ಜಿಲ್ಲಾ ನ್ಯಾಯಾಲಯ ಕೋರ್ಟ್ ಆವರಣದಲ್ಲಿ ಜರುಗಿದ ಸ್ವಭಾವ ಸ್ವಚ್ಛತಾ-ಸಂಸ್ಕಾರ ಸ್ವಚ್ಛತಾ ಅಭಿಯಾನ
ಯಾದಗಿರಿ : ಅಕ್ಟೋಬರ್ 02, : ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಚವಾಗಿಡುವುದು ಎಲ್ಲರ ಕರ್ತವ್ಯವಾಗಿದೆ. ಪರಿಸರ ಸ್ವಚ್ಛವಾಗಿದ್ದರೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಯಾದಗಿರಿ ಸಿಜೆಎಂ ಹಾಗೂ ಸಿವಿಲ್ ನ್ಯಾಯಾಧೀಶರು ಗೌರವಾನ್ವಿತ ಶ್ರೀ ಬಾಳಾಸಾಹೇಬ ವಾದವಾಡೆ ಅವರು ಹೇಳಿದರು.
ತಾಜಾ ಸುದ್ದಿಗಳನ್ನು ನೋಡಲು ನಮ್ಮ ಯೂಟ್ಯೂಬ್ ಚಾನಲ್ ಅನ್ನು ವೀಕ್ಷಿಸಿ ಮತ್ತು ಚಂದಾದಾರರಾಗಿhttps://www.youtube.com/@janaaakroshanews
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಯಾದಗಿರಿ ಹಾಗೂ ವಕೀಲರ ಸಂಘ, ಯಾದಗಿರಿ ಇವರ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ನ್ಯಾಯಾಲಯ ಕೋರ್ಟ್ ಆವರಣದಲ್ಲಿ ಜರುಗಿದ ಸ್ವಭಾವ ಸ್ವಚ್ಛತಾ-ಸಂಸ್ಕಾರ ಸ್ವಚ್ಛತಾ ಅಭಿಯಾನದಲ್ಲಿ ಪರಿಸರ ಸ್ವಚ್ಛವಾಗಿದ್ದರೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಮೂಲಕ ಸಾರ್ವಜನಿಕರಿಗೆ ಸ್ವಚ್ಛತೆ ನಿರ್ವಹಣೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಶ್ರೀ ಮರಿಯಪ್ಪ, ಯಾದಗಿರಿ JMFC ಸಿವಿಲ್ ನ್ಯಾಯಾಧೀಶರು ಶ್ರೀ ಅರುಣ್ ಚೌಗಲೆ, ಯಾದಗಿರಿ JMFC ಸಿವಿಲ್ ನ್ಯಾಯಾಧೀಶರು ಹೆಚ್ಚುವರಿ ಶ್ರೀ ರಾಹುಲ್ ಚಾಂಬಾರ್, ಜಿಲ್ಲಾ ವಕೀಲರ ಸಂಘ ಅಧ್ಯಕ್ಷರು ಶ್ರೀ ಸಿ.ಎಸ್. ಮಾಲಿ ಪಾಟೀಲ್, ವಕೀಲರು, ನ್ಯಾಯಾಲಯ ಸಿಬ್ಬಂಧಿಗಳು ಸ್ವಚ್ಛತಾ ಕಾರ್ಯದಲ್ಲಿ ಉಪಸ್ಥಿತರಿದ್ದರು.