ರಾಜ್ಯ

ಹಡಗಲಿಯಲ್ಲಿ ಜೂನ್‌ 25ಕ್ಕೆ ಜನಸ್ಪಂದನ

WhatsApp Group Join Now
Telegram Group Join Now

ಹೊಸಪೇಟೆ, 16 ಜೂನ್ : ಜೂನ್ ಮಾಹೆಯಲ್ಲಿ ನಿಗದಿಯಾದ ತಾಲೂಕುಮಟ್ಟದ ಜನಸ್ಪಂದನ ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.

ಈ ಕುರಿತು ಈಗಾಗಲೇ ಹಲವಾರು ಸುತ್ತೊಲೆಗಳನ್ನು ಹೊರಡಿಸಿರುವ ಜಿಲ್ಲಾಧಿಕಾರಿಗಳು, ಜನಸ್ಪಂದನಾ ಕಾರ್ಯಕ್ರಮದ ರೂಪುರೇಷಗಳ ಬಗ್ಗೆ ಸವಿವರವಾದ ಮಾಹಿತಿ ನೀಡಿದ್ದಾರೆ.

ಮಾನ್ಯ ಮುಖ್ಯಮಂತ್ರಿಗಳ ಸೂಚನೆಯಂತೆ ಸಾರ್ವಜನಿಕರ ಕುಂದು-ಕೊರತೆಗಳನ್ನು ಶೀಘ್ರವಾಗಿ ಪರಿಹರಿಸುವ ನಿಟ್ಟಿನಲ್ಲಿ ಜೂನ್-2024ರ ಮಾಹೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಹಾಗೂ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳು ಜಂಟಿಯಾಗಿ ತಾಲ್ಲೂಕು ಮಟ್ಟದಲ್ಲಿ ಜನಸ್ಪಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಬೇಕು ಎಂದು ಸರ್ಕಾರದ ಮುಖ್ಯಕಾರ್ಯದರ್ಶಿಯವರು ತಿಳಿಸಿದ್ದಾರೆ.

ಈ ಜನಸ್ಪಂದನಾ ಕಾರ್ಯಕ್ರಮದಲ್ಲಿ ಸ್ವೀಕೃತವಾದ ಒಟ್ಟು ಮನವಿ ಕೋರಿಕೆ ಹಾಗೂ ಅವುಗಳ ಮೇಲೆ ಕ್ರಮಕೈಗೊಂಡು, ಕೈಗೊಂಡ ಕ್ರಮದ ಬಗ್ಗೆ ಮಾಸಾಂತ್ಯದಲ್ಲಿ ಎಲ್ಲಾ ತಾಲ್ಲೂಕುಗಳಲ್ಲಿಯೂ ಪೂರ್ಣಗೊಳಿಸಿ, ಜುಲೈ-15 ರೊಳಗಾಗಿ ಮಾನ್ಯ ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ವರದಿ ನೀಡಲು ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿರವರ ಕಚೇರಿಗೆ ಪ್ರತಿಯನ್ನು ನೀಡಲು ಮಾನ್ಯ ಮುಖ್ಯ ಕಾರ್ಯದರ್ಶಿಯವರು ಹೊರಡಿಸಿದ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಮುಖ್ಯ ಕಾರ್ಯದರ್ಶಿಯವರ ಸೂಚನೆಯಂತೆ ವಿಜಯನಗರ ಜಿಲ್ಲೆಯ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳ ಉಪಸ್ಥಿತಿಯಲ್ಲಿ ತಾಲೂಕು ಮಟ್ಟದ ಜನಸ್ಪಂದನಾ ಕಾರ್ಯಕ್ರಮವನ್ನು ಈಗಾಗಲೇ ತಾಲೂಕುವಾರು ದಿನಾಂಕಗಳನ್ನು ನಿಗದಿಪಡಿಸಲಾಗಿರುತ್ತದೆ.
ಈ ಕಾರ್ಯಕ್ರಮ ಜರುಗುವ ಸ್ಥಳದಲ್ಲಿ ಆಯಾ ಇಲಾಖಾವಾರು ಅಹವಾಲು ಕೇಂದ್ರಗಳನ್ನು ತೆರೆದು, ಸಾರ್ವಜನಿಕರಿಂದ ಸಂಬಂಧಪಟ್ಟ ಅಹವಾಲುಗಳನ್ನು ಸ್ವೀಕರಿಸುವ, ರಿಜಿಸ್ಟರ್ನಲ್ಲಿ ದಾಖಲಿಸ ಹಾಗೂ ಇದಕ್ಕಾಗಿ ಕನಿಷ್ಠ ಒಬ್ಬ ಸಿಬ್ಬಂದಿ ಮತ್ತು ಒಬ್ಬ ಗಣಕಯಂತ್ರ ನಿರ್ವಾಹಕರನ್ನು ಕಡ್ಡಾಯವಾಗಿ ನಿಯೋಜಿಸಬೇಕು.

ಸಾರ್ವಜನಿಕರಿಂದ ಸ್ವೀಕೃತಿಯಾಗುವ ಅರ್ಜಿಗಳನ್ನು ದಾಖಲಿಸುವ, ಐಪಿಜಿಆರ್ಎಸ್ ತಂತ್ರಾಂಶದಲ್ಲಿ ಈ ಅರ್ಜಿಗಳನ್ನು ವ್ಯವಸ್ಥಿತವಾಗಿ ನಿರ್ವಹಿಸಿ ನಿಗದಿತ ಕಾಲಾವಧಿಯೊಳಗೆ ವಿಲೇವಾರಿ ಮಾಡಿ, ನಿಯಮಾನುಸಾರ ಪರಿಹಾರ ಕೈಗೊಂಡು, ಅನುಪಾಲನಾ ವರದಿಯನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕು.

ಅಧಿಕಾರಿಗಳಿಗೆ ಸೂಚನೆ: ಜನತಾ ದರ್ಶನದ ವ್ಯವಸ್ಥಿತ ನಿರ್ವಹಣೆಗಾಗಿ ಅಗತ್ಯ ಗಣಕಯಂತ್ರ ಮತ್ತು ಇತರೆ ವಿದ್ಯುನ್ಮಾನ ಉಪಕರಣಗಳ ವ್ಯವಸ್ಥೆಯನ್ನು ಆಯಾ ಇಲಾಖಾ ಮುಖ್ಯಸ್ಥರು ಪೂರೈಸಬೇಕು. ಜಿಲ್ಲಾ ಪೋಲೀಸ್ ಇಲಾಖೆಯಿಂದ ಅಗತ್ಯ ಭದ್ರತಾ ವ್ಯವಸ್ಥೆ ಒದಗಿಸಬೇಕು. ಜಿಲ್ಲಾಮಟ್ಟದ ಎಲ್ಲಾ ಅಧಿಕಾರಿಗಳು, ನಿಗದಿಪಡಿಸಿದ ದಿನಾಂಕದಂದು ಪೂರಕ ತಯಾರಿಯೊಂದಿಗೆ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಜಿಲ್ಲಾಧಿಕಾರಿಗಳಾದ ಎಂ.ಎಸ್.ದಿವಾಕರ್ ಅವರು ಸೂಚನೆ ನೀಡಿದ್ದಾರೆ.
ಹಡಗಲಿ ಕಾರ್ಯಕ್ರಮದ ದಿನಾಂಕ ಬದಲು: ಹೂವಿನಹಡಗಲಿ ತಾಲೂಕಿನಲ್ಲಿ ಜೂನ್ 21ರಂದು ಜನಸ್ಪಂದನ ಕಾರ್ಯಕ್ರಮವನ್ನು ನಿಗದಿಪಡಿಸಲಾಗಿತ್ತು. ಮಾನ್ಯ ಮುಖ್ಯಮಂತ್ರಿಯವರು ಜೂನ್ 21ರಂದು ಜಿಲ್ಲೆಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಹಡಗಲಿಯಲ್ಲಿ ಜೂನ್ 21ರ ಬದಲಾಗಿ ಜೂನ್ 25ರಂದು ಜಿಲ್ಲಾ ಮಟ್ಟದ ಅಧಿಕಾರಿಗಳ ಉಪಸ್ಥಿತಿಯಲ್ಲಿ ತಾಲೂಕು ಮಟ್ಟದ ಜನಸ್ಪಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಸಾರ್ವಜನಿಕರಲ್ಲಿ ಮನವಿ: ಈ ಜನತಾ ದರ್ಶನ ಕಾರ್ಯಕ್ರಮದಲ್ಲಿ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿರುವರು. ಅಧಿಕಾರಿಗಳ ಸಮ್ಮುಖದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು ಸದರಿ ದಿನಾಂಕಗಳಂದು ಆಯಾ ತಾಲೂಕಿನ ಸಾರ್ವಜನಿಕರು ಸಹ ಕಾರ್ಯಕ್ರಮದಲ್ಲಿ ಹಾಜರಿದ್ದು ತಮ್ಮ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಆಯಾ ತಾಲೂಕಿನ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಜನ ಆಕ್ರೋಶ ಪತ್ರಿಕೆಯನ್ನು ಜನರ ಆಕ್ರೋಶದ ಧ್ವನಿಯಾಗಿ ಸೃಷ್ಟಿಸಲಾಗಿದೆ. ನೀವು ನಿಮ್ಮ ವ್ಯಾಪ್ತಿಯ ಸುದ್ದಿಗಳನ್ನು, ಅಕ್ರಮಗಳನ್ನು, ಯಾವುದೇ ಸಾಮಾಜಿಕ ದುಷ್ಕೃತ್ಯದ ಘಟನೆಯನ್ನು ಈ ಪತ್ರಿಕೆಗೆ ಕಳುಹಿಸಬಹುದು. ನಾವು ಪ್ರಕಟಿಸುತ್ತೇವೆ. ನಮ್ಮ ಸಂಪರ್ಕ ಅಂಖ್ಯೆ ಮತ್ತು ವಾಟ್ಸಪ್‌ ಸಂಖ್ಯೆ 9845968164/9448945817, ಇಮೇಲ್‌ [email protected] -ಲಕ್ಷ್ಮೀಕಾಂತ ನಾಯಕ ಸಂಪಾದಕರು ಮತ್ತು ಲೇಖಕರು, ಜನ ಆಕ್ರೋಶ ಪಾಕ್ಷಿಕ ಪತ್ರಿಕೆ ಹಾಗೂ ಜನ ಆಕ್ರೋಶ ನ್ಯೂಸ್‌ ಪೋರ್ಟಲ್.

WhatsApp Group Join Now
Telegram Group Join Now

Related Posts