ಸ್ಥಳೀಯ

ಜನ ಸೇವೆಯನ್ನು ಜೀವನ ಧ್ಯೇಯವಾಗಿಸಿಕೊಂಡ ಶ್ರೀದೇವಿ ನಾಯಕರು

WhatsApp Group Join Now
Telegram Group Join Now

ಅದು ದೇಶಕ್ಕೆ ಸಂಕಷ್ಟ ಆವರಿಸಿದ ಸಮಯ. 2020-21, ದೇಶ ತತ್ತರಿಸಿ ಹೋಗಿತ್ತು. ಕರೋನಾ ಎನ್ನುವ ಮಹಾಮಾರಿ ದೇಶವನ್ನು ತನ್ನ ಕಬಂದ ಬಾಹುಗಳ ಹಿಡಿತಕ್ಕೆ ತೆಗೆದುಕೊಂಡಿತ್ತು. ಇಡೀ ಜಗತ್ತು ಅಸಹಾಯಕ ಸ್ಥಿತಿಯಲ್ಲಿದ್ದು. ಬರಿ ಸಾವಿನ ಸುದ್ದಿ ವ್ಯಾಪಕವಾಗಿತ್ತು. ಹಸಿವಿನ ಸುದ್ದಿ ದಶ ದಿಕ್ಕುಗಳಿಂದ ಪ್ರತಿಧ್ವನಿಸುತ್ತಿತ್ತು. ಜನ ಕಂಗಾಲಾಗಿ ಹೋಗಿದ್ದರು. ದಿಕ್ಕು ತೋಚದ ಸ್ಥಿತಿ. ಯಾವುದೇ ಪೂರ್ವ ಸೂಚನೆ ನೀಡದೆ, ಪೂರ್ವ ಸಿದ್ದತೆಗಳನ್ನು ಮಾಡಿಕೊಳ್ಳದೆ ಈ ದೇಶದ ಪ್ರಧಾನಿ ಏಕಾಏಕಿ ಲಾಕ್‌ಡೌನ್ ಎನ್ನುವ ಎಮರ್ಜೆನ್ಸಿಯನ್ನು ಹೇರಿ ಬಿಟ್ಟರು. ಜನನಿಬಿಢ ಭಾರತ ಅಪ್ಪಟ ಸ್ಮಶಾನ ಮೌನವನ್ನು ಆವರಿಸಿಕೊಂಡಿತು. ನಂತರ ಭಾರತವು ಸ್ಮಶಾನವಾಗಿ ಬದಲಾದದ್ದು ಬೇರೊಂದು ಕಥೆ. ಇದೊಂದು ಅನಿರೀಕ್ಷಿತ ಆಘಾತವಾಗಿತ್ತು. ನಿಜಕ್ಕೂ ಯಾವುದೇ ಪೂರ್ವ ಸಿದ್ದತೆಗೆ ಜನರಿಗೆ ಅವಕಾಶ ನೀಡದೆ ಪ್ರಧಾನಿಗಳು ಲಾಕ್‌ಡೌನ್ ಘೋಷಣೆ ಮಾಡಿಬಿಟ್ಟರು. ಅದು 24/03/2020ರ ಸಂಜೆ ಐದು ಗಂಟೆಯ ಸಮಯ. ಕರೊನಾ ಎನ್ನುವ ಸಾಂಕ್ರಾಮಿಕ ರೋಗದ ನಿಯಂತ್ರಣವು ಜನರನ್ನು ಪರಸ್ಪರ ಅಂತರಕ್ಕೆ ಒಳಪಡಿಸುವ ಮೂಲಕ ನಿಯಂತ್ರಿಸಬಹುದು ಎಂದು ಯೋಚಿಸಿದ ಸರ್ಕಾರ 21 ದಿನಗಳ ಜನತಾ ಕರ್ಫ್ಯೂ ಎನ್ನುವ ವಿನೂತನ ಪ್ರಯೋಗವನ್ನು ದೇಶದ ಮೇಲೆ ಮಾಡಿತು. ನೂರಾ ಮೂವತ್ತೆಂಟು ಕೋಟಿ ಜನ ಸ್ತಬ್ಧರಾಗಿ ಹೋದರು. ನಗರ ಪ್ರದೇಶದ ಬೀದಿಗಳು ಸ್ಮಶಾನ ಮೌನವನ್ನು ಧರಿಸಿಕೊಂಡವು. ಪೋಲಿಸರು ಲಾಠಿ ಮುರಿಯತೊಡಗಿದರು. ಅವತ್ತು ದುಡಿದು ಅವತ್ತು ಊಟ ಮಾಡಬೇಕಿರುವ ಜನಗಳಿಗೆ ಕರಾಳ ದಿನಗಳು ಆರಂಭವಾದವು. ಬಡ ಜನರು ಊಟಕ್ಕೂ ಪರದಾಡತೊಡಗಿದರು. ಬದುಕಲಿಕ್ಕೆಂದು ಮಹಾನಗರಗಳಿಗೆ ತರೆಳಿದ್ದ ಜನ ಕೂಲಿ ಇಲ್ಲದೆ, ಮರಳಿ ಊರಿಗೆ ಬರಲು ಸಾರಿಗೆ ವ್ಯವಸ್ಥೆ ಇಲ್ಲದೆ ಅಪ್ಪಟ ನರಕವನ್ನು ಅನುಭವಿಸತೊಡಗಿದರು. ಕೆಲವರು ಸತ್ತರು ಕೂಡಾ. ಕೆಲವರು ಜೀವಂತ ನರಕ ಅನುಭವಿಸಿದರು, ದಿಕ್ಕು ತೋಚದೆ ಪರದಾಡಿದರು. ರಾಜಕಾರಣಿಗಳು ಮತ್ತು ಉಳ್ಳವರು ಚೆನ್ನಾಗಿಯೇ ಇದ್ದರು; ಅವರಿಗೆ ಯಾವ ತೊಂದರೆಯೂ ಕಾಡಲಿಲ್ಲ. ಬಡವರಿಗೆ ಸರ್ಕಾರವೂ ಕೈಬಿಟ್ಟಿತು, ಅತ್ತ ದೇವರಿದ್ದಾನಾ ಎಂದು ನೋಡಲು ಹೊರಟರೆ ಭಾರತದ ಎಲ್ಲಾ ದೇವಸ್ಥಾನಗಳ ಬಾಗಿಲು ಅದಾಗಲೇ ಹಾಕಲಾಗಿತ್ತು. ದೇವರೂ ನಾಪತ್ತೆಯಾಗಿದ್ದ! ಇಂತಹ ಸಂದರ್ಬದಲ್ಲಿ ಬಡ ಜನರ ಮತ್ತು ಮುಗ್ಧ ಗ್ರಾಮೀಣ ಜನರಿಗೆ ಈ ಲಾಕ್‌ಡೌನ್ ಎನ್ನುವ ಕರಾಳ ಮತ್ತು ಕ್ರೂರ ವಿಧಿ ಸೃಷ್ಟಿಸಿದ ನರಕದಿಂದ ಜನರನ್ನು ಹೇಗಾದರೂ ಕಾಪಾಡಬೇಕು. ಬದುಕು ಅವರಿಗೆ ಹೊರೆಯಾದಂತೆ, ಭಾರವಾದಂತೆ ಅನ್ನಿಸಬಾರದು. ಯಾರೂ ಉಪವಾಸ ಬೀಳಬಾರದು ಎಂದು ಯೋಚಿಸಿತು ಒಂದು ಜೀವ. ಅದು ತಾಯಿ ಕರುಳಿನ ಜೀವ. ತಾಯಿಗೆ ಮಾತ್ರ ಮಕ್ಕಳು ಉಪವಾಸ ಬೀಳಬಾರದು, ಮಕ್ಕಳು ಕಷ್ಟ ಅನುಭವಿಸಬಾರದು, ಮಕ್ಕಳು ಯಾವುದೇ ತೊಂದರೆಗೆ ಒಳಪಡಬಾರದು ಎನ್ನುವ ಕಳಕಳಿ ಇರುತ್ತದೆ. ಏಕೆಂದರೆ ಅದರೊಳಗೆ ಹಡೆದ ಕರುಳಿರುತ್ತದೆ. ಅದರೊಳಗೆ ಸಾಗರಕ್ಕೂ ಮಿಗಿಲಾದ ಕನಿಕರವಿರುತ್ತದೆ. ಮಮತೆ ಇರುತ್ತದೆ. ಆದರೆ ಇದೆಲ್ಲವೂ ಎಲ್ಲರಲ್ಲಿ ಇರುವುದಿಲ್ಲ. ಕೆಲವೇ ಕೆಲವು ವಿಶಿಷ್ಟ ವ್ಯಕ್ತಿತ್ವದ ಜನರಲ್ಲಿ ಮಾತ್ರ ಇರುತ್ತದೆ. ಆ ಮುಗ್ದ ಜನ ಈ ಕರಾಳ ಲಾಕ್‌ಡೌನಿಗೆ ತುತ್ತಾಗಿ ಹಸಿವಿನಿಂದ, ಹಣದ ಮುಗ್ಗಟ್ಟಿನಿಂದ, ರೋಗರುಜಿನಗಳಿಂದ ನರಳುತ್ತಿರುವುದನ್ನು ಕಂಡಾಗ ಆ ಜೀವ ಚಡಪಡಿಸಿ ಹೋಗಿತ್ತು. ಇನ್ನು ಸುಮ್ಮನಿದ್ದರೆ ಆಗುವುದಿಲ್ಲ. ಬದುಕು ಮತ್ತು ಜೀವನ ಇರುವುದೇ ಜನರೆಂಬ ಜನಾರ್ಧನನ ಸೇವೆ ಮಾಡಲಿಕ್ಕೆ. ಒಬ್ಬ ಆದರ್ಶ ಪುರುಷನ ಮಡಿಲಿನಲ್ಲಿ ಬೆಳೆದ ವ್ಯಕ್ತಿತ್ವ ತನ್ನದು. ಅವರೂ ಜನ ಸೇವೆಯ ನಿಮಿತ್ತದ ಒಂದು ಪ್ರವಾಸದಲ್ಲಿರುವಾಗ ಇಹ ತ್ಯೇಜಿಸಿದರು, ವಾಸ್ತವವಾಗಿ ಅದು ಜನರಿಗಾಗಿ ಬದುಕಿದ್ದ ಜೀವ ಜನರಿಗಾಗಿಯೇ ಸಮರ್ಪಿಸಲ್ಪಟ್ಟಿತ್ತು. ತಾನೇಕೆ ಮನೆಯಲ್ಲಿರಬೇಕು, ಕೇವಲ ವೈಯುಕ್ತಿಕ ಹಿತಾಸಕ್ತಿಗಾಗಿ?

ಶ್ರೀಮತಿ ಶ್ರೀದೇವಿ ಆರ್ ನಾಯಕ ಅಭಿಮಾನಿ ಬಳಗ!

ತತಕ್ಷಣ ಜಾಗೃತರಾದ ಆಕೆ ಇಡೀ ದೇವದುರ್ಗ ತಾಲ್ಲೂಕಿನಲ್ಲಿರುವ ತನ್ನ ಅಭಿಮಾನಿ ಯುವಕರನ್ನು ಸಂಪರ್ಕಿಸಿದರು. ಸಭೆ ಸೇರುವಂತೆ ಹೇಳಿದಳು. ಯುವಕರ ದಂಡು ತಂಡೋಪ ತಂಡವಾಗಿ ಹರಿದು ಬಂದಿತು. ಆಗ ಮಾತನಾಡಿದಳು:

“ನಾವೀಗ ಸುಮ್ಮನೆ ಕೂತುಕೊಳ್ಳಬಾರದು. ಇದು ಅತಿ ಕ್ಲಿಷ್ಟಕರ ಕಾಲ. ಜನ ಹಸಿವೆಯಿಂದ ನರಳುತ್ತಿದ್ದಾರೆ. ಅವರ ಕಣ್ಣೀರು ಒರೆಸಲು ಈಗ ಮಾನವೀಯ ಹಸ್ತದ ಅವಶ್ಯಕತೆ ಇದೆ. ಎದೆಯೊಳಗೆ ಕನಿಕರ, ಒಡಲೊಳಗೆ ಮಮಕಾರ ಇರದಿದ್ದರೆ ಜೀವ ಮತ್ತು ಜೀವನಕ್ಕೆ ಅರ್ಥ ಇರುವುದಿಲ್ಲ. ನಾವೀಗ ಹಸಿವಿನ ವಿರುದ್ಧ ಹೋರಾಡಬೇಕಿದೆ. ದಿಗ್ಬಂಧನಕ್ಕೆ ಒಳಗಾದ ಜನರಿಗೆ ಸಾಂತ್ವನ ಹೇಳಬೇಕಾಗಿದೆ. ತಾಲ್ಲೂಕಿನ ಪ್ರತಿ ಕುಟುಂಬವನ್ನೂ ನಾವು ತಲುಪಬೇಕಿದೆ. ನೀವೆಲ್ಲರೂ ಸೈನಿಕರಂತೆ ಪ್ರತಿ ಕುಟುಂಬಕ್ಕೂ ನಿಮ್ಮ ಪ್ರೀತಿಯ ಸೇವೆ ನೀಡಬೇಕಿದೆ. ಪ್ರತಿ ಕಷ್ಟಕ್ಕೂ, ಪ್ರತಿ ನೋವಿಗೂ, ಪ್ರತಿ ತೊಂದರೆಗೂ ಸ್ಪಂದಿಸಿ ನಿಮ್ಮೊಂದಿಗೆ ನಾವಿದೇವೆ ಎನ್ನುವ ಧೈರ್ಯ ತುಂಬಬೇಕಿದೆ. ಸಮಾಜದಿಂದ ಒಂದಿಷ್ಟು ಪಡೆದಿದ್ದೇನೆ, ಅದು ಸಮಾಜಕ್ಕೆ ಸಮರ್ಪಿತವಾಗಲಿ. ಬನ್ನಿ, ಇವತ್ತಿನಿಂದ ಪ್ರತಿ ಹಳ್ಳಿ, ಪ್ರತಿಕುಟುಂಬವನ್ನು ತಲುಪೋಣ” ಎಂದಳು. ಯುವಕರು ಉತ್ಸಾಹದಿಂದ ಹರ್ಷ ವ್ಯಕ್ತಪಡಿಸಿದ್ದಲ್ಲದೆ ಶಿಸ್ತಿನ ಸಿಪಾಯಿಗಳಂತೆ ತಾವು ಸಿದ್ದ ಎಂದರು.. ಹಾಗೆ ಮಾತನಾಡಿದವರು-

ಶ್ರೀಮತಿ ಶ್ರೀದೇವಿ ರಾಜಶೇಕರ ನಾಯಕ, ದಿವಂಗತ ಹಿರಿಯ ಕಾಂಗ್ರೇಸ್ ನಾಯಕ ಮತ್ತು ಮುತ್ಸದ್ದಿ ರಾಜಕಾರಣಿ ಎ.ವೆಂಕಟೇಶ ನಾಯಕರ ಮೊಮ್ಮಗಳು. ಸ್ವಾತಂತ್ರಾö್ಯನAತರ ಈ ದೇಶಕ್ಕೆ ಸ್ವಾತಂತ್ರö್ಯ ತಂದುಕೊಟ್ಟ ಕಾಂಗ್ರೇಸ್ ಪಕ್ಷದ ಕಾರ್ಯಕರ್ತರಾಗಿ ಗಾಂಧೀಜಿಯವರ ಚಿಂತನೆಗಳ ಅಭಿಮಾನಿಯಾಗಿ ಜನ ಸೇವೆಗೆ ನಿಂತ ನಿಸ್ವಾರ್ಥ ರಾಜಕಾರಣಿ ಎ.ವೆಂಕಟೇಶ ನಾಯಕರು. ಸಂಸದರಾಗಿ ಶಾಸಕರಾಗಿ ಜಿಲ್ಲೆಗೆ ತಮ್ಮದೇ ಆದ ಕೊಡುಗೆ ನೀಡಿದವರು. ಅವರ ಪ್ರೀತಿಯ ಮೊಮ್ಮಗಳು ಈ ಶ್ರೀಮತಿ ಶ್ರೀದೇವಿ ರಾಜಶೇಕರ ನಾಯಕ. ತಾತನ ಗರಡಿಯಲ್ಲಿ ಆತನ ಚಿಂತನೆಗಳನ್ನು ಆಪ್ತವಾಗಿ ಕಂಡು ಬೆಳೆದ ಮಗುವಲ್ಲವೇ? ಆಕೆಗೆ ಈ ಲಾಕ್‌ಡೌನ್ ಜನರಿಗೆ ತಂದ ಸಂಕಷ್ಟವನ್ನು ನೋಡಲು ಮತ್ತು ನೋಡಿ ಸಹಿಸಿಕೊಳ್ಳಲು ಆಗಲಿಲ್ಲ. ಮನೆಯಿಂದ ಆಚೆ ಬಂದು ಯುವಕರಿಗೆ ಕರೆ ನೀಡಿ, ರಾತ್ರೋರಾತ್ರಿ ಅಗತ್ಯ ವಸ್ತುಗಳನ್ನು ಖರೀದಿಸಿ ಪ್ರತಿ ಕುಟುಂಬವನ್ನೂ ತಲುಪತೊಡಗಿದರು. ಆನರಿಗೆ ಆಹಾರ ಸಾಮಗ್ರಿ ಮಾತ್ರವಲ್ಲದೆ ಔಷಧಿಯ ನೆರವು, ಬಟ್ಟೆ ಬರೆಗಳ ನೆರವನ್ನು ನೀಡುವುದಲ್ಲದೆ ಅದಕ್ಕಿಂತಲೂ ಪ್ರಮುಖವಾದದ್ದು ಆಪ್ತ ಸಾಂತ್ವನ ಎಂದು ಅರಿತು ಮನೆಯ ಮಗಳಂತೆ, ತಂಗಿಯAತೆ, ಅಕ್ಕನಂತೆ ಜನರ ಕಷ್ಟ ಸುಖಗಳನ್ನು ಹಂಚಿಕೊಳ್ಳತೊಡಗಿದರು. ಆ ಸಾಮಾಜಿಕ ಸೇವೆ ಕ್ರಾಂತಿಯAತೆ ದೇವದುರ್ಗ ಕ್ಷೇತ್ರವನ್ನು ವ್ಯಾಪಿಸಿತು. ಅಭಿಮಾನಿ ಬಳಗ ಪ್ರತಿ ಮನೆಯನ್ನೂ ತಲುಪಿತು. ಆ ಯುವಕರ ತಂಡ ಅಪ್ಪಟ ಸೈನಿಕರಂತೆ ಕೆಲಸ ಮಾಡತೊಡಗಿದರು. ಆನ ನೆಮ್ಮದಿಯ ನಿಟ್ಟುಸಿರು ಬಿಡತೊಡಗಿದರು. ಆನರಿಗೆ ಧೈರ್ಯ ಬಂದಿದ್ದಲ್ಲದೆ ತಮ್ಮಿಂದ ಒಂದು ದೈವವಿದೆ ಎನ್ನುವ ಧೈರ್ಯ ತಂದುಕೊAಡರು. ಈ ಅನನ್ಯ ಸೇವೆಗೆ ಶ್ರೀಮತಿ ಶ್ರೀದೇವಿ ನಾಯಕರಿಗೆ ಸಮಾಜ ಸೇವೆಯನ್ನು ಗುರುತಿಸಿ ವಿಶ್ವಾವಿದ್ಯಾಲಯವೊಂದು ಪಿಹೆಚ್‌ಡಿ ನೀಡಿ ಗೌರವಿಸಿತು.

ಈ ಮೇಲಿನ ಸಂಗತಿಯನ್ನು ಏಕೆ ಬರೆಯಬೇಕಾಗಿ ಬಂದಿತು ಎಂದರೆ ಶ್ರೀಮತಿ ಸ್ರೀದೇವಿ ನಾಯಕರು ಸದಾ ಸಮಾಜಮುಖಿ ಕಳಕಳಿ ಇರುವ ಜನರ ಸೇವೆಗೆ ಹಂಬಲಿಸುವ ಗುಣವಿರುವ ವ್ಯಕ್ತಿ, ಅವರದು ವಿಶಿಷ್ಟವಾದ ವ್ಯಕ್ತಿತ್ವ ಎಂದು ಹೇಳುವುದಕ್ಕೆ. ಇದು ಹೊಗಳಿಕೆಯೋ ಊಹೆಯ ಬರವಣಿಗೆಯೋ ಅಲ್ಲ. ಕೊವಿಡ್ ಸಂದರ್ಬದಲ್ಲಿ ಅವರು ದೇವದುರ್ಗ ಜನತೆಗೆ ಅಭಯಾಸ್ತವಾಗಿ ನಿಂತ ಕಥೆಯನ್ನು ಪ್ರತಿ ಮನೆಗಳೂ ಹೇಳುತ್ತವೆ. ಆಗಿನ ರಾಜಕೀಯ, ಆಗಿನ ಆಡಳಿತರೂಢ ರಾಜಕಾರಣಿ ಅಕ್ಷರಶಃ ನಾಪತ್ತೆಯಾಗಿದ್ದರು. ಯಾವಾಗ ಶ್ರೀಮತಿ ಶ್ರೀದೇವಿ ನಾಯಕರು ಜನರಿಗೆ ಅಗತ್ಯ ನೆರವುಗಳನ್ನು ನೀಡುತ್ತಾ ಸ್ಪಂದನೆಗೆ ನಿಂತರೋ ಆನಂತರ ಅದು ಹಲವರಿಗೆ ಪ್ರೇರಣೆಯಾದದ್ದು ನಮಗೆಲ್ಲಾ ಗೊತ್ತಿರುವ ಸಂಗತಿ.

ತಾಯಿ ಹೃದಯದ ಸೇವಕಿ

ನಿಮಗೆ ನೆನಪಿರಬಹುದು, ಎ. ವೆಂಕಟೇಶ ನಾಯಕರು ಒಬ್ಬ ನಿಸ್ವಾರ್ಥ ರಾಜಕಾರಣಿಯಾಗಿದ್ದರು. ಸಮಾನತೆಯ ತತ್ವದ ಮೇಲೆ ಸಂವಿಧಾನವನ್ನು ಉಸಿರಾಗಿಸಿಕೊಂಡು ಗಾಂಧೀ ತತ್ವಗಳ ಮೇಲೆ ರಾಜಕಾರಣ ಮಾಡಿದವರು. ಅವರು ರಾಜಕಾರಣವನ್ನು ಈಗಿನಂತೆ ಉದ್ಯಮ ಮಾಡಿಕೊಂಡು ಹಣ ಮಾಡಿದವರಲ್ಲ. ಈಗಿನಂತೆ ಆಗ ಸಹಸ್ರ ಕೋಟಿ ಅನುದಾನವೂ ಸರ್ಕಾರದಲ್ಲಿರುತ್ತಿರಲಿಲ್ಲ. ಬರುವ ಅಲ್ಪಸ್ವಲ್ಪ ಅನುದಾನದಲ್ಲಿ ಪ್ರತಿ ಕ್ಷೇತ್ರ, ಪ್ರತಿ ಹಳ್ಳಿಯನ್ನು ನಿಭಾಯಿಸಬೇಕಿತ್ತು. ಶಿಕ್ಷಣ ಪ್ರೇಮಿ, ಜಾತ್ಯಾತೀತ ನಿಲುವುಗಳನ್ನು ಉಸಿರಾಗಿಸಿಕೊಂಡಿದ್ದ ಅವರು ದಲಿತೋದ್ದಾರ ಮತ್ತು ಶಿಕ್ಷಣಕ್ಕೆ ಒತ್ತು ನೀಡುವ ಕಾರ್ಯಕ್ರಮಗಳಿಗೆ ಅನುದಾನಗಳನ್ನು ವಿನಿಯೋಗಿಸತೊಡಗಿದರು. ಅಧಿಕಾರವೆಂಬುದು ಜನರ ಭಿಕ್ಷೆ ಎಂದು ಭಾವಿಸುತ್ತಿದ್ದ ಅವರು ಸಿಕ್ಕಿರುವ ಅಧಿಕಾರವನ್ನು ಪ್ರತಿಹಳ್ಳಿಯ ಪ್ರತಿಯೊಬ್ಬ ಕಾರ್ಯಕರ್ತನಿಗೂ ಹಂಚುತ್ತಿದ್ದರು. ಈ ಕಾರಣಕ್ಕೆ ರಾಯಚೂರು ಜಿಲ್ಲೆಯ ಒಬ್ಬ ವಿಶಿಷ್ಟ ಮತ್ತು ಸಂಭಾವಿತ ರಾಜಕಾರಣಿ ಎಂದು ಜನ ಮನ್ನಣೆ ಪಡೆದವರು ಎ.ವೆಂಕಟೇಶ ನಾಯಕರು. ಇದನ್ನು ತೀರಾ ಹತ್ತಿರದಿಂದ ಕಂಡವರು ಅವರ ಮುದಿನ ಮೊಮ್ಮಗು ಶ್ರೀದೇವಿ ನಾಯಕರು. ಸದಾ ತಾತನ ಮಡಿಲಲ್ಲಿರುತ್ತಿದ್ದ ಮಗುವಿಗೆ ಬಾಲ್ಯದಿಂದಲೂ ಆಕೆಯ ಕಿವಿ ಕೇಳಿಸಿಕೊಂಡ ಮಾತುಗಳು ಮತ್ತು ಕಿವಿಗೆ ಬಿದ್ದ ಶಬ್ದಗಳು ಮಾನವೀಯ ಮೌಲ್ಯಗಳಿಗೆ ಸಂಬAಧಿಸಿದAಥವು. ಅದೀಗ ಎದೆಯಲ್ಲಿ ಜನರೆಡೆಗೆ ಪ್ರೀತಿಯ ಸಾಗರವಾಗಿ ಅವಿರ್ಭವಿಸಿದೆ. ಅಲ್ಲೀಗ ಸಮಾಜ ಸೇವೆಯ ತುಡಿತ. ಆನರನ್ನು ಉನ್ನತ್ತೀಕರಿಸುವ ಹಂಬಲ. ಹಿಂದುಳಿದ ತಾಲ್ಲೂಕು ಎನ್ನುವ ಹಣೆಪಟ್ಟಿ ಹೊತ್ತಿರುವ ದೇವದುರ್ಗ ತಾಲ್ಲೂಕನ್ನು ಸರ್ವಾಂಗೀಣವಾಗಿ ಅಭಿವೃದ್ಧಿ ಪಡಿಸುವ ಮಹದಾಸೆ. ಇವರ ಎದೆಯೊಳಗಿನ ಈ ಹಂಬಲವನ್ನು ಗುರುತಿಸಿ ಕಳೆದ ವಿಧಾನ ಸಭೆ ಚುನಾವಣೆಗೆ ಕಾಂಗ್ರೇಸ್ ಪಕ್ಷ ಟಿಕೆಟ್ ನೀಡಿತ್ತು. ದೇವದುರ್ಗ ಮತಕ್ಷೇತ್ರದ ಕಾಂಗ್ರೇಸ್ ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಿತ್ತು.

ಆದರೆ ಇಲ್ಲೊಂದು ದ್ರೋಹ ನಡೆಯಿತು!

ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕುಟುಂಬ ಎಂದು ಎ.ವೆಂಕಟೇಶ ನಾಯಕರ ಕುಟುಂಬ ಖ್ಯಾತಿಯನ್ನು ಪಡೆದಿತ್ತು. ರಾಯಚೂರಿನ ಪ್ರಮುಖ ಮತ್ತು ಪಾರಂಪರಿಕ ರಾಜಕೀಯ ಕುಟುಂಬ ಎನ್ನುವ ಖ್ಯಾತಿಯೂ ಇದೆ. ದೇವದುರ್ಗ ತಾಲ್ಲೂಕಿನ ಅರಕೇರಾವನ್ನು ರಾಜಕೀಯ ಶಕ್ತಿ ಕೇಂದ್ರ ಎಂದು ಕರೆಯಲಾಗುತ್ತಿತ್ತು. ಕಾಂಗ್ರೆಸ್ ಪಕ್ಷ ಎ. ವೆಂಕಟೇಶ ನಾಯಕರಿಗೆ ಎಲ್ಲವನ್ನೂ ಕೊಟ್ಟಿದೆ. ವೆಂಕಟೇಶ ನಾಯಕರು ನಾಲ್ಕು ಬಾರಿ ಸಂಸದರಾಗಿ ಯಶಸ್ವಿ ಅಧಿಕಾರ ನಡೆಸಿದವರು. ಒಂದು ಬಾರಿ ದೇವದುರ್ಗ ಮತಕ್ಷೇತ್ರದಿಂದ ಶಾಸಕರಾಗಿಯೂ ಆಯ್ಕೆಯಾಗಿದ್ದರು. ಅವರ ಹಿರಿಯ ಪುತ್ರರಾದ ಬಿ.ವಿ.ನಾಯಕರು ಕಾಂಗ್ರೆಸ್ ಪಕ್ಷದಿಂದ ಸಂಸದರಾಗಿ ಅಧಿಕಾರವನ್ನು ಅನುಭವಿಸಿದವರು. ಎ. ವೆಂಕಟೇಶ ನಾಯಕರ ಅಕಾಲಿಕ ಮರಣದ ನಂತರ ಕಾಂಗ್ರೆಸ್ ಪಕ್ಷವು ಆಗ ನಡೆದ ಉಪ ಚುನಾವಣೆಗೆ ದೇವದುರ್ಗ ಮತಕ್ಷೇತ್ರಕ್ಕೆ ಅವರು ಎ.ವೆಂಕಟೇಶ ನಾಯಕರ ದ್ವಿತೀಯ ಪುತ್ರ ರಾಜಶೇಕರ ನಾಯಕರಿಗೆ ಟಿಕೆಟ್ ನೀಡಿತ್ತು. ಶಿವನಗೌಡ ನಾಯಕರ ರಾಜಕೀಯ ಚಾಣಾಕ್ಷö್ಯತನಕ್ಕೆ ಕೆಲವೇ ಮತಗಳಿಂದ ರಾಜಶೇಖರ ನಾಯಕರು ಸೋತಿದ್ದರು. ಇಲ್ಲಿ ಒಂದು ವಿಷಯವನ್ನು ನಾವು ಸ್ಪಷ್ಟವಾಗಿ ನೆನಪಿಟ್ಟುಕೊಳ್ಳಬೇಕಿದೆ. ಎ.ವೆಂಕಟೇಶ ನಾಯಕರ ಕುಟುಂಬ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಬೆಂಬಲಿಗರ ಕುಟುಂಬ ಎನ್ನುವುದು. ಅಂತೆಯೇ ಮೊನ್ನೆ ಹದಿನಾರನೇಯ ವಿಧಾನಸಭೆಗೆ ನಡೆದು ಚುನಾವಣೆಗೆ ಡಿ.ಕೆ.ಶಿವಕುಮಾರ ಮತ್ತು ಸನ್ಮಾನ್ಯ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಪಕ್ಷವೂ ದೇವದುರ್ಗ ವಿಧಾನಸಭೆಗೆ ಎ.ವೆಂಕಟೇಶ ನಾಯಕರ ಪ್ರೀತಿಯ ಮೊಮ್ಮಗಳಾದ ಮತ್ತು ಅವರ ದ್ವಿತೀಯ ಪುತ್ರ ರಾಜಶೇಖರ ನಾಯಕರ ಧರ್ಮಪತ್ನಿಯಾದ ಶ್ರೀಮತಿ ಶ್ರೀದೇವಿ ನಾಯಕರಿಗೆ ಟಿಕೆಟ್ ನೀಡಿ ಕಣಕ್ಕಿಳಿಸಿತ್ತು. ಪಕ್ಷದ ಲೆಖ್ಖಚಾರ ಸರಿಯಾಗಿಯೇ ಇತ್ತು. ದೇವದುರ್ಗದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿತ್ತು. ಬಿಜೆಪಿಯಿಂದ ಶಿವನಗೌಡ ನಾಯಕ, ಜೆಡಿಎಸ್‌ನಿಂದ ಕರೆಮ್ಮ ಜಿ ನಾಯಕ ಮತ್ತು ಕಾಂಗ್ರೆಸ್‌ನಿAದ ಶ್ರೀಮತಿ ಶ್ರೀದೇವಿ ನಾಯಕ. ಬಿಜೆಪಿಯ ಆಡಳಿತ ವಿರೋಧಿ ಅಲೆಯನ್ನು ಪಕ್ಷ ಸ್ಪಷ್ಟವಾಗಿ ಗುರುತಿಸಿತ್ತು. ಕರೆಮ್ಮ ನಾಯಕರು ಈ ಹಿಂದಿನ ಚುನಾವಣೆಯಲ್ಲಿ ಪಡೆದ ಮತಗಳನ್ನು ಲೆಖ್ಖ ಹಾಕಲಾಗಿತ್ತು. ಸದ್ಯದ ಚುನಾವಣೆಯಲ್ಲಿ ನೇರಾನೇರ ಹಣಾಹಣಿ ಬಿಜೆಪಿ ಮತ್ತು ಕಾಮಗ್ರೆಸ್‌ನೊಂದಿಗೆ ನಡೆಯಲಿದೆ ಎಂದು ಅಂದಾಜಿಸಲಾಗಿತ್ತು. ಖಚಿತವಾಗಿ ದೇವದುರ್ಗದಲ್ಲಿ ಕಾಂಗ್ರೆಸ್ ಗೆಲ್ಲಿದೆ ಎಂದು ನಂಬಲಾಗಿತ್ತು. ಕಾರಣ ದೇವದುರ್ಗ ಚುನಾವಣೆಯ ಪ್ರಚಾರ ಮತ್ತು ಗೆಲುವಿನ ನೇತೃತ್ವ ಬಿ.ವಿ.ನಾಯಕ ವಹಿಸಿಕೊಳ್ಳಲಿದ್ದಾರೆ ಎನ್ನುವ ಮಾತಿತ್ತು. ಆದರೆ ಕೊನೆಯ ಹಂತದಲ್ಲಿ ಒಂದು ದಾರುಣ ರಾಜಕೀಯ ವಿಪ್ಲವ ನಡೆದು ಹೋಯಿತು.

ಬಿ.ವಿ.ನಾಯಕ ಪಕ್ಷಾಂತರ

ತನ್ನ ಮನೆತನಕ್ಕೆ ಇರುವ ಪಾರಂಪರಿಕ ಮತ್ತು ಐತಿಹಾಸಿಕ ನಿಷ್ಠಾವಂತ ಕಾಂಗ್ರೆಸ್ ಮನೆತನ ಎನ್ನುವ ಖ್ಯಾತಿಯನ್ನು ಅಪಮೌಲ್ಯಗೊಳಿಸಿಕೊಂಡು ಬಿ.ವಿ.ನಾಯಕ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರಿ ಬಿಟ್ಟರು. ಇದು ಶಿವನಗೌಡ ನಾಯಕರ ಷಡ್ಯಂತ್ರ ಎಂದು ದೇವದುರ್ಗ ತಾಲ್ಲೂಕಿನ ಬಿ.ವಿ.ನಾಯಕರ ಬೆಂಬಲಿಗರು ಹೇಳಿದರಾದರೂ ಮಾನವಿಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ ಬಿ.ವಿ.ನಾಯಕ ದಾರುಣವಾಗಿ ಸೋತ. ದೇವದುರ್ಗದಲ್ಲಿ ಶಿವನಗೌಡ ನಾಯಕನೂ ಸೋತ. ರಾಯಚೂರು ಜಿಲ್ಲೆಯಿಂದ ಬಿಜೆಪಿ ತೊಲಗಿಸಲ್ಪಟ್ಟಿತು. ಕಾಂಗ್ರೆಸ್ ರಾಯಚೂರು ಜಿಲ್ಲೆಯಲ್ಲಿ ಅಭೂತಪೂರ್ವ ಯಶಸ್ಸನ್ನು ದಾಖಲಿಸಿತು. ಈ ಗೆಲುವಿನ ಕೀರ್ತಿಗೆ ಭಾಜನರಾಗಬೇಕಿದ್ದ ಬಿ.ವಿ.ನಾಯಕರು ತೆರೆಗೆ ಸರಿದರು.

ಕೊನೆಯ ಹಂತದ ಈ ರಾಜಕೀಯ ಗೇಮ್‌ನಿಂದ ತೀವ್ರವಾದ ನಷ್ಟಕ್ಕೆ ಗುರಿಯಾದವರು ಶ್ರೀಮತಿ ಶ್ರೀದೇವಿ ನಾಯಕರು. ಭಾವನವರು ಆಶಿರ್ವಾದ ಮತ್ತು ಬೆಂಬಲ ಇರುತ್ತದೆ ಎಂದು ಸ್ಪರ್ಧಿಸಿದ್ದ ಇವರು ಏಕಾಂಗಿಯಾಗಿ ಹೋದರು. ಕಾಂಗ್ರೆಸ್ ಪಕ್ಷದ ಮತದಾರರು ಬಿ.ವಿ.ನಾಯಕರ ಪಕ್ಷದ್ರೋಹದಿಂದ ದ್ವಂದ್ವಕ್ಕೆ ಮತ್ತು ಗೊಂದಲಕ್ಕೆ ಬಿದ್ದರು. ಪ್ರಮುಖ ಮುಖಂಡರು ತಟಸ್ಥರಾದರು. ಆದರೆ ಈಗ ಸ್ಪರ್ಧಿಸಿಯಾಗಿದೆ, ಹೋರಾಡಬೇಕಿದೆ. ಹೋರಾಡಿದರು. ಚುನಾವಣೆ ಪ್ರಚಾರಕ್ಕೆ ದೇವದುರ್ಗಕ್ಕೆ ಬಂದಿದ್ದ ಸನ್ಮಾನ್ಯ ಸಿದ್ದರಾಮಯ್ಯನವರು ಪ್ರಚಾರ ಭಾಷಣ ಮಾಡುತ್ತಾ ಬಿ.ವಿ.ನಾಯಕರ ಪಕ್ಷದ್ರೋಹದ ಬಗ್ಗೆ ವಿಷಾದ ವ್ಯಕ್ತಪಡಿಸಿ ಹೋದರು. ಆದರೆ ಇಲ್ಲಿ ಒಂದು ವಿಷಯ ಖಚಿತವಾಗಿ ಹೋಗಿದೆ. ದೇವದುರ್ಗದಿಂದ ಕಾಂಗ್ರೆಸ್ ಪಕ್ಷವನ್ನು ಮುನ್ನಡಿಸಬೇಕಾದವರು ಮತ್ತು ಅದನ್ನು ಸಂಘಟಿಸಬೇಕಾದವರು ಶ್ರೀದೇವಿ ನಾಯಕರು ಮತ್ತು ಅವರ ಪತಿ ರಾಜಶೇಖರ ನಾಯಕರು ಎನ್ನುವುದು. ಸದ್ಯ ದಂಪತಿಗಳು ಆ ನಿಟ್ಟಿನಲ್ಲಿ ಸಕ್ರಿಯರಾಗಿದ್ದಾರೆ.
ಪ್ರಸ್ತುತ ಲೋಕಸಭೆ ಚುನಾವಣೆಗೆ ದೇಶ ಸಿದ್ದವಾಗುತ್ತಿದೆ. ರಾಯಚೂರು ಯಾದಗಿರಿ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷ ಒಬ್ಬ ನಿಷ್ಠಾವಂತ ಕಾರ್ಯಕರ್ತ ಮಹಿಳಾ ಅಭ್ಯರ್ಥಿಗೆ ಟಿಕೆಟ್ ನೀಡಬೇಕು ಎನ್ನುವುದು ಜನರ ಹಂಬಲವಾಗಿದೆ. ಸದ್ಯ ಯಾದಗಿರಿ ಮತ್ತು ರಾಯಚೂರು ಜಿಲ್ಲೆಯ ಬಹುತೇಕ ವಿಧಾನಸಭೆ ಸದಸ್ಯರು ಕಾಂಗ್ರೆಸ್ ಶಾಸಕರಾಗಿದ್ದಾರೆ. ಶಹಾಪುರು ಶರಣಬಸ್ಸಪ್ಪಗೌಡ ದರ್ಶನಾಪೂರು ತೆಕ್ಕೆಯಲ್ಲಿದ್ದರೆ ಸುರಪುರ ವೆಂಕಟಪ್ಪ ನಾಯಕರ ಹಿಡಿತದಲ್ಲಿದೆ. ರಾಯಚೂರು ಮತ್ತು ಯಾದಗಿರಿ ಜಿಲ್ಲೆಯ ಇಬ್ಬರು ಪ್ರಮುಖ ನಾಯಕರು ಎಂದರೆ ಎ.ಎಸ್.ಬೋಸರಾಜು, ಶಹಾಪೂರಿನ ಶರಣಬಸ್ಸಪ್ಪಗೌಡ ದಶ್ನಾಪೂರು. ಈ ನಾಯಕರು ಒಬ್ಬ ಮಹಿಳಾ ಅಭ್ಯರ್ಥಿಗೆ ಆದ್ಯತೆ ನೀಡಬೇಕು ಎನ್ನುವುದು ಕಾಮಗ್ರೆಸ್ ಕಾರ್ಯಕರ್ತರ ಆಶಯವಾಗಿದೆ.

ಅಧಿಕಾರ ಇರಲಿ ಬಿಡಲಿ, ಸದಾ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಜನ ಮನ್ನಣೆ ಪಡೆದವರು ಶ್ರೀಮತಿ ಶ್ರೀದೇವಿ ನಾಯಕರು. ಕೃಷ್ಣಾ ನದಿ ಪ್ರವಾಹದಿಂದ ಜನ ತತ್ತರಿಸಿದಾಗ ಸ್ವಂತ ಖರ್ಚಿನಿಂದ ಅವರಿಗೆ ಪುನರ್ವಸತಿ ಕಲ್ಪಿಸಿ ನೆರವಾದವರು ಅವರು. ಈ ಕಾರಣಕ್ಕೆ ಉಭಯ ಜಿಲ್ಲೆಗಳ ಜನರ ಮನಸ್ಸಿನಲ್ಲಿದ್ದಾರೆ ಎನ್ನುವುದು ಜನರಿಂದ ವ್ಯಕ್ತವಾಗುತ್ತಿರುವ ಅಭಿಪ್ರಾಯ. ಅವರ ಇನ್ನಿತರ ಜನ ಸೇವೆಗಳೆಂದರೆ ಬಡ ಜನರಿಗೆ ಆರೋಗ್ಯ ಶಿಬಿರಗಳನ್ನು ನಡೆಸುವುದು, ಬಡ ಜನರಿಗಾಗಿ ಸಾಮೂಹಿಕ ವಿವಾಹಗಳನ್ನು ಏರ್ಪಡಿಸುವುದು, ಮಕ್ಕಳಿಗೆ ಶಿಕ್ಷಣವನ್ನು ಉತ್ತೇಜಿಸುವ ಹಿನ್ನೆಲೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಏರ್ಪಡಿಸುವುದು ಸೇರಿದಂತೆ ಪ್ರತಿನಿತ್ಯ ಹಲವು ಬಗೆಯ ಜನ ಸೇವೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ. ಸದಾ ಜನರ ಮಧ್ಯೆ ಇರುವ ನಾಯಕರು ಸಿಗುವುದು ಈ ದೇಶಕ್ಕೆ ಅಪರೂಪ.
ನಿಷ್ಠಾವಂತ ಕಾರ್ಯಕರ್ತರಾದ ಶ್ರೀಮತಿ ಶ್ರೀದೇವಿ ರಾಜಶೇಖರ ನಾಯಕರಿಗೆ ರಾಯಚೂರು ಲೋಕಸಭೆಯ ಟಿಕೆಟ್ ನೀಡಬೇಕು ಎನ್ನುವುದು ಜನರ ಒತ್ತಾಯವಾಗಿದೆ. ಪಕ್ಷ ಯಾವ ನಿರ್ಧಾರ ತೆಗೆದುಕೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.

                                                                               ಲಕ್ಷ್ಮೀಕಾಂತ ನಾಯಕ

WhatsApp Group Join Now
Telegram Group Join Now

Related Posts