ಸ್ಥಳೀಯ

ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ, ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳು ಲಭ್ಯ

WhatsApp Group Join Now
Telegram Group Join Now

ಯಾದಗಿರಿ : ಜೂನ್ 11, (JA) : ಯಾದಗಿರಿ ಜಿಲ್ಲೆಯ ಎಲ್ಲಾ ರೈತ ಸಂಪರ್ಕ ಕೇಂದ್ರಗಳಲ್ಲಿ, ರಿಯಾಯಿತಿ ದರದಲ್ಲಿ ಬಿತ್ತನೆ ಬೀಜಗಳು ಲಭ್ಯವಿದ್ದು, ತಾವೂಗಳು ತಮ್ಮ ಆಧಾರ್ ಪ್ರತಿ, ಪಹಣಿ, ಹೊಲ್ಡಿಂಗ್ ನೀಡಿ ಬಿತ್ತನೆ ಬೀಜಗಳನ್ನು ಪಡೆಯಬಹುದಾಗಿದೆ. ವಿವಿಧ ಬೀಜಗಳ ಉಳಿಕೆ ದಾಸ್ತಾನು ಈ ಕೆಳಗಿನಂತೆ ಇರುತ್ತದೆ ಎಂದು ಯಾದಗಿರಿ ಜಂಟಿ ಕೃಷಿ ನಿರ್ದೇಶಕರು ಕೆ.ಎಚ್.ರವಿ ಅವರು ತಿಳಿಸಿದ್ದಾರೆ.

ಶಹಾಪೂರ ತಾಲ್ಲೂಕಿನ ಶಹಾಪೂರ ಹೋಬಳಿಯಲ್ಲಿ ಹೆಸರು (ಬಿಜಿಎಸ್-9) 0.30 ಕ್ವಿಂ, ತೊಗರಿ (ಟಿಎಸ್-3ಆರ್) 3.10 ಕ್ವಿಂ, ತೊಗರಿ (ಜಿಆರ್‌ಜಿ-811) 4.05 ಕ್ವಿಂ ಮತ್ತು ತೊಗರಿ (ಜಿಆರ್‌ಜಿ-152) 2.20 ಕ್ವಿಂ; ಗೋಗಿ ಹೋಬಳಿಯಲ್ಲಿ ಹೆಸರು (ಬಿಜಿಎಸ್-9) 0.10 ಕ್ವಿಂ, ತೊಗರಿ (ಟಿಎಸ್-3ಆರ್) 9.70 ಕ್ವಿಂ ಮತ್ತು ತೊಗರಿ (ಜಿಆರ್‌ಜಿ-811) 3.10 ಕ್ವಿಂ; ದೋರನಹಳ್ಳಿ ಹೋಬಳಿಯಲ್ಲಿ ಹೆಸರು (ಬಿಜಿಎಸ್-9) 0.05 ಕ್ವಿಂ, ತೊಗರಿ (ಟಿಎಸ್-3ಆರ್) 0.55 ಕ್ವಿಂ, ತೊಗರಿ (ಜಿಆರ್‌ಜಿ-811) 1.95 ಕ್ವಿಂ ಮತ್ತು ತೊಗರಿ (ಜಿಆರ್‌ಜಿ-152) 9.00 ಕ್ವಿಂ; ವಡಗೇರಾ ಹೋಬಳಿಯಲ್ಲಿ ಹೆಸರು (ಬಿಜಿಎಸ್-9) 4.25 ಕ್ವಿಂ, ತೊಗರಿ (ಟಿಎಸ್-3ಆರ್) 5.20 ಕ್ವಿಂ, ತೊಗರಿ (ಜಿಆರ್‌ಜಿ-811) 0.70 ಕ್ವಿಂ ಮತ್ತು ತೊಗರಿ (ಜಿಆರ್‌ಜಿ-152) 4.70 ಕ್ವಿಂ ಹಾಗೂ ಹೈಯಾಳ ಬಿ ಹೋಬಳಿಯಲ್ಲಿ ಹೆಸರು (ಬಿಜಿಎಸ್-9) 0.05 ಕ್ವಿಂ, ತೊಗರಿ (ಟಿಎಸ್-3ಆರ್) 0.90 ಕ್ವಿಂ ಮತ್ತು ತೊಗರಿ (ಜಿಆರ್‌ಜಿ-152) 4.20 ಕ್ವಿಂ; ಒಟ್ಟಾರೆ ತಾಲ್ಲೂಕಿನಲ್ಲಿ ಹೆಸರು (ಬಿಜಿಎಸ್-9) 4.75 ಕ್ವಿಂ, ತೊಗರಿ (ಟಿಎಸ್-3ಆರ್) 19.45 ಕ್ವಿಂ, ತೊಗರಿ (ಜಿಆರ್‌ಜಿ-811) 9.80 ಕ್ವಿಂ ಮತ್ತು ತೊಗರಿ (ಜಿಆರ್‌ಜಿ-152) 20.10 ಕ್ವಿಂ ಉಳಿಕೆ ದಾಸ್ತಾನು ಇರುತ್ತದೆ.

ಸುರಪುರ ತಾಲ್ಲೂಕಿನ ಸುರಪೂರ ಹೋಬಳಿಯಲ್ಲಿ ಹೆಸರು (ಬಿಜಿಎಸ್-9) 0.05 ಕ್ವಿಂ, ತೊಗರಿ (ಟಿಎಸ್-3ಆರ್) 0.05 ಕ್ವಿಂ ಮತ್ತು ತೊಗರಿ (ಜಿಆರ್‌ಜಿ-811) 4.60 ಕ್ವಿಂ; ಕಕ್ಕೆರಾ ಹೋಬಳಿಯಲ್ಲಿ ಹೆಸರು (ಬಿಜಿಎಸ್-9) 3.25 ಕ್ವಿಂ, ತೊಗರಿ (ಟಿಎಸ್-3ಆರ್) 17.35 ಕ್ವಿಂ ಮತ್ತು ತೊಗರಿ (ಜಿಆರ್‌ಜಿ-811) 5.15 ಕ್ವಿಂ; ಕೊಡೇಕಲ್ ಹೋಬಳಿಯಲ್ಲಿ ಹೆಸರು (ಬಿಜಿಎಸ್-9) 0.25 ಕ್ವಿಂ, ತೊಗರಿ (ಟಿಎಸ್-3ಆರ್) 17.35 ಕ್ವಿಂ ಮತ್ತು ತೊಗರಿ (ಜಿಆರ್‌ಜಿ-811) 20.20 ಕ್ವಿಂ; ಹುಣಸಿಗಿ ಹೋಬಳಿಯಲ್ಲಿ ಹೆಸರು (ಬಿಜಿಎಸ್-9) 0.05 ಕ್ವಿಂ, ತೊಗರಿ (ಟಿಎಸ್-3ಆರ್) 1.35 ಕ್ವಿಂ ಮತ್ತು ತೊಗರಿ (ಜಿಆರ್‌ಜಿ-811) 6.20 ಕ್ವಿಂ ಹಾಗೂ ಕೆಂಭಾವಿ ಹೋಬಳಿಯಲ್ಲಿ ಹೆಸರು (ಬಿಜಿಎಸ್-9) 0.20 ಕ್ವಿಂ, ತೊಗರಿ (ಟಿಎಸ್-3ಆರ್) 0.95 ಕ್ವಿಂ ಮತ್ತು ತೊಗರಿ (ಜಿಆರ್‌ಜಿ-811) 20.20 ಕ್ವಿಂ; ಒಟ್ಟಾರೆ ತಾಲ್ಲೂಕಿನಲ್ಲಿ ಹೆಸರು (ಬಿಜಿಎಸ್-9) 3.80 ಕ್ವಿಂ, ತೊಗರಿ (ಟಿಎಸ್-3ಆರ್) 29.95 ಕ್ವಿಂ ಮತ್ತು ತೊಗರಿ (ಜಿಆರ್‌ಜಿ-811) 56.35 ಕ್ವಿಂ ಉಳಿಕೆ ದಾಸ್ತಾನು ಇರುತ್ತದೆ.
ಯಾದಗಿರಿ ತಾಲ್ಲೂಕಿನ ಯಾದಗಿರಿ ಹೋಬಳಿಯಲ್ಲಿ ಹೆಸರು (ಬಿಜಿಎಸ್-9) 0.05 ಕ್ವಿಂ, ತೊಗರಿ (ಟಿಎಸ್-3ಆರ್) 2.80 ಕ್ವಿಂ; ಹತ್ತಿಕುಣಿ ಹೋಬಳಿಯಲ್ಲಿ ಹೆಸರು (ಬಿಜಿಎಸ್-9) 5.30 ಕ್ವಿಂ, ತೊಗರಿ (ಟಿಎಸ್-3ಆರ್) 9.80 ಕ್ವಿಂ, ತೊಗರಿ (ಜಿಆರ್‌ಜಿ-811) 9.90 ಕ್ವಿಂ ಮತ್ತು ತೊಗರಿ (ಜಿಆರ್‌ಜಿ-152) 7.70 ಕ್ವಿಂ; ಕೊಂಕಲ್ ಹೋಬಳಿಯಲ್ಲಿ ಹೆಸರು (ಬಿಜಿಎಸ್-9) 5.75 ಕ್ವಿಂ, ತೊಗರಿ (ಟಿಎಸ್-3ಆರ್) 9.55 ಕ್ವಿಂ,

ತೊಗರಿ (ಜಿಆರ್‌ಜಿ-811) 14.65 ಕ್ವಿಂ ಮತ್ತು ತೊಗರಿ (ಜಿಆರ್‌ಜಿ-152) 0.75 ಕ್ವಿಂ; ಬಳಿಚಕ್ರ ಹೋಬಳಿಯಲ್ಲಿ ಹೆಸರು (ಬಿಜಿಎಸ್-9) 0.05 ಕ್ವಿಂ, ತೊಗರಿ (ಟಿಎಸ್-3ಆರ್) 1.10 ಕ್ವಿಂ ಮತ್ತು ತೊಗರಿ (ಜಿಆರ್‌ಜಿ-152) 0.30 ಕ್ವಿಂ; ಸೈದಾಪೂರ ಹೋಬಳಿಯಲ್ಲಿ ಹೆಸರು (ಬಿಜಿಎಸ್-9) 1.85 ಕ್ವಿಂ, ತೊಗರಿ (ಟಿಎಸ್-3ಆರ್) 10.05 ಕ್ವಿಂ, ತೊಗರಿ (ಜಿಆರ್‌ಜಿ-811) 7.80 ಕ್ವಿಂ ಮತ್ತು ತೊಗರಿ (ಜಿಆರ್‌ಜಿ-152) 5.35 ಕ್ವಿಂ ಹಾಗೂ ಗುರುಮಿಠಕಲ್ ಹೋಬಳಿಯಲ್ಲಿ ಹೆಸರು (ಬಿಜಿಎಸ್-9) 0.05 ಕ್ವಿಂ, ತೊಗರಿ (ಟಿಎಸ್-3ಆರ್) 4.55 ಕ್ವಿಂ, ತೊಗರಿ (ಜಿಆರ್‌ಜಿ-811) 10.05 ಕ್ವಿಂ ಮತ್ತು ತೊಗರಿ (ಜಿಆರ್‌ಜಿ-152) 0.05 ಕ್ವಿಂ; ಒಟ್ಟಾರೆ ತಾಲ್ಲೂಕಿನಲ್ಲಿ ಹೆಸರು (ಬಿಜಿಎಸ್-9) 13.05 ಕ್ವಿಂ, ತೊಗರಿ (ಟಿಎಸ್-3ಆರ್) 37.85 ಕ್ವಿಂ, ತೊಗರಿ (ಜಿಆರ್‌ಜಿ-811) 42.40 ಕ್ವಿಂ ಮತ್ತು ತೊಗರಿ (ಜಿಆರ್‌ಜಿ-152) 14.15 ಕ್ವಿಂ ಉಳಿಕೆ ದಾಸ್ತಾನು ಇರುತ್ತದೆ.
ಒಟ್ಟಾರೆ ಜಿಲ್ಲೆಯಲ್ಲ್ಲಿ ಹೆಸರು (ಬಿಜಿಎಸ್-9) 21.60 ಕ್ವಿಂ, ತೊಗರಿ (ಟಿಎಸ್-3ಆರ್) 87.25 ಕ್ವಿಂ, ತೊಗರಿ (ಜಿಆರ್‌ಜಿ-811) 108.55 ಕ್ವಿಂ ಮತ್ತು ತೊಗರಿ (ಜಿಆರ್‌ಜಿ-152) 34.25 ಕ್ವಿಂ ಉಳಿಕೆ ದಾಸ್ತಾನು ಇರುತ್ತದೆ.

ಅಲ್ಲದೇ, ಶಹಾಪೂರ ತಾಲ್ಲೂಕಿನಲ್ಲಿ ಯುರಿಯಾ 12549, ಡಿ.ಎ.ಪಿ. 2357, ಎಮ್.ಓ.ಪಿ. 160, ಕಾಂಪ್ಲೆಕ್ಸ್ 9189, ಎಸ್.ಎಸ್.ಪಿ. 161 ಒಟ್ಟಾರೆ 24416 ಮೆ.ಟನ್ ವಿವಿಧ ರಸಗೊಬ್ಬರಗಳ ದಾಸ್ತಾನು ಇರುತ್ತದೆ. ಸುರಪೂರ ತಾಲ್ಲೂಕಿನಲ್ಲಿ ಯುರಿಯಾ 9255, ಡಿ.ಎ.ಪಿ. 1738, ಎಮ್.ಓ.ಪಿ. 118, ಕಾಂಪ್ಲೆಕ್ಸ್ 6777, ಎಸ್.ಎಸ್.ಪಿ. 119 ಒಟ್ಟಾರೆ 18007 ಮೆ.ಟನ್ ವಿವಿಧ ರಸಗೊಬ್ಬರಗಳ ದಾಸ್ತಾನು ಇರುತ್ತದೆ. ಯಾದಗಿರಿ ತಾಲ್ಲೂಕಿನಲ್ಲಿ ಯುರಿಯಾ 9568, ಡಿ.ಎ.ಪಿ. 1797, ಎಮ್.ಓ.ಪಿ. 122, ಕಾಂಪ್ಲೆಕ್ಸ್ 7007, ಎಸ್.ಎಸ್.ಪಿ. 123 ಒಟ್ಟಾರೆ 18612 ಮೆ.ಟನ್ ವಿವಿಧ ರಸಗೊಬ್ಬರಗಳ ದಾಸ್ತಾನು ಇರುತ್ತದೆ. ಒಟ್ಟಾರೆ ಜಿಲ್ಲೆಯಲ್ಲಿ ಯುರಿಯಾ 31371, ಡಿ.ಎ.ಪಿ. 5893, ಎಮ್.ಓ.ಪಿ. 399, ಕಾಂಪ್ಲೆಕ್ಸ್ 22973, ಎಸ್.ಎಸ್.ಪಿ. 403 ಒಟ್ಟಾರೆ 61040 ಮೆ.ಟನ್ ವಿವಿಧ ರಸಗೊಬ್ಬರಗಳ ಲಭ್ಯವಿದ್ದು, ರೈತರು ತಮ್ಮ ಆಧಾರ್ ಪ್ರತಿಯನ್ನು ನೀಡಿ ರಸಗೊಬ್ಬರವನ್ನು ಅಂಗಡಿಗಳಿAದ ಪಡೆಯಬಹುದಾಗಿದೆ.

ಅಲ್ಲದೇ, ರಸಗೊಬ್ಬರಗಳ ಕಾಪು ದಾಸ್ತಾನು ಕರ್ನಾಟಕ ರಾಜ್ಯ ಮಾರಾಟ ಮಂಡಳಿ ಮತ್ತು ಕರ್ನಾಟಕ ರಾಜ್ಯ ಬೀಜ ನಿಗಮದಲ್ಲಿ ಯುರಿಯಾ 1477, ಡಿ.ಎ.ಪಿ. 1547, ಕಾಂಪ್ಲೆಕ್ಸ್ 1768, ಎಮ್.ಎ.ಪಿ. 999. ಒಟ್ಟಾರೆ 5790 ಮೆ.ಟನ್ ವಿವಿಧ ರಸಗೊಬ್ಬರಗಳು ದಾಸ್ತಾನೀಕರಿಸಲಾಗಿದೆ. ರಸಗೊಬ್ಬರದ ಯಾವುದೇ ರೀತಿಯ ಕೊರತೆ ಇರುವುದಿಲ್ಲ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

WhatsApp Group Join Now
Telegram Group Join Now

Related Posts