ರಾಜಾ ಪಾಮನಾಯಕ

Jul 8, 2023 - 16:14
 0  221

Google  News WhatsApp Telegram Facebook

ರಾಜಾ ಪಾಮನಾಯಕ

Janaa Akrosha News Desk.

ಈತನ ಕಾಲದ ಅವಿ ಸ್ಮರಣೀಯ ಘಟನೆ ಎಂದರೆ ಕ್ರಿ ಶ 1680 ಫೆಬ್ರುವರಿ 20, 21ರಂದು ಶಾಹಪೂರದ ಕೋಟೆಯ ಮೇಲೆ ಹಿಂದುಸ್ಥಾನದ ಸಾಮ್ರಾಟ್ ಔರಂಗಜೇಬನ ನಾಮಾಂಕಿತ ಸರದಾರ್ ,ದಿಲೇರಖನ, ಕ್ರಿ, ಶ.1664ರ ಪುರಂದರ ಘಡ್ ಯುದ್ಧದಲ್ಲಿ ಸ್ವಂತ ಶಿವಾಜಿ ಮಹಾರಾಜರನ್ನು ಸೋಲಿಸಿದ ಶೂರ  ಪಠಣನ ಸೇನಾಪತಿಯು ಅಕ್ರಮಣ ಮಾಡಿದ. ಕಿಲ್ಲೆಯು ಪಾಮ ನಾಯಕನ ಅಧೀನದಲ್ಲಿತ್ತು.
ದಿಲೇರಿ ಖಾನ್ ಶಾಹಪೂರದಿಂದ ಹತ್ತು ಕಿಲೋಮೀಟರ್ ದೂರದಲ್ಲಿರುವ ಗೋಗಿಯಲ್ಲಿ ತನ್ನ ಬಿಡಾರವನ್ನು ಹೂಡಿ ರಾಜ್ ಪಾಮನಾಯಕನಿಗೆ 15 ಲಕ್ಷ ದಿನರ್ ಕಪ್ಪನ್ನು ಕಾಣಿಕೆ ಕಳಿಸಲು ಸಂದೇಶ ಕಳಿಸಿದ .ಸ್ವಾಭಿಮಾನಿ ರಾಜಾ ಪಾಮಾ ನಾಯಕ ಒಪ್ಪಲು ಸಾಧ್ಯವೇ? ಅದರಂತೆ ಖಾನನನ್ನು ಯುದ್ಧಕ್ಕೆ ಅಮಂತ್ರಿಸಿದ. ಆಗ ಇಡೀ ದಕ್ಷಿಣ ಭಾರತದಲ್ಲಿ ಬೇಡ ಜನಾಂಗ ಮಹಾಶೂರರೆಂದು ಪ್ರಸಿದ್ಧಿ ಪಡೆದಿತ್ತು. ಇಂಥ ಪ್ರಬಲ ಶಕ್ತಿಶಾಲಿ ಹಾಗೂ ಇಡೀ ಭಾರತದಲ್ಲಿ ಗೆರಿಲ್ಲಾ ಯುದ್ಧದಲ್ಲಿ ಪ್ರಸಿದ್ಧಿ ಪಡೆದ ಸೈನ್ಯ ಪಾಮನಾಯಕನದಾಗಿತ್ತು . ಕ್ರಿ. ಶ.1680ರ ಪೆಬ್ರವರಿ 20ರಂದು ದಿಲ್ಲೇರ್ ಖಾನ್ ತನ್ನ ಸೈನ್ಯವನ್ನು ಮೂರು ಭಾಗಗಳಲ್ಲಿ ವಿಂಗಡಿಸಿ ಅವುಗಳ ನೇತೃತ್ವವನ್ನು ದೇಶದಲ್ಲಿ ಹೆಸರುವಾಸಿ ಸೇನಾಧಿಪತಿಗಳಾದ ಅಬ್ದುಲ್ ಗಫರ್ ಖಾನನಿಗೆ ವಹಿಸಿ ಮಧ್ಯ ಭಾಗದ ಸೈನ್ಯ ದ ನೇತೃತ್ವವನ್ನು ತಾನೇ ವಹಿಸಿಕೊಂಡು ಶಾಹಹಪೂರದ ಕೋಟೆಯ ಮೇಲೆ ಇಡೀ ದಿನ ಭೀಕರ ಅಕ್ರಮ ಮಾಡಿದರು ರಾತ್ರಿಯವರೆಗೆ ಯಾವುದೇ ಪ್ರಯೋಜನವಾಗದೆ ಪಾಮನಾಯಕನ ಸೈನ್ಯದಿಂದ ಸರಿಯಾದ ಹೊಡೆತ ತಿನ್ನ ಬೇಕಾಗಿತ್ತು. ರಾತ್ರಿಯಾದರಿಂದ ತನ್ನ ಸೈನ್ಯವನ್ನು ಗೋಗಿ ಬಿಡಾರಕ್ಕೆ ಕಳುಹಿಸಿದ.
ಎರಡನೆಯ ದಿನ ಫೆಬ್ರುವರಿ 21ರಂದು ತನ್ನ ಸಂಪೂರ್ಣ ಶಕ್ತಿಯೊಂದಿಗೆ ಶಾಹಪೂರ್ ಪಟ್ಟಣದ ಮೇಲೆ ಅಕ್ರಮಣ ಮಾಡಿದ. ಪಟ್ಟಣದ ಮುಚ್ಚಿದ ಮಹಾದ್ವಾರದ ಮುಂದೆ ದಿಗ್ಗಿ ಅಗಸಿ ಇಂದಿಗೂ ಸುಸಜ್ಜಿತವಾಗಿ ದೆ. ಖಾನನು ಸ್ವಂತ ಆನೆಯ ಮೇಲೆ ಕುಳಿತು ತೋಪಿನಿಂದ ದ್ವಾರದ ಬಾಗಿಲನ್ನು ಒಡೆದುರುಳಿಸಲು ಆದೇಶಿಸಿದ. ಮೊಗಲರ ಬಾರಿ ತೋಪಿನ ಒಡೆತಕ್ಕೆ ಮಹಾದ್ವಾರ ಮುರುದಿ ಬಿತ್ತು. ಮೊಘಲರ ಸೈನ್ಯದ ಸಂತೋಷಕ್ಕೆ ಪರವೇ ಇಲ್ಲ. ಇನ್ನೇನು ಲೂಟಿ ಆರಂಭಿಸಬೇಕು ಎನ್ನುವಷ್ಟರಲ್ಲಿ ಗುಡ್ಡದ ಬದಿಯಲ್ಲಿ ಅಡಗಿ ಕುಳಿತು  ಬೇಡಪಡೆಯ ಮೊಘಲ್ ಸೈನಕ್ಕೆ ಗುಂಡಿನ ಸುರಿಮಳೆ ಸುರಿಯಲು ಆರಂಭಿಸಿತು .ಒಂದೇ ಒಂದು ಗುಂಡು ಗುರಿ ತಪ್ಪದ ಹಾಗೆ ಸೈನಿಕರು ಹೊಡೆಯುತ್ತಿದ್ದರು. ಗುಂಡಿನ ಹೊಡೆತ ತಾಳಲಾರದ ಮೊಘಲ್ ಸೇನೆ ಗೋಗಿಯ ಕಡೆ ಪಲಾಯನ ಮಾಡತೊಡಗಿತು. ದಿಲೇರ ಖಾನನಿಗೆ ತನ್ನ ಅಪಾರ ಸೈನ್ಯದ ಹಾನಿಗಿಂತಲೂ ತನ್ನ ಸೈನಿಕರ ಮನೋಬಲ ಕುಕ್ಕಿದ್ದನ್ನು ಕಂಡು ದಿಗ್ರ ಮೆಯಾಯಿತು. ಪಲಾಯಿನ ಗಯುತ್ತಿದ್ದ ಮೊಗಲ್ ಸೇನೆಕ್ಕೆ ವಿಪರೀತ ಹಣದ ಆಮಿಷ ತೋರಿಸಿ ಹುರಿದುಂಬಿಸಲು ಪ್ರಯತ್ನಿಸಿದ. ಆದರೆ ಮೊಗಲ್ ಸೈನ್ಯ ಪಾನ ನಾಯಕನ ಸೈನ್ಯದ ಹೊಡೆತದ ಮುಂದೆ ಸಂಪೂರ್ಣ ಶರಣಗತಿಯಾದುದರಿಂದ ಯಾವುದೇ ಪ್ರಯೋಜನವಾಗಲಿಲ್ಲ. ಗೋಗಿಯ ಕಡೆ ಪಲಾಯನ ಗೈಯು ತ್ತಿ ರುವ ಮೊಘಲ್ ಸೇನೆ ಸೈನಕ್ಕೆ ಹಾದಿಯ ಎರಡು ಬದಿಯಿಂದ ನಾಯಕನ ಸೈನ್ಯವು ಆಕ್ರಮಣ ಮಾಡಿತು. ಈ ಭೀಕರ ಯುದ್ಧದಲ್ಲಿ ದಿಲೇರ್ ಖಾನ್ ಹೇಗೂ ಜೀವಂತ ಪಾರದ. ಮಹಾ ಸೇನಾಪತಿ ದಿಲೇರ್ ಖಾನ್ ಹಾಗೂ ಆತನ ಸೈನ್ಯ ಜೀವದಿಂದ ಉಳಿಯಲು ಪಾಮ್ನಾಯಕನ ಅನುಗ್ರಹಕ್ಕಾಗಿ ವಿನಂತಿಸುವ ದೃಶ್ಯ ಇತಿಹಾಸಕಾರರನ್ನೇ ದಿಗ್ರಮೆಗೊಳಿಸುವುದಿಲ್ಲವೆ?. ಮೊಗಲ್ ಸಾಮ್ರಾಟ್, ಔರಂಗಜೇಬನ ದುರಾಂದರ್ ಸೇನಾಪತಿ ಒಂದು ಸಣ್ಣ ಸಂಸ್ಥಾನದ  ರಾಜನಿಂದ ಸಂಪೂರ್ಣ ಸೋಲನ್ನು ಅನುಭವಿಸಿ. ಜೀವ ಬಿಕ್ಷೆ ಪಡೆದು ಅವಮಾನಿತನಾದದ್ದು ಇತಿಹಾಸದ ಸತ್ಯ ಘಟನೆಯಾಗಿದೆ .ಇಂಥ ಅವಮಾನಿತ ಮುಖವನ್ನು ನೋಡಬಾರದೆಂದು ಔರಂಗಜೇಬನು ದಿಲೇರಖಾನನ್ನು ಧಿಲ್ಲಿ ಮುಟ್ಟುವ ಮೊದಲೇ ವಿಷ ಕೊಟ್ಟು ಕೊಲ್ಲಿಸಿದ.
ಅಂದು ಗೋಗಿಯಿಂದ ಶಹಪುರ್ ಕೋಟೆಯ ಮೇಲೆ ಅಕ್ರಮಣ ಮಾಡಿದಾಗ ಹಾದಿಯಲ್ಲಿ ಬರುವ ಅಂಬ್ಲಪುರ, ರಾಜಪೂರ್, ಖಾನಾಪುರ್ ಕಂಚಲಕಾಯಿ  ಇತ್ಯಾದಿ ಹಳ್ಳಿಗಳ ಕ್ರೌರ ಕ್ಕೆ ಹೆಸರಾದ ಮೊಘಲ್ ಸೈನ್ಯಕ್ಕೆ ಹೆದರಿ ಬೆಚಿರಾಗ ಅದವು. ಆ ಹಳ್ಳಿಗಳ ಆದಿದೇವ ಬಲಭಿಮ, ಹನುಮನ ಭೀಮರಾಯ. ಈ ಮಂದಿರವು ಯುದ್ಧದಲ್ಲಿ ಬಗ್ನಗೊಂಡು ಮೂರ್ತಿಯು ನೆಲದಲ್ಲಿ ಹೂತು ಹೋಯಿತು. ಮುಂದೆ ಇದು  ರೈತನ ನೇಗಿಲಗಿ ಸಿಕ್ಕು ಹೊರ ಬಂದಾಗ ರೈತರು ಈ ವಿಷಯವನ್ನು ಪಾಮನಾಯಕನಿಗೆ ತಿಳಿಸಿದರು. ಸುರುಪುರ ರಾಜರ ಧ್ವಜವು ಕೂಡ ಹನುಮಾನ್ ಧ್ವಜವೇ. ರಾಜರು ಭಕ್ತಿಯಿಂದ ಸುಂದರವಾದ ಬಲ ಭೀಮರಾಯನ ಗುಡಿ ಕಟ್ಟಿದರು ಅದೇ ಇಂದಿನ ಭೀಮರಾಯನ ಗುಡಿ.
1972ರ ನಂತರ ಅಂದು ಹಾಳಾದ ಈ ಪ್ರದೇಶವೇ ಇಂದು ಬೃಹತ್ ಕೃಷ್ಣ ಮೇಲ್ದಂಡೆ ಯೋಜನೆಯ ಕೇಂದ್ರವಾಗಿ ಸುಂದರ ಸುಸಜ್ಜಿತ ಕಟ್ಟಡಗಳಿಂದ ಕಂಗೊಳಿಸುತ್ತಿದೆ. 
ನನ್ನ ವೈಯಕ್ತಿಕ ಅಭಿಪ್ರಾಯ ಶಿವಾಜಿ ಗಿಂತ ನಮ್ಮ ಸುರಪುರದ ರಾಜ್ ಪಮಾ ನಾಯಕ  ಅವರು ಗ್ರೇಟ್ ಅಲ್ಲವೇ,?
Google  News WhatsApp Telegram Facebook
HTML smaller font

.

.