ಯಾದಗಿರಿ : ಜುಲೈ 24, : ಕುಡಿಯುವ ನೀರಿನ ಸದ್ಬಳಕೆ ಮಾಡುವುದು ಮಾತ್ರವಲ್ಲದೆ, ಕಲಿಸಿದ್ದ ನೀರನ್ನು ಸೇವಿಸುವುದರಿಂದ ಸಾರ್ವಜನಿಕರಿಗೆ ನಾನಾ ಬಗೆಯ ರೋಗಗಳಿಗೆ ಕಾರಣವಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗರಿಮಾ ಪನ್ವಾರ್ ಅವರು ಹೇಳಿದರು.
ಅನಿರ್ಬಂಧಿತ ಅನುದಾನದ ಮಾಹಿತಿ:https://rzp.io/l/0Z3j7YdsS
ಜಿಲ್ಲಾ ಪಂಚಾಯತ್ ಕಚೇರಿಯ ಮುಂಭಾಗದಲ್ಲಿ ಜಲಜೀವನ ಮಿಷನ್ ಯೋಜನೆ ಕುರಿತು ಯಾದಗಿರಿ ಜಿಲ್ಲೆಯಲ್ಲಿ ಆಟೋ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಳೆಗಾಲದಲ್ಲಿ ನೀರು ಕಲುಷಿತಗೊಳ್ಳುವ ಸಾಧ್ಯತೆ ಜಾಸ್ತಿ ಇರುವುದರಿಂದ, ನೀವು ಕುಡಿಯುವ ನೀರಿನ ಬಗ್ಗೆ ಜಾಗರೂಕರಾಗಿರಿ. ಶುದ್ಧ, ಸುರಕ್ಷಿತ ನೀರನ್ನು ಮಾತ್ರ ಕುಡಿಯಿರಿ. ನಿಮ್ಮ ಆರೋಗ್ಯದ ಕಾಳಜಿ ವಹಿಸಿರಿ ಎಂದು ಅವರು ತಿಳಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ ಆನಂದ ಅವರು ಮಾತನಾಡಿ ಗ್ರಾಮ ಪಂಚಾಯಿತಿಗಳಿಗೆ ನೀಡಿದ ಎಫ್ ಟಿ ಕೆ ಕಿಟ್ ನ ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡುವಂತೆ ಹಾಗೂ ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಸಲಹೆ ನೀಡಿದರು.
ಅನಿರ್ಬಂಧಿತ ಅನುದಾನದ ಕುರಿತು ಈ ಲಿಂಕನ್ನು ಓಪನ್ ಮಾಡಿ:https://rzp.io/l/0Z3j7YdsS
ಈ ಸಂದರ್ಭದಲ್ಲಿ ಜೆಜೆಎಮ್ ಮಿಷನ್ ಜಿಲ್ಲಾ ಯೋಜನಾ ವ್ಯವಸ್ಥಾಪಕ ರಾಜಶೇಖರ, ವಿಶ್ವನಾಥ , ಡಿ ಟಿ ಎಸ್ ಯು ಸಿಬ್ಬಂದಿಗಳಾದ ಆಂಜನೇಯ ನಾಯಕ, ದರ್ಶನ ಬಿರಾದರ್, ಕಾಶೀನಾಥ ಕಲಾಲ್, ವಿನ್ ಸೊಸೈಟಿ ಸಿಬ್ಬಂದಿಗಳಾದ ಸಿಬ್ಬಂದಿಗಳಾದ ಮಂಜುನಾಥ, ಶ್ರೀಶೈಲ, ಪಾಂಡುರAಗ, ಭೀಮವ್ವ, ಹಣಮಂತ ಜಾಧವ್ ಸೇರಿದಂತೆ ಜಿಲ್ಲಾ ಪಂಚಾಯತಿಯ ಅಧಿಕಾರಿಗಳು, ಗ್ರಾಮೀಣ ಮತ್ತು ಕುಡಿಯುವ ನೀರಿನ ಘಟಕ ಸಿಬ್ಬಂದಿಗಳು ಉಪಸ್ಥಿತರಿದ್ದರು.