ರಾಯಚೂರು

ಪೋಲಿಸರು ರಾಜಕೀಯ ಷಡ್ಯಂತ್ರಕ್ಕೆ ಬಲಿಯಾಗಿದ್ದಾರೆ: ಸಂತೋಷ ಜಿ ನಾಯಕ

WhatsApp Group Join Now
Telegram Group Join Now

ಪೋಲಿಸರು ರಾಜಕೀಯ ಷಡ್ಯಂತ್ರಕ್ಕೆ ಬಲಿಯಾಗಿದ್ದಾರೆ: ಸಂತೋಷ ಜಿ ನಾಯಕ

ದೇವದುರ್ಗ: “ನಮ್ಮ ಮೇಲೆ ಹೂಡಲಾದ ಜಾತಿ ನಿಂದನೆ ಪ್ರಕರಣ ಸುಳ್ಳು ಪ್ರಕರಣವಾಗಿದೆ. ಪೋಲಿಸರು ಪ್ರಾಥಮಿಕ ಮತ್ತು ವಸ್ತುನಿಷ್ಠ ತನಿಖೆ ಮಾಡದೆ ಪ್ರಕರಣ ದಾಖಲಿಸಿದ್ದಾರೆ. ಇದರಿಂದ ನಮ್ಮ ಆತ್ಮಗೌರವಕ್ಕೆ ದಕ್ಕೆಯಾಗಿದೆ ಮತ್ತು ಅವಮಾನವೂ ಆಗಿದೆ. ಈ ರೀತಿ ಸುಳ್ಳು ಪ್ರಕರಣವನ್ನು ದಾಖಲಿಸುವುದು ಎಷ್ಟು ಸರಿ?” ಎಂದು ಸಂತೋಷ ಜಿ ನಾಯಕ ಅವರು ಪೋಲಿಸ್ ಇಲಾಖೆಯನ್ನು ಪ್ರಶ್ನಿಸಿದ್ದಾನೆ. ಸಂತೋಷ ಜಿ ನಾಯಕ ದೇವದುರ್ಗ ಮತಕ್ಷೇತ್ರದ ಹಾಲಿ ಶಾಸಕಿ ಶ್ರೀಮತಿ ಕರೆಮ್ಮ ಜಿ ನಾಯಕರ ಪುತ್ರರಾಗಿದ್ದು ನ್ಯಾಯಾಲಯದಿಂದ ಜಾಮೀನು ಪಡೆದಿರುವ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ತಮ್ಮ ಸ್ವಗೃಹದಲ್ಲಿ ಮಾತನಾಡಿದರು. ಮೂಲತಃ ನಮ್ಮದು ಸಂಭಾವಿತ ಕುಟುಂಬವಾಗಿದ್ದು ಸಮಾಜ ಸೇವೆಯನ್ನು ಉಸಿರಾಗಿಸಿಕೊಂಡು ಜೀವಿಸುತ್ತಾ ಬಂದವರು. ಈ ಕಾರಣಕ್ಕೆ ದೇವದುರ್ಗದ ಜನತೆ ನಮಗೆ ಆಶಿರ್ವಾದ ಮಾಡಿದ್ದು, ಸದ್ಯ ಜನಾನುರಾಗಿ ಸೇವೆಯನ್ನು ನೀಡುತ್ತಿದ್ದೇವೆ. ಇದನ್ನು ಸಹಿಸದ ಕೆಲವರು ನಮ್ಮ ಕುಟುಂಬದ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ಅವರು ಹೇಳಿದರು.

ದೇವದುರ್ಗದ ಅವರ ನಿವಾಸದಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಈ ಹೇಳಿಕೆಯನ್ನು ನೀಡಲಾಗಿದೆ.

ಘಟನೆಯ ಹಿನ್ನೆಲೆ: ಫೆಬ್ರವರಿ 11ರಂದು ದೇವದುರ್ಗದಲ್ಲಿ ಘಟನೆಯೊಂದು ನಡೆದು ಅದು ರಾಜ್ಯಾದ್ಯಂತ ಮಾಧ್ಯಮ ವರದಿಯಾಗಿತ್ತು. ದೇವದುರ್ಗದ ಶಾಸಕರ ಮಗ ನಗರದ ಪ್ರವಾಸಿ ಮಂದಿರದಲ್ಲಿ ಪೋಲಿಸ್ ಪೇದೆಯೊಬ್ಬರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನುವುದು ಸುದ್ದಿಯ ತಿರುಳಾಗಿತ್ತು. ನಂತರ ಅನೂಹ್ಯ ಘಟನೆಗಳು ನಡೆದು ಪೇದೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದಾದ ಮೇಲೆ ಶಾಸಕರ ಪುತ್ರ ಮತ್ತು ಶಾಸಕರ ಆಪ್ತ ಕಾರ್ಯದರ್ಶಿಯವರ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಿಸಲಾಗಿತ್ತು. ಮತ್ತು ಪೋಲಿಸ್ ಪೇದೆ ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪವನ್ನೂ ಮಾಡಲಾಗಿತ್ತು. ಈ ಕುರಿತು ಸ್ಪಷ್ಟೀಕರಣ ನೀಡಿದ ಸಂತೋಷ್ “ಅಲ್ಲಿ ಏನೂ ನಡೆದಿಲ್ಲ,  ಟ್ರ್ಯಾಕ್ಟರ್ ಚಾಲಕರು ಮತ್ತು ಪೇದೆಯ ಮಧ್ಯೆ ಘರ್ಷಣೆ ಉಂಟಾಗಿದೆ. ನಾನು ಮತ್ತು ನಮ್ಮ ಆಪ್ತ ಸಹಾಯಕ ಇಲಿಯಾಸ್ ಜಗಳ ಬಿಡಿಸುವ ಯತ್ನ ಮಾಡಿದೇವು. ಇಷ್ಟಾಗಿ ಅಲ್ಲಿ ಗಂಭೀರವಾದ ಘರ್ಷಣೆಯೇನೂ ನಡೆದಿಲ್ಲ. ಈ ಪೋಲಿಸ್ ಪೇದೆ ನಮಗೆ ಹತ್ತಿರದಿಂದ ಸಂಬಂಧಿಕನಾಗಿದ್ದರಿಂದ ಟ್ರ್ಯಾಕ್ಟರ್‍ಗಳನ್ನು ಜಪ್ತಿ ಮಾಡಿರುವುದರ ಕುರಿತು ಮಾತನಾಡಲು ಕರೆಯಲಾಗಿತ್ತು. ಆದರೆ ಪೋಲಿಸರು ಪೂರ್ವನಿಯೋಜಿತ ಸಂಚು ರೂಪಿಸಿರುವಂತೆ ಕಾಣಿಸುತ್ತದೆ. ವಿನಾಕಾರಣ ವಿಷಯವನ್ನು ಗಂಭೀರ ಮಾಡಿ ಸುಳ್ಳು ಜಾತಿ ನಿಂದನೆ ಪ್ರಕರಣ ದಾಖಲಿಸಲಾಗಿದೆ” ಎಂದು ಅವರು ಹೇಳಿದರು.

ಇದೆಲ್ಲಾ ಏಕೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು “ಕ್ಷೇತ್ರದ ಜನರಿಗೆ ಮಾತು ಕೊಟ್ಟಂತೆ ಮಟ್ಕಾ ಮತ್ತು ಇಸ್ಪೀಟು ಸೇರಿದಂತೆ ಅನೇಕ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮಾನ್ಯ ಶಾಸಕರು ಪೋಲಿಸ್ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಅಕ್ರಮ ದಂದೆಕೋರರೊಂದಿಗೆ ಶಾಮೀಲಿರುವ ಪೋಲಿಸರು ಮತ್ತು ನಮ್ಮ ರಾಜಕೀಯ ವಿರೋಧಿಗಳು ಈ ಸಂಚನ್ನು ರೂಪಿಸಿದ್ದಾರೆ. ಇದರಲ್ಲಿ ದೇವದುರ್ಗದ ಸರ್ಕಾರಿ ವೈದ್ಯಾಧಿಕಾರಿಗಳೂ ಶಾಮೀಲಿದ್ದು ಅಂತಹ ಗಂಭೀರ ಸ್ವರೂಪದ ಸಮಸ್ಯೆ ಇರದಿದ್ದಾಗಿಯೂ ಪೇದೆಯನ್ನು ಚಿಕಿತ್ಸೆಗೆ ಸ್ಪಂದಿಸುತ್ತಿಲ್ಲ ಎನ್ನುವ ಸಬೂಬು ನೀಡಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿದ್ದಾರೆ. ವಸ್ತುಸ್ಥಿತಿ ಏನೆಂದರೆ ಪೇದೆ ಹಣಮಂತ ಮದ್ಯ ಸೇವಿಸಿದವನಂತೆ ಕಂಡು ಬರುತ್ತಿದ್ದ ಈ ಸಂದರ್ಭದಲ್ಲಿ ಜಾತಿಯ ಪ್ರಸ್ತಾಪವೇ ಆಗಿಲ್ಲ. ಆದರೂ ಜಾತಿ ನಿಂದನೆಯ ಆರೋಪ ಹೊರಸಿ ಪ್ರಕರಣ ದಾಖಲಿಸಲಾಗಿದೆ. ಘಟನೆ ನಡೆದ ಸ್ಥಳದಲ್ಲಿ ನಾಲ್ಕು ಜನರ ಹೊರತು ಬೇರೆ ಯಾರೂ ಇರಲಿಲ್ಲ” ಎಂದು ಎಂದು ಈ ಸಂದರ್ಭದಲ್ಲಿ ಹೇಳಿದ್ದಾರೆ.

ಪೋಲಿಸರು ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಪೂರ್ವಾಪರ ಯೋಚನೆ ಮಾಡದೆ ಪ್ರಕರಣ ದಾಖಲಿಸಿದ್ದಾರೆ. ಶಾಸಕರ ಗೌರವಕ್ಕೂ ದಕ್ಕೆ ತಂದಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆಯಾಗಬೇಕು. ಅಶೋಕ ಸದಲಗಿ ಎನ್ನುವ ದೇವದುರ್ಗ ಪಿಐ ರಾಜಕೀಯ ಷಡ್ಯಂತ್ರದ ಜೊತೆ ಕೈಗೂಡಿಸಿದ್ದಾರೆ ಎಂದು ಈ ಸಂದರ್ಭದಲ್ಲಿ ಸಾರ್ವಜನಿಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಕೆಳಹಂತದ ಅಧಿಕಾರಿಗಳ ದುರ್ವರ್ತನೆಯ ಕುರಿತು ಜಿಲ್ಲಾ ಎಸ್ಪಿ ಮತ್ತು ಸಂಬಂಧಿಸಿದ ಅಧಿಕಾರಿಗಳು ಕ್ರಮಗೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

WhatsApp Group Join Now
Telegram Group Join Now

Related Posts