ಸ್ಥಳೀಯ

ಶಿಕ್ಷಣ ಪ್ರೇಮಿ, ಬಡವರ ಬಂಧು ಮಹಾದೇವ ಸಾಹುಕಾರ್ ಭೈರಗೊಂಡ

WhatsApp Group Join Now
Telegram Group Join Now

ಶ್ರೀ ಭೈರನಾಥ್ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರು ಹಾಗೂ ಶಿಕ್ಷಣ ಪ್ರೇಮಿಗಳಾದ ಬಡವರ ಬಂಧು ಭೀಮಾ ತೀರದ ಜನರ ಅಭಿವೃದ್ಧಿ ಹರಿಕಾರ ಜನ ಮೆಚ್ಚಿದ ನಾಯಕ ಶ್ರೀ ಮಹಾದೇವ ಸಾಹುಕಾರ್ ಬೈರಗೊಂಡ ಅವರು

ಶಹಾಪುರ ತಾಲೂಕಿನ ದಂಡಿನ್ ಮೋಟರ್ಸ್ ನ‌ ಕಚೇರಿಯಲ್ಲಿ ಹುಣಸಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಚಂದ್ರಶೇಖರ್ ಎನ್ ದಂಡಿನ್ ಸಾಹುಕಾರ್ ಅವರಿಗೆ ಭೇಟಿ ಮಾಡಿದರು ಇದೇ ಸಂದರ್ಭದಲ್ಲಿ ಮಾತನಾಡಿದ ಸಗರನಾಡಿನ ಹುಣಸಿಗಿ ತಾಲೂಕಿನ ದಂಡಿನ್ ಸಾಹುಕಾರ್ ಅವರ ಮನೆತನ ಕೊಡುವ ದಾನಿಗಳು ಅನೇಕ ಯುವಕರಿಗೆ ಉದ್ಯೋಗ ಕಲ್ಪಿಸಿಕೊಟ್ಟು ಸಾಮಾಜಿಕವಾಗಿ ಆರ್ಥಿಕವಾಗಿ ಯಾವಾಗಲೂ ಜನಸಾಮಾನ್ಯರು ದುಡಿಯೋ ಕೈಗೆ ಕೆಲಸ ಇರಬೇಕು ಕಾಯಕವೇ ಕೈಲಾಸದೊಂದಿಗೆ ಜನಸಾಮಾನ್ಯರೊಂದಿಗೆ ಒಡನಾಟದೊಂದಿಗೆ ಸಮಾಜದ ಆಗುಹೋಗಳಿಗೆ ಯಾವಾಗಲೂ ಏನೇ ಸಮಸ್ಯೆ ಇರಲಿ ಬಗೆಹರಿಸುವಂತಹ ಮನೆತನ ಇಂಥ ಮನೆತನದ ಬಗ್ಗೆ ದೂರದಿಂದ ಕೇಳಿದ್ದೆ ಅದಕ್ಕಾಗಿ ‌ ಖುದ್ದಾಗಿ ಭೇಟಿ ಮಾಡಲು ಬಂದಿದ್ದೇನೆ ನಿಮ್ಮೊಂದಿಗೆ ನಮ್ಮ ಸಹಕಾರ ಯಾವಾಗಲೂ ಇರುತ್ತದೆ ಜನಸಾಮಾನ್ಯರಿಗೆ ಆದರ್ಶದ ವಿಚಾರಗಳು ತಮ್ಮಿಂದ ತಿಳಿದು ಬಹಳ ಖುಷಿಯಾಯಿತು ‌ಎಂದು ಚರ್ಚಿಸಿದರು

_ಇದೇ ಸಂದರ್ಭದಲ್ಲಿ ದಂಡಿನ್ ಸಾಹುಕಾರ್ ಅಭಿಮಾನಿಗಳು ಹಾಗೂ ಶ್ರೀ ಮಾಹಾದೇವ ಸಾಹುಕಾರ್ ಬೈರಗೊಂಡ ಅಭಿಮಾನಿಗಳು*

ಇವರಿಬ್ಬರಿಗೂ ಸಹಿತ ಕಚೇರಿಯಲ್ಲಿ ಅಭಿಮಾನಿಗಳು ಸೇರಿಕೊಂಡು *ಸನ್ಮಾನಿಸಿ ಗೌರವಿಸಿದರು ಇದೇ ವೇಳೆ ವೀರಶೈವ ಲಿಂಗಾಯತ ಮಾಹಾ ವೇದಿಕೆಯ ರಾಜ್ಯ ಸಂಘಟನಾ ಕಾರ್ಯದರ್ಶಿ ಶ್ರೀ ಚಂದ್ರಶೇಖರ್ ಆರ್ ಡೋಣ್ಣುರ, ಮಾಹಿತಿ ಹಕ್ಕು ವೇದಿಕೆ ಯಾದಗಿರಿ ಜಿಲ್ಲಾಧ್ಯಕ್ಷರಾದ ಶ್ರೀ ದೇವಿಂದ್ರಪ್ಪ ಗೌಡ ಪೊಲೀಸ ಪಾಟೀಲ ಮಾಲಗತ್ತಿ , ಲಿಂಗಾಯತ ಪಂಚಮಸಾಲಿ ದೀಕ್ಷೆ ಸಮಾಜದ ಯಾದಗಿರಿ ಜಿಲ್ಲಾಧ್ಯಕ್ಷರಾದ ಶ್ರೀ ಚನ್ನಬಸವ ವಾಲಿ, ಚೇತನ್ ದಂಡಿನ್ ಸಾಹುಕಾರ್ ಮತ್ತು ಕೃಷ್ಣ ಬೀದರ್ , ಶಿವಲಿಂಗ ಪಟ್ಟಣಶೆಟ್ಟಿ , ವಿರುಪಾಕ್ಷ ಶೆಟ್ಟಿ , ಮಹೇಶ್ ಬೇವಿನಾಳ ಮಂಡಗಳ್ಳಿ, ಶಂಕರ್ ಗೌಡ ಬಸವರಾಜ್ , ವಿರುಪಾಕ್ಷ ಸಿಂಪಿ , ಹಾಗೂ ಹೀಗೆ ಅನೇಕ ಜನರು ಉಪಸ್ಥಿತರಿದ್ದರು

WhatsApp Group Join Now
Telegram Group Join Now

Related Posts