದು ಶ್ಲಾಘಿಸಿದರು.
ಭೀಮ ಆರ್ಮಿ ಕರ್ನಾಟಕ ಏಕತಾ ಮಿಷನ್ ಜಿಲ್ಲಾ ಅಧ್ಯಕ್ಷ ನಿಂಗಪ್ಪ ಜಿ,ಎಸ್,ಬೆಣಕಲ್ಲ ಮಾತನಾಡಿ ಏಸುಕ್ರಿಸ್ತ ಬುದ್ಧ ಬಸವ ಅಂಬೇಡ್ಕರ್ ಮುಂತಾದ ಸತ್ಯ ಹೇಳುವವರನ್ನು ಸಮಾಜ ಮುಚ್ಚಿಟ್ಟಿದೆ, ಅವರ ವಿಚಾರಗಳನ್ನು ಸಮಾಜಕ್ಕೆ ತಿಳಿಸುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಹೇಳಿದರು.
ಕ್ರಿಸಮಸ್ ಹಬ್ಬದ ಅಂಗವಾಗಿ ಹಿಂದೂ ಮುಸ್ಲಿಮ್ ಕ್ರಿಶ್ಚಿಯನ್ ಒಳಗೊಂಡ ರಕ್ಷಣಾ ಶುಭ ವಾರ್ತೆ ಸೌಹಾರ್ದ ಯಾತ್ರೆಯಲ್ಲಿ ಪಾಸ್ಟರ್ಸ ಅಸೋಸಿಯೇಷನ್ ಜಿಲ್ಲಾ ಉಪಾಧ್ಯಕ್ಷ ಫಾದರ್ ತಿಪ್ಪೇಶ್ ನಾಯಕ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಾದರ್ ಡಿ,ಆರ್,ಪೀಟರ್,ಜಿಲ್ಲಾ ಖಜಾಂಚಿ ಫಾದರ್ ಎಮ್, ಡೇವಿಡ್, ಸಹ ಖಜಾಂಚಿ ಫಾದರ್ ಪ್ರಸಾದ್, ಫಾದರ್ ಸುಧಾಕರ್, ಫಾದರ್ ಡಿ,ರಾಜು, ಫಾದರ್ ಅಬ್ರಾಹಂ, ಫಾಸ್ಟರ್ ತಿಮೊತಿ, ಪಾಸ್ಟರ ಯಾಕೂಬ್, ಜಿಲ್ಲಾ ಮಹಿಳಾ ಅಧ್ಯಕ್ಷೆ ಶ್ರೀಮತಿ ರತ್ನ ಎಸ್,ಐ, ಮಹಿಳಾ ಪ್ರತಿನಿಧಿ ರೆಶ್ಮಾ, ಆಶಾ,ಗೀತಾ,ಅನು,ಕುಮಾರ್, ಬೀರಪ್ಪ, ಪ್ರವೀಣ್, ಎಸ್ಸಿ ಎಸ್ಟಿ ಅಲೆಮಾರಿ ಬುಡಕಟ್ಟು ಮಹಾಸಭಾ ಜಿಲ್ಲಾಧ್ಯಕ್ಷ ಸಂಜಯ್ ದಾಸ್ ಕೌಜಗೇರಿ, ರಾಮಲಿಂಗಯ್ಯ ಶಾಸ್ತ್ರಿ ಮಠ, ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ ತುಕಾರಾಮ್ ಬಿ,ಪಾತ್ರೋಟಿ, ತಾಲೂಕಾ ಅಧ್ಯಕ್ಷ ನೂರ ಸಾಬ್ ಹೊಸಮನಿ,ಉಪಾಧ್ಯಕ್ಷ ಮೌಲಾ ಹುಸೇನ್ ಹಣಗಿ, ಸಹ ಖಜಾಂಚಿ ರಾಜಾ ಸಾಬ್ ತಹಶೀಲ್ದಾರ್, ಜಾಫರ್ ಕುರಿ, ರಾಜಪ್ಪ ಚೌಹಾಣ್,ಅಖಿಲ ಭಾರತ ಕ್ರೈಸ್ತ ಮಹಾಸಭಾದ ತಾಲೂಕಾ ಅಧ್ಯಕ್ಷ ಪ್ರಕಾಶ್ ದೇವರ ಮನಿ,ಮಖಬೂಲ್ ರಾಯಚೂರು, ಶಿವಪ್ಪ ಹಡಪದ್, ಮುದುಕಪ್ಪ ಹೊಸಮನಿ ಮುಂತಾದವರು ಭಾಗವಹಿಸಿದ್ದರು.

WhatsApp Group Join Now
Telegram Group Join Now

Related Posts