ಸ್ಥಳೀಯ

ಶಾಸಕ ರಾಜಾ ವೇಣುಗೋಪಾಲ ನಾಯಕರಿಗೆ ಉಗ್ರಾಣ ನಿಗಮ ಅಧ್ಯಕ್ಷ ಸ್ಥಾನ ನೀಡಿ; ನರಸಪ್ಪ ನಾಯಕ ಒತ್ತಾಯ

WhatsApp Group Join Now
Telegram Group Join Now

ಶಾಸಕ ರಾಜಾ ವೇಣುಗೋಪಾಲ ನಾಯಕರಿಗೆ ಉಗ್ರಾಣ ನಿಗಮ ಅಧ್ಯಕ್ಷ ಸ್ಥಾನ ನೀಡಿ; ನರಸಪ್ಪ ನಾಯಕ ಒತ್ತಾಯ

ಯಾದಗಿರಿ: ಸುರಪುರದ ಶಾಸಕ ರಾಜಾ ವೇಣುಗೋಪಾಲ ನಾಯಕರಿಗೆ ರಾಜ್ಯ ಉಗ್ರಾಣ ನಿಗಮವನ್ನು ನೀಡುವಂತೆ ಕರ್ನಾಟಕ ವಾಲ್ಮೀಕಿ ನಾಯಕರ ಸಿಂಹಘರ್ಜನೆ ವೇದಿಕೆ ರಾಜ್ಯ ಉಪಾಧ್ಯಕ್ಷ ನರಸಪ್ಪ ನಾಯಕ ಬುಡಾಯಿನೋರ್ ಒತ್ತಾಯಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ಸುರಪುರದ ಈ ಹಿಂದಿನ ಶಾಸಕರಾಗಿದ್ದ ದಿ| ರಾಜಾ ವೆಂಕಟಪ್ಪ ನಾಯಕರು ಸಚಿವರಾಗುವ ಎಲ್ಲ ಅರ್ಹತೆ ಹೊಂದಿದ್ದರು. ಅವರಿಗೆ ರಾಜ್ಯ ಉಗ್ರಾಣ ನಿಗಮ ನಿಡಲಾಗಿತ್ತು. ಶೀಘ್ರ ಸಚಿವರಾಗಿ ಮಾಡುವ ಭರವಸೆಯನ್ನು ಹೈಕಮಾಂಡ್ ನೀಡಿತ್ತು

ಆದರೆ ಅವರಿಗೆ ಸಿಗಬೇಕಾಗಿದ್ದ ಸ್ಥಾನಮಾನಗಳನ್ನು ಅವರ ಪುತ್ರರಾದ ರಾಜಾ ವೇಣುಗೋಪಾಲ ನಾಯಕರಿಗೆ ನೀಡುವ ಮೂಲಕ ನ್ಯಾಯ ಒದಗಿಸುವ ಕೆಲಸವನ್ನು ಹೈಕಮಾಂಡ್ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಈ ಹಿಂದೆ ತಂದೆಗೆ ನೀಡಿದ್ದ ರಾಜ್ಯ ಉಗ್ರಾಣ ನಿಗಮವನ್ನು ಪುತ್ರನಿಗೆ ನೀಡುವ ಮೂಲಕ ರಾಜಾ ವೇಣುಗೋಪಾಲ ನಾಯಕರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕೆ ಂದು ಅವರು ಒತ್ತಾಯಿಸಿದ್ದಾರೆ.

WhatsApp Group Join Now
Telegram Group Join Now

Related Posts