ಭಾರತ

ಅಪೂರ್ಣ ಕಟ್ಟಡದಲ್ಲಿ ಆರು ಜೀವಂತ ಬಾಂಬುಳು ಪತ್ತೆ

WhatsApp Group Join Now
Telegram Group Join Now

ದರ್ಭಾಂಗ, 2 ಮಾರ್ಚ್ :ಕಾಮಗಾರಿ ನಡೆಯುತ್ತಿದ್ದ ಮನೆಯೊಂದರಲ್ಲಿ ಆರು ಬಾಂಬ್ ಗಳು ಪತ್ತೆಯಾಗಿರುವ ಘಟನೆ ಬಿಹಾರದ ದರ್ಭಾಂಗದಲ್ಲಿ ನಡೆದಿದೆ. ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಡೆದಿರುವ ಸ್ಫೋಟ ಪ್ರಕರಣದ ಬೆನ್ನಲ್ಲೇ ಬಿಹಾರದಲ್ಲಿ ಸಜೀವ ಬಾಂಬ್ ಗಳು ಪತ್ತೆಯಾಗಿವೆ.

ರಾತ್ರೋರಾತ್ರಿ ಸ್ಫೋಟದ ಶಬ್ದ ಕೇಳಿ ಬಂದ ಪರಿಣಾಮ ಗಾಬರಿಗೊಂಡ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರಿಂದ ಸ್ಥಳಕ್ಕೆ ಬಂದ ದರ್ಭಾಂಗದ ಬಹದ್ದೂರ್ಪುರ ಪೊಲೀಸರಿಗೆ ಎರಡು ಬಾಂಬ್ಗಳು ಹೊಡೆದು ಚೂರಾಗಿ ಬಿದ್ದಿರುವುದು ಕಂಡು ಬಂದಿದೆ.

ಈ ಸಂಬಂಧ ತನಿಖೆ ನಡೆಸಿದಾಗ ಅಲ್ಲಿ ಇನ್ನೂ ಆರು ಬಾಂಬ್ ಗಳು ಪತ್ತೆಯಾಗಿವೆ. ಈ ಘಟನೆ ಕುರಿತು ತನಿಖೆ ಮುಂದುವರೆದಿದ್ದು, ಪೊಲೀಸರು ಆರು ಬಾಂಬ್ಗಳನ್ನು ವಶಪಡಿಸಿಕೊಂಡು ಯಾವುದೇ ಅಪಾಯವಾಗದಂತೆ ನಿಷ್ಕ್ರಿಯಗೊಳಿಸಿದ್ದಾರೆ.

WhatsApp Group Join Now
Telegram Group Join Now

Related Posts