ಸ್ಥಳೀಯ

ರಾಜ ವೆಂಕಟಪ್ಪ ನಾಯಕರ ಕುಟುಂಬವನ್ನು ಕೈ ಬಿಡುವುದಿಲ್ಲ: ಶ್ರೀನಿವಾಸ ದೊರೆ ಮಾಲಗತ್ತಿ

WhatsApp Group Join Now
Telegram Group Join Now

ವರದಿ: ಹುಲಗಪ್ಪ. ಎಂ. ಹವಲ್ದಾರ್

ಸುರಪುರ: ತಾಲ್ಲೂಕಿನ ಮಾಲಗತ್ತಿ ಗ್ರಾಮದ ಹಿರಿಯ ಕಾಂಗ್ರೆಸ್‌ ಮುಖಂಡ ಮತ್ತು ರಾಜಾ ವೆಂಕಟಪ್ಪ ನಾಯಕರ ಅಪ್ಪಟ ಅಭಿಮಾನಿಯಾದ ಶ್ರೀನಿವಾಸ ದೊರೆಯವರು ತಮ್ಮ ನೆಚ್ಚಿನ ನಾಯಕನ ಅಗಲಿಕೆಯಿಂದ ಕಂಬನಿ ಮಿಡಿದರು. ಅಶೃ ಶ್ರದ್ಧಾಂಜಲಿ ಅರ್ಪಿಸುವ ಮೂಲಕ “ನಾವು ಯಾವತ್ತಿಗೂ ರಾಜ ವೆಂಕಟಪ್ಪ ನಾಯಕರ ಕುಟುಂಬದ ಜೊತೆಗಿದ್ದವರು, ಮುಂದೆಯೂ ಆ ಕುಟುಂಬದ ಜೊತೆ ಇರುವವರು” ಎಂದು ಈ ಸಂದರ್ಭದಲ್ಲಿ ಭಾವುಕರಾಗಿ ನುಡಿದರು.

ವೆಂಕಟಪ್ಪ ನಾಯಕರ ಅಕಾಲಿಕ ನಿಧನಿದಿಂದ ಶಹಾಪೂರು ಮತಕ್ಷೇತ್ರಕ್ಕೆ ಸೇರಿದ ಹತ್ತು ಹದಿನೈದು ಹಳ್ಳಿಗಳು ಅನಾಥವಾದವು. ಮತಕ್ಷೇತ್ರ ಯಾವುದೇ ಆಗಲಿ ನಮ್ಮ ಭಾಗದ ಬೆಂಬಲ ಸದಾ ಅವರಿಗೆ ಇರುತ್ತದೆ. ಹುಲಿಯ ಹೊಟ್ಟೆಯಲ್ಲಿ ಹುಲಿ ಹುಟ್ಟಿದಂತೆ ಹೆಬ್ಬುಲಿಯಾಗಿ ಅವರು ನಮ್ಮೊಂದಿಗಿದ್ದರು. ಅವರ ನಿಧನ ನಮ್ಮಲ್ಲಿ ಅಧೈರ್ಯವನ್ನುಂಟು ಮಾಡಿದೆ ಎಂದು ತಮ್ಮ ಭಾವನೆಗಳನ್ನು ತೋಡಿಕೊಂಡರು. ಬರುವ ಉಪ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳ ಅಂತರದಿಂದ ಆ ಕುಟುಂಬವನ್ನು ಗೆಲ್ಲಿಸಲಿದ್ದೇವೆ ಎಂದರು.

ಎಲ್ಲರನ್ನೂ ನಮ್ಮವರು ಎಂದು ಭಾವಿಸಿ ಹೆಗಲ ಮೇಲೆ ಕೈ ಹಾಕುವ ರಾಜಾ ವೆಂಕಟಪ್ಪ ನಾಯಕರ ಗುಣ ಬಹುದೊಡ್ಡದು. ಅವರ ಒಡನಾಟದ ದಿನಗಳನ್ನು ಮರೆಯಲು ಸಾಧ್ಯವಿಲ್ಲ. ಕೊಟ್ಟ ಮಾತಿಗೆ ತಪ್ಪಿದ ಉದಾಹರಣೆ ಇರಲಿಲ್ಲ. ನುಡಿದಂತೆ ನಡೆಯುವ ಆದರ್ಶವನ್ನು ರೂಢಿಸಿಕೊಂಡಿದ್ದ ಅವರ ಅಗಲಿಕೆ ಯಾವತ್ತಿಗೂ ತುಂಬಲಾರದ ನಷ್ಟ ಎಂದು ಕಣ್ಣೀರು ಮಿಡಿದರು.

WhatsApp Group Join Now
Telegram Group Join Now

Related Posts