ರಾಜ್ಯಸ್ಥಳೀಯ

ಬಸವಣ್ಣನವರನ್ನು ಕಡೆಗಣಿಸುತ್ತಿರುವ ಕಸಾಪ ನಡೆ ಖಂಡನೀಯ : ಸಂಗಮೇಶ ಎನ್ ಜವಾದಿ

WhatsApp Group Join Now
Telegram Group Join Now

ಬೀದರ/ ಚಿಟಗುಪ್ಪಾ: ಮಂಡ್ಯದಲ್ಲಿ ಜರುಗತ್ತಿರುವ ೮೭ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿಶ್ವ ಗುರು ಬಸವಣ್ಣನವರನ್ನು ಕಡೆಗಣಿಸುತ್ತಿರುವ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ನಡೆ ಖಂಡನೀಯವಾಗಿದೆ ಎಂದು ಸಾಹಿತಿ, ಪ್ರಗತಿಪರ ಚಿಂತಕರು, ಹೋರಾಟಗಾರರಾದ ಸಂಗಮೇಶ ಎನ್ ಜವಾದಿ ರವರು ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಗಮೇಶ ಎನ್ ಜವಾದಿ ರವರು ಇಂದಿನ ಕರ್ನಾಟಕ ಸರ್ಕಾರ ಬಸವಣ್ಣನವರ ತತ್ವಗಳು ಜಾರಿಗೆ ತರುತ್ತಿದೆ. ಮೇಲಾಗಿ ಬಸವಣ್ಣನವರನ್ನು ಕರ್ನಾಟಕ ರಾಜ್ಯದ ಸಾಂಸ್ಕೃತಿಕ ನಾಯಕನೆಂದು ಘೋಷಿಸಿದೆ. ಅನುಭವ ಮಂಟಪದ ಅಭಿವೃದ್ಧಿಗೆ ಅನುದಾನ ನೀಡಿದೆ.
ಬೆಳಗಾವಿಯ ಸುವರ್ಣ ಸೌಧದಲ್ಲಿ ಬಸವಾದಿ ಶರಣರ ತೈಲವರ್ಣ ಚಿತ್ರ ಬಿಡುಗಡೆ ಮಾಡಿದೆ. ಒಟ್ಟಾರೆ ಬಸವಣ್ಣನವರ ವಿಚಾರಧಾರೆಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡುತ್ತಿದೆ. ಆದರೆ ಕೇಂದ್ರ ಕಸಾಪ ಬಸವಣ್ಣನವರ ವಿಚಾರಧಾರೆಗಳನ್ನು ಮರೆಮಾಚುವ ಕೆಲಸ ಮಾಡುತ್ತಿದೆ. ಹಾಗೆಯೇ ೮೭ನೇ ಸಮ್ಮೇಳನದಲ್ಲಿ ಬಸವಣ್ಣನವರ ಭಾವಚಿತ್ರ ಮತ್ತು ಹೆಸರನ್ನು ಬಳಸಿಕೊಳ್ಳದೆ ಕಡೆಗಣಿಸುತ್ತಿರುವುದು ಅತ್ಯಂತ ಖಂಡನೀಯ ವಿಚಾರವಾಗಿದೆ. ಈ ಕೂಡಲೇ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಿ ಸಮ್ಮೇಳನದಲ್ಲಿ ಬಸವಣ್ಣನವರ ಭಾವಚಿತ್ರ ಬಳಸಿಕೊಳ್ಳಬೇಕು ಹಾಗೂ ಬಸವಣ್ಣನವರ ವಿಚಾರಧಾರೆಗಳ ಮೇಲೆ ಉಪನ್ಯಾಸ ಗೋಷ್ಠಿಗಳು ಏರ್ಪಡಿಸಬೇಕೆಂದು ಸಂಗಮೇಶ ಎನ್ ಜವಾದಿ ರವರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

WhatsApp Group Join Now
Telegram Group Join Now

Related Posts