ಕವಲೂರ ಗ್ರಾಮಕ್ಕೆ ಕುಡಿಯುವ ನೀರು ಟ್ಯಾಂಕ್ ಮೂಲಕ ಪೂರೈಕೆ -ರಾಹುಲ್ ರತ್ನಂ ಪಾಂಡೆಯ
ಕೊಪ್ಪಳ : ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಾಹುಲ್ ರತ್ನಂ ಪಾಂಡೆಯ ಅವರಿಗೆ ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್ ಭೇಟಿಯಾಗಿ ಕವಲೂರ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆಯಾಗಿದೆ. ಇರುವ ಐದು ಶುದ್ಧ ಕುಡಿಯುವ ನೀರಿನ ಘಟಕಗಳು ದುರಸ್ತಿಯಲ್ಲಿದ್ದು. ಎರಡು ಕೆರೆಗಳು ದೂರದಲ್ಲಿದೆ. ನಾಲ್ಕೈದು ಕಿಲೋಮೀಟರಗಳ ಹೋಗಿ ನೀರು ತರಬೇಕಾದ ಪರಿಸ್ಥಿತಿ ಇದೆ. ಒಂದಾದರೂ ಶುದ್ಧ ಕುಡಿಯುವ ನೀರಿನ ಘಟಕ ದುರಸ್ಥಿ ಮಾಡಿಸಿಕೊಟ್ಟರೆ ಜನರಿಗೆ ಕುಡಿಯುವ ನೀರಿನ ಅನುಕೂಲವಾಗುತ್ತದೆ ಎಂದು ತಿಳಿಸಲಾಯಿತು.
ಕುಡಿಯುವ ನೀರಿನ ಸಮಸ್ಯೆಯನ್ನು ತಾಳ್ಮೆಯಿಂದ ಆಲಿಸಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ರತ್ನಂ ಪಾಂಡೆಯ ಜಿಲ್ಲೆಯ ಶುದ್ಧ ಕುಡಿಯುವ ನೀರಿನ ಘಟಕಗಳು ದುರಸ್ತಿಗೆ ಹೆಚ್ಚಿನ ಮೊತ್ತವಾಗಿದ್ದರಿಂದ ನಮ್ಮ ವ್ಯಾಪ್ತಿ ಮೀರಿದೆ. ಹೀಗಾಗಿ ಸರ್ಕಾರಕ್ಕೆ ಕಳುಹಿಸಲಾಗಿದೆ. ಎರಡು ವಾರಗಳಲ್ಲಿ ಸರ್ಕಾರದಿಂದ ಬಂದ ತಕ್ಷಣ ದುರಸ್ತಿಗೊಳಿಸುವುದಾಗಿ ಹೇಳಿದರು. ಕುಡಿಯುವ ನೀರಿನ ಆಭಾವ ಹೆಚ್ಚಾಗಿರುವುದರಿಂದ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಕೋರಿದಾಗ. ಸದ್ಯ ಟ್ಯಾಂಕ್ ಮೂಲಕ ನೀರು ಪೂರೈಕೆಗೆ ಸೂಚಿಸುವುದಾಗಿ ಹೇಳಿದರು.