ರಾಜ್ಯ

ಸವಿತಾ ಸಮಾಜದ ರಾಮನಾಥ ಠಾಕೂರಗೆ ಸಂಪುಟ ದರ್ಜೆ ಸಚಿವ ಸ್ಥಾನ; ಅಧ್ಯಕ್ಷ ಅಪ್ಪಣ್ಣ ಚಿನ್ನಾಕಾರ ಹರ್ಷ

WhatsApp Group Join Now
Telegram Group Join Now

ಸವಿತಾ ಸಮಾಜದ ರಾಮನಾಥ ಠಾಕೂರಗೆ ಸಂಪುಟ ದರ್ಜೆ ಸಚಿವ ಸ್ಥಾನ; ಅಧ್ಯಕ್ಷ ಅಪ್ಪಣ್ಣ ಚಿನ್ನಾಕಾರ ಹರ್ಷ

ಯಾದಗಿರಿ: ಹಿಂದುಳಿದ ವರ್ಗಗಳಲ್ಲೇ ಅತ್ಯಂತ ಹಿಂದುಳಿದ ಸವಿತಾ ಸಮಾಜದ ರಾಜ್ಯಸಭಾ ಸದಸ್ಯರಾದ ರಾಮನಾಥ ಠಾಕೂರ್ ಅವರಿಗೆ ಕೇಂದ್ರದ ಸಂಪುಟ ದರ್ಜೆ ಸಚಿವ ಸ್ಥಾನ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಮಾಜ ಅಬಿನಂದನೆಗಳು ಸಲ್ಲಿಸುತ್ತದೆ ಎಂದು ಸವಿತಾ ಸಮಾಜದ ಜಿಲ್ಲಾದ್ಯಕ್ಷರೂ ಆದ ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾದ್ಯಕ್ಷ ಅಪ್ಪಣ್ಣ ಚಿನ್ನಾಕಾರ ತಿಳಿಸಿದ್ದಾರೆ.

ಈ ಕುರಿತು ಹೇಳಿಕೆ ನೀಡಿರುವ ಅವರು, ವರ್ಣ ವ್ಯವಸ್ಥೆಯಲ್ಲಿ ಹಿಂದುಳಿದ ವರ್ಗಗಳಲ್ಲೇ ಅತ್ಯಂತ ಹಿಂದುಳಿದ ವರ್ಗವಾಗಿರುವ ಸವಿತಾ ಸಮಾಜಕ್ಕೆ ಪ್ರಪ್ರಥಮ ಬಾರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಕ್ಯಾಬಿನೆಟ್ ಸಚಿವ ಸ್ಥಾನವನ್ನು ನೀಡಿರುವುದು ಸವಿತಾ ಸಮಾಜಕ್ಕೆ ಪ್ರಧಾನ ಮಂತ್ರಿಗಳು ಗೌರವ ನೀಡಿರುವ ಸಂಗತಿಯಾಗಿದೆ ಇದು ಇಡಿ ಸವಿತಾ ಸಮಾಜಕ್ಕೆ ಸಿಕ್ಕ ಗೌರವವಾಗಿದೆ ಎಂದು ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಇತ್ತಿಚೆಗಷ್ಟೇ ರಾಮನಾಥ ಠಾಕೂರ ಅವರ ತಂದೆ, ಬಿಹಾರದ ಮಾಜಿ ಸಿಎಂ ಆಗಿದ್ದ ದಿ| ಕರ್ಪೂರಿ ಠಾಕೂರ ಅವರಿಗೆ ಭಾರತರತ್ನ ನೀಡುವ ಮೂಲಕ ದೇಶದ ಅತ್ಯುನ್ನತ ನಾಗರಿಕ ಗೌರವ ನೀಡಿದ ಬೆನ್ನಲ್ಲೇ ಅವರ ಪುತ್ರನಿಗೆ ಕ್ಯಾಬಿನೆಟ್ ಗೌರವ ನೀಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯಂತ ನಿರ್ಲಕ್ಷö್ಯಕ್ಕೆ ಒಳಗಾಗಿದ್ದ ಅತ್ಯಂತ ಹಿಂದುಳಿದ ವರ್ಗಗಳಲ್ಲಿಯೇ ಅತಿ ಹಿಂದುಳಿದ ಸವಿತಾ ಸಮಾಜಕ್ಕೆ ಕನಸಲ್ಲೂ ಉಹಿಸದ ಸ್ಥಾನ ಮಾನ ನೀಡಿರುವುದು ಸ್ವಾಗತಾರ್ಹವಾಗಿದೆ.

ಬಲಾಢ್ಯ ಮತ್ತು ಜನಸಂಖ್ಯೆಯಲ್ಲಿ ಹೆಚ್ಚು ಇರುವ ಸಮುದಾಯಗಳಿಗೆ ಮಾತ್ರ ನ್ಯಾಯ ಎಂಬ ಅಲಿಖಿತ ನಿಯಮವನ್ನು ಅಳಿಸಿ ಹಾಕುವ ಪ್ರಯತ್ನವನ್ನು ಪ್ರಧಾನ ಮಂತ್ರಿಗಳು ಮಾಡಿದ್ದಾರೆ. ಈ ಮೂಲಕ ಹಿಂದುಳಿದ ಮತ್ತು ನಿರ್ಲಕ್ಷö್ಯಕ್ಕೊಳಗಾದ ಸಮುದಾಯದವರಿಗೂ ಸಮಪಾಲು ಕೊಡುವ ಕಾರ್ಯ ಮಾಡಿರುವುದು ಸಮಾಜಕ್ಕೆ ಮತ್ತು ಇನ್ನಿತರ ಅತ್ಯಂತ ಹಿಂದುಳಿದ ನೂರಾರು ಸಣ್ಣ ಅತಿಸಣ್ಣ ಸಮುದಾಯಗಳಿಗೆ ಇದು ಅತ್ಯಂತ ಆಶಾದಾಯಕ ಬೆಲವಣಿಗೆಯಾಗಿದೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸ್ವತಃ ಹಿಂದುಳಿದ ವರ್ಗಗಳಿಂದ ಬಂದ ಪ್ರಧಾನ ಮಂತ್ರಿಗಳು ಎಲ್ಲ ಹಿಂದುಳಿದವರನ್ನು ಮೇಲೆತ್ತುವ ಕಾರ್ಯವನ್ನು ಸದ್ದಿಲ್ಲದೇ ಮಾಡುತ್ತಿದ್ದಾರೆ ಇದು ಹೀಗೆಯೇ ಮುಂದುವರೆಸಬೇಕು ಎಂದು ಅವರಿಗೆ ಮನವಿ ಮಾಡುವುದಾಗಿ ಅವರು ತಿಳಿಸಿದ್ದಾರೆ.

WhatsApp Group Join Now
Telegram Group Join Now

Related Posts