ಅಪರಾಧ

ಮೆಥೋಡಿಸ್ಟ್ ಚರ್ಚಿನ ಭೂಗಳ್ಳರು-01 ದೇವರನ್ನು ವಂಚಿಸುವ ವಂಚಕರ ಕಥೆ

WhatsApp Group Join Now
Telegram Group Join Now

ಭೂಗಳ್ಳರ ಗುಂಪೊAದು ದೇವರ ಹೆಸರನ್ನು ಬಳಸಿಕೊಂಡು ಶಾಂತಿ ಸದನ ಎನ್ನುವ ಹೆಸರಿಗೆ ಸೇರಿದ ಕಲಬುರಗಿಯ ಹೃದಯ ಭಾಗದಲ್ಲಿರುವ ದದ್ದಾಪೂರ ಪ್ರದೇಶದ 6.5 ಗುಂಟೆ ಜಮೀನನ್ನು ನಕಲಿ ದಾಖಲೆ ಸೃಷ್ಟಿಸಿ ವ್ಯಕ್ತಿಯೊಬ್ಬನಿಂದ ಇಪ್ಪತ್ತು ಕೋಟಿ ರೂಪಾಯಿ ವಂಚಿಸಿದ ಪ್ರಕರಣ ಇದೀಗ ಬೆಳಕಿಗೆ ಬಂದಿದೆ. ಇಪ್ಪತ್ತು ಕೋಟಿ ರುಪಾಯಿಯನ್ನು ಇಲ್ಲಿ ಸಲೀಸಾಗಿ ವಂಚಿಸಲಾಗಿದೆ. ರಿಯಲ್ ಎಸ್ಟೇಟ್ ದಂದೆಯೊಳಗಿನ ಲಾಭದ ಆಸೆ ತೋರಿಸಿ ಕಲಬುರಗಿಯ ಕಪನೂರು ನಿವಾಸಿಯೊಬ್ಬರನ್ನು ದಾರುಣವಾಗಿ ವಂಚಿಸಲಾಗಿದೆ. ಪ್ರಕರಣ ಆಸಕ್ತಿಕರವಾಗಿದೆ. ಈ ಪ್ರಕರಣದಲ್ಲಿ ಅಮರ್, ಅಕ್ಬರ್, ಆಂಥೋಣಿ ಮೂರು ಜನರು ಸೇರಿರುವುದು ವಿಚಿತ್ರವಾಗಿದೆ. ಅಮರ್ ಎನ್ನುವ ಅಂಬ್ರಿಶ್ ಎನ್ನುವ ಲಿಂಗಾಯಿತ ಸಮುದಾಯದ ವ್ಯಕ್ತಿಯನ್ನು ನಜೀರ್ ಅಹ್ಮದ್,. ಮಶಾಕ್ ಪಟೇಲ್ ಎನ್ನುವ ಅಕ್ಬರರು ಸೇರಿಕೊಂಡು ಮೆಥೋಡಿಸ್ಟ್ ಚರ್ಚ ಆಫ್ ಇಂಡಿಯಾ ಎನ್ನುವ ಫೇಕ್ ಸಂಸ್ಥೆಯ ಹೆಸರಿನ ತಂಡದ ಆಂಥೋಣಿಗಳು ಕೂಡಿ ವಂಚಿಸಿದ ಪ್ರಕರಣ ಇದಾಗಿದೆ.
ವಿಷಯಕ್ಕೆ ಬರುವುದಾದರೆ ಕಲಬುರಗಿಯ ಹೃದಯಭಾಗವಾದ ದದ್ದಾಪೂರ ಪ್ರದೇಶದಲ್ಲಿ ಶಾಂತಿ ಸದನ ಎನ್ನುವ ಹೆಸರಿನಲ್ಲಿ 6.5 ಗುಂಟೆ ಜಮೀನಿದೆ. ಇದು ಸದರಿ ಕಲಬುರಗಿ ನಗರದ ಮಧ್ಯಭಾಗದಲ್ಲಿರುವುದರಿಂದ ನೂರಾರು ಕೋಟಿ ಬೆಲೆ ಬಾಳುವ ಆಸ್ತಿಯಾಗಿದೆ. ಇದು ಕ್ರೆöÊಸ್ತ ಮೆಷಿನರಿಗೆ ಸಂಬAಧಿಸಿದ ಜಮೀನಾಗಿದ್ದು ಸದರಿ ಜಮೀನು ಶಾಂತಿ ಸದನ ಎನ್ನುವ ಹೆಸರಿನಲ್ಲಿದೆ. 6.5 ಗುಂಟೆಯ ಅಳತೆಯಲ್ಲಿರುವ ಈ ಜಾಗ ರಿಯಲ್ ಎಸ್ಟೇಟಿಗೆ ಬಳಸಿಕೊಂಡರೆ ನೂರಾರು ಕೋಟಿ ರೂಪಾಯಿಗಳನ್ನು ರಾತ್ರೋರಾತ್ರಿ ದುಡಿಯಬಹುದು. ಈ ಸಂಗತಿ ಆ ಜಮೀನಿನ ಮೇಲೆ ಕಣ್ಣಿಟ್ಟಿರುವ ಕೆಲವು ರಿಯಲ್ ಎಸ್ಟೇಟ್ ಬ್ರೋಕರ್‌ಗಳಿಗೆ ಚೆನ್ನಾಗಿ ಗೊತ್ತು. ಅದನ್ನು ಮಾರುವುದು ಹೇಗೆ? ಆ ಜಮೀನು ಯಾರ ಹೆಸರಿನಲ್ಲಿದೆ? ಹೌದು, ಜಮೀನು ಪಹಣಿ ಪ್ರಕಾರ ಶಾಂತಿ ಸದನ ಎನ್ನುವ ಹೆಸರಿನಲ್ಲಿದೆ. ಈ ಶಾಂತಿ ಸದನದ ಮುಖ್ಯಸ್ಥರು ಯಾರು ಎಂದು ಯೋಚಿಸಿದಾಗ ಖದೀಮರಿಗೆ ಕೆಲವು ಖದೀಮರ ಸುಳಿವು ಸಿಕ್ಕಿದೆ. ಸರಿ, ಖದೀಮರ ಸುಳಿವು ಸಿಕ್ಕಿದೆ. ಬಲಿ ಕೊಡುವ ಮಿಕವನ್ನು ಹುಡುಕುವುದು ಹೇಗೆ ಎಂದು ಯೋಚಿಸಿದಾಗ ಕೊನೆಗೆ ಬಕರಾವೊಂದು ಅವರಿಗೆ ದೊರೆತಿದೆ. ಇದಾದ ಮೇಲೆ ಈ ಸಂಚುಕೋರರ ತಂಡ ಒಂದು ಅದ್ಬುತ್ವಾದ ಯೋಜನೆಯೊಂದನ್ನು ರೂಪಿಸಿದೆ. ಆ ವಿವರಗಳು ವೆರಿ ಇಂಟರೆಸ್ಟಿAಗ್ ಆಗಿವೆ. ಈ ಬರಹದಲ್ಲಿ ನಿಮಗೆ ಮೊದಲು ಪರಿಚಯವಾಗುವ ಹೆಸರು ಅಂಬ್ರೀಶ್ ಎನ್ನುವವನದು. ಯಾರೀ ಅಂಬ್ರೀಶ್?
ಕಲಬುರಗಿಯ ಕಪನೂರು ಸೆಕೆಂಡ್ ಫೇಸ್ ಇಂಡಸ್ಟಿçÃಯಲ್ ಏರಿಯಾದ ನಿವಾಸಿ ಈ ಅಂಬ್ರೀಶ್, ತಂದೆಯ ಹೆಸರು ಸಿದ್ದರಾಮಪ್ಪ ಬಿರಬಿಟ್ಟೆ. ಇವರದು ಉದ್ದಿಮೆಗಳ ಕುಟುಂಬ. ಲಿಂಗಾಯತ ವರ್ಗಕ್ಕೆ ಸೇರಿದ ಈ ಕುಟುಂಬ ಪಾರಂಪರಿಕವಾಗಿ ಬಿಜಿನೆಸ್ ಮಾಡಿಕೊಂಡು ಬಂದಿದೆ. ಈ ಮೊದಲು ಸಿದ್ದರಾಮಪ್ಪ ಬಿರಬಿಟ್ಟೆ ‘ಬಿರಬಿಟ್ಟೆ ದಾಲ್ ಇಂಡಸ್ಟಿçÃಸ್’ ಎನ್ನುವ ವ್ಯಾಪಾರ ಮಾಡುತ್ತಿದ್ದರು. ಈ ಸಿದ್ದರಾಮಪ್ಪನವರಿಗೆ ವಯಸ್ಸಾದ ಮೇಲೆ ಆ ವ್ಯಾಪಾರವನ್ನು ಮಗನಾದ ಈ ಅಂಬ್ರೀಶ್ ಮುಂದುವರೆಸಿಕೊAಡು ಬಂದ. ಸುದೀರ್ಘವಾದ ವ್ಯಾಪಾರಿ ಕುಟುಂಬ ಮತ್ತು ಲಾಭದಾಯಕ ವ್ಯಾಪಾರ ಅದಾಗಿದ್ದರಿಂದ ಮೂಲತಃ ಶ್ರೀಮಂತ ಕುಟುಂಬ ಇದು. ಆದರೆ ಹಣ ಸಂಪಾದನೆಯ ಆಸೆಗೆ ಕೊನೆ ಎಲ್ಲಿದೆ ಹೇಳಿ? ತಿನ್ನುವುದು ಹಿಡಿ ಅನ್ನ, ಚಮಚಾ ಬೇಳೆಯಾದರೂ ಮನುಷ್ಯ ಸಹಸ್ರ ಸಹಸ್ರ ಕೋಟಿ ಸಂಪಾದಿಸಬೇಕು ಎನ್ನುವ ಹಪಾಹಪಿಗೆ ಬೀಳುತ್ತಾನೆ. ಇದನ್ನು ಈಗಿನ ಕಾಲಕ್ಕೆ ದುರಾಸೆ ಎನ್ನಲು ಆಗದು. ಏಕೆಂದರೆ ಈಗಿನ ಕಾಲದಲ್ಲಿ ಹಣ ಎಲ್ಲದರ ನಿರ್ಣಾಯಕ. ಹಾಗಾಹಿ ಹಣ ಮಾಡಬೇಕು ಎನ್ನುವುದು ಮನುಷ್ಯನ ಮೊದಲ ಪ್ರಾಮುಖ್ಯತೆಯ ಸಂಗತಿಯಾಗಿದೆ. ಅಪ್ಪ ಮಡಿಕೊಂಡು ಬಂದ ದಾಲ್ ವ್ಯಾಪಾರದ ಜೊತೆಗೆ ತನ್ನದು ಒಂದು ವ್ಯಾಪಾರ ಆರಂಭಿಸಿದರೆ ಹೇಗೆ ಎಂದು ಅಂಬ್ರೀಶ್ ಯೋಚಿಸುತ್ತಾ ಕುಳಿತಿದ್ದಾಗ ಅದೊಂದು ದಿನ ಅದೇ ದಾಲ್ ವ್ಯಾಪಾರದ ಸಹ ವ್ಯಾಪಾರಿ ನಜೀರ್ ಅಹ್ಮದ್ ತಂದೆ ಇಬ್ರಾಹಿಂಸಾಬ್-ಈತನು ಅಂಬ್ರೀಶ್‌ನಿಗೆ ಮೊದಲಿನಿಂದಲೂ ಪರಿಚಯ- ಈತನ ಮೂಲಕ ಲ್ಯಾಂಡ್ ಬ್ರೋಕರ್ ಮಶಾಕ್ ಪಟೇಲ್ ಮತ್ತು ಆನಂದ ತಂದೆ ಪಾಪಾಚಾನ್ ಇವರ ಪರಿಚಯವಾಗುತ್ತದೆ. ಈ ದಾಲ್ ಇಂಡಸ್ಟಿçÃಯನ ನಜೀರ್ ಅಹ್ಮದ್ ಈ ಮಶಾಕ್ ಮತ್ತು ಆನಂದನನ್ನು ಪರಿಚಯಿಸುತ್ತಾನೆ. ಪಾರಂಪರಿಕವಾಗಿ ದಾಲ್ ವ್ಯಾಪಾರ ಮಾಡಿಕೊಂಡು ಬಂದಿರುವ ಅಂಬ್ರೀಶ್ ಕುಟುಂಬದ ಹತ್ತಿರ ಕೋಟ್ಯಾಂತರ ರೂಪಾಯಿ ಇರುವುದು ಮತ್ತು ಈ ಅಂಬ್ರೀಶ್ ತನ್ನದೇ ಒಂದು ಸ್ವಂತ ಉದ್ದಿಮೆ ಆರಂಭಿಸಬೇಕು ಎನ್ನುವ ಯೋಚನೆಯನ್ನು ಈ ನಝೀರ್ ಗ್ರಹಿಸಿರಬೇಕು. ಅಥವಾ ವಂಚಕರನ್ನು ಪರಿಚಯಿಸಿ ಆತನನ್ನು ಆರ್ಥಿಕವಾಗಿ ದಿವಾಳಿ ಮಾಡಬೇಕು ಎನ್ನುವ ಯೋಚನೆಯೂ ಈ ನಜೀರ್ ಅಹ್ಮದನಿಗೆ ಇರಬಹುದು. ಅದೊಂದು ದಿನ ಈ ಅಂಬ್ರೀಶ್ ಬಿರಬಿಟ್ಟೆಗೆ ಮಶಾಕ್ ಮತ್ತು ಆನಂದನನ್ನು ಪರಿಚಯಿಸಿಬಿಟ್ಟ.
“21/08/2021ರಂದ ಸಮಯ 11:30 ಆಗಿರಬೇಕು. ನಾನು ನನ್ನ ಬಿರುಬಿಟ್ಟೆ ದಾಲ್ ಇಂಡಸ್ಟಿçÃಯಲ್ ದಾಲ್ ಮಿಲ್ಲಿನಲ್ಲಿ ನಾನು ಮತ್ತು ನಮ್ಮ ಸಂಬAಧಿಯಾದ ಭೀಮಾಶಂಕರ ಸರಡಗಿ ಕುಳಿತಿದ್ದಾಗ ಅಲ್ಲಿಗೆ ಬಂದ ಆನಂದ ಹೇಳಿದ್ದೇನು ಎಂದರೆ ಕಲಬುರಗಿ ನಗರದ ಆಚರೌಡ್ ಮಾಲ್ ಹಿಂದುಗಡೆ ಇರುವ ಶಾಂತಿ ಸದನ ಜಮೀನು ಸರ್ವೆ.ನಂ.7/2 ಆರು ಎಕರೆ ಐದು ಗುಂಟೆ ಜಮೀನು ಇದ್ದು ಈ ಜಮೀನು ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ್ದು ಕಲಬುರಗಿ ನಗರದ ಹೃದಯ ಭಾಗದಲ್ಲಿದ್ದು ನೀವು ಈ ಜಮೀನು ಖರೀದಿಸಿದರೆ ಮುಂದೆ ನೀವು ರಿಯಲ್ ಎಸ್ಟೇಟು ದಂದೆ ಮಾಡಿ ನೂರಾರು ಕೋಟಿ ಹಣ ಸಂಪಾದಿಸಬಹುದು. ಇದರಿಂದ ನಿಮಗೆ ದುಪ್ಪಟ್ಟು ಲಾಬವಾಗುತ್ತದೆ. ಸದ್ಯ ಈಗ ಕರೋನಾದಿಂದ ಜನ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಪ್ರಸ್ತುತ ಈಗ ಯಾರ ಹತ್ತಿರವೂ ಹಣವಿಲ್ಲ. ಈ ಕಾರಣಕ್ಕೆ ಈ ಜಮೀನಿನ ಬೆಲೆ ಕುಸಿದಿದೆ. ತುಂಬಾ ಕಡಿಮೆ ದರಕ್ಕೆ ಈಗ ಅದನ್ನು ಮಾರುತ್ತಾರೆ. ಇದೊಂದು ಸುವರ್ಣಾವಕಾಶ. ಈ ಅವಕಾಶವನ್ನು ಕಳೆದುಕೊಳ್ಳಬೇಡಿ ಎಂದು ಹೇಳುತ್ತಾನೆ. ನಾನು ಯೋಚಿಸಲು ಆರಂಭಿಸುತ್ತೇನೆ” ಎನ್ನುವ ಅಂಬ್ರೀಶ್ ನಿಜಕ್ಕೂ ಆನಂದ ತಂದೆ ಪಾಪಚಾನನ ಮಾತಿಗೆ ಮರಳಾಗುತ್ತಾನೆ. ಅದು ಕರೋನಾ ಅಬ್ಬರದ ಕಾಲ. ದೇಶ ಮತ್ತು ರಾಜ್ಯದಲ್ಲಿ ಬರೀ ಸಾವಿನ ಸುದ್ದಿ ವ್ಯಾಪಕವಾದ ದಿನಗಳವು. ಜನ ತತ್ತರಿಸಿ ಹೋಗಿದ್ದರು. ಹಣ ಅಪಮೌಲ್ಯಕ್ಕೆ ಒಳಗಾಗಿತ್ತು. ಜೀವ ಉಳಿಸುವುದರ ಕುರಿತು ಜನ ಯೋಚಿಸುತ್ತಿದ್ದ ಕಾಲವದು. ಆನಂದ ಹೇಳಿದಂತೆ ಆ ಜಮೀನಿಗೆ ಸಂಬAಧಿಸಿದವರು ಈ ಕರೋನಾ ಸಂಕಷ್ಟಕ್ಕೆ ಸಿಲುಕಿರಬಹುದು. ತಾನೇಕೆ ಆ ಜಮೀನನ್ನು ಖರೀದಿಸಬಾರದು ಎಂದು ಯೋಚಿಸಿದ ಅಂಬ್ರೀಶ್. ಆನಂದ್ ಪಾಪಾಚಾನ್ ಆ ರೀತಿ ಹೇಳಿ ಆನಂದನ ಮನಸ್ಸಿನಲ್ಲಿ ನಂಬಿಕೆ ಉಂಟು ಮಾಡಿದ್ದ. ಶತಾಯಗಥಾಯ ಅಂಬ್ರೀಶ್ ಆ ಜಮೀನಿನ ಮೇಲೆ ಆಸೆ ಪಡುವಂತೆ ಮಾಡಿದ್ದ. ಒಳ್ಳೆಯ ಮಾತುಗಾರರು ಮಾತ್ರ ಈ ಬ್ರೋಕರಿಕೆ ದಂದೆಯಲ್ಲಿ ಯಶಸ್ಸು ಕಾಣಬಲ್ಲರು. ವೆಂಡರ್‌ಗಳಲ್ಲಿ ನಂಬಿಕೆ ಮೂಡಿಸುವುದು, ವೆಂಡೀಗಳಲ್ಲಿ ಖರೀದಿಸುವ ಆಸೆ ಹುಟ್ಟಿಸುವುದು ಈ ಬ್ರೋಕರ್‌ಗಳು ಕರಗತ ಮಾಡಿಕೊಂಡ ವಿದ್ಯ. ಮತ್ತು ಆ ವಿದ್ಯೆಯನ್ನು ಕರಗತ ಮಾಡಿಕೊಳ್ಳಲೇಬೇಕಿತ್ತು. ಅಂಬ್ರೀಶ್ ಯೋಚಿಸಿ ಈ ಜಮೀನನ್ನು ಖರೀದಿಸುವ ನಿರ್ಧಾರಕ್ಕೆ ಬಂದ. ಕಲಬುರಗಿಯ ಹೃದಯ ಭಾಗದಲ್ಲಿರುವ ಈ ಆರು ಎಕರೆ ಐದು ಗುಂಟೆ ಜಮೀನಿನಲ್ಲಿ ಎಷ್ಟು ಮಾಲ್‌ಗಳು ಎಷ್ಟು ಬಂಗಲೆ ಮತ್ತು ಅಪಾರ್ಟಮೆಂಟುಗಳನ್ನು ಕಟ್ಟಿಸಬಹುದು ಎನ್ನುವ ಒಂದು ಕಲ್ಪನೆ ಆತನಲ್ಲಿ ರೋಮಾಂಚನವನ್ನು ಉಂಟು ಮಾಡಿತ್ತು. ಯಾವಾಗ ಈ ಅಂಬ್ರೀಶ್ ಜಮೀನು ಖರೀದಿ ಮಾಡುವ ಇಂಗಿತ ವ್ಯಕ್ತಪಡಿಸಿದನೋ ಆಗ ಆನಂದ್:
“ಈ ಜಮೀನಿಗೆ ಸಂಬAಧಿಸಿದ ಮಾಲೀಕರು ಬೆಂಗಳೂರಿನಲ್ಲಿ ಇರುತ್ತಾರೆ. ಈ ಆಸ್ತಿ ಕ್ರಿಶ್ಚಿಯನ್ ಸಮುದಾಯದ ಟ್ರಸ್ಟ್ ಮೆಥೋಡಿಸ್ಟ್ ಚರ್ಚ ಆಫ್ ಇಂಡಿಯಾ ಸೌಥರ್ನ ಏಷಿಯಾ ಮುಂಬೈ ಇವರಿಗೆ ಸೇರಿದ್ದರಿಂದ ಟ್ಟಸ್ಟಿನ ಬಿಷಫ್ ಮತ್ತು ಫಾದರ್ ಮತ್ತು ಕಮಿಟಿ ಸದಸ್ಯರನ್ನು ಭೇಟಿಯಾಗಿ ಸದರಿ ಜಮೀನಿನ ಮೂಲ ದಾಖಲೆಗಳನ್ನು ಪರಿಶೀಲಿಸಿ ಖರೀದಿಗೆ ಸಂಬAಧಿಸಿದAತೆ ಮಾತನಾಡಿ ಬರಬೇಕು. ಬೆಂಗಳೂರಿಗೆ ಹೋಗೋಣವೇ?” ಎಂದು ಕೇಳುತ್ತಾನೆ. ಅದಾಗಲೇ ಆರು ಎಕರೆ ಚಿನ್ನದ ಮೊಟ್ಟೆ ಇಡುವ ಕೋಳಿಯಂತಹ ಜಮೀನು ಕಣ್ಣಿನಲ್ಲಿ ಕಲ್ಪನಾ ಪ್ರಪಮಚವನ್ನೇ ಸೃಷ್ಟಿಸಿತ್ತಲ್ಲವೇ ಅಂಬ್ರೀಶ್ ಇನ್ನೊವಾ ಕಾರು ಬೆಂಗಳೂರಿಗೆ ಹೋಗಲು ಸಿದ್ದಗೊಳಿಸಿಬಿಟ್ಟ.
ಮುಂದಿನ ಈ ಹಂತದಲ್ಲಿಯೇ ನಿಮಗೆ ಈ ಕ್ರಿಶ್ಚಿಯನ್ ಸಮುದಾಯವನ್ನು ವಂಚಿಸುವ ಭೂಗಳ್ಳರ ನಿಜ ಬಣ್ಣ ಪರಿಚಯವಾಗುತ್ತದೆ. ಬಿಷಫ್, ಡಿಎಸ್‌ಗಳ ಹಣದಾಯಿ ಮತ್ತು ಕರಾಳ ಮುಖಗಳು ನಿಮಗೆ ಕಾಣಿಸುತ್ತವೆ. ದೇವರ ಹೆಸರಿನಲ್ಲಿ ಧರ್ಮದ ಹೆಸರಿನಲ್ಲಿ ಧರ್ಮದ ಅಭಿವೃದ್ಧಿ ಮತ್ತು ಸಂಸ್ಥೆಗಳ ನಿರ್ವಹಣೆಗೆಂದು ಇರುವ ಜಮೀನುಗಳನ್ನು ವ್ಯವಸ್ಥಿತವಾಗಿ ಕಬಳಿಸುತ್ತಾ ವೈಯುಕ್ತಿಕ ಸ್ವಾರ್ಥ ಸಾಧನೆ ಮಾಡುತ್ತಿರುವ ಸೈತಾನರ ಪರಿಚಯವಾಗುತ್ತದೆ. ಅಮಾಯಕ ಕ್ರೆöÊಸ್ತ ಸಮುದಾಯದ ಜನರ ದಾರಿ ತಪ್ಪಿಸುತ್ತಿರುವ ಖದೀಮರು ಜೀಸಸ್ ಅವರಿಗೆ ದ್ರೋಹ ಮಾಡುತ್ತಿದ್ದಾರೆ ಎನ್ನುವುದು ಇಲ್ಲಿ ಜೀರ್ಣಿಸಿಕೊಳ್ಳದ ವಿಷಯ.
“29/08/2021 ರಂದು ಆನಂದ, ನಜೀರ್ ಅಹ್ಮದ್, ಮಶಾಕ್, ನೀಲಕಂಠ ಸಿದ್ರಾಮಪ್ಪ ಬಿರದಾರ, ತಬರೇಜ್ ನಾವಲ್ಲರೂ ಸೇರಿ ಒಂದು ಇನ್ನೊವಾ ಕಾರು ಮಾಡಿಕೊಂಡು ಕಲಬುರಗಿಯಿಂದ ಬೆಂಗಳೂರಿನ ಕಡೆಗೆ ಹೊರಟೇವು. ಆನಂದ ನಮ್ಮೆಲ್ಲರನ್ನು ಬಾಲ್ಡವಿನ್ ಇಂಟರ್‌ನ್ಯಾಷಿನಲ್ ಸ್ಕೂಲ್‌ಗೆ ಕರೆದುಕೊಂಡು ಹೋಗಿ ಮೆಥೋಡಿಸ್ಟ್ ಚರ್ಚ ಆಫ್ ಇಂಡಿಯಾ ಸೌಥರ್ನ ಏಷಿಯಾ ಮುಂಬೈ ಟ್ರಷ್ಟಿನ ಬಿಷಫ್ ಹಾಗೂ ಫಾದರ್ ಮತ್ತು ಕಮಿಟಿ ಸದಸ್ಯರು ಎಂದು ಅಲ್ಲಿದ್ದ ಜನರನ್ನು ಪರಿಚಯಿಸಿದ. ಬಿಷಫ್ ಕರಕರೆ ಇವರು ಟ್ರಸ್ಟಿನಲ್ಲಿ ಒಟ್ಟು ಇಪ್ಪತ್ತೇಳು ಜನ ಸದಸ್ಯರು ಇರುತ್ತಾರೆ ಅಂತಾ ತಿಳಿಸಿ ಅಲ್ಲಿದ್ದ ಫಾದರ್ ಡಾ|| ನ್ಯೂಟನ್ ಫಾರ್ಮರ್ ಮತ್ತು ಸದಸ್ಯರಾದ ನ್ಯೂಟನ್ ಪೌಲ್, ನೆಲಸನ್ ಪೌಲ್, ಪೌಲ್ ಮಧುಕರ್, ಪಿ. ಶಾಂತಕುಮಾರ್, ಸೆಲವಾನ ಪೆರಿಸನ್, ದೆವಿಡ್ ಎನ್ ರವರನ್ನು ಪರಿಚಯಿಸಿದರು ಬಿಷೆಫ್ ಕರಕರೆ ಇವರು” ಎನ್ನುವ ಅಂಬ್ರೀಶ್ ಬೀರಬಿಟ್ಟೆ ಅಲ್ಲಿನ ಬಿಷಫ್ ಅವರ ಮಾತುಗಳು, ಅಲ್ಲಿನ ವಾತಾವರಣ ಇತ್ಯಾದಿಗಳನ್ನು ಸೂಕ್ಷö್ಮವಾಗಿ ಗಮನಿಸಿ ಅದನ್ನು ನಂಬಿದ್ದಾನೆ. ಈ ಬಿಷಫ್‌ಗಳಿಗೆ ಸಮ್ಮೋಹನ ವಿದ್ಯೆ ಸಿದ್ದಿಯಾಗಿರುತ್ತದೆ. ಇವರು ಮಾತಿನಲ್ಲಿ ಯಾರನ್ನಾದರು ಮರಳು ಮಾಡಬಲ್ಲರು. ಹಿಂದೂಗಳಲ್ಲಿ ಪೂಜಾರಿಗಳು, ಮುಸ್ಲೀಮರಲ್ಲಿ ಮುಲ್ಲಾಗಳು ಇರುವಂತೆ ಕ್ರಿಶ್ಚಿಯನ್ ಧರ್ಮದಲ್ಲಿ ಈ ಬಿಷಫ್‌ಗಳು. ಸಮುದಾಯದ ಮುಖ್ಯಸ್ಥರಾಗಿರುವ ಇವರು ನಿರ್ಣಾಯಕರೂ ಹೌದು. ಸಮುದಾಯದ ಅನೇಕ ಸಂಘ ಸಂಸ್ಥೆಗಳ ಮುಖ್ಯಸ್ಥರು ಕೂಡಾ ಈ ಬಿಷಫ್‌ಗಳಾಗಿರುತ್ತಾರೆ. ಇವರ ಅಧೀನದಲ್ಲಿ ಫಾದರ್, ಡಿಎಸ್ ಇತ್ಯಾದಿ ಹುದ್ದೆಗಳು ಬರುತ್ತವೆ. ಡಿಎಸ್ ಎಂದರೆ ಜಿಲ್ಲಾ ಸೂಪರಿಂಡೆAಟ್, ಅಂದರೆ ಜಿಲ್ಲಾ ಮೇಲ್ವಿಚಾರಕ ಎಂದರ್ಥ. ಈ ಜಿಲ್ಲಾ ಮೇಲ್ವಿಚಾರಕರು ಆ ಆ ಜಿಲ್ಲೆಗಳ: ಸಮುದಾಯದ ಸಂಸ್ಥಧೆಗಳ ಮೇಲ್ವಿಚಾರಣೆ ನೋಡಿಕೊಳ್ಳಬೇಕು. ಅಸಲಿ ವಿಷಯ ಏನೆಂದರೆ ಈ ಮೇಲ್ವಿಚಾರಕರಿಗೆ ಕ್ರೆöÊಸ್ಥ ಸಮುದಾಯದ ಸಂಸ್ಥೆಗಳಿಗೆ ಸೇರಿದ ಆಸ್ತಿ ಎಲ್ಲೆಲ್ಲಿ ಎಷ್ಟೆಷ್ಟಿದೆ ಎನ್ನುವ ಸಂಗತಿ ಚೆನ್ನಾಗಿ ಗೊತ್ತಿರುತ್ತದೆ. ಬಿಷಫ್ ಮತ್ತು ತಾವೇ ಸಮುದಾಯದ ನಿರ್ಣಾಯಕರಲ್ಲವೇ? ಅದನ್ನು ಕಬಳಿಸಿದರೆ ಕೇಳುವವರು ಯಾರು ಎನ್ನುವುದು ಇವರ ಭಂಡ ಧೈರ್ಯ.
ಇದಾದ ಮೇಲೆ ಬಿಷಫ್ ಕರಕರೆ ಈ ರೀತಿ ನುಡಿಯುತ್ತಾರೆ:
“ಸದ್ಯ ಜಗತ್ತಿನಾದ್ಯಂದ ಈ ಕರೋನಾ ಮಹಾಮಾರಿ ಆರ್ಭಟಿಸುತ್ತಿರುವುದರಿಂದ ಪ್ರಪಂಚದಾದ್ಯAತ ನಮ್ಮ ಟ್ರಸ್ಟಿಗೆ ಬರಬೇಕಿದ್ದ ಫಂಡ್ ನಿಂತು ಹೋಗಿದೆ. ವಿದೇಶದಿಂದ ಯಾವ ನೆರವೂ ಬರುತ್ತಿಲ್ಲ. ಈ ಕಾರಣಕ್ಕೆ ನಮ್ಮ ಟ್ರಸ್ಟಿನ ಶಾಲಾ ಕಾಲೇಜುಗಳು, ಚರ್ಚುಗಳು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿವೆ. ಇವುಗಳನ್ನು ನಿಭಾಯಿಸಲು ನಮ್ಮಿಂದ ಆಗುತ್ತಿಲ್ಲ. ಈ ಕಾರಣಕ್ಕೆ ಕಲಬುರಗಿಯ ಮಧ್ಯೆ ಭಾಗದಲ್ಲಿರುವ ನಮ್ಮ ಟ್ರಸ್ಟಿಗೆ ಸೇರಿದ ಶಾಂತಿ ಸದನ ಸರ್ವೆ.ನಂ 7/2 ಆರು ಎಕರೆ ಐದು ಗುಂಟೆ ಜಮೀನನ್ನು ಮಾರಬೇಕು ಎಂದು ಯೋಚಿಸಿದ್ದೇವೆ. ಇದು ಮಾರಿದರೆ ಮಾತ್ರ ನಾವು ಶಾಲಾ ಕಾಲೇಜು ಮತ್ತು ಚರ್ಚುಗಳನ್ನು ನಿವ್ಹಿಸಲು ಸಾಧ್ಯವಾಗುತ್ತದೆ. ನೀವು ನಾವು ಹೇಳಿದ ದರಕ್ಕೆ ಜಮೀನು ಖರೀದಿಸಲು ಒಪ್ಪಿದರೆ ನಾವು ಇದನ್ನು ನಿಮಗೆ ಮಾರಾಟ ಮಾಡುತ್ತೇವೆ” ಎನ್ನುತ್ತಾಎ ಬಿಷಫ್ ಕರಕರೆ.
ಬಿಷಫ್‌ರ ಮಾತುಗಳು ಹಾಲು, ಜೇನು, ತುಪ್ಪ ಸೇರಿಸಿ ಊಟ ಮಾಡಿದಂತೆ ಭಾವನೆ ಮೂಡಿ ರೋಮಾಂಚಿತನಾದ ಅಂಬ್ರೀಶ್! ಕಣ್ಣುಗಳಲ್ಲಿ ಶಾಂತಿ ಸದನದ ಆ ಆರು ಎಕರೆ ಜಮೀನು ಸ್ವರ್ಗದ ನಂದನವನವಾಗಿ ಕಣ್ಣ ಮುಂದೆ ಸುಳಿಯತೊಡಗಿತು. ಅದೊಂದು ಕೋಳಿಯಾಗಿ ಪ್ರತಿನಿತ್ಯ ಬಹ ಬೆಲೆ ಬಾಳುವ ವಜ್ರದ ಮೊಟ್ಟೆಗಳನ್ನು ಇಡುತ್ತಿರುವಂತೆ ಕಲ್ಪಿಸಿಕೊಂಡು ಒಂದು ಕ್ಷಣ ಸುಖಿಸಿದ ಅಂಬ್ರೀಶ್. ಆ ಸಂತೋಷದಲ್ಲಿರುವAತೆ
“ಸರಿ ಬಿಷಫ್ ಅವರೆ, ಜಮೀನಿನ ಮೂಲ ದಾಖಲಾತಿಗಳನ್ನು ತೋರಿಸಿ” ಎಂದು ಕೇಳಿದ ಅಂಬ್ರೀಷ್.
ಬಿಷಫ್ ಕರಕರೆ ಅದಾಗಲೇ ಸಿದ್ದಪಡಿಸಿಟ್ಟಿದ್ದ ಈ ಕಲಬುರಗಿಯ ಕಲಬುರಗಿ ಹೋಬಳಿಗೆ ಸೇರಿದ ದದ್ದಾಪುರ ವ್ಯಾಪ್ತಿಯ ಸರ್ವೆ.ನಂ 7/2 ಜಮೀನಿಗೆ ಸಂಬAಧಿಸಿದ ದಾಖಲೆಗಳನ್ನು ಅಂಬ್ರೀಷ್ ಅವರ ಕೈಗೆ ನೀಡಿದರು. ದಾಖಲೆಗಳ ಪ್ರಕಾರ ಈ ಕಲಬುರಗಿ ಮಧ್ಯೆ ಭಾಗದಲ್ಲಿರುವ ಶಾಂತಿ ಸದನ ಸಮೀನು ಬೆಂಗಳೂರಿನಲ್ಲಿರುವ ಕ್ರಿಸ್ಚಿಯನ್ ಸಮುದಾಯಕ್ಕೆ ಸೇರಿದ ಟ್ರಷ್ಟ್ ಮೆಥೋಡಿಸ್ಟ್ ಚರ್ಚ ಆಫ್ ಇಂಡಿಯಾ ಸೌಥರ್ನ ಏಷಿಯಾ ಮುಂಬೈ ಇವರಿಗೆ ಸೇರಿದ್ದು ಎಂದು ಅತ್ಯಂತ ಪಷ್ಟವಾಗಿ ದಾಖಲಿಸಲ್ಪಟ್ಟಿತ್ತು. ಅಲ್ಲಿ ಅನುಮಾನಕ್ಕೆ ಅವಕಾಶವೇ ಇರಲಿಲ್ಲ. ಅಂಬ್ರೀಷ್ ಆ ದಾಖಲೆಗಳನ್ನು ನೋಡಿ ನಂಬುತ್ತಾರೆ. ಬಿಷೆಫ್ ಕರಕರೆ ಆ ಜಮೀನಿನ ದರ 35 ಕೋಟಿ ರೂಪಾಯಿಗಳು ಎಂದು ಹೇಳುತ್ತಾರೆ. ಅಂಬ್ರೀಶ್ ಜಮೀನಿನ ಜೆರಾಕ್ಸ್ ದಾಖಲೆಗಳನ್ನು ಪಡೆದು ಮನೆಯಲ್ಲಿ ವಿಚಾರಿಸಿ ನಂತರ ತಿಳಿಸುತ್ತೇನೆ ಎಂದು ಹೇಳಿ ಆ ರಾತ್ರಿ ಮರಳಿ ಕಲಬುರಗಿಗೆ ಬರುತ್ತಾರೆ.
ಬಿಷೆಪ್ ಕರಕರೆ, ನ್ಯೂಟನ್ ಫಾರ್ಮರ್, ಶಾಂತಕುಮಾರ್ ಪಿ, ಡೇವಿಡ್ ನತಾನೇಲ್, ರವಿ ಸಬಾಸ್ಟಿಯನ್, ಸಂಜೀವಕುಮಾರ್ ದಯಾನಂದ, ಪೌಲ್ ಮಧುಕರ್ ಮತ್ತು ಟೀಂ ಈ ಅಂಬ್ರೀಶ್ ಬಿರಬಿಟ್ಟೆಯನ್ನು ಹೇಗೆ ಹಂತಹAತವಾಗಿ ಸುಲಿಯುತ್ತದೆ ಮತ್ತು ವಂಚಿಸುತ್ತದೆ ಹಾಗೂ ಇದೇ ತಂಡ ಹೇಗೆ ಕ್ರೆöÊಸ್ತ ಸಮುದಾಯವನ್ನು ವಂಚಿಸುತ್ತಾ ಕಾಲಾಂತರಗಳಿAದ ಬಳುವಳಿಯಾಗಿ ಬಂದ ಸಮುದಾಯದ ಆಸ್ತಿಗಳನ್ನು ವ್ಯವಸ್ಥಿತವಾಗಿ ನುಂಗುತ್ತಾ ದೇವರನ್ನು ಮತ್ತು ಸಮುದಾಯವನ್ನು ವಂಚಿಸುತ್ತಿದೆ ಎನ್ನುವ ಕಥೆ ಅತ್ಯಂತ ರೋಚಕವಾಗಿದೆ.
ಅದನ್ನು ಮುಂದಿನ ಸಂಚಿಕೆಯಲ್ಲಿ ಓದಲಿದ್ದೀರಿ.

WhatsApp Group Join Now
Telegram Group Join Now

Related Posts