ಆರೋಗ್ಯ ಮತ್ತು ಫಿಟ್ನೆಸ್

ಗರ್ಭನಿರೋಧಕ ಚುಚ್ಚುಮದ್ದು ನೀಡುವ ಪ್ರಾಯೋಗಿಕ ಯೋಜನೆಗೆ ಸಚಿವ ಶ್ರೀ ದಿನೇಶ ಗುಂಡುರಾವ್ ಚಾಲನೆ

WhatsApp Group Join Now
Telegram Group Join Now

ಯಾದಗಿರಿ : ಮಾರ್ಚ್ 07,  : ಜನಸಂಖ್ಯೆ ನಿಯಂತ್ರಣ, ತಾಯಿ ಮಗುವಿನ ಮರಣ ಪ್ರಮಾಣ ತಗ್ಗಿಸಲು ಹಾಗೂ ಮಕ್ಕಳ ನಡುವಿನ ಅಂತರ ಕಾಪಾಡಲು ಅನುಕೂಲವಾಗುವಂತೆ ಮೈಸೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಸಬ್ಕುö್ಯಟೇನಿಯಸ್ ಗರ್ಭನಿರೋಧಕ ಚುಚ್ಚುಮದ್ದು, ಪ್ರಾಯೋಗಿಕ ಯೋಜನೆಗೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆ ಸಚಿವರಾದ ಶ್ರೀ ದಿನೇಶ ಗುಂಡುರಾವ್ ಅವರು ಇಂದು ಚಾಲನೆ ನೀಡಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇಂದು ಗುರುವಾರ ರಂದು ಸಬ್ಕುö್ಯಟೇನಿಯಸ್ ಗರ್ಭನಿರೋಧಕ ಚುಚ್ಚುಮದ್ದು, ಪ್ರಾಯೋಗಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜನಸಂಖ್ಯೆ ನಿಯಂತ್ರಣ, ತಾಯಿ ಮಗುವಿನ ಮರಣ ಪ್ರಮಾಣ ತಗ್ಗಿಸಲು ಹಾಗೂ ಮಕ್ಕಳ ನಡುವಿನ ಅಂತರ ಕಾಪಾಡಲು ಅನುಕೂಲವಾಗುವಂತೆ ಮೈಸೂರು ಹಾಗೂ ಯಾದಗಿರಿ ಜಿಲ್ಲೆಗಳನ್ನು ಸಬ್ಕುö್ಯಟೇನಿಯಸ್ ಗರ್ಭನಿರೋಧಕ ಚುಚ್ಚುಮದ್ದು, ಪ್ರಾಯೋಗಿಕ ಯೋಜನೆಗೆ ಆಯ್ಕೆ ಮಾಡಲಾಗಿದ್ದು, ಸಬ್ಡರ್ಮಲ್ ಸಿಂಗಲ್‌ರಾಡ್ ಇನ್‌ಪ್ಲಾಂಟ್ ಲಸಿಕಾ ಕಾರ್ಯಕ್ರಮಕ್ಕೆ ಬೆಂಗಳೂರು ಮತ್ತು ಬೀದರ್ ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಿದರು.

ಗರ್ಭನಿರೋಧಕ ಆಧುನಿಕ ಪದ್ಧತಿಗಳನ್ನು ಅನುಸರಿಸುವ ಮೂಲಕ ಜನಸಂಖ್ಯೆ ನಿಯಂತ್ರಣ, ತಾಯಿ ಮಗುವಿನ ಮರಣ ಪ್ರಮಾಣ ತಗ್ಗಿಸಲು ನೆರವಾಗಲಿದೆ. ಸಬ್ಕುö್ಯಟೇನಿಯಸ್ ಗರ್ಭನಿರೋಧಕ ಚುಚ್ಚುಮದ್ದುನಿಂದ ಮೂರು ತಿಂಗಳ ವರೆಗೆ ಮಗು ಜನನ ತಡೆಯಲು ಸಹಕಾರಿಯಾಗಲಿದ್ದು, ತಕ್ಷಣಕ್ಕೆ ಮಗು ಆಗದಿರಲು ನೆರವಾಗಲಿದೆ.  ಸಂತಾನೋತ್ಪತ್ತಿ ನಿಯಂತ್ರಣಕ್ಕೆ ಸುಲಭ ವಿಧಾನ ಇದಾಗಿದ್ದು, ಯಾದಗಿರಿ ಜಿಲ್ಲೆಗೆ 2900 ಲಸಿಕೆ ನೀಡುವ ಉದ್ದೇಶ ಹೊಂದಿದ್ದು, ಈಗಾಗಲೇ 300 ಲಸಿಕೆಗಳನ್ನು ನೀಡಲಾಗಿದೆ. ಮುಂದಿನ ಮೂರು ರಿಂದ ಆರು ತಿಂಗಳ ವರೆಗೆ ಈ ಲಸಿಕೆಯಿಂದ ಆಗುವ ಪರಿಣಾಮಗಳ ಬಗ್ಗೆ ಅಧ್ಯಯನ, ಜನರ ಅಭಿಪ್ರಾಯ ಸಂಗ್ರಹಿಸಿ ರಾಜ್ಯಾದ್ಯಂತ ಜಾರಿಗೆ ತರಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಅದರಂತೆ ಸಬ್ಡರ್ಮಲ್ ಸಿಂಗಲ್‌ರಾಡ್ ಇನ್‌ಪ್ಲಾಂಟ್ ಲಸಿಕಾ ಪ್ರಾಯೋಗಿಕ ಯೋಜನೆಗೆ ಬೆಂಗಳೂರು ಹಾಗೂ ಬೀದರ್ ಜಿಲ್ಲೆಗಳನ್ನು ಆಯ್ಕೆ ಮಾಡಲಾಗಿದ್ದು, ಈ ಲಸಿಕೆಯಿಂದ ದೀರ್ಘಾವಧಿ ಅಂದರೆ ಮೂರು ವರ್ಷಗಳ ಕಾಲ ಗರ್ಭನಿರೋಧಕ ಕಾಪಾಡಲು ನೆರವಾಗಲಿದೆ ರಾಜ್ಯಾದ್ಯಂತ ಜನಿಸುವ 1  ಲಕ್ಷ ಮಕ್ಕಳಲ್ಲಿ 69 ಹೆಣ್ಣು ಮಕ್ಕಳು ಮರಣ ಹೊಂದುತ್ತಿದ್ದು, ಈ ಮರಣ ಪ್ರಮಾಣ ಕಡಿಮೆಗೊಳಿಸುವ

ಸದುದ್ದೇಶ ಹೊಂದಲಾಗಿದೆ ಎಂದು ಹೇಳಿದ ಅವರು ರಾಜ್ಯದಲ್ಲಿ ಜನಸಂಖ್ಯೆ ನಿಯಂತ್ರಣ ಪ್ರಮಾಣವೂ ಬೆಳೆಯುತ್ತಿದ್ದು, ಸಂತಸದ ವಿಷಯವಾಗಿದೆ ಎಂದು ಹೇಳಿದರು.

ಹೆಣ್ಣು ಮಕ್ಕಳ ಅನುಕೂಲಕ್ಕಾಗಿ ರಾಜ್ಯ ಸರ್ಕಾರವು ಶುಚಿ ಎಂಬ ಯೋಜನೆಯಡಿ ಮುಟ್ಟಿನ ಕಪ್ಪು ನೀಡುವ ಕಾರ್ಯಕ್ರಮ ಜಾರಿಗೊಳಿಸಲಾಗಿದೆ. ಹೆಣ್ಣು ಮಕ್ಕಳ ಆರೋಗ್ಯದ ಹಿತದೃಷ್ಠಿಯಿಂದ, ಪರಿಸರ ಸ್ವಚ್ಚತೆಗೆ ಇದು ಹೆಚ್ಚು ಸಹಕಾರಿಯಾಗಲಿದೆ. ಗ್ರಾಮಾಂತರ ಮಹಿಳೆಯರಿಗೆ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸ್ವ ಸಹಾಯ ಗುಂಪುಗಳಿಗೆ ನೀಡಲಾಗುತ್ತಿದ್ದು, ಹೆಚ್ಚು ಸಹಕಾರಿಯಾಗಲಿದೆ. ಮಂಗಳೂರು ಜಿಲ್ಲೆಯಲ್ಲಿ 17 ವರ್ಷದ ಮೇಲಿನ 15000 ಹೆಣ್ಣು ಮಕ್ಕಳು ಅದನ್ನು ಉಪಯೋಗಿಸುತ್ತಿದ್ದಾರೆ. ಪುನರ್ಬಳಕೆ ಹಾಗೂ ದೀರ್ಘಾವಧಿ ಉಪಯೋಗಕ್ಕೆ ಇದು ಅನುಕೂಲವಾಗಿದ್ದು, ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ವ್ಯಾಪ್ತಿಯಲ್ಲಿ ಮುಟ್ಟಿನ ಕಪ್ಪು ಬಳಸಲು ಮುಂದೆ ಬಂದಿರುವುದು ಅಭಿನಂದನಾರ್ಹವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಾ.ರಾಜೇಶ್ವರಿ ಅವರು ಜಿಲ್ಲೆಯ ಮೊದಲ ಮಹಿಳೆ ನಾಗಮ್ಮ ಹಾಗೂ ಇತರರಿಗೆ ಸಬ್ಕುö್ಯಟೇನಿಯಸ್ ಗರ್ಭನಿರೋಧಕ ಚುಚ್ಚುಮದ್ದು ನೀಡಿ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ  ಸಚಿವರಾದ ಶ್ರೀ ಶರಣಬಸಪ್ಪ ದರ್ಶನಾಪೂರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಡಿ.ರಂದೀಪ್, ಯಾದಗಿರಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗರಿಮಾ ಪನ್ವಾರ್, ರಾಷ್ಟಿçÃಯ ಆರೋಗ್ಯ ಅಭಿಯಾನ ಅಭಿಯಾನ ನಿರ್ದೇಶಕರು ಡಾ.ನವೀನ್ ಭಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಪ್ರಭುಲಿಂಗ ಮಾನಕರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ಉಪ ನಿರ್ದೇಶಕರು ಡಾ.ಚಂದ್ರಿಕಾ ಬಿ.ಆರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳು ನಿರ್ದೇಶಕರು ಡಾ.ಜಿ.ಎಸ್ ಪುಷ್ಪಲತಾ, ಆರೋಗ್ಯ ಡಬ್ಲೂö್ಯಹೆಚ್‌ಓ ಲೈಂಗಿಕ ಮತ್ತು ಸಂತಾನೋತ್ಪತ್ತಿ ರಾಷ್ಟಿçÃಯ ಪ್ರೋಫೆಶನಲ ಅಧಿಕಾರಿಗಳು ಡಾ,ಪ್ರಗತಿ ಎಸ್.ಆರ್. ಹೆಚ್ ಡಬ್ಲೂö್ಯಹೆಚ್.ಓ ಕಾರ್ಯಕ್ರಮ ವ್ಯವಸ್ಥಾಪಕರು ರಾಷ್ಟಿçÃಯ ಅಧಿಕಾರಿಗಳು ಡಾ.ನೇಹಾ ಉಪಸ್ಥಿತರಿದ್ದರು.

WhatsApp Group Join Now
Telegram Group Join Now

Related Posts