ಸ್ಥಳೀಯ

32 ಅಭಿವೃದ್ಧಿ ಅಧಿಕಾರಿಗಳ ಅಮಾನತು, ಕಂಡು ಕೇಳರಿಯದ ಭ್ರಷ್ಟಾಚಾರ, ಸರ್ಕಾರ ಹಣವನ್ನು ಮರು ಪಾವತಿ ಮಾಡಿಕೊಳ್ಳಲಿದೆಯೇ

WhatsApp Group Join Now
Telegram Group Join Now

ಅದಕ್ಕೆ ಹಿಂದುಳಿದ ತಾಲ್ಲೂಕು ಎನ್ನುವ ಹಣೆಪಟ್ಟಿಯನ್ನು ಕಟ್ಟಲಾಗಿದೆ. ಈ ಕಾರಣಕ್ಕೆ ವಿಫುಲವಾಗಿ ಅನುದಾನ ಲಭ್ಯವಾಗುತ್ತದೆ. ಸರ್ಕಾರದ ಉದ್ದೇಶ ಅದು ಸರ್ವಾಂಗೀಣವಾಗಿ ಅಭಿವೃದ್ಧಿಯಾಗಲಿ ಎನ್ನುವುದು. ಆದರೆ ಅಲ್ಲಿನ ರಾಜಕಾರಣಿಗಳಿ ಈ ‘ಹಿಂದುಳಿದ ತಾಲ್ಲೂಕು’ ಎನ್ನುವ ಪಟ್ಟ ವರದಾನವಾಗಿದೆ. ಬಂದಿರುವ ಅನುದಾನಗಳನ್ನು ನುಂಗುತ್ತಾ ತಾವಷ್ಟೆ ಅಭಿವೃದ್ಧಿಯಾಗುತ್ತಾ ಏಷಿಯಾದಲ್ಲಿಯೇ ಮುಂದುವರೆದ ಕುಟುಂಬ ಎನ್ನುವ ಖ್ಯಾತಿ ಪಡೆಯುವ ಸ್ಪರ್ಧೆಗೆ ಬಿದ್ದಂತಿದ್ದಾರೆ. ಇದರ ಪರಿಣಾಮವೇ ಭಯಾನಕ ಭ್ರಷ್ಟಚಾರ. ಅಲ್ಲಿ ಜನರ ಬದುಕು ಸುಧಾರಿಸಲಿಲ್ಲ. ಶೈಕ್ಷಣಿಕ ಅಭಿವೃದ್ಧಿಯಾಗಲಿಲ್ಲ. ಕ್ಷೇತ್ರ ಭೌಗೋಳಿಕವಾಗಿ ಅಭಿವೃದ್ಧಿ ಹೊಂದಲಿಲ್ಲ. ಮೂಲಭೂತ ಸಮಸ್ಯೆಗಳು ನಿವಾರಣೆಯಾಗಲಿಲ್ಲ. ರಾಜಕಾರಣಿಯೊಬ್ಬ ಮಾತ್ರ ಅಭಿವೃದ್ಧಿಯಾಗಿ ಹೋದ. ಶಾಸಕನೊಬ್ಬ ಮಾತ್ರ ಅಭಿವೃದ್ಧಿಗೊಂಡ. ನಿಜ, ಇದು ದೇವದುರ್ಗದ ಕಥೆ. ಇದು ಬರಿ ಕಥೆಯಲ್ಲ ವ್ಯಥೆಯೂ ಕೂಡಾ ಹೌದು. ಅನಾಮತ್ತು ನೂರೈವತ್ತು ಕೋಟಿಗೂ ಮಿಕ್ಕಿ ನರೆಗಾ ಅನುದಾನ ದುರ್ಬಳಕೆಯಾಗಿರುವ ಪ್ರಕರಣ ಸರ್ಕಾರವೇ ನಡೆಸಿರುವ ತನಿಖೆಯಿಂದ ಬಹಿರಂಗಗೊAಡಿದೆ. ರಾಜ್ಯ ಲೆಖ್ಖ ಪರಿಶೋಧಕರ ತಂಡ ದೇವದುರ್ಗದಲ್ಲಿ ಬಿಡಾರ ಹೂಡಿ ತಾಲ್ಲೂಕಿನ ವ್ಯಾಪ್ತಿಯ ಮೂವತ್ತು ಮೂರು ಗ್ರಾಮ ಪಂಚಾಯತಿಗಳನ್ನು ತನಿಖೆ ಮಾಡಿತು. ಯಾವ ಪಂಚಾಯತಿಗಳೂ ನಿಯಮಬದ್ದವಾಗಿ ಯೋಜನೆಯನ್ನು ಅನುಷ್ಠಾನಗೊಳಿಸಿರುವುದು ಕಂಡು ಬರಲಿಲ್ಲ. ತಾಲ್ಲೂಕಿನ ಒಟ್ಟು ಮೂವತ್ಮೂರು ಗ್ರಾಮಪಂಚಾಯತಿಗಳ ಮೇಲೂ ಅಕ್ರಮದ ಆರೋಪ ದೃಢ ಪಟ್ಟಿದೆ. ರಾಜ್ಯ ಲೆಖ್ಯಖ ಪರಿಶೋಧಕರ ತಂಡ ದೇವದುರ್ಗ ಪಂಚಾಯತ್ ರಾಜ್ ಇಲಾಖೆ ಒಂದು ಭ್ರಷ್ಟ ಕೂಪ ಎಂದು ಷರಾ ಬರೆದು ಸಕ್ಷಮ ಪ್ರಾಧಿಕಾರಕ್ಕೆ ವರದಿ ಒಪ್ಪಿಸಿ ಹೊರಟು ಹೋಗಿದೆ.

ಉದ್ಯೋಗ ಖಾತರಿ ಯೋಜನೆಯ ಹಣ ದುರುಪಯೋಗದ ಪ್ರಕರಣ ತಾಲ್ಲೂಕು ವ್ಯಾಪ್ತಿಯ ಮೂವತ್ಮೂರು ಗ್ರಾಮ ಪಂಚಾಯತಿಯ ಅಭಿವೃದ್ಧಿ ಅಧಿಕಾರಿಗಳ ತಲೆಗೆ ಸುತ್ತಿದೆ. ವರದಿ ಸ್ಪಷ್ಟವಿದೆ. ಈ ಅಭಿವೃದ್ಧಿ ಅಧಿಕಾರಿಗಳ ಮೇಲೆ ಇಲಾಖಾ ವಿಚಾರಣೆ ಜರುಗಿಸಿ ಶಿಸ್ತು ಕ್ರಮ ಜರುಗಿಸಬೇಕು. ದುರುಪವಾದ ಹಣವನ್ನು ಅವರಿಂದ ಕಕ್ಕಿಸಿ ಸರ್ಕಾರಕ್ಕೆ ಮರು ಭರ್ತಿ ಮಾಡಿಸಬೇಕು. ತೀರಾ ಗಂಭೀರ ಸ್ವರೂಪದ ಆರೋಪ ಹೊತ್ತಿರುವ ಅಭಿವೃದ್ಧಿ ಅಧಿಕಾರಿಗಳನ್ನು ಅಮಾನತುಗೊಳಿಸಬೇಕು. ಆದರೆ ರಾಯಚೂರು ಸಕ್ಷಮ ಪ್ರಾಧಿಕಾರ ಕ್ರಮ ಜರುಗಿಸಲು ಹಿಂದೇಟು ಹಾಕುತ್ತಿದೆ. ವಿಚಾರಣೆಯನ್ನು ತ್ವರಿತವಾಗಿ ಆರಂಭಿಸುವ ಬದಲು ವಿಳಂಬ ನೀತಿಯನ್ನು ಅನುಸರಿಸುತ್ತಿದೆ. ಸಾಲದ್ದಕ್ಕೆ ಭ್ರಷ್ಟಾಚಾರದ ಆರೋಪಿಗಳು ಸರ್ಕರದ ವಿರುದ್ಧ ಹೋರಾಟ ಮಾಡಿದ್ದಾರೆ. ಹೌದು ನಾವು ಕಳವು ಮಾಡಿದ್ದೇವೆ, ಕಳವು ಮಾಡುವುದು ಈ ತಾಲ್ಲೂಕಿನ ಮತ್ತು ಸರ್ಕಾರಿ ನೌಕರರಾದ ನಮ್ಮ ಜನ್ಮಸಿದ್ದ ಹಕ್ಕು. ಅದ್ಹೇಗೆ ನಮ್ಮ ಮೇಲೆ ಅಮಾನತು ಮತ್ತು ಶಿಸ್ತು ಕ್ರಮದಂತಹ ಕ್ರಮಗಳನ್ನು ತೆಗೆದುಕೊಳ್ಳುತ್ತೀರಿ, ರಾಜ್ಯ ಲೆಖ್ಖ ಪರಿಶೋಧಕರ ವರದಿ ಅವೈಜ್ಞಾನಿಕವಾಗಿದೆ. ಈ ಕಳವನ್ನು ನಾವಷ್ಟೆ ಮಾಡಿಲ್ಲ. ಈ ಪ್ರಕರಣದಲ್ಲಿ ಗ್ರಾಮ ಪಂಚಾಯತಿಯ ಡಾಟಾ ಎಂಟ್ರಿಯಿAದ ಹಿಡಿದು ಜಿಲ್ಲಾ ಪಂಚಾಯತಿಯ ಸಿಇಓ ಅವರ ವರೆಗೆ ಭಾಗಿದಾರರಿದ್ದಾರೆ. ಇಲಾಕೆ ವಿಚಾರಣೆ ಎನ್ನುವುದೊಂದು ಜರುಗುವುದಿದ್ದರೆ ಶಿಸ್ತು ಕ್ರಮವನ್ನು ತೆಗೆದುಕೊಳ್ಳುವುದಿದ್ದರೆ ಎಲ್ಲರ ಮೇಲೂ ತೆಗೆದುಕೊಳ್ಳಲಿ, ಕೇವಲ ನಮ್ಮನ್ನಷ್ಟೇ ಏಕೆ ಬಲಿ ಪಶು ಮಾಡುತ್ತಿದ್ದೀರಿ ಎಂಬರ್ಥದ ಹೋರಾಟವನ್ನು ಸಕಾರಿ ನೌಕರರು ಸರ್ಕಾರದ ವಿರುದ್ಧ ಮಾಡಿದ್ದಾರೆ. ಇದು ನಿಜಕ್ಕೂ ದುರಂತ. ಕೆಸಿಎಸ್‌ಆರ್ ನಿಯಮಗಳಲ್ಲಿ ಸರ್ಕಾರಿ ನೌಕರರು ಮುಷ್ಕರ ಮತ್ತು ಸರ್ಕಾರದ ವಿರುದ್ಧ ಟೀಕೆ ಟಿಪ್ಪಣಿಗಳನ್ನು ಮಾಡಬಾರದು ಎನ್ನುವ ನಿಯಮವಿದೆ. ಮತ್ತಿದು ಗಂಭೀರ ಸ್ವರೂಪದ ಅಪರಾಧವಾಗಿದ್ದು ಇದು ಅಗತ್ಯವಾಗಿ ಶಿಸ್ತು ಕ್ರಮಕ್ಕೆ ಒಳಪಡುವಂತದ್ದಾಗಿದೆ. ಇಷ್ಟಾಗಿಯೂ ರಾಯಚೂರು ಜಿಲ್ಲೆಯ ಮುಖ್ಯ ಕಾರ್ಯನಿರ್ವಹಕ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗದೆ ಮೌನಕ್ಕೆ ಶರಣಾಗಿರುವುದು ಜನರಲ್ಲಿ ವಿಶ್ಮಯ ಮೂಡಿಸಿದೆ.

ದೇವದುರ್ಗ ತಾಲ್ಲೂಕಿನ ಕೆ.ಇರಬಗೇರಾ ಗ್ರಾಮ ಪಂಚಾಯತಿಯ ವ್ಯಾಪ್ತಿಯ ಯುವಕರ ದೂರಿನ ಆಧಾರದ ಮೇಲೆ ‘ಜನ ಆಕ್ರೋಶ’ ಪತ್ರಿಕೆ ಈ ಉದ್ಯೋಗ ಖಾತರಿ ಯೋಜನೆಗೆ ಸಂಬAಧಿಸಿದAತೆ ಮೊಟ್ಟ ಮೊದಲಾಗಿ ತನಿಖೆಯನ್ನು ಆರಂಭಿಸಿತ್ತು. ತನಿಖೆಯಲ್ಲಿ ಈ ‘ಮಾರುತೇಶ್ವರ ಟ್ರೇರ‍್ಸ್’ ಎನ್ನುವ ಏಜೆನ್ಸಿ ಪತ್ತೆಯಾಗಿತ್ತು. ಪತ್ರಿಕೆಗೆ ವಿಶ್ಮಯವಾಗಿ ಕಾಡಿದ್ದು ಈ ಏಜೆನ್ಸಿ. ಏಕೆಂದರೆ ತಾಲ್ಲೂಕಿನ ಮೂವತ್ಮೂರು ಗ್ರಮ ಪಂಚಾಯತಿಗಳ ಉದ್ಯೋಗ ಖಾತರಿ ಸರಕು ಸಾಮಗ್ರಿ ಖರೀದಿ ಬಿಲ್ ಈ ಏಜೆನ್ಸಿಗೆ ಪಾವಿತಸಲ್ಪಟ್ಟಿತ್ತು. ಎಲ್ಲಿದೆ ಈ ಏಜೆನ್ಸಿ ಎಂದು ದೇವದುರ್ಗದ ತುಂಬಾ ಒಂಬತ್ತು ಸೆಲ್ಲಿನ ಬ್ಯಾಟರಿ ಹಿಡಿದು ಹುಡುಕಿದಾಗ ಅದು ಕಂಡು ಬಂದಿರಲಿಲ್ಲ. ಅಂದರೆ ಅದೊಂದು ನಕಲಿ ಏಜೆನ್ಸಿಯಾಗಿದ್ದು ಉದ್ಯೋಗ ಖಾತರಿ ಯೋಜನೆಯ ಸರಕು ಸಾಮಗ್ರಿಯ ಹಣ ಲಪಟಾಯಿಸಲು ಸೃಷ್ಟಿಸಲಾಗಿದೆ ಎನ್ನುವ ಅನುಮಾನ ಕಾಡಿತ್ತು. ಹಾಗಾದರೆ ಯಾರಿದ್ದಾರೆ ಈ ನಕಲಿ ಏಜೆನ್ಸಿಯ ಹಿಂದೆ ಎನ್ನುವ ಪ್ರಶ್ನೆ ಮುಂದಿಟ್ಟುಕೊAಡು ತನಿಖೆ ಮಾಡಿದಾಗ ಅದು ಹೆಚ್ಚು ಕಡಿಮೆ ಶಿವನಗೌಡ ನಾಯಕನ ಬೇನಾಮಿ ಏಜೆನ್ಸಿ ಎಂಬAತೆ ಗೋಚರಿಸಿತ್ತು. ಏಕೆಂದರೆ ದೇವದುರ್ಗ ತಾಲ್ಲೂಕಿನಲ್ಲಿ ಸರ್ಕಾರಿ ಇಲಾಖೆಗಳಲ್ಲಿ ಶಾಸಕ ಅಥವಾ ಶಿವನಗೌಡ ನಾಯಕನ ಇಶಾರೆ ಇಲ್ಲದೆ ಒಂದು ಇರುವೆಯೂ ಕದಲಲಾರದು ಎನ್ನುವ ಮಾತು ಕೇಳಿ ಬಂದಿತ್ತು. ಪತ್ರಿಕೆಗೆ ಅದಾಗಲೇ ಕೆಲವೊಂದು ಗ್ರಾಮ ಪಂಚಾಯತಿಗಳಿAದ “ಒಂದು ಉದ್ಯೋಗ ಖಾತರಿಯಲ್ಲಿ ಸಣ್ಣದೊಂದು ಕ್ಷೇತ್ರಬದು ಕಾಮಗಾರಿ ಇಟ್ಟುಕೊಳ್ಳಲೂ ಪಿಡಿಓ ಮತ್ತು ಅಧ್ಯಕ್ಷರುಗಳು ಶಾಸಕರನ್ನು ಕೆಳಬೇಕು ಎನ್ನುತ್ತಿದ್ದಾರೆ. ಈ ಕಾರಣಕ್ಕೆ ಬಿಜೆಪಿ ಅಲ್ಲದವರು, ಶಾಶಕರ ಪರಿಚಯ ಇಲ್ಲದವರು ಸರ್ಕಾರಿ ಸೌಲಭ್ಯ ಪಡೆಯುವುದು ದುಸ್ತರವಾಗಿದೆ” ಎನ್ನುವಂತಹ ದೂರು ಮತ್ತು ಹೇಳಿಕೆಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ ಈ ಮಾರುತೇಶ್ವರ ಏಜೆನ್ಸಿಯ ಅಸಲಿಯತ್ತು ಸ್ಪಷ್ಟವಾಗಿತ್ತು. ಒಂದು ಏಜೆನ್ಸಿ ಒಂದೆರಡು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಮೇಲೆ ಪ್ರಭಾವ ಬೀರಬಹುದು. ಆದರೆ ಮೂವತ್ಮೂರು ಗ್ರಾಮ ಪಂಚಾಯತಿಗಳ ಮೇಲೆ ಆ ಯೋಜನೆಯ ಅನುಷ್ಠಾನದ ಎಲ್ಲಾ ಸರ್ಕಾರಿ ಸಿಬ್ಬಂದಿ ಮತ್ತು ಅಧಿಕಾರಿಗಳ ಮೇಲೆ ಪ್ರಭಾವ ಬೀರಲು ಹೇಗೆ ಸಾಧ್ಯ ಎನ್ನುವ ಪ್ರಶ್ನೆ ಮೂಡಿತ್ತು. ಇದರ ಹಿಂದೆ ಖಂಡಿತವಾಗಿಯೂ ಶಿವನಗೌಡ ನಾಯಕರಿದ್ದಾರೆ ಎನ್ನುವುದು ಸ್ಪಷ್ಟವಾಗಿತ್ತು. ಈ ಹಿನ್ನೆಲೆಯಲ್ಲಿ ಮೊಟ್ಟಮೊದಲ ಬಾರಿಗೆ ಜನ ಆಕ್ರೋಶ ಪತ್ರಿಕೆ ತನಿಖಾ ವರದಿ ಪ್ರಕಟಿಸಿತ್ತು, ಇರಬಗೇರಾ ಗ್ರಾಮ ಪಂಚಾಯತಿಗೆ ಸಂಬAಧಿಸಿದ ಭ್ರಷ್ಟಾಚಾರಕ್ಕೆ ಸಂಬAಧಿಸಿದAತೆ. ಇಲ್ಲಿ ಈ ಮೇಲಿನ ಎಲ್ಲಾ ಪ್ರಶ್ನೆಗಳನ್ನೂ ಪ್ರಸ್ತಾಪಿಸಲಾಗಿತ್ತು. ಬರಿ ವರದಿ ಪ್ರಕಟಿಸುವುದಲ್ಲದೆ ಪತ್ರಿಕೆಯನ್ನು ರಾಜ್ಯ ಮಟ್ಟದ ಉನ್ನತ ಅಧಿಕಾರಿಗಳ ಸಮಕ್ಷಮಕ್ಕೂ ಸಲ್ಲಿಸಲಾಗಿತ್ತು. ಸರಿಯಾಗಿ ಅದೇ ಸಮಯಕ್ಕೆ ವಿಧಾನ ಪರಿಷತ್ ಸದಸ್ಯರೊಬ್ಬರು ಅಧಿವೇಶನದಲ್ಲಿ ಈ ಅಂಶಗಳ ಮೇಲೆ ಚರ್ಚಿಸಿದರು. ಇದಕ್ಕೆ ಆಗಿನ ಸಚಿವರಾದ ಗೋವಿಂದ ಕಾರಜೋಳರು ತನಿಖೆ ಮಾಡಿಸುವುದಾಗಿ ಭರವಸೆ ನೀಡಿದ್ದರು. ಸರ್ಕಾರ ಭರವಸೆ ನೀಡಿದಂತೆ ರಾಜ್ಯ ತಂಡವನ್ನು ದೇವದುರ್ಗಕ್ಕೆ ಕಳುಹಿಸಿ ತನಿಖೆ ಮಾಡಿಸಿದೆ. ಆರೋಪವೂ ಸಾಬೀತಾಗಿದೆ. ರಾಯಚೂರು ಸಕ್ಷಮ ಪ್ರಾಧಿಕಾರ ಕೇವಲ ನಾಲ್ಕು ಜನ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನು ಅಮಾನತು ಮಾಡಿ ಆದೇಶ ಹೊರಡಿಸಿದೆ. ಇನ್ನುಳಿದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಸರ್ಕಾರದ ವಿರುದ್ದ ದಂಗೆ ಎದ್ದಿದ್ದಾರೆ. ಸರ್ಕರದ ಕ್ರಮವನ್ನು ಟೀಕಿಸಿದ್ದಾರೆ. ಸರ್ಕಾರವನ್ನು ಟೀಕಿಸಿದ್ದಾರೆ. ಕಾನೂನು ನಿಯಮಗಳನ್ನು ಮೀರಿ ಮತ್ತು ಸೇವೆಗೆ ಸೇರುವಾಗಿನ ಪ್ರಮಾಣ ವಚನವನ್ನು ಮೀರಿ ಮತ್ತು ಸರ್ಕಾರದ ಇತರೆ ಆದೇಶಗಳನ್ನು ಮೀರಿ ಸರ್ಕಾರವನ್ನು ಟೀಕಿಸಿದ್ದಾರೆ. ಟೀಕಿಸಿ ದಕ್ಕಿಸಿಕೊಂಡಿದ್ದಾರೆ! ಇದು ಜಗತ್ತಿನ ಎಂಟನೆಯ ಹೊಸ ವಿಶ್ಮಯ.

ಹೌದು, ಅಷ್ಟೊಂದು ದೊಡ್ಡ ಪ್ರಮಾಣದ ಸರ್ಕಾರಿ ನೌಕರರನ್ನು ಒಂದೇ ಸಲಕ್ಕೆ ಅಮನತುಗೊಳಿಸುವುದರಿಂದ ಆಳಿತಾತ್ಮಕ ಸಮಸ್ಯೆಗಳು ಬರಬುದು, ಇಲಖಾ ವಿಚಾರಣೆ ಜರುಗಿಸಿ ನಿಯಮಾನುಸಾರ ಶಿಸ್ತು ಕ್ರಮ ಕೈಗೊಂಡು ಸರ್ಕಾರದ ಬೊಕ್ಕಸಕ್ಕೆ ಉಂಟಾದ ನಷ್ಟವನ್ನು ಮರು ಭರ್ತಿ ಮಾಡಿಸಿಕೊಳ್ಳಬಹುದಲ್ಲ ಎನ್ನುತ್ತಾರೆ ಆ ತಾಲ್ಲೂಕಿನ ಹೋರಾಟಗಾರರು. ಸಕ್ಷಮ ಪ್ರಾಧಿಕಾರ ಗಂಟಲಿನಲ್ಲಿ ಕಡುಬು ಸಿಕ್ಕಿ ಹಾಕಿಕೊಂಡಿರುವAತೆ ಮೌನಕ್ಕೆ ಶರಣಾಗಿದೆ. ಇದರ ಹಿನ್ನೆಲೆ ಯಾರಿಗೂ ಅರ್ಥವಾಗುತ್ತಿಲ್ಲ. ಕಳ್ಳರು ಕಳ್ಳತನದಿಂದ ಬಚಾವಾಗಲು ಸರ್ಕಾರದ ವಿರುದ್ಧ ಪ್ರತಿಭಟಿಸುವುದು ಎಷ್ಟು ಸರಿ? ಭ್ರಷ್ಟಾಚಾರ ಮಾಡಿ ಅದರಿಂದ ತಪ್ಪಿಸಿಕೊಳ್ಳಲು ಹೋರಟದ ಅಸ್ರö್ತವನ್ನು ಬಳಸಬಹುದೇ? ಸರ್ಕಾರದ ವಿರುದ್ಧ ಪ್ರತಿಭಟಿಸಿದ ಸರ್ಕಾರಿ ನೌಕರರು ಈ ಭ್ರಷ್ಟಾಚಾರದ ಆರೋಪದಿಂದ ತಪ್ಪಿಸಿಕೊಂಡರೆ ಇದು ಇಡೀ ದೇಶಕ್ಕೆ ಯಾವ ಸಂದೇಶವನ್ನು ನೀಡಲಿದೆ ಎಂದು ಸಾರ್ವಜನಿಕರು ಪ್ರಶ್ನೆ ಕೇಳುತ್ತಿದ್ದಾರೆ. ಇದಕ್ಕೆ ಉತ್ತರ ಸರ್ಕಾರ ಮತ್ತು ಸಕ್ಷಮ ಪ್ರಾಧಿಕಾರವಾದ ರಾಯಚೂರಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳೇ ನೀಡಬೇಕು.

“ನೋಡ್ರಿ ಈ ಹಣವನ್ನು ನಾವಷ್ಟೇ ತಿಂದಿಲ್ಲ. ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯರು ಹೇಳಿದಂತೆ ನಾವು ಕೇಳಿದ್ದೇವೆ. ಇದಕ್ಕೆ ತಾಲ್ಲೂಕು ಪಂಚಾಯತಿಯ ಆಡಳಿತವೂ ಕಾರಣ. ಅವರು ಈ ಭ್ರಷ್ಟಾಚಾರದ ಭಾಗಿಗಳೆ. ಕೆಲವೊಂದು ಸಂದರ್ಭದಲ್ಲಿ ಕೆಲವೊಂದು ಕಾಮಗಾರಿಗಳನ್ನು ಸ್ವತಃ ಗ್ರಾಮ ಪಂಚಾಯತಿಯ ಅಧ್ಯಕ್ಷರು ಮತ್ತು ಸದಸ್ಯರು ಜಿಲ್ಲಾ ಪಂಚಾಯತಿಯ ವರೆಗೆ ಹೋಗಿ ಅನುಮೋದನೆ ಮಾಡಿಸಿಕೊಂಡು ಬಂದಿದ್ದಾರೆ. ರಾಜಕೀಯ ಒತ್ತಡಗಳನ್ನು ಹಾಕಲಾಗಿದೆ. ದಮಕಿ ಹಾಕಲಾಗಿದೆ. ಇದೆಲ್ಲದರ ತನಿಖೆಯೂ ಆಗಬೇಕು. ಮತ್ತು ಸಂಬAಧಿಸಿದ ಎಲ್ಲರ ಮೇಲೂ ಕ್ರಮ ಜರುಗಿಸಬೇಕು ಎನ್ನುವುದು ನಮ್ಮ ಒತ್ತಾಯ” ಎನ್ನುತ್ತಾರೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು. ನಿಜಕ್ಕೂ ಇಲ್ಲಿನ ಆಡಳಿತಗಾರರ ರಾಜಕೀಯ ಒತ್ತಡ ಇವರನ್ನು ತಪ್ಪು ಮಾಡುವಂತೆ ಮಾಡಿರುವುದು ಮೆಲ್ನೋಟಕ್ಕೆ ಎದ್ದು ಕಾಣಿಸುತ್ತಿದೆ. ಆದರೆ ಹೊಣೆಗಾರರು ಯಾರು? ಅಪರಾಧಕ್ಕೆ ಗುರಿಯಾದವರು ಯಾರು? ಅವತ್ತಿನ ರಾಜಕಾರಣಿ ಈಗ ಈ ಭ್ರಷ್ಟಾಚಾರವನ್ನು ಮುಚ್ಚಿ ಹಾಕಿ ನಿಯಮಾನುಸಾರ ಕ್ರಮ ಕೈಗೊಂಡರೆ ಆಗುವ ಶಿಕ್ಷೆಯಿಂದ ಈ ‘ಬಳಕೆ’ಯಾದ ಅಧಿಕಾರಿಗಳನ್ನು ರಕ್ಷಿಸಬಲ್ಲನೆ ಎನ್ನುತ್ತಾರೆ ಸಾರ್ವಜನಿಕರು.

“ಇದು ಕ್ಷಮಿಸಲು ಸಾಧ್ಯವಿಲ್ಲದ ಭ್ರಷ್ಟಾಚಾರ. ಈ ತಾಲ್ಲೂಕು ಬಹುತೇಕ ಬಡ ಜನರಿಂದ ತುಂಬಿದೆ. ಇಲ್ಲಿ ಮಹಾನಗರಗಳಿಗೆ ಗುಳೆ ಹೋಗುವ ಸಂಪ್ರದಾಯ ತುಂಬಾ ಇದೆ. ಕಾರಣ ಬಡತನ. ಬಡವ ಬೆಂಗಳೂರಿನಲ್ಲಿ ಮುಂಬೈನಲ್ಲಿ ಕೂಲಿ ಮಾಡುತ್ತಿದ್ದರೆ ಇಲ್ಲಿನ ಬಡ್ಡಿಮಕ್ಕಳು ಅವನ ಹೆಸರಿನಲ್ಲಿ ಕೂಲಿ ಹಣ ಪಡೆಯುತ್ತಾ ಐಷರಾಮಿ ಜೀವನ ಸಾಗಿಸಿದ್ದಾರೆ. ಬಡ ಕಾರ್ಮಿಕನ ಘನತ್ಯಾಜ್ಯವನ್ನು ಪರಮಾನ್ನ ಎನ್ನುವಂತೆ ತಿಂದಿದ್ದಾರೆ. ಜನರ ಹಕ್ಕುಗಳನ್ನು ಕಬಳಿಸಿ ಅವರ ಬದುಕನ್ನು ನgಕÀವಾಗಿಸಿದ ಇವರ ಮೇಲೆ ಸರ್ಕಾರ ನಿರ್ದಾಕ್ಷಿಣ್ಯವಾದ ಕ್ರಮವನ್ನು ತೆಗೆದುಕೊಳ್ಳಬೇಕು, ತೆಗೆದುಕೊಳ್ಳುವವರೆಗೆ ನಮ್ಮ ಹೋರಾಟ ನಿಲ್ಲುವುದಿಲ್ಲ” ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ ಶರಣಬಸವ ಹೂಗಾರ.

ಮುಂದೇನಾಗಲಿದೆಯೋ ಕಾದು ನೋಡಬೇಕು.

WhatsApp Group Join Now
Telegram Group Join Now

Related Posts