ಮನರಂಜನೆ

ಕ್ಷಮಿಸು ಬಾಬಾಸಾಹೇಬ್

WhatsApp Group Join Now
Telegram Group Join Now

ಕ್ಷಮಿಸು ಬಾಬಾಸಾಹೇಬ್.

ಕ್ಷಮಿಸು ಸಾಹೇಬ್
ಇವತ್ತು ನಿನ್ನ ಜನ್ಮದಿನವಂತೆ
ಪ್ರತಿವರ್ಷದಂತೆ ಈ ವರ್ಷವೂ
ಭರದಲ್ಲಿ ಸಾಗುತ್ತಿವೆ
ನಿಮ್ಮನ್ನು ಬ್ಯಾನರ್, ಬಾವುಟಗಳಲ್ಲಿ,
ಕೆಲವೊಂದು ಕಡೆ ನೂತನ
ಪ್ರತಿಮೆಗಳಲ್ಲಿ ಸಿಮಿತಗೊಳಿಸಲು.

ತಮಟೆ, ಡಿಜೆ ಸೌಂಡಿಗೆ
ನಿನ್ನ ಮಾತುಗಳೇ
ಕೇಳುತ್ತಿಲ್ಲ,
ನಿಮಗೆ ಜೈಕಾರ
ಏನೊ ಹಾಕುತ್ತಿದ್ದೇವೆ.
ಆದರೆ ನೀವು ತೊರಿದ
ಮಾರ್ಗವನ್ನೆ ಮರೆತು ಬಿಟ್ಟಿದ್ದೇವೆ.

ಬೇಜಾರು ಆಗಬೇಡಿ ಸಾಹೇಬ್,
ಅನಕ್ಷರಸ್ಥರಲ್ಲಿರುವ ಕೃತಜ್ಞತೆ ಭಾವನೆ.
ಅಕ್ಷರಸ್ಥರಾಗಿರುವ ನಮ್ಮಲ್ಲಿಲ್ಲ
ಅಪಾಯ ಬಂದಾಗ ಮಾತ್ರ
ನಿಮ್ಮನ್ನು ನೆನೆಯುತ್ತೇವೆ.
ಉಳಿದ ಸಮಯದಲ್ಲಿ
ಹೋಮ, ಹವನಗಳಲ್ಲಿ
ತುಂಬಾ ಮಗ್ನಾರಾಗಿರುತ್ತೇವೆ.

ಇನ್ನೊಂದು ಏನು ಗೊತ್ತಾ.? ಸಾಹೇಬ್
ನಿಮ್ಮನ್ನು ಬಳಸಿ
ನಿಮಗೆ‌ ದ್ರೋಹ ಬಗೆಯುವ
ನೀಚ ರಾಜಕಾರಣಿಗಳೇ
ಮುಖ್ಯ ಅತಿಥಿಗಳಂತೆ.

ದೇವರಲ್ಲಿ ನನಗೆ ನಂಬಿಕೆಯಿಲ್ಲ
ಎಂದೆ ನೀ, ಆದರೆ ಇವತ್ತು ಬುದ್ಧನ ಸರದಿ ನಂತರ ನಿಮ್ಮನ್ನು ದೇವರನ್ನಾಗಿಸುವ
ಮನುವಾದಿಗಳ ಹುನ್ನಾರ
ಒಳಗೊಳಗೇ ನಡಿತಿದೆ‌.

ಕ್ಷಮಿಸು ಸಾಹೇಬ್
ನೀವು ಹಗಲಿರುಳೆನ್ನದೆ
ಎಳೆದು ತಂದಿರುವ ರಥವನ್ನು
ಮುಂದೆ ಸಾಗಿಸಲು ನಮ್ಮಲ್ಲಿ
ಒಗ್ಗಟ್ಟಿಲ್ಲ, ಆ ಪಕ್ಷ ಈ ಪಕ್ಷ ಎಂದು ಗುಲಾಮಗಿರಿಗೆ
ಸಿಮಿತವಾಗಿದ್ದೇವೆ.

ಇವತ್ತೆನಾದರೂ ನೀವು
ಎದುರಾಗುವ ಯೋಚನೆ ಇದ್ದರೆ
ಖಂಡಿತವಾಗಿಯೂ ಬರಬೇಡಿ
ಸಾಹೇಬ್,
ನಮ್ಮ ಹುಚ್ಚುತನ ನೋಡಿ
ನೀವು ಮರುಗುವುದು ನನಗೆ‌
ಇಷ್ಟವಿಲ್ಲ..

ಭೀಮಾಶಂಕರ ಎ ರಸ್ತಾಪುರ

WhatsApp Group Join Now
Telegram Group Join Now

Related Posts