ಸ್ಥಳೀಯ

ಸರ್ಕಾರಿ ಜಾಗೆ ಇದೆ ದಾಖಲೆಗಳು ಇಲ್ಲ ಎಂದು ಹಿಂಬರಹ ನೀಡಿದ ಜಿಲ್ಲಾಧಿಕಾರಿಗಳು; ಸ್ಲಂ ಜನಾಕ್ರೋಶ

WhatsApp Group Join Now
Telegram Group Join Now

100ನೇ ದಿನ ಪೂರೈಸಿದ ಮದನಪುರ ಶಾಸ್ತಿçನಗರನಗರ ನಿವಾಸಿಗಳ ಹೋರಾಟ

ಯಾದಗಿರಿ: ನಗರದ ಮದನಪುರ ಶಾಸ್ತಿçನಗರ ಸ್ಲಂ ನಿವಾಸಿಗಳ ಹೋರಾಟ ಸೋಮವಾರ 100ನೇ ದಿನಕ್ಕೆ ಕಾಲಿರಿಸಿತು.

ಈ ಸಂದರ್ಭದಲ್ಲಿ ಮಾತನಾಡಿದ ಸ್ಲಂ ನಿವಾಸಿಗಳ ಸಂಘದ ಅಧ್ಯಕ್ಷ ಆನಂದ ನಾಟೇಕರ್ ಹಾಗೂ ವೀರಭಾರತಿ ಪ್ರತಿಷ್ಠಾನ ಅಧ್ಯಕ್ಷ ವೈಜನಾಥ ಹಿರೇಮಠ 100 ದಿನಗಳಾದರೂ ನಮ್ಮ ಸಮಸ್ಯೆ ಪರಿಹರಿಸಲು ಜಿಲ್ಲಾಡಳಿತ ಮುಂದಾಗುತ್ತಿಲ್ಲ ಬದಲಿಗೆ ನಮ್ಮ ಹೋರಾಟದ ಕುರಿತು ತಪ್ಪು ಹಾಗೂ ಸುಳ್ಳು ಮಾಹಿತಿಗಳನ್ನೊಳಗೊಂಡ ಹಿಂಬರಹ ನೀಡಿದ್ದಾರೆ ಎಂದು ಮಾಧ್ಯಮಗಳಿಗೆ ದೂರಿದರು.

ಕಳೆದ ನೂರು ದಿನಗಳಿಂದ ನಡೆಸಿದ ಹೋರಾಟಕ್ಕೆ 80 ನೇ ದಿನದ ಆಸುಪಾಸಿನಲ್ಲಿ ಸಹಾಯಕ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ ಹಿಂಬರಹ ನೀಡಲು ಮುಂದಾದಾಗ ಅದನ್ನು ಸ್ಪಷ್ಟವಾಗಿ ನಿರಾಕರಿಸಿದ ಹೋರಾಟಗಾರರು, ಮಹಿಳೆಯರು ನಾವು 50 ವರ್ಷಗಳಿಂದ ಸರ್ಕಾರಿ ಜಾಗೆಯಲ್ಲಿದ್ದು ನಮಗೆ ನ್ಯಾಯ ಒದಗಿಸಿ ಎಂದು ನಮಗೆ ಹಿಂಬರಹ ಬೇಕಿಲ್ಲ ನಮಗೆ ಹಕ್ಕು ಪತ್ರ ಬೇಕೆಂದು ವಾಪಸ್ ಕಳಿಸಿದರು.

ಇದಾದ ನಂತರ ರಿಜಿಸ್ಟರ್ ಪೋಸ್ಟ್ ಮೂಲಕ ಹಿಂಬರಹವನ್ನು ತಹಸೀಲ್ದಾರರು ಕಳಿಸಿಕೊಟ್ಟಿದ್ದು ಜಿಲ್ಲಾಧಿಕಾರಿಗಳ ಸಹಿ ಇರುವ ಹಿಂಬರಹದಲ್ಲಿ ತಪ್ಪು ಮತ್ತು ಸತ್ಯಕ್ಕೆ ದೂರವಾದ ಮಾಹಿತಿಗಳನ್ನು ಜಿಲ್ಲಾಧಿಕಾರಿಗಳು ನೀಡಿರುವುದು ಅತ್ಯಂತ ದುರದೃಷ್ಟಕರ ಸಂಗತಿಯಾಗಿದೆ ಎಂದು ಅವರು ದೂರಿದರು.

ಸಕಾರಿ ಜಾಗೆಯಾಗಿರುವ 12 ಎಕರೆ 35 ಗುಂಟೆ ಜಾಗೆಯನ್ನು ಈಗಾಗಲೇ ಹಂಚಿಕೆ ಮಾಡಲಾಗಿದೆ ಎಂದು ಉಲ್ಲೇಖಿಸಿರುವ ಜಿಲ್ಲಾಧಿಕಾರಿಗಳು ಆ ಜಾಗೆ ಹಂಚಿಕೆ ಮಾಡಿದ್ದಕ್ಕೆ ದಾಖಲೆಗಳು ಇಲ್ಲ ಎಂದು ಹೇಳುತ್ತಾರೆ. ಅಂದರೆ ಸರ್ಕಾರಿ ಜಾಗೆ ಇದೆ ಎಂದು ಹೇಳುತ್ತಾರೆ ನಂತರ ಅದೆಲ್ಲವನ್ನೂ ಹಂಚಿಕೆ ಮಾಡಲಾಗಿದೆ ಎಂದೂ ಹೇಳುತ್ತಾರೆ ಆದರೆ ದಾಖಲೆಗಳು ಇಲ್ಲ ಎಂದು ಮಾನ್ಯ ಜಿಲ್ಲಾಧಿಕಾರಿಗಳು ತಮ್ಮ ಕೆಳ ಹಂತದ ಅಧಿಕಾರಿಗಳು ನೀಡಿದ ಬರೆಹಕ್ಕೆ ಸಹಿ ಮಾಡಿದ ಹಿಂಬರಹದಲ್ಲಿ ತಿಳಿಸಿರುವುದು ಅತ್ಯಂತ ದುರದೃಷ್ಟ ಸಂಗತಿಯಾಗಿದೆ ಎಂದು ಹೇಳಿದರು.

ಇನ್ನು ಕೊನೆಗೆ ವಿಷಯ ನ್ಯಾಯಾಲಯದಲ್ಲಿದೆ ಎಂದು ಹೇಳಿರುತ್ತಾರೆ ಆದರೆ ದಾವೆ ಹೂಡಿದವರು 2.17 ಗುಂಟೆ ಜಮೀನಿಗೆ ಸಂಬAಧಿಸಿದ ಜಾಗೆಯಾಗಿದ್ದು ಈ ಜಾಗೆಗೂ ಶಾಸ್ತಿçನಗರ ಸ್ಲಂ ನಿವಾಸಿಗಳು ವಾಸಿಸುವ ಜಾಗೆಗೂ ಯಾವುದೇ ಸಂಬAಧವಿಲ್ಲ ಆದಾಗ್ಯೂ ವಿನಾಕಾರಣ ಸದರಿ ಜಾಗೆಯನ್ನು ತಳಕು ಹಾಕಿ ಕೆಳ ಹಂತದ ಅಧಿಕಾರಿಗಳು ಕೊಟ್ಟ ಮಾಹಿತಿಯನ್ನೇ ರುಜುಹಾಕಿ ಜಿಲ್ಲಾಧಿಕಾರಿಗಳು ನೀಡಿದ್ದಾರೆ ಎಂದು ಅವರು ದೂರಿದರು.

ಈ ಸಂದರ್ಭದಲ್ಲಿ ಮದನಪುರ ಶಾಸ್ತಿçನಗರ ಸ್ಲಂ ನಿವಾಸಿಗಳ ಸಂಘದ ಮುಖಂಡರಾದ ಗಫೂರಸಾಬ, ಉಸ್ಮಾನ್, ಯಂಕಮ್ಮ, ಬಸವರಾಜ, ಮುನೀರ್, ವಿಜಯಲಕ್ಷಿö್ಮÃ, ಗಂಗಮ್ಮ, ಗೌರಮ್ಮ, ಮೆಹೆಬೂಬಿ, ಚಾಂದಬಿ, ಮಲ್ಲಮ್ಮ, ಲಕ್ಷಿö್ಮÃ, ಮಾದೇವಿ ಸೇರಿದಂತೆ 42 ಜನ ಹೈಕೋರ್ಟ್ ನಲ್ಲಿ ದಾವೆ ಹೂಡಿದ ನಿವಾಸಿಗಳು ಇದ್ದರು.

 

WhatsApp Group Join Now
Telegram Group Join Now

Related Posts