ಸ್ಥಳೀಯ

ಒಂದೇ ಭಾರತ್‌ ರೈಲು ನಿಲುಗಡೆ

WhatsApp Group Join Now
Telegram Group Join Now

ರಾಯಚೂರು, 5 ಏಪ್ರಿಲ್ : ಕಲಬುರಗಿಯಿಂದ-ಬೆಂಗಳೂರುವರೆಗೆ ಸಂಚರಿಸಲಿರುವ ವಂದೇ ಭಾರತ್ ಎಕ್ಸಪ್ರೆಸ್ ರೈಲು ಇನ್ನು ಮುಂದೆ ಯಾದಗಿರಿ ನಿಲ್ದಾಣದಲ್ಲಿ ನಿಲುಗಡೆಯಾಗಲಿದೆ ಎಂದು ಸಂಸದರಾದ ರಾಜಾ ಅಮರೇಶ್ವರ್ ನಾಯಕ್ ಅವರು ತಿಳಿಸಿದರು.

ಬೆಂಗಳೂರಿನ ಬೈಯಪ್ಪನಹಳ್ಳಿಯಲ್ಲಿರುವ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಮತ್ತು ಕಲಬುರಗಿ ನಡುವೆ ಸಂಚಾರ ನಡೆಸುವ ಹೊಸ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಸಂಚಾರಕ್ಕೆ ನರೇಂದ್ರ ಮೋದಿ ಮಾರ್ಚ್ 9ರಂದು ಚಾಲನೆ ನೀಡಿದ್ದರು.

ಆದರೆ ಯಾದಗಿರಿಯಲ್ಲಿ ಈ ರೈಲು ನಿಲಗಡೆಗೆ ರೈಲ್ವೆ ಮಂಡಳಿ ಒಪ್ಪಿಗೆ ನೀಡಿರಲಿಲ್ಲ ಯಾದಗಿರಿ, ಶಹಾಪುರ, ಸುರಪುರ, ಗುರಮಿಠಕಲ್ ತಾಲೂಕಿನ ಜನರ ಬೇಡಿಕೆಗೆ ಅನುಗುಣವಾಗಿ ಸಂಸದರಾದ ರಾಜಾಅಮರೇಶ್ವರ ನಾಯಕ್ ಅವರು ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದಿದ್ದು

ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಯಾದಗಿರಿಯಲ್ಲೂ ರೈಲು ನಿಲುಗಡೆಯಾಗಲಿದೆ. ಈ ರೈಲು ಬೆಳಿಗ್ಗೆ 5 ಗಂಟೆ 15 ನಿಮಿಷ ಕಲಬುರಗಿಯಿಂದ ಆರಂಭಗೊಂಡು 5:40 ಕ್ಕೆ ವಾಡಿಯ ನಿಲ್ಲಲಿದ್ದು ಇನ್ನು ಮುಂದೆ ಯಾದಗಿರಿಯಲ್ಲೂ ಕೂಡ 5 ಗಂಟೆ 54 ನಿಮಿಷಕ್ಕೆ ನಿಲಗಡೆಯಾಗಲಿದ್ದು ನಂತರ ಬೆಂಗಳೂರಿನ ಬೈಯಪ್ಪನಹಳ್ಳಿಯ ಸರ್. ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಿಂದ ಬರುವ ವೇಳೆಯು ಕೂಡ ನಿಲಗಡೆಯಾಗಲಿದೆ ಎಂದು ಸಂಸದರು ಪತ್ರಿಕಾ ಪ್ರಕಟನೆ ಮೂಲಕ ತಿಳಿಸಿದರು.

WhatsApp Group Join Now
Telegram Group Join Now

Related Posts