ರಾಜ್ಯ

ಕೊಪ್ಪಳ ನಗರದಲ್ಲಿ ನಾಲ್ಕು ಕಮಾನ್ ಗಳನ್ನು ಮರು ನಿರ್ಮಾಣ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಂಟನೇ ದಿನಕ್ಕೆ ಮುಂದುವರೆದ ಧರಣಿ

WhatsApp Group Join Now
Telegram Group Join Now

ಕೊಪ್ಪಳ ನಗರದಲ್ಲಿ ನಾಲ್ಕು ಕಮಾನ್ ಗಳನ್ನು ಮರು ನಿರ್ಮಾಣ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಂಟನೇ ದಿನಕ್ಕೆ ಮುಂದುವರೆದ ಧರಣಿ.
ಕೊಪ್ಪಳ :  ನಗರದಲ್ಲಿ ಕೆಡವಿ  ಹಾಕಲಾದ ನಾಲ್ಕು ಕಮಾನುಗಳನ್ನು ಅದೇ ಸ್ಥಳದಲ್ಲಿ ಮರು ನಿರ್ಮಾಣಮಾಡುವಂತೆ ಜಾರಿಗೊಳಿಸಿದ ಸರಕಾರದ ಆದೇಶವನ್ನು ಅನುಷ್ಠಾನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಕೆಗಾಗಿ ನಡೆಸಿದ ಜಿಲ್ಲಾ ಆಡಳಿತ ಭವನದ ಮುಂದಿನ ಅಹೋರಾತ್ರಿ ಧರಣಿ ಏಳನೇ ದಿನ ಪೂರೈಸಿ ಎಂಟನೇ ದಿನಕ್ಕೆ ಮುಂದುವರೆದಿದೆ.
      ನಗರದ ಕುಷ್ಟಗಿ ರಸ್ತೆಯ ಸರ್ವೆ ನಂಬರ-೯೧-೩ ಹಾಗೂ ೯೧-೪ ರಲ್ಲಿ ನಿರ್ಮಿಸಲಾದ ಆಶ್ರಯ ಬಡಾವಣೆಯ ಮೂಲ ಫಲಾನುಭವಿಗಳು ಆಶ್ರಯ ನಿವೇಶನ ಹೊಂದುವ ಅರ್ಹತೆಹೊಂದಿಲ್ಲ. ಅಲ್ಲದೇ ಆಶ್ರಯ ನಿಯಮಾವಳಿಗಳನ್ನು ಗಾಳಿಗೆ ತೂರಿ ಈ ಬಡಾವಣೆಯ ನಿವೇಶನಗಳು ಬೇರೆಯರ ಹೆಸರಿಗೆ ಪರಭಾರೆಯಾಗಿವೆ. ಕಾರಣ ಸರಕಾರ ಈ ಬಡಾವಣೆಯ ಹಕ್ಕುಪತ್ರದಲ್ಲಿ ನಮೂದಿಸಿರುವಂತೆ ಬಡಾವಣೆಯ ನಿವೇಶನ ಹಂಚಿಕೆಯನ್ನು ರದ್ದುಗೊಳಿಸಬೇಕು. ಹಾಗೂ ಆ ಬಡಾವಣೆಯ ಮನೆ ಸಹಿತ ನಿವೇಶನಗಳನ್ನು ನಗರ ಸಭೆ ವಶಕ್ಕೆ ಪಡೆದುಕೊಂಡು ಬಡವರಿಗೆ ಮರುಹಂಚಿಕೆ ಮಾಡಬೇಕು. ಹಾನಗಲ್ ಕುಟುಂಬದವರಿಂದ ನಗರ ಸಭೆ ವಶಕ್ಕೆ ಪಡೆದುಕೊಂಡ ೦೫ ನಿವೇಶನಗಳನ್ನು ಮತ್ತೇ ನಗರದ ಶ್ರೀಮಂತರಿಗೆ ಮರು ಹಂಚಿಕೆ ಮಾಡಿರುವುದು ಕಾನೂನು ಬಾಹಿರವಾಗಿರುತ್ತದೆ. ಸಂಘಟನೆಗಳಿಂದ ಶ್ರೀಮಂತರಿಗೆ ಆಶ್ರಯ ನಿವೇಶನಗಳನ್ನು ನೀಡಿರುವುದನ್ನು ಆಡಳಿತ ಗಮನಕ್ಕೆ ತಂದಾಗ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಆದರೆ ಅಂತ ನಿವೇಶನಗಳನ್ನು ಮರಳಿ ಪಡೆದುಕೊಂಡು ಆರ್ಥಿಕವಾಗಿ ಬಲಾಡ್ಯರನ್ನು ಕೊಡುವುದು ನೋಡಿದರೆ ಇಲ್ಲಿ ರಿಯಲ್ ಎಸ್ಟೇಟ್ ಧಂದೆ ನಡೆದಿದೆ ಎಂದು ಗೋಚರಿಸುತ್ತದೆ.ಕಾರಣ ಈ ನಿವೇಶನ ಹಂಚಿಕೆ ಮಾಡುವಂತೆ ಹಿಂದೆ ಅರ್ಜಿ ಸಲ್ಲಿಸಿದವರಿಗೆ ಹಂಚಿಕೆ ಮಾಡ ಬೇಕು.ಕೊಪ್ಪಳ ನಗರದ ಗಣೇಶ ತಗ್ಗಿನಲ್ಲಿರುವ (ವಾ.ನಂ.26) ನಿವೇಶನ ಸಂಖ್ಯೆ: 52 ರಲ್ಲಿ ಕಳೆದ 25 ವರ್ಷಗಳಿಂದ ವಾಸವಾಗಿರುವ ಅಂಗವಿಕಲ ಚನ್ನಬಸಪ್ಪ ತಂದೆ ಬಸವರಾಜ ಎಲಿಗಾರ ಅವರಿಗೆ ನಿವೇಶನ ಹಕ್ಕು ಪತ್ರ ಕೊಡಬೇಕು. ಆಶ್ರಯ ನಿವೇಶನಗಳ ನಮೂನೆ-೩ರಲ್ಲಿ ಮಾಲೀಕರ ಹೆಸರು ಎನ್ನುವ ಭಾಗದಲ್ಲಿ ಪೌರಾಯುಕ್ತರು ನಗರ ಸಭೆ ಎಂದು ಕಡ್ಡಾಯವಾಗಿ ನಮೂದಿಸ ಬೇಕು.ನಗರ ಸಭೆ ಕಾರ್ಯಾಲಯದಲ್ಲಿ ಅರ್ಜಿದಾರರು ಕಡತ ನಿರ್ವಾಹಕರನ್ನು ಭೇಟಿಯಾಗಿ ಗೋಗರೆಯುವದನ್ನು ತಪ್ಪಿಸಲು ಕಾಲಮಿತಿಯೊಳಗೆ ಅರ್ಜಿ ವಿಲೇವಾರಿ ಮಾಡಲು ಸೂಕ್ತ ಕ್ರಮ ವಹಿಸಬೇಕು.
ಸಕಾರಣವಿಲ್ಲದೆ ಕಾಲಮಿತಿಯೊಳಗೆ ಅರ್ಜಿ ವಿಲೇವಾರಿ ಮಾಡದ ಸಿಬ್ಬಂದಿಯ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸ ಬೇಕು.ನಗರದ ಪ್ರಮುಖ ರಸ್ತೆಗಳಲ್ಲಿ ಪುರುಷರ ಹಾಗು ಮಹಿಳೆಯರ ಸಾರ್ವಜನಿಕರ ಮೂತ್ರಾಲಯ, ಶೌಚಾಲಯ ನಿರ್ಮಾಣ ಮಾಡಬೇಕು ಎಂದು ಮುಂತಾದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಫೆಬ್ರವರಿ 23 ರಿಂದ ಜಿಲ್ಲಾ ಆಡಳಿತ ಭವನದ ಮುಂದೆ ನಡೆಯುತ್ತಿರುವ ಧರಣಿಯನ್ನು ಚುನಾಯಿತ ಪ್ರತಿನಿಧಿಗಳಾಗಲಿ ಸರ್ಕಾರದ ಅಧಿಕಾರಿಗಳಾಗಲಿ ಗಮನಿಸದೆ ನಿರ್ಲಕ್ಷ್ಯ ಮಾಡಿರುವುದು ಪ್ರತಿಭಟನಾಕಾರರು ಖಂಡಿಸಿದರು.
  ಈ ಸಂದರ್ಭದಲ್ಲಿ ಧರಣಿ ನಿರತ ನಾಗರಿಕ ಹಕ್ಕುಗಳ ಹೋರಾಟ ವೇದಿಕೆ (ಪಿಯುಸಿಎಲ್) ಜಿಲ್ಲಾ ಅಧ್ಯಕ್ಷ ಮಹಾಂತೇಶ ಕೊತಬಾಳ. ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಅಧ್ಯಕ್ಷ ಬಸವರಾಜ್ ಶೀಲವಂತರ್. ಜನಪರ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್. ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಜಿಲ್ಲಾ ಸಂಘಟನಾ ಸಂಚಾಲಕ ತುಕಾರಾಮ್ ಬಿ.ಪಾತ್ರೋಟಿ. ತಾಲೂಕಾ ಸಂಚಾಲಕ ನೂರ್ ಸಾಬ್ ಹೊಸಮನಿ. ಶ್ರೀದೇವಿ ಹೆಬ್ಬಾಳ. ರೇಣವ್ವ ಎಮ್. ಅಡ್ಡದೋಲಿ. ಮಂಜುನಾಥ್ ವಡ್ಡರ್ ಮುಂತಾದವರು ಭಾಗವಹಿಸಿದ್ದರು.
WhatsApp Group Join Now
Telegram Group Join Now

Related Posts