ರಾಜ್ಯ

ಹಿಂದೂ ಹೊಸವರ್ಷದ ನಿಮಿತ್ತ ದೇಶದಾದ್ಯಂತ 350 ಕ್ಕೂ ಹೆಚ್ಚು ಕಡೆ ಸಾಮೂಹಿಕ ಬ್ರಹ್ಮಧ್ವಜ ಪೂಜೆ, ದೇವಸ್ಥಾನ ಸ್ವಚ್ಛತೆ ಹಾಗೂ ‘ಸುರಾಜ್ಯ ಸ್ಥಾಪನೆ’ಯ ಪ್ರತಿಜ್ಞಾವಿಧಿ ಸಂಪನ್ನ !

WhatsApp Group Join Now
Telegram Group Join Now

‘ಸ್ವರಾಜ್ಯದಿಂದ ಸುರಾಜ್ಯ’ವಾಗಬೇಕಿದೆ ! ಪ್ರಭು ಶ್ರೀರಾಮನು ಎಲ್ಲ ಜನರ ಕಲ್ಯಾಣವಾಗುವ ರಾಮರಾಜ್ಯದ ಸ್ಥಾಪನೆ ಮಾಡಿದ್ದರು. ಅದರಂತೆ ಆದರ್ಶ ರಾಜ್ಯದ ಸ್ಥಾಪನೆಗಾಗಿ ನಾವೆಲ್ಲರೂ ನಮ್ಮ ವೈಯಕ್ತಿಕ ಮತ್ತು ಸಾಮಾಜಿಕ ಜೀವನದಲ್ಲಿ ರಾಮರಾಜ್ಯ ತರಲು ನಿರಂತರ ಪ್ರಯತ್ನ ಮಾಡಬೇಕಾಗಿದೆ. ವೈಯಕ್ತಿಕ ಜೀವನದಲ್ಲಿ ಸಾಧನೆ ಮಾಡಿ, ನೈತಿಕ ಹಾಗೂ ಸದಾಚಾರಿ ಜೀವನ ನಡೆಸುವ ಸಂಕಲ್ಪ ಮಾಡಬೇಕಿದೆ. ಸಾಮಾಜಿಕ ಜೀವನದಲ್ಲಿ ಭ್ರಷ್ಟಾಚಾರ, ಅನೈತಿಕತೆ ಮತ್ತು ಅರಾಜಕತೆಯನ್ನು ವಿರೋಧಿಸಲು ಕೃತಿಶೀಲರಾಗಬೇಕಿದೆ. ಸಾತ್ತ್ವಿಕ ಸಮಾಜದ ನೇತೃತ್ವದಲ್ಲೇ ಅಧ್ಯಾತ್ಮದ ಆಧಾರಿತ ರಾ‌‌ಷ್ಟ್ರರಚನೆ, ಅರ್ಥಾತ್ ರಾಮರಾಜ್ಯ ಸಂಭವವಾಗಲಿದೆ; ಆದ್ದರಿಂದ ಈ ಯುಗಾದಿಯಿಂದ ವೈಯಕ್ತಿಕ ಮತ್ತು ಸಾಮಾಜಿಕ ಜೀವನದಲ್ಲಿ ರಾಮರಾಜ್ಯ ತರಲು ಸಂಕಲ್ಪ ಮಾಡೋಣ ಎಂದರು.

WhatsApp Group Join Now
Telegram Group Join Now

Related Posts