ರಾಜ್ಯ

ಕೊಪ್ಪಳದ ಕಮಾನ್ ಗಳನ್ನು ಮರು ನಿರ್ಮಾಣ. ನಿಯಮ ಮೀರಿದ ಆಶ್ರಯ ಬಡಾವಣೆ ನಗರ ಸಭೆ ವಶಕ್ಕೆ ಪಡೆಯಲು ಒತ್ತಾಯಿಸಿ ಸಚಿವ ಶಿವರಾಜ್ ತಂಗಡಗಿಗೆ ಮನವಿ.

WhatsApp Group Join Now
Telegram Group Join Now

ಕೊಪ್ಪಳದ ಕಮಾನ್ ಗಳನ್ನು ಮರು ನಿರ್ಮಾಣ. ನಿಯಮ ಮೀರಿದ ಆಶ್ರಯ ಬಡಾವಣೆ ನಗರ ಸಭೆ ವಶಕ್ಕೆ ಪಡೆಯಲು ಒತ್ತಾಯಿಸಿ ಸಚಿವ ಶಿವರಾಜ್ ತಂಗಡಗಿಗೆ ಮನವಿ.

ಕೊಪ್ಪಳ : ನಗರದ ನಾಲ್ಕು ಕಮಾನ್ ಗಳನ್ನು ಮರು ನಿರ್ಮಾಣ ಮಾಡುವಂತೆ. ನಿಯಮ ಮೀರಿದ ಆಶ್ರಯ ಬಡಾವಣೆ ನಗರ ಸಭೆ ವಶಕ್ಕೆ ಪಡೆಯಲು ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರಿಗೆ ನಾಗರಿಕ ಹಕ್ಕುಗಳ ಹೋರಾಟ ವೇದಿಕೆ
(ಪಿಯುಸಿಎಲ್) ಜಿಲ್ಲಾ ಅಧ್ಯಕ್ಷ ಮಹಾಂತೇಶ ಕೊತಬಾಳ. ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು. ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಬಸವರಾಜ್ ಶೀಲವಂತರ್ ಮುಂತಾದವರು ಮನವಿ ಸಲ್ಲಿಸಿ ವಿವರಿಸಿದರು.

ಮನವಿಯಲ್ಲಿ ಕೊಪ್ಪಳ ನಗರದಲ್ಲಿ ಕೆಡವಿ ಹಾಕಲಾದ ಕಮಾನುಗಳನ್ನು ಅದೇ ಸ್ಥಳದಲ್ಲಿ ಮರು ನಿರ್ಮಾಣ ಮಾಡುವಂತೆ ಜಾರಿಗೊಳಿಸಿದ ಸರಕಾರದ ಆದೇಶವನ್ನು ಅನುಷ್ಠಾನಗೊಳಿಸಬೇಕು.
ಕೊಪ್ಪಳ ನಗರದ ಕುಷ್ಟಗಿ ರಸ್ತೆಯ ಸರ್ವೆ ನಂಬರ 91/3 ಹಾಗೂ 91/4 ರಲ್ಲಿ ನಿರ್ಮಿಸಲಾದ ಆಶ್ರಯ ಬಡಾವಣೆಯ ಮೂಲ ಫಲಾನುಭವಿಗಳು ಆಶ್ರಯ ನಿವೇಶನ ಹೊಂದುವ ಅರ್ಹತೆ ಹೊಂದಿದವರಲ್ಲ. ಈ ಭೂಮಿಯ ದಾನಪತ್ರದಲ್ಲಿ ನಮೂದಿಸಿರುವಂತೆ ಫಲಾನುಭವಿಗಳು ಯಾರೂ ಬೇಲ್ದಾರ ಕಾರ್ಮಿಕ ಸಂಘದ ಸದಸ್ಯರಲ್ಲ. ಅಲ್ಲದೇ ಆಶ್ರಯ ನಿಯಮಾವಳಿಗಳನ್ನು ಗಾಳಿಗೆ ತೂರಿ ಅವಧಿ ಮೀರುವ ಮುನ್ನವೇ ಬಡಾವಣೆಯ ಹಲವಾರು ನಿವೇಶನಗಳು ಬೇರೆಯವರ ಹೆಸರಿಗೆ ಪರಭಾರೆಯಾಗಿವೆ. ಕಾರಣ ಈ ಬಡಾವಣೆಯ ಹಕ್ಕು ಪತ್ರದಲ್ಲಿ ನಮೂದಿಸಿರುವಂತೆ ಬಡಾವಣೆಯ ನಿವೇಶನ ಹಂಚಿಕೆಯನ್ನು ರದ್ದುಗೊಳಿಸಬೇಕು ಹಾಗೂ ಆ ಬಡಾವಣೆಯ ಮನೆ ಸಹಿತ ನಿವೇಶನಗಳನ್ನು ನಗರಸಭೆ ವಶಕ್ಕೆ ಪಡೆದುಕೊಂಡು ಬಡವರಿಗೆ ಮರು ಹಂಚಿಕೆ ಮಾಡಬೇಕು.ಹಾನಗಲ್ ಕುಟುಂಬದವರಿಂದ ನಗರಸಭೆ ವಶಕ್ಕೆ ಪಡೆದುಕೊಂಡು 05 ನಿವೇಶನಗಳನ್ನು ಆಶ್ರಯ ಸಮಿತಿ ಅಧ್ಯಕ್ಷರು ಮತ್ತೆ ನಗರದ ಶ್ರೀಮಂತರಿಗೆ ಹಂಚಿಕೆ ಮಾಡಿರುವುದು ಕಾನೂನು ಬಾಹಿರವಾಗಿರುತ್ತದೆ. ಕಾರಣ ಈ ಹಂಚಿಕೆಯನ್ನು ರದ್ದುಪಡಿಸಬೇಕು. ನಿವೇಶನಗಳನ್ನು ತಮಗೆ ಕೊಡುವಂತೆ ಈ ಹಿಂದೆ ಮನವಿ ಸಲ್ಲಿಸಿದ ಬಡವರಿಗೆ ಮರು ಹಂಚಿಕೆ ಮಾಡಬೇಕು.ಕೊಪ್ಪಳ ನಗರದ (ಗಣೇಶ ತೆಗ್ಗು, ವಾರ್ಡ ನಂ.26) ಸರ್ವೆ ನಂಬರ 9/1 ರಲ್ಲಿ ನಿವೇಶನ ಸಂಖ್ಯೆ- 52 ರಲ್ಲಿ ಕಳೆದ 25 ವರ್ಷಗಳಿಂದ ಈ ನಿವೇಶನದಲ್ಲಿ ವಾಸವಾಗಿರುವ ಸ್ವತಃ ಅಂಗವಿಕಲನಾಗಿರುವ ಚೆನ್ನಬಸಪ್ಪ ತಂದೆ ಬಸವರಾಜ ಯಲಿಗಾರ ಅವರನ್ನು ಕಡೆಗಣಿಸಿ. ಈ ನಿವೇಶನವನ್ನು ಶ್ರೀಮತಿ ಗೀತಾ ಗಂಡ ಮಂಜುನಾಥ ಬಂಡಿಹಾಳ ಅವರಿಗೆ ನಿವೇಶನ ಮಂಜೂರಿ ಮಾಡಿರುವುದನ್ನು ರದ್ದುಗೊಳಿಸಿ. ಚೆನ್ನಬಸಪ್ಪ ತಂದೆ ಬಸವರಾಜ ಯಲಿಗಾರ ಅವರಿಗೆ ಮರು ಹಂಚಿಕೆ ಮಾಡಬೇಕು.ಆಶ್ರಯ ನಿವೇಶನಗಳ ನಮೂನೆ-3 ರಲ್ಲಿ ಮಾಲೀಕರು ಎನ್ನುವ ಅಂಕಣದಲ್ಲಿ ಪೌರಾಯುಕ್ತರು ನಗರಸಭೆ ಕೊಪ್ಪಳ ಹಾಗೂ ಅನುಭೋಗದಾರರು ಎನ್ನುವಲ್ಲಿ ನಿವೇಶನದ ಫಲಾನುಭವಿಯ ಹೆಸರನ್ನು ಕಡ್ಡಾಯವಾಗಿ ನಮೂದಿಸಬೇಕು.ನಗರಸಭೆ ಕಾರ್ಯಾಲಯದಲ್ಲಿ ಅರ್ಜಿದಾರರ ಕಡತ ನಿರ್ವಾಹಕರನ್ನು ಭೇಟಿಯಾಗಿ ಗೋಗರೆಯುವದನ್ನು ತಪ್ಪಿಸಲು “ಏಕಗವಾಕ್ಷಿ” ಯೋಜನೆ ಜಾರಿಗೊಳಿಸಲು ಸೂಕ್ತ ಕ್ರಮವಹಿಸಬೇಕು.
ಸಕಾರಣವಿಲ್ಲದೇ ಕಾಲಮಿತಿಯೊಳಗೆ ಅರ್ಜಿ ವಿಲೇವಾರಿ ಮಾಡದ ಸಿಬ್ಬಂದಿಯ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು.ನಗರಸಭೆ ಕಾರ್ಯಾಲಯದಲ್ಲಿ ಮುಟೇಶನ್, ನಮೂನೆ-3, ಉದ್ಯಮ ಪರವಾನಗಿ ಮುಂತಾದ ಇತರೆ ಕೆಲಸಗಳಿಗೆ ಬೇಕಾಗುವ ದಾಖಲೆಗಳ ಮಾಹಿತಿಯನ್ನು ಸಾರ್ವಜನಿಕರಿಗೆ ನೀಡಲು, ಸಾರ್ವಜನಿಕ ಸಂಪರ್ಕ ಅಧಿಕಾರಿಯೊಬ್ಬರನ್ನು ನೇಮಿಸಬೇಕು. ನಗರದ ಪ್ರಮುಖ ರಸ್ತೆಗಳಲ್ಲಿ ಪುರುಷರ ಹಾಗೂ ಮಹಿಳೆಯರ ಸಾರ್ವಜನಿಕ ಮೂತ್ರಾಲಯ ನಿರ್ಮಾಣ ಮಾಡಬೇಕು. ಸಿಂದೋಗಿ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ನಿರ್ಮಿಸಿದ ಗುಂಪು ಮನೆಗಳನ್ನು ರದ್ದುಗೊಳಿಸಿ, ನಿವೇಶನಗಳನ್ನಾಗಿ ಪರಿವರ್ತಿಸಿ ಫಲಾನುಭವಿಗಳಿಗೆ ಕೊಡಬೇಕು ಹಾಗೂ ಅಲ್ಲಿ ಬೆಳೆದಿರುವ ಜಾಲಿಕಂಟೆ ಸ್ವಚ್ಛಗೊಳಿಸಬೇಕು. ಜನ ವಸತಿಗೆ ರಸ್ತೆ, ಚರಂಡಿ, ವಿದ್ಯುತ್, ನೀರು ಮುಂತಾದ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ನಾಗರಿಕ ಹಕ್ಕುಗಳ ಹೋರಾಟ ವೇದಿಕೆ (ಪಿಯುಸಿಎಲ್) ಜಿಲ್ಲಾ ಅಧ್ಯಕ್ಷ ಮಹಾಂತೇಶ ಕೊತಬಾಳ. ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು. ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಬಸವರಾಜ್ ಶೀಲವಂತರ್. ಶಿವಪ್ಪ ಹಡಪದ್ ಮುಂತಾದವರು ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.

WhatsApp Group Join Now
Telegram Group Join Now

Related Posts