ಅಪರಾಧ

ಮುದ್ದೇಮಾಲ ಅಬಕಾರಿ ಜಪ್ತಿ

WhatsApp Group Join Now
Telegram Group Join Now

ಮುದ್ದೇಮಾಲ ಅಬಕಾರಿ ಜಪ್ತಿ

ಯಾದಗಿರಿ : ಏಪ್ರಿಲ್ 08, : ಭಾರತ ಚುನಾವಣಾ ಆಯೋಗವು ಸಾರ್ವತ್ರಿಕ ಲೋಕಸಭಾ ಚುನಾವಣೆ-2024 ಘೋಷಿಸಿ 2024ರ ಮಾರ್ಚ್ 16 ರಿಂದ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಚುನಾವಣೆ ಶಾಂತಿಯುತವಾಗಿ ನಿಷ್ಪಕ್ಷಪಾತವಾಗಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮವಹಿಸಲು ಜಿಲ್ಲೆಯ ವ್ಯಾಪ್ತಿಯಲ್ಲಿ ನಕಲಿ ಮದ್ಯ, ಅಕ್ರಮ ಮದ್ಯ, ಕಲಬೆರಕೆ ಸೇಂದಿ, ಕಳ್ಳಭಟ್ಟಿ ಸಾರಾಯಿ ಹಾಗೂ ಇತರೆ ಅಬಕಾರಿ ಅಕ್ರಮ ಪದಾರ್ಥಗಳ ತಯಾರಿಕೆ ಸಾಗಾಣಿಕೆ ಸಂಗ್ರಹಣೆ ಹಾಗೂ ಮಾರಾಟಗಳಂತಹ ಅಕ್ರಮ ಚಟುವಟಿಕೆಗಳು ನಡೆಯದಂತೆ ಚುನಾವಣಾ ಆಯೋಗದ ನಿರ್ದೇಶನದಂತೆ ಕ್ರಮ ಕೈಗೊಂಡಿರುವ ಮಾಹಿತಿ ಸಲ್ಲಿಸಲಾಗಿದೆ ಎಂದು ಯಾದಗಿರಿ ಅಬಕಾರಿ ಉಪ ಆಯುಕ್ತೆ ಶಾರದಾ ಸಿ.ಕೋಲಕಾರ ಅವರು ತಿಳಿಸಿದ್ದಾರೆ.

ಪ್ರಕರಣ ಸಂ.03, 2024ರ ಏಪ್ರಿಲ್ 7 ರಂದು ಮಾನ್ಯ ಅಬಕಾರಿ ಜಂಟಿ ಆಯುಕ್ತರು ಕಲಬುರಗಿ ವಿಭಾಗ, ಕಲಬುರಗಿ ಹಾಗೂ ಮಾನ್ಯ ಅಬಕಾರಿ ಉಪ ಆಯುಕ್ತರು, ಯಾದಗಿರಿ ಅವರು ನಿರ್ದೇಶನ ಹಾಗೂ ಮಾರ್ಗದರ್ಶನದಲ್ಲಿ ಖಚಿತ ಭಾತ್ಮಿಯ ಮೇರೆಗೆ ಶ್ರೀ ಸಿದ್ರಾಮ್ ಸುಣಗಾರ ಅಬಕಾರಿ ನಿರೀಕ್ಷಕರು, ಸುರಪುರ ವಲಯ ಹಾಗೂ ಅಬಕಾರಿ ಮುಖ್ಯ ಪೇದೆಗಳಾದ ಶ್ರೀ ಸಂದೀಪ್ ನಾಯಕ, ಶ್ರೀ ಸಂಪತ್ ಕುಮಾರ ಮತ್ತು ಶ್ರೀ ಯಮನಪ್ಪ, ವಾಹನ ಚಾಲಕರಾದ ಶ್ರೀ ರಮೇಶ ದೇಸಾಯಿ ಹಾಗೂ ಗೃಹ ರಕ್ಷಕದಳ ಸಿಬ್ಬಂದಿಗಳಾದ ಶ್ರೀ ನಿಂಗಣ್ಣಗೌಡ, ಶ್ರೀ ಚಂದಪ್ಪ ಹಾಗೂ ಶ್ರೀ ಪರಶುರಾಮ ಅವರು ಕೂಡಿಕೊಂಡು ಸುರಪುರ ತಾಲೂಕಿನ ಬಿಜಾಸಪುರ ಗ್ರಾಮದ ಕಾಟೆಪ್ಪ ತಂದೆ ಭೀಮರಾಯ ಈತನಿಗೆ ಸೇರಿದ ಟಿನ್ ಶೇಡ್ ಮೇಲೆ ಅಬಕಾರಿ ದಾಳಿ ಮಾಡಿ ಪರಿಶೀಲಿಸಿದಾಗ ಒರಿಜಿನಲ್ ಚಾಯ್ಸ್ ವಿಸ್ಕಿ ಅಂತ ಮುದ್ರಿತ 90 ಎಂ.ಎಲ್ ನ 96 ಟೆಟ್ರಾ ಪ್ಯಾಕೆಟ್ ಗಳು (8.640 ಲೀಟರ್ ಮದ್ಯ) ಮತ್ತು ಬಿ.ಪಿ ವಿಸ್ಕಿ ಅಂತ ಮುದ್ರಿತ 90 ಎಂ.ಎಲ್ ನ 34 ಟೆಟ್ರಾ ಪ್ಯಾಕೆಟ್ ಗಳು (3.06.ಲೀಟರ್ ಮದ್ಯ) ಹೀಗೆ ಒಟ್ಟು 11.700 ಲೀಟರ್ ಮದ್ಯ ಅಕ್ರಮವಾಗಿ ಮಾರಾಟದ ಉದ್ದೇಶದಿಂದ ಇಟ್ಟುಕೊಂಡಿರುವುದರಿAದ ಈ ಮುದ್ದೇಮಾಲನ್ನು ವಶಪಡಿಸಿಕೊಂಡು ಆರೋಪಿತನ ವಿರುದ್ದ ಪ್ರಕರಣ ದಾಖಲಿಸಿದೆ. ಆರೋಪಿತ ಪರಾರಿಯಾಗಿದ್ದು ತನಿಖಾ ಸಮಯದಲ್ಲಿ ಪತ್ತೆ ಹಚ್ಚಿ ಬಂಧಿಸಬೇಕಾಗಿರುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now

Related Posts