ಸ್ಥಳೀಯ

ರಾಜಾ ವೆಂಕಟಪ್ಪ ನಾಯಕ ಅಗಲಿಕೆ ಅಘಾತ ಉಂಟು ಮಾಡಿದೆ  ಸಚಿವ ಶರಣಬಸಪ್ಪ ದರ್ಶನಾಪೂರ

WhatsApp Group Join Now
Telegram Group Join Now

ಯಾದಗಿರಿ : ಫೆಬ್ರವರಿ 25,  : ಯಾದಗಿರಿ ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಕರ್ನಾಟಕ ರಾಜ್ಯ ಉಗ್ರಾಣ ನಿಗಮ ಅಧ್ಯಕ್ಷರಾದ ಶ್ರೀ ರಾಜಾ ವೆಂಕಟಪ್ಪನಾಯಕ (67) ಅವರು ಇಂದು  ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದ ಹಿನ್ನೆಲೆಯಲ್ಲಿ ನಿಧನರಾದ ಸಂಗತಿ ತಿಳಿದು ತುಂಬ ಆಘಾತ ಉಂಟುಮಾಡಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಣ್ಣ  ಕೈಗಾರಿಕೆ ಮತ್ತು ಸಾರ್ವಜನಿಕರ ಉದ್ದಿಮೆಗಳ ಖಾತೆ ಸಚಿವರಾದ  ಶ್ರೀ ಶರಣಬಸಪ್ಪ ದರ್ಶನಾಪೂರ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಶ್ರೀಯುತರೊಂದಿಗೆ ತಮ್ಮ ಒಡನಾಟವನ್ನು ಸ್ಮರಿಸಿರುವ ಸಚಿವ ಶ್ರೀ ದರ್ಶನಾಪೂರ ಅವರು, ರಾಜಾ ವೆಂಕಟಪ್ಪ ನಾಯಕ ಅವರ ನಿಧನದಿಂದಾಗಿ ತುಂಬಲಾರದ ನಷ್ಟವಾಗಿದೆ.ಯಾದಗಿರಿ ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾದ ರಾಜಾ ವೆಂಕಟಪ್ಪ ನಾಯಕ ಅವರು ನಾಲ್ಕು ಬಾರಿ ಸುರಪುರ ಕ್ಷೇತ್ರದಿಂದ ಆಯ್ಕೆಯಾಗಿದ್ದರು. 1994 ಕರ್ನಾಟಕ ಕಾಂಗ್ರೆಸ್ ಪಾರ್ಟಿ (ಕೆಸಿಪಿ), 1999, 2013, 2023 ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿದ್ದರು. ಕರ್ನಾಟಕ ಉಗ್ರಾಣ ನಿಗಮದ ಅಧ್ಯಕ್ಷರಾಗಿ ಕೆಲದಿನಗಳ ಹಿಂದಷ್ಟೆ ಅಧಿಕಾರ ಸ್ವೀಕರಿಸಿದ್ದರು. ಅವರು ನನಗೆ ಸ್ನೇಹಿತರಾಗಿ ಹಾಗೂ ಒಳ್ಳೆಯ ಸಜ್ಜನ ಗುಣವಂತರಾಗಿದ್ದರು. ಹಾಗೂ ಜನ ಸಂಪರ್ಕಕ್ಕೆ ನೇರವಾಗಿ ಸ್ಪಂದಿಸುವ ಗುಣ ಹೊಂದಿದ್ದರು ಎಂದು ಸ್ಮರಿಸಿದ್ದಾರೆ.

ಅವರ ಅಗಲಕೆಯಿಂದ ಆದ ನಷ್ಟವನ್ನು ಭರಿಸುವ ಶಕ್ತಿ ಭಗವಂತ ಅವರ ಕುಟುಂಬಕ್ಕೆ ನೀಡಲಿ ಎಂದು  ಅವರು ತಮ್ಮ  ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now

Related Posts